Homeಚಳವಳಿಭಾರತ್ ಬಂದ್: ಇಂದಿನ ರೈತ ಪ್ರತಿಭಟನೆಗೆ ಬೆಂಬಲ ನೀಡಿದ ರಾಜಕೀಯ ನಾಯಕರಿವರು

ಭಾರತ್ ಬಂದ್: ಇಂದಿನ ರೈತ ಪ್ರತಿಭಟನೆಗೆ ಬೆಂಬಲ ನೀಡಿದ ರಾಜಕೀಯ ನಾಯಕರಿವರು

- Advertisement -
- Advertisement -

ವಿವಾದಿತ ಕೃಷಿ ಕಾನೂನುಗಳನ್ನು ಒಕ್ಕೂಟ ಸರ್ಕಾರ ಜಾರಿಗೊಳಿಸಿ ಒಂದು ವರ್ಷವಾದ ಹಿನ್ನೆಲೆ ಇಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್‌ಗೆ ಕರೆ ನೀಡಿದೆ. ಇದಕ್ಕೆ ವಿಪಕ್ಷ ನಾಯಕರು ಸೇರಿದಂತೆ ಹಲವು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರುಗಳ ವಿವರ ಇಲ್ಲಿದೆ.

ರಾಹುಲ್ ಗಾಂಧಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾರತ್ ಬಂದ್‌ಗೆ ಬೆಂಬಲ ನೀಡಿದ್ದು, “ರೈತರ ಅಹಿಂಸಾತ್ಮಕ ಸತ್ಯಾಗ್ರಹ ಇಂದಿಗೂ ಹಾಗೆಯೇ ನಡೆಯುತ್ತಿದೆ. ಆದರೆ ಶೋಷಣೆ ಮಾಡುತ್ತಿರುವ ಸರ್ಕಾರವು ಇದನ್ನು ಇಷ್ಟಪಡುವುದಿಲ್ಲ. ಹೀಗಾಗಿ ಇಂದು ಭಾರತ್ ಬಂದ್ ಇದೆ” ಎಂದು ಟ್ವೀಟ್ ಮಾಡಿದ್ದಾರೆ.

ಚರಣ್‌‌ಜಿತ್‌ ಸಿಂಗ್‌ ಚನ್ನಿ (ಕಾಂಗ್ರೆಸ್)

ಪಂಜಾಬ್ ನೂತನ ಮುಖ್ಯಮಂತ್ರಿ  ಚರಣ್‌ಜಿತ್ ಸಿಂಗ್ ಚನ್ನಿ ರೈತ ಹೋರಾಟಕ್ಕೆ ಬೆಂಬಲಿಸಿ ಕಪ್ಪು ಬಾವುಟ ಹಿಡಿದಿರುವ ಪೋಟೋ ಜೊತೆಗೆ ಟ್ವೀಟ್ ಮಾಡಿದ್ದಾರೆ.

“ನಾನು ರೈತರೊಂದಿಗೆ ನಿಲ್ಲುತ್ತೇನೆ ಮತ್ತು ಕೇಂದ್ರ ಸರ್ಕಾರಕ್ಕೆ ಮೂರು ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಲು ಮನವಿ ಮಾಡುತ್ತೇನೆ. ನಮ್ಮ ರೈತರು ಒಂದು ವರ್ಷದಿಂದಲೂ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅವರ ಧ್ವನಿಯನ್ನು ಕೇಳುವ ಸಮಯ ಬಂದಿದೆ” ಎಂದಿದ್ದಾರೆ. ಜೊತೆಗೆ ರೈತರು ಶಾಂತಿಯುತವಾಗಿ ತಮ್ಮ ಹಕ್ಕನ್ನು ಕೇಳುವಂತೆ ನಾನು ವಿನಂತಿಸುತ್ತೇನೆ ಎಂದಿದ್ದಾರೆ.

ರಾಘವ್ ಚಡ್ಡಾ (ಆಪ್)

ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಡ್ಡಾ ಕೃಷಿ ಕಾನೂನುಗಳನ್ನು ವಿರೋಧಿಸಿ, ಭಾರತ್ ಬಂದ್‌ಗೆ ಬೆ<ಬಲ ನೀಡಿದ್ದಾರೆ.

“ಆಮ್ ಆದ್ಮಿ ಪಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಅವರು ಕೇಜ್ರಿವಾಲ್, ಕಪ್ಪು ಕಾನೂನುಗಳ ವಿರುದ್ಧ ರೈತರ ಪರವಾಗಿ ನಿಂತಿದ್ದಾರೆ. ಸೆಪ್ಟೆಂಬರ್ 27 ರಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ಭಾರತ್ ಬಂದ್ ಕರೆಗೆ ಎಎಪಿ ಸಂಪೂರ್ಣ ಬೆಂಬಲಿಸುತ್ತಣ” ಎಂದು ವಿಡಿಯೊ ಬಿಡುಗಡೆ ಮಾಡಿದ್ದಾರೆ.

ತೇಜಸ್ವಿ ಯಾದವ್ (ಆರ್‌ಜೆಡಿ)

ಆರ್‌ಜೆಡಿ ನಾಯಕ, ಬಿಹಾರದ ಪ್ರತಿಪಕ್ಷ ನಾಯಕ್ ತೇಜಸ್ವಿ ಯಾದವ್‌ ರೈತರಿಗೆ ಬೆಂಬಲ ವ್ಯಕ್ತಪಡಿಸಿ, ರೈತರ ವಬಿರುದ್ಧ ಮಾತನಾಡುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ದೇಶದ ಬೆನ್ನೆಲುಬಾಗಿರುವ ರೈತರನ್ನು ಬಡವರನ್ನಾಗಿ ಮಾಡುವ ಮೂಲಕ, ದೇಶವು ಎಂದಾದರೂ ಸಮೃದ್ಧ, ಸಮರ್ಥ, ಬಲಿಷ್ಠವಾಗಲು ಸಾಧ್ಯವೇ..? ಈ ದಾನಿಗಳು ಬೆಳೆದ ಆಹಾರವನ್ನು ನಾವು ತಿನ್ನುತ್ತೇವೆ. ಅದೇ ಬಾಯಿಯಿಂದ ದೇಶದ ರೈತರ ವಿರುದ್ಧ ನಿಂದನಾತ್ಮಕ ಮಾತುಗಳನ್ನು ಮಾತನಾಡಲು ನಾಚಿಕೆಯಾಗುವುದಿಲ್ಲವೇ..?” ಎಂದು ಆಕ್ರೋಶ ಹೊರಹಾಕಿದ್ದಾರೆ.

ಲಾಲೂ ಪ್ರಸಾದ್ ಯಾದವ್ (ಬಿಹಾರದ ಮಾಜಿ ಮುಖ್ಯಮಂತ್ರಿ)

ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

“ಭಾರತವು ಕೃಷಿಕರ ದೇಶವಾಗಿದ್ದು, ರೈತರ ಶ್ರಮದಿಂದ ಬಲವನ್ನು ಪಡೆಯುವ ಮೂಲಕ ದೇಶ ಬೆಳೆಯುತ್ತಿದೆ. ಇದು ಬೆರಳೆಣಿಕೆಯಷ್ಟು ಬಂಡವಾಳಶಾಹಿಗಳ ಕ್ರೋನಿ ಕ್ಯಾಪಿಟಲಿಸಂ ಪ್ರಾಬಲ್ಯದ ದೇಶವಲ್ಲ. ಕ್ರೂರ ಬಂಡವಾಳಶಾಹಿ ಎಲ್ಲಾ ಸಂಪತ್ತನ್ನು ಬೆರಳೆಣಿಕೆಯ ಜನರ ಚೀಲದಲ್ಲಿ ಇರಿಸುತ್ತದೆ. ಆದರೆ ರೈತ ಎಲ್ಲರಿಗೂ ಆಹಾರವನ್ನು ಉತ್ಪಾದಿಸುತ್ತಾನೆ. ಅದಕ್ಕಾಗಿಯೇ ನಾವು ರೈತರೊಂದಿಗೆ ಇದ್ದೇವೆ” ಎಂದಿದ್ದಾರೆ.


ಇದನ್ನೂ ಓದಿ: ರೈತರ ಆಕ್ರೋಶ ಸ್ಫೋಟ – ಎಲ್ಲೆಡೆ ಆರಂಭಗೊಂಡ ಭಾರತ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...