“ಆದಾಯ ತೆರಿಗೆ ಅಧಿಕಾರಿಗಳು ನಮ್ಮ ಮೊಬೈಲ್ಗಳನ್ನು ವಶಕ್ಕೆ ಪಡೆದರು. ನೀವು ನಿಮ್ಮ ವಕೀಲರನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಹೇಳಿದರು” ಎಂದು ನ್ಯೂಸ್‌ಲಾಂಡ್ರಿ ಜಾಲತಾಣದ ಸಹಸಂಸ್ಥಾಪಕ ಅಭಿನಂದನ್ ಶೇಖ್ರಿ ಅವರು ಆರೋಪಿಸಿದ್ದಾರೆ.
ಜನಪರ ಪತ್ರಿಕೋದ್ಯಮ ನಡೆಸುತ್ತಿರುವ ನ್ಯೂಸ್ ಲ್ಯಾಂಡ್ರಿ ಮತ್ತು ನ್ಯೂಸ್ ಕ್ಲಿಕ್ ಸುದ್ದಿಜಾಲತಾಣಗಳ ಕಚೇರಿಗಳಿಗೆ ಭೇಟಿ ನೀಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ನಡೆಸಿದ ‘ಸರ್ವೇ’ಯ ಮಾದರಿ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಅವರು, “ಅಧಿಕಾರಿಗಳು ನಮ್ಮ ಮೊಬೈಲ್ ನಲ್ಲಿದ್ದ ವಿವರಗಳನ್ನು ಪರಿಶೀಲಿಸಿದರು. ಇದು ನಮ್ಮ ಖಾಸಗಿತನದ ಹಕ್ಕಿನ ಉಲ್ಲಂಘನೆ” ಎಂದು ಅವರು ದೂರಿದ್ದಾರೆ.
12 ಗಂಟೆಗಳ ಕಾಲ ಕಚೇರಿಯಲ್ಲಿದ್ದು ಸಮೀಕ್ಷೆ ನಡೆಸಿದ ಐಟಿ ಅಧಿಕಾರಿಗಳು, “ನನ್ನ ಮೊಬೈಲ್ ವಶಕ್ಕೆ ಪಡೆದು ಅದರಲ್ಲಿನ ದತ್ತಾಂಶಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇದು ನನ್ನ ಖಾಸಗಿ ಹಕ್ಕುಗಳ ಉಲ್ಲಂಘನೆ” ಎಂದಿದ್ದಾರೆ.
Thanks again for your support. My statement is below. You can support us herehttps://t.co/lefMXTG3xw
Please spread the message. ?? pic.twitter.com/YCDni2AIKi— Abhinandan Sekhri (@AbhinandanSekhr) September 11, 2021
“ಸಂಸ್ಥೆಯಲ್ಲಿದ್ದ ಎಲ್ಲ ಕಂಪ್ಯೂಟರ್ ಗಳನ್ನು ಪರಿಶೀಲಿಸಿದರು. ನನ್ನ ವೈಯಕ್ತಿಕ ಮೊಬೈಲ್ ಹಾಗೂ ಲಾಪ್ ಟಾಪ್ ಹಾಗೂ ಕಚೇರಿಯ ಕೆಲವು ಯಂತ್ರೋಪಕರಣಗಳನ್ನು ವಶಕ್ಕೆ ಪಡೆದರು” ಎಂದು ತಿಳಿಸಿದ್ದಾರೆ.
“ನಾವು ಯಾವುದನ್ನೂ ಮುಚ್ಚಿಟ್ಟಿಲ್ಲ. ಯಾವುದೇ ಕಾನೂನಿನ ಉಲ್ಲಂಘನೆ ಮಾಡಿಲ್ಲ. ನಮ್ಮ ಕೆಲಸವನ್ನು ಪ್ರಾಮಾಣಿಕತೆ ಮತ್ತು ಸಮಗ್ರತೆಯಿಂದ ಮಾಡುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.


