ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸವಾಲು ಹಾಕುತ್ತಾ, ಒಕ್ಕೂಟ ಸರ್ಕಾರದ ಮೂರು ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆದ ಕಿಸಾನ್ ಮಹಾಪಂಚಾಯತ್ ಐತಿಹಾಸಿಕ ಯಶಸ್ಸು ಕಂಡಿದೆ.
ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಅವರಿಗೆ ಸೆಡ್ಡು ಹೊಡೆದಿರುವ ರೈತರು, ಮುಜಾಫರ್‌ನಗರದಲ್ಲಿ ಸೆಪ್ಟೆಂಬರ್ 5ರ ಭಾನುವಾರ ಹಿಂದೂ-ಮುಸ್ಲಿಂ ರೈತರು ಒಗ್ಗೂಡಿ ಅತಿ ದೊಡ್ಡ ಕಿಸಾನ್ ಮಹಾಪಂಚಾಯತ್ ನಡೆಸಿ ಯಶಸ್ವಿಯಾಗಿದ್ದಾರೆ. ಕಳೆದ ಹತ್ತು ತಿಂಗಳುಗಳಿಂದ ದೆಹಲಿಯ ರೈತ ಚಳುವಳಿಯನ್ನು ಮುನ್ನಡೆಸುತ್ತಿರುವ ರೈತ ಸಂಘಗಳ ಸಂಸ್ಥೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಈ ಮಹಾಪಂಚಾಯತ್ ಯೋಜಿಸಿತ್ತು.
2013 ರಲ್ಲಿ ಕೋಮು ಗಲಭೆಗಳಿಂದ ಕಂಗೆಟ್ಟಿದ್ದ ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯು, ಬಿಜೆಪಿ ಬರುವವರೆಗೂ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ)ಯ ಭದ್ರಕೋಟೆಯಾಗಿತ್ತು.
ಇದನ್ನೂ ಓದಿ: ಉತ್ತರ ಪ್ರದೇಶ: ಯೋಗಿ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಜಾಫರ್‌ನಗರದಲ್ಲಿ ರೈತರ ಮಹಾಪಂಚಾಯತ್
ಭಾನುವಾರ, ಭಾರತೀಯ ಕಿಸಾನ್ ಯೂನಿಯನ್ ಟಿಕಾಯತ್ ಬಣದ ನಾಯಕ ರಾಕೇಶ್ ಟಿಕಾಯತ್, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯುಪಿ ಜನರು ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಇನ್ನು ಸಹಿಸುವುದಿಲ್ಲ. ನಾವು ಈ ರೀತಿಯ ಸರ್ಕಾರಗಳನ್ನು ಆಯ್ಕೆ ಮಾಡಿದರೆ, ಗಲಭೆಗಳು ಉಂಟಾಗುತ್ತವೆ. ಈ ಸ್ಥಳ ಈ ಹಿಂದೆ “ಅಲ್ಲಾಹು ಅಕ್ಬರ್, ಹರ್ ಹರ್ ಮಹದೇವ್” ಎಂಬ ಘೋಷಣೆಗಳಿಗೆ ಸಾಕ್ಷಿಯಾಗಿತ್ತು. ಇವರೆಲ್ಲಾ ವಿಭಜನೆಯ ಬಗ್ಗೆ ಮಾತನಾಡುತ್ತಾರೆ, ನಾವು ಒಗ್ಗೂಡಿಸುವ ಬಗ್ಗೆ ಮಾತನಾಡುತ್ತೇವೆ” ಎಂದು ಹೇಳಿದ್ದಾರೆ.
Muzaffarnagar bhi 'Baaqi nehi Hain'!
Today’s historic Kisan Mahapanchayat in Muzaffarnagar proves that nine months long farmers struggle has the support of all castes & religions.
The slogan- 'roti kapda aur makaan' wins once again.#मुजफ्फरनगर_किसान_महापंचायत #FarmersProtest pic.twitter.com/QaP6Mb0e8L— Mayukh Biswas (@MayukhDuke) September 5, 2021
“ಕಾಯ್ದೆಗಳನ್ನು ಹಿಂಪಡೆಯುವವರೆಗೂ ಮನೆಗೆ ಮರುಳುವ ಮಾತೇ ಇಲ್ಲ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸಬೇಕು. ರೈತರ ಮೇಲಿರುವ ಪ್ರಕರಣಗಳನ್ನು ಕೈಬಿಡಬೇಕು” ಎಂದು ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ‘ನಾನೂ ಗೌರಿ’ ಕಿರುಚಿತ್ರ ಬಿಡುಗಡೆ: ವಾರ್ತಾಭಾರತಿಯಿಂದ ದಿಟ್ಟ ಪತ್ರಕರ್ತೆಗೆ ಗೌರವ ಸಮರ್ಪಣೆ
“ದೇಶವನ್ನು ಉಳಿಸುವುದಕ್ಕಾಗಿ ಮಹಾಪಂಚಾಯತ್ ಆಯೋಜಿಸಲಾಗಿದೆ ಎಂದು ಹೇಳಿದ ಟಿಕಾಯತ್ ಅವರು, ಈ ರೀತಿಯ ಪಂಚಾಯತ್‌ಗಳನ್ನು ದೇಶದೆಲ್ಲೆಡೆ ಆಯೋಜಿಸಲಾಗುವುದು. ರೈತರನ್ನು ಉಳಿಸಬೇಕಾಗಿದೆ. ದೇಶವನ್ನು ಉಳಿಸಬೇಕಿದೆ. ಉದ್ಯಮ, ಉದ್ಯೋಗ, ನೌಕರರು ಎಲ್ಲರನ್ನೂ ಉಳಿಸಬೇಕಾಗಿದೆ. ಇದೇ ನಮ್ಮ ಈ ಹೋರಾಟದ ಗುರಿ” ಎಂದಿದ್ದಾರೆ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಿದ ರೈತ ಸಂಘಟನೆಗಳು, ಉತ್ತರ ಪ್ರದೇಶದಲ್ಲೂ ಬಿಜೆಪಿ ವಿರುದ್ಧ ಅಭಿಯಾನ ನಡೆಸಲಿವೆ. ಇದಕ್ಕೆ ಮುಜಾಫರ್‌ನಗರ ಮಹಾಪಂಚಾಯತ್‌ನಿಂದ ಚಾಲನೆ ನೀಡಲಾಗಿದೆ. ರಾಕೇಶ್ ಟಿಕಾಯತ್ ವಿರುದ್ಧ ಕಿಡಿಕಾರಿದ್ದ ರಾಜ್ಯ ಬಿಜೆಪಿ ಘಟಕ ಈಗ ಪರದೆಯ ಹಿಂದೆ ಸರಿಯುತ್ತಿದೆ.
ಮುಜಾಫರ್‌ನಗರದ ಸರ್ಕಾರಿ ಇಂಟರ್ ಕಾಲೇಜ್ ಮೈದಾನದಲ್ಲಿ ಹಿಂದು-ಮುಸ್ಲಿಂ ಸಮುದಾಯ, ರೈತರು, ರೈತ ಮಹಿಳೆಯರು ಯುವಕರು ನೆರೆದು, ಒಕ್ಕೂಟ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಮೈದಾನವಷ್ಟೇ ಅಲ್ಲದೆ, ನಗರದ ರಸ್ತೆ, ಫ್ಲೈಓವರ್‌ಗಳು ರೈತರಿಂದ ತುಂಬಿದ್ದವು.
ಮಹಾಪಂಚಾಯತ್‌ಗೆ ಹೊರಗಿಂದ ಬರುವ ರೈತರಿಗಾಗಿ 20 ಸಭಾಂಗಣಗಳನ್ನು ಸಜ್ಜುಗೊಳಿಸಲಾಗಿತ್ತು. ಯಾವುದೇ ವೈದ್ಯಕೀಯ ತುರ್ತುಸ್ಥಿತಿಯನ್ನು ಎದುರಿಸಲು ಸುಮಾರು 100 ವೈದ್ಯಕೀಯ ಶಿಬಿರಗಳು, 50 ಆಂಬ್ಯುಲೆನ್ಸ್‌ಗಳು ಮತ್ತು ತಾತ್ಕಾಲಿಕ ಆಸ್ಪತ್ರೆಯನ್ನು ಸಹ ಸ್ಥಾಪಿಸಲಾಗಿತ್ತು.
ಇದನ್ನೂ ಓದಿ: ಗೌರಿ ಲಂಕೇಶ್ ದಿನ: ಗೌರಿಯನ್ನು ನೆನೆಯುತ್ತಾ…ಸಾವಿರಾರು ಗೌರಿಯರ ಮಾತುಗಳು…


