ಪತ್ರಕರ್ತರಾದ ಮರಿಯಾ ರೆಸ್ಸಾ ಮತ್ತು ಡಿಮಿಟ್ರಿ ಮುರಾಟೋವ್ ಅವರು ಫಿಲಿಪೈನ್ಸ್ ಮತ್ತು ರಷ್ಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ನಡೆಸಿದ ಹೋರಾಟಕ್ಕಾಗಿ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನೊಬೆಲ್ ಸಮಿತಿಯು ಈ ಜೋಡಿಯನ್ನು “ಆದರ್ಶಕ್ಕಾಗಿ ನಿಲ್ಲುವ ಎಲ್ಲಾ ಪತ್ರಕರ್ತರ ಪ್ರತಿನಿಧಿಗಳು” ಎಂದು ಬಣ್ಣಿಸಿದೆ.
ಇಬ್ಬರು ಪತ್ರಕರ್ತರೂ ತಮ್ಮ ದೇಶಗಳ ಆಡಳಿತಗಾರರ ಕೋಪಕ್ಕೆ ಗುರಿಯಾದವರಾಗಿದ್ದು, ಭಾರಿ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (8.5 ಕೋಟಿ ರೂ.) ನಗದು ಬಹುಮಾನವನ್ನು ಹೊಂದಿದೆ. ನೊಬೆಲ್ ಪ್ರಶಸ್ತಿಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿರುವವರಿಗೆ ನೀಡಲಾಗುತ್ತದೆ.
BREAKING NEWS:
The Norwegian Nobel Committee has decided to award the 2021 Nobel Peace Prize to Maria Ressa and Dmitry Muratov for their efforts to safeguard freedom of expression, which is a precondition for democracy and lasting peace.#NobelPrize #NobelPeacePrize pic.twitter.com/KHeGG9YOTT— The Nobel Prize (@NobelPrize) October 8, 2021
ಇದನ್ನೂ ಓದಿ: ತಾಂಜೇನಿಯಾ ಲೇಖಕ ಅಬ್ದುಲ್ ರಜಾಕ್ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ-2021
ಸಾಹಿತ್ಯಕ್ಕೆ ನೀಡುವ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ತಾಂಜೇನಿಯಾದ ಬರಹಗಾರ ಅಬ್ದುಲ್ ರಜಾಕ್ ಗುರ್ನಾ ಅವರಿಗೆ ಗುರುವಾರ ಘೋಷಿಸಲಾಗಿದೆ. ವಶಾಹತುಶಾಹಿಯ ಪರಿಣಾಮಗಳ ಕುರಿತಾಗಿ ರಾಜಿರಹಿತ ಮತ್ತು ನಿರಂತರ ಕೆಲಸಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಶಸ್ತಿಯನ್ನು ನೀಡುವ ಅಕಾಡೆಮಿ ಹೇಳಿದೆ.
ಸೋಮವಾರದಂದು, ನೊಬೆಲ್ ಸಮಿತಿಯು ಅಮೆರಿಕನ್ನರಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಅವರಿಗೆ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೋಬೆಲ್ ಅನ್ನು ಘೋಷಿಸಿತ್ತು.
ಮಂಗಳವಾರದಂದು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಮೂವರು ವಿಜ್ಞಾನಿಗಳಾದ ಕ್ಲಾಸ್ ಹ್ಯಾಸೆಲ್ಮನ್, ಜಾರ್ಜಿಯೊ ಪ್ಯಾರಿಸಿ, ಸಿಯುಕುರೊ ಮನಾಬೆ ಅವರಿಗೆ ನೀಡಲಾಗಿದೆ.
ಬೆಂಜಮಿನ್ ಲಿಸ್ಟ್, ಡೇವಿಡ್ ಮ್ಯಾಕ್‌ಮಿಲನ್ ಮತ್ತು ಜೆನ್ನಿಫರ್ ಡೌಡ್ನಾ ಅವರಿಗೆ ರಸಾಯನಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಬುಧವಾರ ಘೋಷಿಸಲಾಗಿದೆ.
ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸ ಮಾಡಿದ್ದಕ್ಕಾಗಿ ಇನ್ನಷ್ಟೇ ಪ್ರಶಸ್ತಿಯನ್ನು ಘೋಷಿಸಬೇಕಿದೆ.
"Without media, you cannot have a strong democracy."
Following the announcement of this year's #NobelPeacePrize to journalists Maria Ressa and Dmitry Muratov we spoke to Berit Reiss-Andersen, Chair of the Norwegian Nobel Committee, about the prize.#NobelPrize pic.twitter.com/wPxlVCVsF4
— The Nobel Prize (@NobelPrize) October 8, 2021
ಇದನ್ನೂ ಓದಿ: ವೈದ್ಯಕೀಯ ನೊಬೆಲ್-2021 ಪ್ರಶಸ್ತಿ ಘೋಷಣೆ


