Homeಅಂತರಾಷ್ಟ್ರೀಯತಾಂಜೇನಿಯಾ ಲೇಖಕ ಅಬ್ದುಲ್ ರಜಾಕ್‌‌‌ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ-2021

ತಾಂಜೇನಿಯಾ ಲೇಖಕ ಅಬ್ದುಲ್ ರಜಾಕ್‌‌‌ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ-2021

- Advertisement -
- Advertisement -

ಸಾಹಿತ್ಯಕ್ಕೆ ನೀಡುವ ಈ ವರ್ಷದ ನೊಬೆಲ್‌ ಪ್ರಶಸ್ತಿಯನ್ನು ತಾಂಜೇನಿಯಾದ ಬರಹಗಾರ ಅಬ್ದುಲ್ ರಜಾಕ್ ಗುರ್ನಾ ನೀಡಲಾಗಿದೆ. ವಶಾಹತುಶಾಹಿಯ ಪರಿಣಾಮಗಳ ಕುರಿತಾಗಿ ರಾಜಿರಹಿತ ಮತ್ತು ನಿರಂತರ ಕೆಲಸಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಶಸ್ತಿಯನ್ನು ನೀಡುವ ಅಕಾಡೆಮಿ ಹೇಳಿದೆ.

ಜಂಜಿಬಾರ್‌ನಲ್ಲಿ ಜನಿಸಿರುವ ಅಬ್ದುಲ್ ರಜಾಕ್‌, ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ಕೆಂಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಅವರ “ಪ್ಯಾರಡೈಸ್” ಎಂಬ ಕಾದಂಬರಿ 1994 ರಲ್ಲಿ ಬುಕರ್ ಪ್ರಶಸ್ತಿಗೆ ನಾಮನಿರ್ದೇಶನ ಆಗಿತ್ತು.

ಇದನ್ನೂ ಓದಿ: ವೈದ್ಯಕೀಯ ನೊಬೆಲ್-2021 ಪ್ರಶಸ್ತಿ ಘೋಷಣೆ

ಈ ಪ್ರತಿಷ್ಠಿತ ಪ್ರಶಸ್ತಿಯೊಂದಿಗೆ ಚಿನ್ನದ ಪದಕ ಹಾಗೂ 10 ಮಿಲಿಯನ್ ಸ್ವೀಡಿಷ್ ಕ್ರೋನರ್ (8.51 ಕೋಟಿ ರೂ.) ಪುರಸ್ಕೃತರ ಪಾಲಾಗುತ್ತದೆ.

ಸೋಮವಾರದಂದು, ನೊಬೆಲ್ ಸಮಿತಿಯು ಅಮೆರಿಕನ್ನರಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಅವರಿಗೆ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೋಬೆಲ್ ಅನ್ನು ಘೋಷಿಸಿತ್ತು.

ಮಂಗಳವಾರದಂದು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಮೂವರು ವಿಜ್ಞಾನಿಗಳಾದ ಕ್ಲಾಸ್ ಹ್ಯಾಸೆಲ್ಮನ್, ಜಾರ್ಜಿಯೊ ಪ್ಯಾರಿಸಿ, ಸಿಯುಕುರೊ ಮನಾಬೆ ಅವರಿಗೆ ನೀಡಲಾಗಿದೆ.

ಬೆಂಜಮಿನ್ ಲಿಸ್ಟ್‌, ಡೇವಿಡ್ ಮ್ಯಾಕ್‌ಮಿಲನ್ ಮತ್ತು ಜೆನ್ನಿಫರ್ ಡೌಡ್ನಾ ಅವರಿಗೆ ರಸಾಯನಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಬುಧವಾರ ಘೋಷಿಸಲಾಗಿದೆ.

ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಕ್ಕಾಗಿ ಇನ್ನಷ್ಟೇ ಪ್ರಶಸ್ತಿಗಳನ್ನು ಘೋಷಿಸಬೇಕಿದೆ.

ಇದನ್ನೂ ಓದಿ: ಆಲ್ಬರ್ಟ್ ಐನ್‌ಸ್ಟೈನ್‌ರಿಗೆ ಸಂದ ನೊಬೆಲ್‌ಗೆ ನೂರು ವರ್ಷ – ಇದು ‘ಆಲ್ಬರ್ಟನ ಪ್ರಪಂಚ’!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...