Homeಮುಖಪುಟದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ-ಒಂದು

ದೇಶ ವಿಭಜನೆಯ ವಾಸ್ತವ ಸತ್ಯಗಳು: ಭಾಗ-ಒಂದು

- Advertisement -
- Advertisement -

1947ರ ವಿಭಜನೆಗೆ ಕಾರಣವೇನು?

ಪ್ರವೇಶಿಕೆ

ಭಾರತ ಸ್ವಾತಂತ್ರ್ಯದ ಹೊಂಬೆಕಿಗಿನ ಸಂಭ್ರಮಾಚರಣೆಯ ದಿನವಾದ 15 ಆಗಸ್ಟ್ 1947 ಮತ್ತು ಮಾರ್ಚ್ 1948ರ ನಡುವೆ ದೇಶವು ಕಠೋರ ರೀತಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜನೆಯಾದ ಕ್ಷೆಭೆಯನ್ನು ಕುರಿತು ಕವಿ ಫೈಜ್ ಅಹ್ಮದ್ ಫೈಜ್ ಹೀಗೆ ಬರೆಯುತ್ತಾರೆ:

ನಾವು ನಿರೀಕ್ಷಿಸಿದ ಈ ಹೊಂಬೆಳಗು
ಹಿಂದಿನ ರಾತ್ರಿಯನ್ನು ಘಾಸಿಗೊಳಿಸಿದ ಹೊಂಬೆಳಗಾಗಿತ್ತು
ಅದಾಗಿರಲಿಲ್ಲ ನಾವು ನಿರೀಕ್ಷಿಸಿದ ಹೊಂಬೆಳಗು

ದೇಶ ವಿಭಜನೆಯಲ್ಲಿ ನಾಲ್ಕು ದಶಲಕ್ಷ ಹಿಂದೂಗಳು ಮತ್ತು ಸಿಖ್ಖರು ಭಾರತವನ್ನು ಪ್ರವೇಶಿಸುವಂತಾಯಿತು; ಆರು ದಶಲಕ್ಷ ಮುಸ್ಲಿಮರು ಪಾಕಿಸ್ತಾನವನ್ನು ಪ್ರವೇಶಿಸುವಂತಾಯಿತು; ಹತ್ತು ದಶಲಕ್ಷ ಜನ ಬಲಾತ್ಕಾರದಿಂದ ತಮ್ಮ ತಮ್ಮ ನೆಲೆಗಳನ್ನು ಕಳೆದುಕೊಂಡು ನಿರಾಶ್ರಿತರಾದರು; ಒಂದು ದಶಲಕ್ಷ ಜನ ಈ ಕ್ರೂರ ಹಿಂಸಾಕಾಂಡದಲ್ಲಿ ಹತ್ಯೆಗೊಳಗಾದರು.

ತ್ರಿಕೋನ ಪ್ರೇಮ ಪ್ರಕರಣ!

ಈ ವಿಭಜನೆಯು ಆಗಿದ್ದಾದರೂ ಏಕೆ? ಇದರ ಹಿಂದಿದ್ದ ಕಾರಣಗಳೇನು? ದೇಶ ವಿಭಜನೆಯ ಬಗ್ಗೆ ಕುತೂಹಲ ಕೆರಳಿಸಿ ಹರಿದಾಡುತ್ತಿರುವ ಹಲವು ಕತೆಗಳಲ್ಲಿ ಜವಾಹರ್‌ಲಾಲ್ ನೆಹರೂ, ಮೊಹಮದ್ ಆಲಿ ಜಿನ್ನಾ ಮತ್ತು ಎಡ್ವಿನಾ ಮೌಂಟ್‌ಬ್ಯಾಟನ್ ಇವರುಗಳನ್ನು ಒಳಗೊಳ್ಳುವ ರಂಜಕ ಕತೆಯೊಂದಿದೆ. ಈ ಮೂವರೂ ಲಂಡನ್ನಿನ ಹ್ಯಾರಿಸ್ ಕಾಲೇಜಿನಲ್ಲಿ ಓದುತ್ತಿದ್ದರಂತೆ! ಇವರುಗಳ ನಡುವೆ ತ್ರಿಕೋನ ಪ್ರೇಮವಿತ್ತಂತೆ! ಇದರಿಂದಾಗಿ ಜಿನ್ನಾ ಮತ್ತು ನೆಹರೂ ಇಬ್ಬರೂ ಪ್ರಧಾನಮಂತ್ರಿಗಳಾಗುವಂತಾಗಲಿ ಎಂದು ಆಶಿಸಿದ ಎಡ್ವಿನಾ ಭಾರತವನ್ನು ಎರಡು ರಾಷ್ಟ್ರಗಳಾಗಿ ವಿಭಜಿಸುವಂತೆ ತನ್ನ ಪತಿರಾಯ ಲೂಯಿ ಮೌಂಟ್‌ಬ್ಯಾಟನ್‌ನನ್ನು ಕೇಳಿಕೊಂಡಳಂತೆ! ವಾಟ್ಸ್ಯಾಪ್‌ನಲ್ಲಿ ಹರಿದಾಡುವ ಜಾಲಿ-ಜೋಲಿ ಕತೆಗಳಂತೆ ಇದೂ ಒಂದು. ತಲೆಗೆ ಹುಳುಬಿಟ್ಟು ಮಜಾ ನೋಡುವ ರಂಜಕ ಕತೆಯೆಂಬುದು ಸ್ವಲ್ಪ ಯೋಚಿಸಿದರೆ ನಮಗೆ ತಿಳಿಯುತ್ತದೆ. ಇನ್ನೂ ಸ್ವಲ್ಪ ಶ್ರಮವಹಿಸಿದರೆ ಅದು ನಕಲಿ ಕತೆ ಹೇಗೆ ಎಂಬುದು ತಿಳಿಯುತ್ತದೆ. ಜಿನ್ನಾ ಲಂಡನ್ನಿನ ಲಿಂಕನ್ಸ್ ಇನ್ನ್ ಎಂಬ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದುದು 1892ರಲ್ಲಿ. ಜವಾಹರ್‌ಲಾಲ್ ನೆಹರೂ ಆಗ ಮೂರು ವರ್ಷದ ಮಗು. ಅವರು ಕೇಂಬ್ರಿಜ್‌ನ ಟ್ರಿನಿಟಿ ಕಾಲೇಜಿನಲ್ಲಿ ಓದು ಆರಂಭಿಸಿದ್ದು 1907ರಲ್ಲಿ. 1901ರಲ್ಲಿ ಹುಟ್ಟಿದ ಎಡ್ವಿನಾ ಎಂದೂ ಕಾಲೇಜು ಮೆಟ್ಟಿಲು ಹತ್ತಿದವಳಲ್ಲ. ಈ ವಿಚಾರವನ್ನು ಗಮನಿಸಿದರೆ ಈ ಕತೆಯು ಹಲ್ಲು-ರುಚಿಗಾಗಿ ಹೆಣೆದ ಕಟ್ಟುಕತೆ ಎಂಬುದು ನಿಮಗೇ ತಿಳಿಯುತ್ತದೆ.

ಮೌಂಟ್‌ಬ್ಯಾಟನ್ ಯೋಜನೆ

ಇಂಥಾ ಹರಿಬಿಟ್ಟ ಕತೆಗಳು ಹಲವಾರಿವೆ. ಇವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಇತಿಹಾಸದಲ್ಲಿ ದಾಖಲಾಗಿರುವ ಅಂಶಗಳನ್ನು ಗಮನಿಸೋಣ. ನಿಜಕ್ಕೂ ಆಗ ನಡೆದದ್ದೇನು? 1947ರ ಆಗಸ್ಟ್ 14ರಂದು ದೇಶವು ವಿಭಜನೆಯಾದರೂ ವಿಭಜನೆಯ ನಿರ್ಣಯವು ಸ್ವೀಕೃತವಾಗಿದ್ದು ಜುಲೈ 18ರಂದು. ಭಾರತ ಸ್ವಾತಂತ್ರ್ಯ ಕಾಯಿದೆಯನ್ನು ಅನುಮೋದಿಸುವುದಕ್ಕೂ ಮುಂಚೆಯೇ ಅಂದರೆ ಜುಲೈ 5ರಂದೇ ಬ್ರಿಟನ್ನಿನ ದೊರೆ ದೇಶ ವಿಭಜನೆಯ ಬಗ್ಗೆ ನಿರ್ಧಾರವನ್ನು ಕೈಗೂಂಡಿದ್ದ. ಈ ನಿರ್ಧಾರವನ್ನು ಒಳಗೊಂಡಂತೆ ಭಾರತದ ಸ್ವಾತಂತ್ರ್ಯ ಕಾಯಿದೆಯನ್ನೂ ಬ್ರಿಟಿಷ್ ಸಂಸತ್ತು ಅನುಮೋದಿಸಿತು. “ಮೌಂಟ್‌ಬ್ಯಾಟನ್ ಯೋಜನೆ” ಎಂದು ಕರೆಯಲ್ಪಡುವ ಇದನ್ನು ಲೂಯಿ ಮೌಂಟ್‌ಬ್ಯಾಟನ್ 1947ರ ಜೂನ್ 3ರಂದು ಬಾನುಲಿಯ ಮೂಲಕ ಹೀಗೆ ಘೋಷಿಸಿದ: “1946ರ ಮೇ 16ನೇ ತಾರೀಕಿನ ಕ್ಯಾಬಿನೆಟ್ ಮಿಷನ್ ಯೋಜನೆಯನ್ನು ಬೇಷರತ್ತಾಗಿ ಸ್ವೀಕರಿಸಿ ಎಂದೇ ರಾಜಕೀಯ ನಾಯಕರುಗಳೊಂದಿಗೆ ನಡೆಸಿದ ಪ್ರತಿಯೊಂದು ಚರ್ಚೆಯನ್ನೂ ಪ್ರಾರಂಭಿಸುತ್ತಿದ್ದೆ. ವಿಷಾದದ ಸಂಗತಿಯೆಂದರೆ, ಒಂದು ಸಮುದಾಯವನ್ನು ಅಧಿಕೃತಗೊಳಿಸುವ ಸರ್ಕಾರದ ಕೆಳಗೆ ಮತ್ತೊಂದು ಸಮುದಾಯದ ಇಚ್ಛೆಗೆ ವಿರುದ್ಧವಾಗಿ ಜೀವನ ಸಾಗಿಸುವ ಒಪ್ಪಂದಕ್ಕೆ ಬರುವುದು ಅಸಾಧ್ಯವಾಗಿ ಪರಿಣಮಿಸಿತು. ಈ ತಿಕ್ಕಾಟದ ಸನ್ನಿವೇಶದಲ್ಲಿ ವಿಭಜನೆಯೊಂದೇ ಪರ್ಯಾಯ ಸೂತ್ರವಾಯಿತು.”

ಕಟ್ಟಕಡೆಯವರೆಗೂ ವಿಭಜನೆಯನ್ನು ಸಂಪೂರ್ಣವಾಗಿ ವಿರೋಧಿಸಿ ನಿಂತವರೆಂದರೆ ಮಹಾತ್ಮ ಗಾಂಧಿ ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ ಇಬ್ಬರೇ. ಸರ್ದಾರ್ ಪಟೇಲ್ ಮತ್ತು ಜವಾಹರ್‌ಲಾಲ್ ನೆಹರೂರಂತಹ ಇತರ ಕಾಂಗ್ರೆಸ್ ನಾಯಕರುಗಳು ಭಾರತೀಯರಿಗೆ ಷರತ್ತುಬದ್ಧ ಅಧಿಕಾರದ ಹಸ್ತಾಂತರವು ಹೇಗೆ ಅನುಷ್ಠಾನಗೊಳ್ಳಬೇಕು ಎಂಬ ಬ್ರಿಟಿಷ್ ಸರ್ಕಾರದ ಅಂತಿಮ ನಿರ್ಧಾರ ಕುರಿತ ಜೂನ್ 3ನೇ ತಾರೀಖಿನ ವಿಭಜನೆಯ ಯೋಜನೆಗೆ ಸಮ್ಮತಿ ಸೂಚಿಸಿದ್ದರು. ಹಿಂದೂಗಳ ಪರವಾಗಿ ನೆಹರೂ ಮುಸ್ಲಿಮರ ಪರವಾಗಿ ಜಿನ್ನಾ ಮತ್ತು ಸಿಖ್ಖರ ಪರವಾಗಿ ಸರ್ದಾರ್ ಬಲದೇವ್ ಸಿಂಗ್ ಈ ಯೋಜನೆಯನ್ನು ಸ್ವಾಗತಿಸಿದರು. “ದೇಶ ವಿಭಜನೆಯಾಗುವುದು ಯಾರಿಗೂ ಸಂತೋಷದ ವಿಷಯವಲ್ಲ. ನನ್ನ ಹೃದಯ ಭಾರವಾಗಿದೆ. ಆದರೆ ವಾಸ್ತವವನ್ನು ದಿಟ್ಟತನದಿಂದ ಎದುರಿಸಿ ದೇಶದ ಒಂದು ಅಥವಾ ಅನೇಕ ವಿಭಜನೆಗಳ ನಡುವೆ ನಾವು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಯಾರೂ ಭಾವುಕರಾಗದೆ, ಭಾವೋದ್ರಿಕ್ತರಾಗದೆ ಪರಿಸ್ಥಿತಿಯನ್ನು ನಿಭಾಯಿಸಬೇಕು.”- ಹಲವು ವರ್ಷಗಳಿಂದ ಕುದಿಯುತ್ತಿದ್ದ ಸನ್ನಿವೇಶವನ್ನು ಕುರಿತು ಸರ್ದಾರ್ ಪಟೇಲ್ ಹೇಳಿದ ಮಾತುಗಳು ಇವು. ಈ ಕಾರಣಕ್ಕಾಗಿಯೇ ಹತಾಶರಾದ ಗಾಂಧೀಜಿ ವಿಭಜನೆಯನ್ನು ತಪ್ಪಿಸಲು ಕೊನೆಯ ಪ್ರಯತ್ನವಾಗಿ ಮೌಂಟ್‌ಬ್ಯಾಟನ್‌ರನ್ನು ಏಪ್ರಿಲ್ 1, 1947ರಂದು ಭೇಟಿಯಾಗಿ ಜಿನ್ನಾರಿಗೆ ಪ್ರಧಾನಮಂತ್ರಿ ಸ್ಥಾನ ನೀಡುವ ಪ್ರಸ್ತಾಪವನ್ನು ಮುಂದಿಟ್ಟರು. ಮೌಂಟ್‌ಬ್ಯಾಟನ್ ಈ ಬಗ್ಗೆ ನೆಹರೂ ಅವರ ಸಲಹೆ ಕೇಳಿದಾಗ, ಗಾಂಧಿಯವರ ಅಭಿಪ್ರಾಯಕ್ಕೆ ತಮ್ಮ ತಕರಾರೇನೂ ಇಲ್ಲವೆಂದೂ ಆದರೆ ಜಿನ್ನಾ ಅವರಿಗೆ ಈ ಮೊದಲೇ ಪ್ರಧಾನಮಂತ್ರಿ ಸ್ಥಾನವನ್ನು ನೀಡಲು ಮುಂದಾದರೂ ಅವರು ಅದನ್ನು ತಿರಸ್ಕರಿಸಿದ್ದ ವಿಷಯವನ್ನು ಹೇಳಿದರು. ಗಾಂಧಿಯವರ “ಸ್ವತಂತ್ರ ಭಾರತ”ದ ಪರಿಕಲ್ಪನೆಯು ಮೂಲತಃ ತಮ್ಮ ಪರಿಕಲ್ಪನೆಗಿಂತ ಬೇರೆಯೇ ಆಗಿದೆ ಎಂದು ಆರೋಪಿಸಿ ಜಿನ್ನಾ ಮತ್ತೊಮ್ಮೆ ಪ್ರಸ್ತಾಪವನ್ನು ತಿರಸ್ಕರಿಸಿದರು.

ಮೌಂಟ್‌ಬ್ಯಾಟನ್ 1947ರ ಮಾರ್ಚ್‌ನಲ್ಲಷ್ಟೇ ಭಾರತದ ವೈಸ್‌ರಾಯ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಹೀಗಾಗಿ ಪ್ರಸಕ್ತ ಗೋಜಲು ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಅವರು ಭಾರತಕ್ಕೆ ಬಂದಾಗ ಆಗಿನ ಬ್ರಿಟನ್ನಿನ ಪ್ರಧಾನಮಂತ್ರಿಯಾಗಿದ್ದ ಕ್ಲಿಮೆಂಟ್ ಅಟ್ಲಿ ವಿಭಜನೆಯನ್ನು ಹೇಗಾದರೂ ಮಾಡಿ ತಪ್ಪಿಸುವಂತೆ ಅವರಿಗೆ ಸೂಚಿಸಿದ್ದರು. 1943ರಿಂದ 1947 ಮಾರ್ಚ್‌ನವರೆಗೆ ಮೌಂಟ್‌ಬ್ಯಾಟನ್‌ಗಿಂತ ಮುಂಚೆ ಭಾರತದ ವೈಸ್‌ರಾಯ್ ಆಗಿದ್ದ ಆರ್ಚಿಬಾಲ್ಡ್ ವ್ಯಾವೆಲ್ ಕೂಡಾ ಈ ವಿಭಜನೆಯನ್ನು ತಡೆಯಬೇಕೆಂಬ ಪ್ರಯತ್ನದಲ್ಲಿದ್ದವರಲ್ಲಿ ಒಬ್ಬರಾಗಿದ್ದರು. ಅವರಿಗೆ ಈ ವಿಭಜನೆ ಸುತ್ರಾಂ ಬೇಕಿರಲಿಲ್ಲ. ಅವರು ಆಯೋಜಿಸಿದ್ದ ಶಿಮ್ಲಾ ಸಮಾವೇಶ ಮತ್ತು 1945ರ ಜೂನ್‌ನ ವ್ಯಾವೆಲ್ ಯೋಜನೆಯ ಪ್ರಯತ್ನಗಳು ಇದರ ಪುರಾವೆಯಾಗಿವೆ. ಸಮಸ್ಯೆಯು ಶುರುವಾಗುವುದು ವ್ಯಾವೆಲ್‌ಗಿಂತ ಮುಂಚೆ ವೈಸ್‌ರಾಯ್ ಆಗಿದ್ದ ಭೂಪನಿಂದ.

ಹಿಂದೂ-ಮುಸ್ಲಿಂ ಐಕ್ಯತೆಯ ಐತಿಹಾಸಿಕತೆ

ಹಿಂದೂ-ಮುಸ್ಲಿಂ ಸಂಸ್ಕೃತಿಗಳು ಐತಿಹಾಸಿಕವಾಗಿ ಎಷ್ಟು ಭಿನ್ನವಾಗಿವೆ ಎಂದರೆ ಅವು ಸಾಮರಸ್ಯದಿಂದ ಉಸಿರಾಡುವುದು ಅಸಾಧ್ಯ ಎಂದು ಯೋಚಿಸುವ ಹಲವರಿದ್ದಾರೆ. ಈ ಕತೆಯನ್ನು ನಂಬುವವರು ಐತಿಹಾಸಿಕವಾಗಿ ನಮ್ಮನ್ನಾಳಿದ ಎಲ್ಲಾ ಮುಸ್ಲಿಮ್ ರಾಜರುಗಳೂ ದುಷ್ಟರು ಮತ್ತು ಹಿಂದೂ ವಿರೋಧಿಗಳು ಹಾಗೂ ಎಲ್ಲಾ ಹಿಂದೂ ರಾಜರುಗಳೂ ನ್ಯಾಯನಿಷ್ಠ ಸಜ್ಜನರು ಎಂದು ನಂಬುವವರೇ. ಶತಮಾನಗಳ ಕಾಲ ಉಪಖಂಡದಲ್ಲಿ ನಡೆದ ಎಲ್ಲಾ ಯುದ್ಧಗಳು ಧರ್ಮಗಳ ಆಧಾರದ ಮೇಲೆ ನಡೆದ ಯುದ್ಧಗಳೆಂಬಂತೆ ಅವರಿಗೆ ಕಾಣುತ್ತದೆ. ಇದು ಪೂರ್ಣ ಸತ್ಯವಲ್ಲ. ಮೊಹಮ್ಮದ್ ಘೋರಿ, ಮೊಹಮ್ಮದ್ ಖಿಲ್ಜಿಯಂತಹ ಮುಸ್ಲಿಂ ಆಕ್ರಮಣಕಾರರು ಕ್ರೂರಿಗಳಾಗಿದ್ದರು ಎಂಬುದು ಎಷ್ಟು ಸತ್ಯವೋ ಆಗಿನ ಕಾಲದ ರಾಜರುಗಳ ನಡುವೆ ನಡೆದ ಬಹುತೇಕ ಯುದ್ಧಗಳು ಧರ್ಮಗಳ ಆಧಾರದ ಮೇಲೆ ನಡೆದ ಯುದ್ಧಗಳಾಗಿರಲಿಲ್ಲ ಎಂಬುದೂ ಅಷ್ಟೇ ಸತ್ಯ. ಬದಲಾಗಿ ರಾಜ ಮಹಾರಾಜರುಗಳು ಅಧಿಕಾರದ ಮತ್ತು ರಾಜ್ಯ ವಿಸ್ತರಣೆಯ ಲಾಲಸೆಯಿಂದ ಒಬ್ಬರ ಮೇಲೊಬ್ಬರು ಹಲವು ಯುದ್ಧಗಳನ್ನು ಹೂಡಿದ್ದಾರೆ. ಇದಕ್ಕೆ ಸಾಕಷ್ಟು ಪುರಾವೆಗಳಿವೆ. ಬಾಬರ್ ಮತ್ತು ಇಬ್ರಾಹಿಂ ಲೋಧಿ ನಡುವೆ ನಡೆದ ಮೊದಲ ಪಾಣಿಪಟ್ ಯುದ್ಧದಲ್ಲಿ ಕಂಡುಬರುವಂತೆ ಮುಸ್ಲಿಂ ದೊರೆಗಳು ಮುಸ್ಲಿಂ ದೊರೆಗಳ ವಿರುದ್ಧವೇ ಯುದ್ಧದಲ್ಲಿ ಕಾದಾಡಿದ್ದಾರೆ. ಹಾಗೆಯೇ 1790ರ ಪಟಾನ್ ಯುದ್ಧದಲ್ಲಿ ಮರಾಠರ ಮತ್ತು ರಜಪೂತರ ನಡುವೆ ಆದಂತೆ ಹಿಂದೂ ರಾಜರುಗಳ ನಡುವೆಯೇ ಹಲವಾರು ಯುದ್ಧಗಳು ನಡೆದಿವೆ. 1576ರ ಪ್ರಖ್ಯಾತ ಹಲ್ದೀಘಾಟ್ ಯುದ್ಧವು ನಡೆದದ್ದು ಮೊಘಲರ ಮತ್ತು ರಜಪೂತರ ನಡುವೆ. ಮೇಲ್ನೋಟಕ್ಕೆ ಇದು ಹಿಂದೂ ಮತ್ತು ಮುಸ್ಲಿಮರ ನಡುವೆ ನಡೆದ ಯುದ್ಧದಂತೆ ಗೋಚರಿಸುತ್ತದೆ. ಆದರೆ ಅಕ್ಬರನ ಸೇನೆಯಲ್ಲಿ ದಂಡನಾಯಕನಾಗಿದ್ದ ರಾಜಾ ಮಾನ್‌ಸಿಂಗ್ ಹಿಂದೂವಾಗಿದ್ದ. ಶೇರ್ ಶಾ ಸುರಿಯ ವಂಶಸ್ಥನಾದ ಹಕೀಮ್ ಖಾನ್ ಸುರಿ ಮಹಾರಾಣಾ ಪ್ರತಾಪ್ ದೊರೆಯ ದಂಡನಾಯಕನಾಗಿದ್ದ. ಔರಂಗಜೇಬನಂತಹ ದುಷ್ಟ ಧರ್ಮಾಂಧರು ಇದ್ದಂತೆಯೇ ಧರ್ಮಸಹಿಷ್ಣುಗಳಾದ ಅಕ್ಬರ್, ದಾರಾಶಿಕೊ, ಕೃಷ್ಣದೇವರಾಯ ಮತ್ತು ಶಿವಾಜಿಯಂತಹ ಹಲವು ಸಾಮರಸ್ಯದಿಂದ ಆಳಿದ ಅರಸರೂ ನಮ್ಮ ಇತಿಹಾಸದ ಭಾಗವೇ ಆಗಿದ್ದಾರೆ.

ಮಹಾತ್ಮ ಗಾಂಧಿ

ಗತ ಇತಿಹಾಸದ ರಾಜಮಹಾರಾಜರುಗಳ ವಿಷಯ ಬದಿಗಿಟ್ಟು ನಮ್ಮ ಕಾಲದಲ್ಲಿ ಜೀವಿಸಿದ್ದವರ ಬಗ್ಗೆ ಆಲೋಚಿಸೋಣ. ಅಮೀರ್ ಖುಸ್ರೋ ಎಂಬ ಸೂಫಿ ಕವಿ 800 ವರ್ಷಗಳ ಹಿಂದೆ ಅಂದರೆ 12ನೇ ಶತಮಾನದಲ್ಲಿ ಬದುಕಿದ್ದ. ಅವನು ಹಿಂದೂಗಳ ಹೋಳಿಹಬ್ಬವನ್ನು ಕುರಿತು ಹೀಗೆ ಬರೆದಿದ್ದಾನೆ:

ಈ ದಿನ ಬಣ್ಣವಿದೆ ತಾಯೆ ಬಣ್ಣ ಸೊಬಗಾಗಿ ಚೆಲ್ಲುತಿದೆ
ಅಲ್ಲಾ ನೀನು ಸರ್ವವ್ಯಾಪಿ
ನನ್ನ ಪ್ರಿಯತಮೆಯ ತೌರಲ್ಲಿ ರಂಗುರಂಗುಗಳ ಚೆಲ್ಲಾಟ
ರಂಗು ತುಂಬಿ ತುಳುಕುವ ದಿನ ಇದು!

ಇಂದು ಯಾವ ಕವಿಯಾದರೂ ಹೀಗೆ ಬರೆಯುವ ಧೈರ್ಯ ತೋರಿದರೆ ಜನರ ಭಾವನೆಗಳಿಗೆ ’ನೋವಾಗು’ತ್ತದೆ ಎಂದು ಮುಗಿಲೆತ್ತರಕ್ಕೆ ಕೂಗು ಹಾಕುತ್ತಾರೆ. ಆದರೆ 1400ರಲ್ಲಿ ತೀವ್ರಗಾಮಿ ಹಿಂದೂಗಳು ಮತ್ತು ತೀವ್ರಗಾಮಿ ಮುಸ್ಲಿಮರ ವಿರುದ್ಧ ಕಬೀರನಂತಹವರಿದ್ದರು.

ಕೆಲವರು ರಹೀಮನನ್ನು ಪೂಜಿಸುತ್ತಾರೆ
ಕೆಲವರು ರಾಮನನ್ನು ಪೂಜಿಸುತ್ತಾರೆ
ಇಬ್ಬರನ್ನೂ ಪೂಜಿಸುವ ನಾನು
ದಾಸರಲ್ಲಿ ದಾಸ ಪ್ರೀತಿಯ ಆರಾಧಕ ಕಬೀರದಾಸ

ಸಿಖ್ಖರ ಪೂಜ್ಯ ಗುರುನಾನಕ್ ಕೂಡ ಜೀವನಪೂರ್ತಾ ಸರ್ವಧರ್ಮಗಳ ಸಮನ್ವಯವನ್ನು ಬೋಧಿಸುತ್ತಿದ್ದರು. ಅಕ್ಬರ್, ಜಹಂಗೀರ್ ಮತು ಶಹಜಾಹಾನರ ಕಾಲದ ಮೊಘಲ್ ದೊರೆಗಳ ಆಸ್ಥಾನದಲ್ಲಿ ಈದ್ ಜೊತೆಗೆ ಹೋಳಿಯನ್ನೂ ಆಚರಿಸಲಾಗುತ್ತಿತ್ತು. ಈದ್-ಎ-ಗುಲಾಬಿ ಎಂದು ಕರೆಯಲಾಗುತ್ತಿದ್ದ ಹೋಳಿಯಲ್ಲಿ ಎಲ್ಲರೂ ಭಾಗವಹಿಸುತ್ತಿದ್ದರು. ಕೆಂಪುಕೋಟೆಯ ಹಿಂಭಾಗದಲ್ಲಿ ಸೇರುತ್ತಿದ್ದ ಜಾತ್ರೆಯಲ್ಲಿ ಜಶನ್-ಎ-ಚರಂಗಾ ಎಂದು ಕರೆಯಲಾಗುತ್ತಿದ್ದ ದೀಪಾವಳಿಯನ್ನು ಆಚರಿಸಲಾಗುತ್ತಿತ್ತು. ಒಂದುಕ್ಷಣ ತುಳಸೀದಾಸರನ್ನು ನೆನಪಿಸಿಕೊಳ್ಳಿ: ಹಿಂದೂಗಳಿಗೆ ಪರಮಪವಿತ್ರ ಕಾವ್ಯಗ್ರಂಥಗಳಲ್ಲಿ ಪ್ರಮುಖವೆನಿಸುವ ’ರಾಮ್ ಚರಿತ್ ಮಾನಸ್’ ಕಾವ್ಯವನ್ನು ಅವರು ರಚಿಸಿದ್ದು ಅಕ್ಬರನ ಆಳ್ವಿಕೆಯಲ್ಲಿ. ರಾಮಾಯಣ ಮತ್ತು ಮಹಾಭಾರತಗಳನ್ನು ಅಕ್ಬರ್ ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿಸಿದ. ಅವಧ್‌ನ ನವಾಬ್ ವಾಜಿದ್ ಆಲಿ ಶಾ ಕಥಕ್ ನೃತ್ಯವನ್ನು ಕಲಿತದ್ದಷ್ಟೇ ಅಲ್ಲದೆ ಕೃಷ್ಣಲೀಲಾ ನೃತ್ಯರೂಪಕ ಪ್ರದರ್ಶನದಲ್ಲಿ ಖ್ಯಾತಿಗಳಿಸಿದವನಾಗಿದ್ದ. ಒಮ್ಮೆ ಹೋಳಿ ಮತ್ತು ಮೊಹರಂ ಹಬ್ಬಗಳು ಒಂದೇ ದಿನ ಬರುವಂತಾಯಿತು. ಮೊಹರಂ ಮುಸ್ಲಿಮರಿಗೆ ಶೋಕಾಚರಣೆಯ ದಿನ. ಮುಸ್ಲಿಂ ಬಂಧುಗಳ ಭಾವನೆಯನ್ನು ಗೌರವಿಸುವ ಸಲುವಾಗಿ ಹಿಂದೂಗಳು ಆ ದಿನ ಹೋಳಿಯನ್ನು
ಆಚರಿಸಲಿಲ್ಲವೆಂದು ತಿಳಿದ ವಾಜಿದ್ ಆಲಿ ಶಾ ಹಿಂದೂಗಳ ಭಾವನೆಯನ್ನು ಗೌರವಿಸುವುದು ಮುಸ್ಲಿಮರ ಕರ್ತವ್ಯವೆಂದು ಹೇಳಿದ್ದು ಮಾತ್ರವಲ್ಲದೆ ಹೋಳಿ ಆಚರಣೆಯನ್ನು ಸಾರ್ವಜನಿಕವಾಗಿ ಏರ್ಪಡಿಸಿ ಅದರಲ್ಲಿ ತಾನೇ ಖುದ್ದು ಭಾಗಿಯಾದನಂತೆ. ಹಿಂದೂ-ಮುಸ್ಲಿಂ ಐಕ್ಯತೆಯ ಲೆಕ್ಕವಿಲ್ಲದಷ್ಟು ನಿದರ್ಶನಗಳು ನಮ್ಮ ಇತಿಹಾಸದ ಭಾಗವಾಗಿವೆ.

(ಈ ಬರಹ ನಾಲ್ಕು ಭಾಗಗಳಲ್ಲಿ ಪ್ರಕಟಗೊಳ್ಳಲಿದೆ. ಮುಂದಿನ ಭಾಗದಲ್ಲಿ: 1857ರ ದಂಗೆ, ದ್ವಿ-ರಾಷ್ಟ್ರ ಸಿದ್ಧಾಂತದ ಹುಟ್ಟು, ಮುಸ್ಲಿಂಲೀಗ್‌ನ ಹುಟ್ಟು ಮತ್ತು ಹಿಂದೂ ಸನಾತನಿಗಳ ಪ್ರತಿಕ್ರಿಯೆ)

ಹಿಂದಿ ಮೂಲ: ಧ್ರುವ್ ರಾಥಿ (ಯುಟ್ಯೂಬ್)
(ಕನ್ನಡಕ್ಕೆ): ಪ್ರೊ. ಬಿ ಗಂಗಾಧರಮೂರ್ತಿ

ಧ್ರುವ್ ರಾಥಿ

ಧ್ರುವ್ ರಾಥಿ
ಭಾರತದ ಖ್ಯಾತ ಯುಟ್ಯೂಬರ್‌ಗಳಲ್ಲಿ ಒಬ್ಬರು. ಆರ್ಥಿಕತೆ, ಪರಿಸರ, ರಾಜಕೀಯ ವಿದ್ಯಮಾನಗಳು ಸೇರಿದಂತೆ ಹಲವು ವಿಷಯಗಳ ಮೇಲೆ ಇವರು ಮಾಡುವ ವಿಡಿಯೋಗಳು ಅಪಾರ ಜನಪ್ರಿಯತೆ ಗಳಿಸಿವೆ. ದೇಶವಿಭಜನೆಯ ಬಗ್ಗೆ ಇವರ ಹಿಂದಿ ವಿಡಿಯೋ ಪ್ರಸ್ತುತಿಗೆ ಪ್ರೊ. ಬಿ ಗಂಗಾಧರಮೂರ್ತಿ ಕನ್ನಡ ಬರಹ ರೂಪ ನೀಡಿದ್ದಾರೆ.


ಇದನ್ನೂ ಓದಿ: ‘ನೀವು ಬಿಜೆಪಿ ಏಜೆಂಟಾ?’- ಕನ್ಹಯ್ಯ ಪ್ರಶ್ನೆಗಳಿಗೆ ಪತ್ರಕರ್ತ ತಬ್ಬಿಬ್ಬು; ಕ್ಷಮೆಯಾಚಿಸಿದ ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...