ಕೊರೊನಾದ ರೂಪಾಂತರ ವೈರಸ್ ಒಮೈಕ್ರಾನ್ ಜಗತ್ತಿನಾದ್ಯಂತ ಜನರನ್ನು ಕೊಲ್ಲುತ್ತಿದ್ದು, ಅದನ್ನು ಸೌಮ್ಯ ಎಂದು ತಳ್ಳಿಹಾಕಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಗುರುವಾರ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್, “ಕಳೆದ ವರ್ಷದ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಒಮೈಕ್ರಾನ್ ದಾಖಲೆ ಸಂಖ್ಯೆಯ ಜನರಿಗೆ ಸೋಂಕು ತಗುಲಿಸಿದೆ, ಅಂದರೆ ಆಸ್ಪತ್ರೆಗಳನ್ನು ಅತಿಕ್ರಮಿಸುತ್ತಿವೆ” ಎಂದು ಹೇಳಿದ್ದಾರೆ.
ಹಲವಾರು ದೇಶಗಳಲ್ಲಿ ಈಗಾಗಲೇ ಇರುವ ಡೆಲ್ಟಾ ರೂಪಾಂತರ ವೈರಸ್ ಮುಂದೆ ಒಮೈಕ್ರಾನ್ ರೂಪಾಂತರವು ವೇಗವಾಗಿ ಹರಡುತ್ತಾ ಅದರೊಂದಿಗೆ ಸ್ಪರ್ಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಒಮೈಕ್ರಾನ್ ವಿರುದ್ಧದ ಹೋರಾಟದಲ್ಲಿ ‘ಲಾಕ್‌ಡೌನ್’ ಕೊನೆಯ ಅಸ್ತ್ರವಾಗಿಬೇಕು: WHO
“ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ ವಿಶೇಷವಾಗಿ ಲಸಿಕೆ ಹಾಕಿದವರಲ್ಲಿ ಒಮೈಕ್ರಾನ್ ರೂಪಾಂತರವು ಕಡಿಮೆ ತೀವ್ರತೆ ಕಂಡುಬಂದಿದೆ. ಹಾಗಾಗಿ ಇದನ್ನು ‘ಸೌಮ್ಯ’ ಎಂದು ವರ್ಗೀಕರಿಸಬೇಕು ಎಂದು ಅರ್ಥವಲ್ಲ” ಎಂದು ಟೆಡ್ರೊಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ಹಿಂದಿನ ರೂಪಾಂತರಗಳಂತೆಯೇ, ಒಮೈಕ್ರಾನ್ ಜನರನ್ನು ಆಸ್ಪತ್ರೆಗೆ ಸೇರಿಸುತ್ತಿದ್ದು, ಜನರನ್ನು ಕೊಲ್ಲುತ್ತಿದೆ. ವಾಸ್ತವವಾಗಿ, ಈ ರೂಪಾಂತರದ ಪ್ರಕರಣಗಳ ಸುನಾಮಿ ತುಂಬಾ ದೊಡ್ಡದಾಗಿದ್ದು, ತ್ವರಿತವಾಗಿದೆ. ಇದು ಪ್ರಪಂಚದ ಆರೋಗ್ಯ ವ್ಯವಸ್ಥೆಯನ್ನೇ ಅತಿಕ್ರಮಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಕಳೆದ ವಾರ WHO ಗೆ ಕೇವಲ 9.5 ಲಕ್ಷ ಮಿಲಿಯನ್‌ಗಿಂತಲೂ ಕಡಿಮೆ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದು ಒಂದು ದಾಖಲೆಯಾಗಿದ್ದು, ಹಿಂದಿನ ವಾರಕ್ಕಿಂತ 71% ಹೆಚ್ಚಾಗಿದೆ. ಆದರೆ ಇದು ಕಡಿಮೆ ಅಂದಾಜು ಲೆಕ್ಕ ಎಂದು ಟೆಡ್ರೊಸ್ ಹೇಳಿದ್ದಾರೆ.
ಇದನ್ನೂ ಓದಿ:ಒಮೈಕ್ರಾನ್ ಆತಂಕ; ಲಭ್ಯವಿರುವ ಸಾಕ್ಷ್ಯಗಳಿಂದ ಸಾರ್ವಜನಿಕ ಆರೋಗ್ಯದ ಕಣ್ಣೋಟ


