ರೈತರು ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್‌ಗೆ ಕನ್ನಡ ನಾಡು ಸ್ಪಂದಿಸಿದೆ. ವಿವಿಧ ಸಂಘಟನೆಗಳು ರಸ್ತೆತಡೆ, ಪ್ರತಿಭಟನೆ ನಡೆಸಿದ್ದಾರೆ. ರೈತ ವಿರೋಧಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಭಾರತ್ ಬಂದ್ ಬೆಂಬಲಿಸಿ ಕೊಪ್ಪಳದಲ್ಲಿ ಪ್ರತಿಭಟನೆ

***

ಸಂಯುಕ್ತ ಕಿಸಾನ್ ಮೋರ್ಚಾ-ಶಿವಮೊಗ್ಗದಲ್ಲಿ ಬೈಕ್ ರ್‍ಯಾಲಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು, ಶಿವಮೊಗ್ಗ ನಗರದ ಗೋಪಿ ವೃತ್ತದಿಂದ ಬೈಕ್ ರ್‍ಯಾಲಿ ಹೊರಟು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು.
***
ರಸ್ತೆಗೆ ಅಡ್ಡ ಮಲಗಿ ಪ್ರತಿಭಟನೆ
https://twitter.com/naanugauri/status/1442351259906830336
ಮೈಸೂರಿನಲ್ಲಿ ಭಾರತ್ ಬಂದ್ ಅಂಗವಾಗಿ ಬಸ್ ಸಂಚಾರ ಮಾಡದಂತೆ ತಡೆದ ಪ್ರತಿಭಟನಾಕಾರರು..

***

ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ!

ಚಿತ್ರದುರ್ಗದಲ್ಲಿ ವಿನೂತನ ಪ್ರತಿಭಟನೆ ಮಾಡಲಾಯಿತು. ಭಾರತ್ ಬಂದ್ ಅಂಗವಾಗಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.

***

ಚಿಕ್ಕಬಳ್ಳಾಪುರ ವರದಿ

ಚಿಕ್ಕಬಳ್ಳಾಪುರದಲ್ಲಿ ಭಾರತ್ ಬಂದ್ ಅಂಗವಾಗಿ ಅಂಗಡಿ ಮುಂಗಟ್ಟುಗಳನ್ನು ರೈತರು ಮುಚ್ಚಿಸಿದರು.

***

ಚಿತ್ರದುರ್ಗದಲ್ಲಿ ಪ್ರತಿಭಟನೆ

ಚಿತ್ರದುರ್ಗದಲ್ಲಿ ಭಾರತ್ ಬಂದ್ ಬೆಂಬಲಿಸಿ ಹೆದ್ದಾರಿ ತಡೆ ಮಾಡಿ ಪ್ರತಿಭಟಿಸಲಾಯಿತು. ಕರ್ನಾಟಕ ಜನಶಕ್ತಿ ಮತ್ತು ಇತರ ಸಂಘಟನೆಗಳು ಪಾಲ್ಗೊಂಡಿದ್ದವು.

***

ಅಂಗಡಿಗಳನ್ನು ಮುಚ್ಚಿಸಿದ ಹೋರಾಟಗಾರರು

https://twitter.com/naanugauri/status/1442350363491794948

ಹಾಸನದಲ್ಲಿ ಬಲವಂತವಾಗಿ ಅಂಗಡಿ ಮುಚ್ಚಿಸಿ ಬಂದ್ ಆಚರಿಸಲಾಯಿತು.
***

ಅಂಬಾನಿ- ಅದಾನಿ ಸ್ಟಾಲ್‌!

ಕೋಲಾರದಲ್ಲಿ ಅಂಬಾನಿ – ಅದಾನಿ ಸ್ಟಾಲ್ ತೆಗೆದು ರೈತರು ಪ್ರತಿಭಟಿಸಿದರು. ಮುಂಜಾನೆ 6 ಗಂಟೆಯಲ್ಲೇ ಪ್ರತಿಭಟನೆ ಆರಂಭವಾಗಿತ್ತು.

***

ಪೊಲೀಸರೊಂದಿಗೆ ಜಟಾಪಟಿ

https://twitter.com/naanugauri/status/1442355063666536450

ಯಾದಗಿರಿಯಲ್ಲಿ ಬಸ್ ತಡೆದು ರೈತರು ಪ್ರತಿಭಟಿಸಿದರು. ಪ್ರತಿಭಟನಾಕಾರರು ಪೊಲೀಸರೊಂದಿಗೆ ಜಟಾಪಟಿ ನಡೆಸಿದರು.

***

ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ

ಕಲಬುರಗಿ ವರದಿ

ಕಲಬುರಗಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಭಾರತ್ ಬಂದ್ ಆಚರಣೆ

***

ತುಮಕೂರಿನಲ್ಲಿ ಬೃಹತ್‌ ಮೆರವಣಿಗೆ

ತುಮಕೂರಿನಲ್ಲಿ ಬೃಹತ್ ಮೆರವಣಿಗೆ, ಪ್ರತಿಭಟನೆ ನಡೆಯಿತು. ಭಾರತ್ ಬಂದ್ ಯಶಸ್ವಿಯಾಯಿತು.

ಬಾಗಲಕೋಟೆ ವರದಿ

ಬಾಗಲಕೋಟೆಯಲ್ಲಿ ಬಸ್ ತಡೆದು ಪ್ರತಭಟನೆ, ಭಾರತ್ ಬಂದ್ ಬೆಂಬಲಿಸಿದ ರೈತರು

***

ಪ್ರತಿಭಟನಾಕಾರರ ಮೇಲೆ ಹಲ್ಲೆ

ದಾವಣಗೆರೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಭಾರತ್ ಬಂದ್ ನಡೆಸದಂತೆ ವಿರೋಧ ವ್ಯಕ್ತಪಡಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

****

ಮೈಸೂರು ವರದಿ

ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಿತು.

***

ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಕರ್ನಾಟಕ ಕಾರ್ಮಿಕ ಪಕ್ಷದ ಪಧಾದಿಕಾರಿಗಳಿಂದ ಭಾರತ್ ಬಂದ್ ಆಚರಣೆ – ಪ್ರತಿಭಟನೆ

***

ಕಾಂಗ್ರೆಸ್‌ನಿಂದ ಪ್ರತಿಭಟನೆ

ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರತ್ ಬಂದ್.. ವಶಕ್ಕೆ ಪಡೆದ ಪೊಲೀಸರು

***

ಬೆಂಗಳೂರಲ್ಲಿ ಜನಸಾಗರ

ಬೆಂಗಳೂರಿನ ಟೌನ್‌ಹಾಲ್‌ ತುಂಬಾ ಜನಸಾಗರ.. ಭಾರತ್ ಬಂದ್‌ಗೆ ಬೆಂಬಲದ ಮಹಾಪೂರ..

***

 ಅರಬೆತ್ತಲೆ ಪ್ರತಿಭಟನೆ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೆಳಗಾವಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ರೈತರು.

***

ಮಳೆಯಲ್ಲಿಯೇ ಪ್ರತಿಭಟನೆ

ಮಡಿಕೇರಿಯಲ್ಲಿ ಮಳೆಯಲ್ಲೂ ಪ್ರತಿಭಟಿಸಿ ಭಾರತ್ ಬಂದ್ ಆಚರಿಸಿದ ಪ್ರಜ್ಞಾವಂತರು…

ಪಾಂಡವಪುರ ವರದಿ

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ರೈತರಿಂದ ಬೈಕ್ ರ್‍ಯಾಲಿ ನಡೆಯಿತು.

***

ರಾಯಚೂರು ವರದಿ

ರಾಯಚೂರು ಗ್ರಾಮೀಣ ಶಾಸಕ ದದ್ದಲ ಬಸನಗೌಡ ಅವರು ಭಾರತ್ ಬೆಂಬಲಿಸಿ ಪ್ರತಿಭಟನೆಯಲ್ಲಿ ಮಾತನಾಡಿದರು.

***

ಮಂಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here