ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಗೆಲುವಿನ ಸರಣಿಯು ಉಪಚುನಾವಣೆಗಳ ಮೂಲಕ ಮುಂದುವರಿಯುತ್ತಿದೆ. ಇತ್ತೀಚೆಗೆ ನಡೆದಿರುವ ನಾಲ್ಕು ಕ್ಷೇತ್ರಗಳ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮಂಗಳವಾರ ಭರ್ಜರಿಯಾಗಿ ಗೆದ್ದುಕೊಂಡಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಭದ್ರತಾ ಠೇವಣಿಯನ್ನೂ ಕಳೆದುಕೊಂಡಿದ್ದು, ಭಾರಿ ಮುಖಭಂಗಕ್ಕೆ ಒಳಗಾಗಿದೆ.
ರಾಜ್ಯದ ದೀನ್ಹಟಾ ಮತ್ತು ಶಾಂತಿಪುರ್ ಕ್ಷೇತ್ರಗಳು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ದೀನ್ಹಟಾದಲ್ಲಿ ಆರು ತಿಂಗಳ ಹಿಂದೆಯಷ್ಟೇ ಬಿಜೆಪಿಯಿಂದ ನಿಸಿತ್ ಪ್ರಮಾಣಿಕ್ ಗೆದ್ದುಕೊಂಡಿದ್ದರು. ನಂತರ ಅವರಿಗೆ ಒಕ್ಕೂಟ ಸರ್ಕಾರದ ಕಿರಿಯ ಗೃಹ ಸಚಿವರಾಗಿ ಅಧಿಕಾರ ನೀಡಲಾಗಿತ್ತು. ಇದರಿಂದಾಗಿ ಅವರು ತನ್ನ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಬಂಗಾಳ ಉಪಚುನಾವಣೆ: ಎಲ್ಲಾ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಅಧಿಕ ಅಂತರಗಳಲ್ಲಿ ಸೋತ ಬಿಜೆಪಿ; ಭಾರಿ ಮುಖಭಂಗ!
ಶಾಂತಿಪುರದಲ್ಲಿ ಗೆಲುವು ಕಂಡಿದ್ದ ಜಗನ್ನಾಥ್ ಸರ್ಕಾರ್ ತನ್ನ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಆದ್ದರಿಂದ ಇದನ್ನು ಉಳಿಸಿಕೊಳ್ಳಬೇಕಾಗಿದ್ದ ಅನಿವಾರ್ಯತೆ ಬಿಜೆಪಿಗೆ ಉಂಟಾಗಿತ್ತು. ಆದರೆ ಬಿಜೆಪಿ ಶಾಂತಿಪುರದಲ್ಲಿ ತನ್ನ ಠೇವಣಿಯನ್ನು ಮಾತ್ರವೇ ಉಳಿಸಿಕೊಂಡಿದೆ.
ಉಳಿದಂತೆ ಈ ಹಿಂದೆ ಒಕ್ಕೂಟ ಸರ್ಕಾರದ ಸಚಿವ ಗೆಲುವು ಕಂಡಿದ್ದ ದೀನ್ಹಟಾವಾಗಲಿ, ಖಾರ್ದಹೊ ಮತ್ತು ಗೋಸಬಾದ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿದ್ದು, ತನ್ನ ಠೀವಣಿಯನ್ನೂ ಉಳಿಸಿಕೊಂಡಿಲ್ಲ.
ರಾಜ್ಯದ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಭರ್ಜರಿ ಗೆಲುವಿನ ಬಗ್ಗೆ ಪತ್ರಿಕ್ರಿಯಿಸಿರುವ ಟಿಎಂಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, “ಬಿಜೆಪಿಯ ಜನರಿಗೆ ನಿಜವಾದ ಅರ್ಥದಲ್ಲಿ ಪಟಾಕಿ ರಹಿತ ದೀಪಾವಳಿಯ ಶುಭವನ್ನು ಹಾರೈಸುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.
A cracker free Diwali in true sense. Wishing folks at @BJP4India a very Happy Diwali!?
— Abhishek Banerjee (@abhishekaitc) November 2, 2021
ಇದನ್ನೂ ಓದಿ: ಹರಿಯಾಣ ಉಪಚುನಾವಣೆ: ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜೀನಾಮೆ ಕೊಟ್ಟಿದ್ದ ಅಭಯ್ ಚೌಟಾಲಾಗೆ ಗೆಲುವು
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೂ ಮುಂಚೆ ಹಲವಾರು ಜನರು ಟಿಎಂಸಿಯಿಂದ ಬಿಜೆಪಿಗೆ ವಲಸೆ ಹೋಗಿದ್ದರು. ಆದರೆ ವಿಧಾನಸಭೆಯ ಚುನಾವಣೆ ನಡೆದು ಫಲಿತಾಂಶ ಘೋಷಿಣೆಯಾಗಿ ರಾಜ್ಯದಲ್ಲಿ ಟಿಎಂಸಿ ಸರ್ಕಾರ ರಚನೆಯಾದ ಸ್ವಲ್ಪ ಸಮಯದಲ್ಲೇ, ಇದು ಉಲ್ಟಾ ಆಗಿದೆ. ಬಿಜೆಪಿ ಸೇರಿದ್ದ ಟಿಎಂಸಿಯ ಕಾರ್ಯಕರ್ತರು, ಶಾಸಕರು, ಮಾಜಿ ನಾಯಕರು ಮತ್ತೇ ಟಿಎಂಸಿ ಸೇರಿದ್ದಾರೆ. ಈ ಸರಣಿ ಇನ್ನೂ ಮುಂದುವರೆದಿದ್ದು, ಇದು ಬಿಜೆಪಿಗೆ ತೀವ್ರ ಮುಖಭಂಗ ನೀಡಿದೆ. ಈ ನಡುವೆ ಮತ್ತೇ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿದೆ.
ಚುನಾವಣಾ ಗೆಲುವನ್ನು ಸಂಭ್ರಮಿಸಿರುವ ಮಮತಾ ಬ್ಯಾನರ್ಜಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದ್ದಾರೆ. “ಎಲ್ಲಾ ನಾಲ್ಕು ವಿಜೇತ ಅಭ್ಯರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಈ ವಿಜಯವು ಜನರ ವಿಜಯವಾಗಿದೆ. ಇದು ಬಂಗಾಳ ಯಾವಾಗಲೂ ಪ್ರೊಪಾಗಾಂಡ ಮತ್ತು ದ್ವೇಷದ ರಾಜಕೀಯಕ್ಕಿಂತ ಅಭಿವೃದ್ಧಿ ಮತ್ತು ಏಕತೆಯನ್ನು ಹೇಗೆ ಆರಿಸಿಕೊಳ್ಳುತ್ತದೆ ತೋರಿಸಿದೆ. ಜನರ ಆಶೀರ್ವಾದದೊಂದಿಗೆ, ಬಂಗಾಳವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುದಾಗಿ ನಾವು ಭರವಸೆ ನೀಡುತ್ತೇವೆ!” ಎಂದು ಅವರು ಹೇಳಿದ್ದಾರೆ.
My heartiest congratulations to all the four winning candidates!
This victory is people's victory, as it shows how Bengal will always choose development and unity over propaganda and hate politics. With people's blessings, we promise to continue taking Bengal to greater heights!
— Mamata Banerjee (@MamataOfficial) November 2, 2021
ಇದನ್ನೂ ಓದಿ: ಅಸ್ಸಾಂ: ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ಸೋಲು; ಆಪರೇಷನ್ ಕಮಲಕ್ಕೆ ಜಯ!
ಈ ನಾಲ್ಕು ಕ್ಷೇತ್ರಗಳೊಂದಿಗೆ ರಾಜ್ಯದ ವಿಧಾನಸಭೆಯಲ್ಲಿ ಟಿಎಂಸಿಯ ಸೀಟು 213 ಕ್ಕೆ ಏರಿದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಮೇವ ಪಕ್ಷವಾಗಿ ಮುನ್ನುಗ್ಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಷ್ಟೊಂದು ಒಳ್ಳೆಯ ಲಕ್ಷಣಗಳಲ್ಲ ಎಂಬ ಮಾತು ಕೂಡಾ ಕೇಳಿ ಬರುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಸಿರುವ ಕ್ರುಶಿಕ ಎವಿ ಅವರು, “ಬಂಗಾಳದಲ್ಲಿ ಮಂದಿಯಾಳ್ವಿಕೆಗೆ ಅನಾರೋಗ್ಯಕರವಾದ ಅಧಿಕಾರ ಕೇಂದ್ರೀಕರಣ ಆಗುತ್ತಿದೆ. ಒಂದೇ ಪಕ್ಷದ ಅಡಿಯಲ್ಲಿ ಭಾರೀ ಬಹುಮತ, ವಿಪಕ್ಷದಲ್ಲಿ ಬಿಜೆಪಿ ಒಂದೇ ಉಸಿರಾಡುತ್ತಿದೆ. ಬಾಕಿ ಯಾವುದೆ ಪಕ್ಷಗಳು ಇಲ್ಲವೇ ಇಲ್ಲ!. ಹೀಗಾದಲ್ಲಿ ವ್ಯವಸ್ಥೆ ಹೇಗೆ ವರ್ತಿಸಬಹುದು? ಇಂದಿರಾ ಗಾಂಧಿಯಂತೆ ಸರ್ವಾಧಿಕಾರಿಯಾಗಿ ಮಮತಾ ಸರ್ವಾಧಿಕಾರಿ ನರೇಂದ್ರ ಮೋದಿಯ ಎದುರು ಅವರೇ ಸರಿ ಅನ್ನೋ ಭಾವನೆ!.
ಬಿಜೆಪಿ ಮಾಡಿದ ಕರ್ಚು, ಮತಿಯವಾಗಿ ಒಡೆದ ಜನ ಸಮುದಾಯ, ಮಾಡಿದ ಕೀಟಲೆ ಎಲ್ಲಾ ಮಮತಾ ಅಧಿಕಾರ ಇನ್ನಷ್ಟು ಗಟ್ಟಿಯಾಗಿಸಿದೆ. ಇದು ಒಳ್ಳೆಯದು ಮಾಡಬಹುದು ಇಲ್ಲವೇ ಭಾರಿ ಕಷ್ಟವನ್ನೇ ಬಂಗಾಳಕ್ಕೆ ತರಬಹುದು!
— ಕ್ರುಶಿಕ ಎವಿ/Krushika AV (@KrishKrushik) November 2, 2021
ಬಿಜೆಪಿ ಮಾಡಿದ ಖರ್ಚು, ಮತಿಯವಾಗಿ ಒಡೆದ ಜನ ಸಮುದಾಯ, ಮಾಡಿದ ಕೀಟಲೆ ಎಲ್ಲಾ ಮಮತಾ ಅಧಿಕಾರ ಇನ್ನಷ್ಟು ಗಟ್ಟಿಯಾಗಿಸಿದೆ. ಇದು ಒಳ್ಳೆಯದು ಮಾಡಬಹುದು ಇಲ್ಲವೇ ಭಾರಿ ಕಷ್ಟವನ್ನೇ ಬಂಗಾಳಕ್ಕೆ ತರಬಹುದು!” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನೇಕೆ ಆರ್ ಎಸ್ ಎಸ್ ತೊರೆದೆ ಸರಣಿ; ದೇಶಕ್ಕಾಗಿ ಸಂಘದ ಸಖ್ಯ ಬಿಟ್ಟೆ!


