ವೈದ್ಯಕೀಯ ನೊಬೆಲ್-2021 ಪ್ರಶಸ್ತಿ ಘೋಷಣೆ | Naanu gauri

ಈ ವರ್ಷದ ಶರೀರಶಾಸ್ತ್ರ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ನೀಡುವ ನೊಬೆಲ್ ಪ್ರಶಸ್ತಿಯನ್ನು, ಅಮೇರಿಕದ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೂಟಿಯನ್ ಅವರಿಗೆ ಘೋಷಣೆಯಾಗಿದೆ. ‘ತಾಪಮಾನ ಮತ್ತು ಸ್ಪರ್ಶ’ದ ಸಂಶೋಧನೆಗಾಗಿ ಈ ಪ್ರಶಸ್ತಿಯನ್ನು ಅವರು ಗೆದ್ದಿದ್ದಾರೆ ಎಂದು ತೀರ್ಪುಗಾರರು ಹೇಳಿದ್ದಾರೆ. ಪ್ರಶಸ್ತಿಯನ್ನು ಸೋಮವಾರ ನೊಬೆಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಥಾಮಸ್ ಪೆರ್ಲ್ಮನ್ ಘೋಷಿಸಿದ್ದಾರೆ.

ಕಳೆದ ವರ್ಷದ ಬಹುಮಾನವು ಯಕೃತ್ತನ್ನು ಹಾಳುಮಾಡುವ ಹೆಪಟೈಟಿಸ್ ಸಿ ವೈರಸ್ ಅನ್ನು ಕಂಡುಹಿಡಿದ ಮೂವರು ವಿಜ್ಞಾನಿಗಳಿಗೆ ಬಂದಿತ್ತು. ವೈದ್ಯಕೀಯ ಕ್ಷೇತ್ರದಲ್ಲಿ ಈ ಸಂಶೋಧನೆಯು ಮಹತ್ವದ ಪ್ರಗತಿಯಾಗಿದ್ದು, ಮಾರಣಾಂತಿಕ ಕಾಯಿಲೆಗೆ ಪರಿಹಾರಗಳನ್ನು ನೀಡಿತ್ತು.

ಇದನ್ನೂ ಓದಿ: ರೈತ ಹೋರಾಟ: ನೋಬೆಲ್ ಪುರಸ್ಕೃತೆ, ಹೋರಾಟಗಾರ್ತಿ ಮಲಾಲಾ ಯೂಸುಫ್ ಬೆಂಬಲ

ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (8.5 ಕೋಟಿ ರೂ.) ನಗದು ಬಹುಮಾನವನ್ನು ಹೊಂದಿದೆ. ನೊಬೆಲ್ ಪ್ರಶಸ್ತಿಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿರುವವರಿಗೆ ನೀಡಲಾಗುತ್ತದೆ.

ಡೇವಿಡ್‌‌‌ ಜೂಲಿಯಸ್ ಅವರು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದಾರೆ. ಆರ್ಡೆಮ್ ಪಟಪೂಟಿಯನ್ ಅವರು ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್ ಸಂಶೋಧನೆಯ ಪ್ರಾಧ್ಯಾಪಕರಾಗಿದ್ದಾರೆ. ಈ ಇಬ್ಬರೂ ಈ ವರ್ಷದ ನೊಬೆಲ್ ಪ್ರಶಸ್ತಿಯ ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕ್ಯೂಬಾದ ವೈದ್ಯಕೀಯ ತಂಡಕ್ಕೆ ’ನೋಬೆಲ್ ಶಾಂತಿ’ ಪ್ರಶಸ್ತಿ ನೀಡುವಂತೆ ಪ್ರತಿಪಾದನೆ

LEAVE A REPLY

Please enter your comment!
Please enter your name here