Homeಕರ್ನಾಟಕ‘ತೇಜೋವಧೆ’: ಪವರ್‌‌ ಟಿವಿ ಮುಖ್ಯಸ್ಥನ ವಿರುದ್ದ ಪತ್ರಕರ್ತ ನವೀನ್‌ ಸೂರಿಂಜೆ ದೂರು

‘ತೇಜೋವಧೆ’: ಪವರ್‌‌ ಟಿವಿ ಮುಖ್ಯಸ್ಥನ ವಿರುದ್ದ ಪತ್ರಕರ್ತ ನವೀನ್‌ ಸೂರಿಂಜೆ ದೂರು

- Advertisement -
- Advertisement -

ಹಳೆಯ ಮತ್ತು ಸಂಬಂಧಪಡದ ಆಡಿಯೊಗಳನ್ನು ಎಡಿಟ್‌ ಮಾಡಿ ತಮ್ಮ ಚಾನೆಲ್‌ನಲ್ಲಿ ಪ್ರಸಾರ ಮಾಡಿ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ನವೀನ್‌ ಸೂರಿಂಜೆ ಅವರು ಪವರ್‌ ಟಿವಿಯ ಮುಖ್ಯಸ್ಥ ರಾಕೇಶ್‌ ಶೆಟ್ಟಿ, ಸಂಪಾದಕೀಯ ಸಲಹೆಗಾರ ರವೀಂದ್ರ ರೇಷ್ಮೆ, ಸಹಸಂಪಾದಕ ರಾಘವ ಸೂರ್ಯ ಸೇರಿದಂತೆ ಇನ್ನೂ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

ಬಿಟಿವಿಯ ಮಾಜಿ ಪತ್ರಕರ್ತನೊಬ್ಬ ಇತ್ತೀಚೆಗೆ ಲಂಚ ಪಡೆಯುವ ಸಮಯದಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪ್ರಕರಣದ ಹಿನ್ನಲೆಯಲ್ಲಿ ಪವರ್‌ ಟಿವಿ, ಮಾಧ್ಯಮಗಳಲ್ಲಿ ನಡೆಯುವ ಹಣದ ಅವ್ಯವಹಾರಗಳ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬಿಟಿವಿ ಸಂಪಾದಕ ನವೀನ್ ಸೂರಿಂಜೆ ಅವರ ಬಗ್ಗೆಯೂ ಭ್ರಷ್ಟಾಚಾರದ ಆರೋಪವನ್ನು ಹೊರಿಸಲಾಗಿತ್ತು. ಜೊತೆಗೆ ಅವರು ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೊವೊಂದನ್ನು ತೋರಿಸಿ, ನವೀನ್ ಸೂರಿಂಜೆ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಂಬಿಸಲಾಗಿದೆ.

ಇದನ್ನೂ ಓದಿ:ಸಿಎಂ ಮಗನ ಭ್ರಷ್ಟಾಚಾರ ಬಯಲು: ಪವರ್‌ ಟಿವಿ ಪ್ರಸಾರಕ್ಕೆ ತಡೆ!

ಪವರ್‌ ಟಿವಿಯ ಈ ಎಲ್ಲಾ ಆರೋಪಗಳನ್ನು ವಿರೋಧಿಸಿರುವ ನವೀನ್‌‌ ಸೂರಿಂಜೆ, ಪವರ್‌ ಟಿವಿಯ ಮುಖ್ಯಸ್ಥ ರಾಕೇಶ್‌ ಶೆಟ್ಟಿ, ಸಂಪಾದಕೀಯ ಸಲಹೆಗಾರ ರವೀಂದ್ರ ರೇಷ್ಮೆ, ಸಹಸಂಪಾದಕ ರಾಘವ ಸೂರ್ಯ, ಅರುಣ್ ಭಗತ್ ಸಿಂಗ್, ಪ್ರಶಾಂತ್‌‌ ಬಿಸ್ಲೆರಿ ಮತ್ತು ಆಡಿಯೊದಲ್ಲಿ ಇರುವ ವ್ಯಕ್ತಿಯ ವಿರುದ್ದ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಅವರು, ಪವರ್‌ ಟಿವಿ ಮುಖ್ಯಸ್ಥ ರಾಕೇಶ್‌ ಶೆಟ್ಟಿಯನ್ನು ಮರಳು ಮಾಫಿಯಾ ಎಂದು ಉಲ್ಲೇಖಿಸಿದ್ದು, ಅವರು ಬಿಟಿವಿ ವಿರುದ್ಧ ಕೆಲವು ದಿನಗಳಿಂದ ಪಿತೂರಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ರಾಕೇಶ್‌ ಶೆಟ್ಟಿ ಮತ್ತು ಇತರರ ವಿರುದ್ದ ಬಿಟಿವಿ ಸಂಪಾದಕನಾಗಿ ತಾನು ದೂರು ನೀಡಿದ್ದು, ಈ ಹಿನ್ನಲೆಯಲ್ಲಿ IPC 419, 420 ಸೇರಿದಂತೆ ಇನ್ನಿತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ನವೀನ್ ಸೂರಿಂಜೆ ಪೊಲೀಸ್‌ ದೂರಿನಲ್ಲಿ ಹೇಳಿದ್ದಾರೆ.

ಇದರಿಂದ ರಾಕೇಶ್‌ ಶೆಟ್ಟಿ ಹತಾಶೆಗೆ ಒಳಗಾಗಿ, ತನ್ನ ವಿರುದ್ದ ವೃತ್ತಿಪರ ಟ್ಯ್ರಾಪ್ ಆರೋಪಿ ಅರುಣ್‌ ಭಗತ್‌ ಸಿಂಗ್‌, ಪತ್ರಕರ್ತ ರವೀಂದ್ರ ರೇಷ್ಮೆ, ಪ್ರಶಾಂತ್‌ ಬಿಸ್ಲೆರಿ ಎಂಬವರು ಸೇರಿಕೊಂಡು ಎಡಿಟೆಡ್‌ ಆಡಿಯೊ ಪ್ರಸಾರ ಮಾಡಿದ್ದಾರೆ ಎಂದು ನವೀನ್‌ ಸೂರಿಂಜೆ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ:ಸಿಎಂ ಪುತ್ರನ ಭ್ರಷ್ಟಾಚಾರದ ಬಗ್ಗೆ ನಿರಂತರ ವರದಿ ಮಾಡಿದ ಪವರ್‌ ಟಿವಿ MD ಮನೆ ಮೇಲೆ ಪೊಲೀಸರ ದಾಳಿ!

ಪವರ್‌ ಟಿವಿ ಪ್ರಸಾರ ಮಾಡಿರುವ ಆಡಿಯೊ ಬಹುಶಃ ವರ್ಷಗಳ ಹಿಂದೆಯೆ ತಾನು ಮಾತನಾಡಿರುವ ಬಿಡಿ ಬಿಡಿ ಆಡಿಯೊ ಆಗಿರಬಹುದು ಎಂದು ನವೀನ್ ಸೂರಿಂಜೆ ಹೇಳಿದ್ದು, ಅದನ್ನು ಒಟ್ಟು ಸೇರಿಸಿ ಟಿವಿಯಲ್ಲಿ ಪ್ರಸಾರ ಮಾಡಿ ತನ್ನ ಮಾನಹಾನಿ ಮಾಡಲಾಗಿದೆ ಎಂದು ಸೂರಿಂಜೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನವೀನ್ ಸೂರಿಂಜ್, “ನಾನು ಪಾರದರ್ಶಕ ಪತ್ರಿಕೋದ್ಯಮ ಮಾಡುತ್ತಿರುವವನು. ನನ್ನ ಸಂಪಾದನೆ ಎಷ್ಟು ಎಂದು ಮೊದಲ ಬಾರಿಗೆ ವೆಬ್‌ಸೈಟ್‌ನಲ್ಲಿ ಘೋಷಿಸಿದ ಪತ್ರಕರ್ತ. ನಾನು ಈಗಲೂ ಕಚೇರಿಯ ಸಂಬಳವನ್ನಷ್ಟೇ ನೆಚ್ಚಿಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ.

“ತಾಲೂಕು ವರದಿಗಾರ ಹುದ್ದೆಯಿಂದ ಹಿಡಿದು ಸಂಪಾದಕನ ಹುದ್ದೆಯವರೆಗೆ ಈವರೆಗೂ ಲಂಚ ತೆಗೆದುಕೊಂಡಿಲ್ಲ. ಯಾವ ರಾಜಕಾರಣಿ, ಉದ್ಯಮಿಯ ಮನೆಯಲ್ಲಿ ಊಟ ಮಾಡಿಲ್ಲ, ಪಾರ್ಟಿಗಳಲ್ಲಿ ಭಾಗಿಯಾಗಿಲ್ಲ. ನನ್ನ ವೈಯುಕ್ತಿಕ ವಿಷಯಗಳಿಗೆ ರಾಜಕಾರಣಿಗಳ ಸಹಾಯ ಪಡೆದಿಲ್ಲ. ಯಾವುದೇ ರಾಜಕಾರಣಿ ಮತ್ತು ಉದ್ಯಮಿಗಳನ್ನು ನನ್ನ ಖಾಸಗಿ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಲಾಭ ಪಡೆದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪವರ್ ಟಿವಿ ಪ್ರಕರಣ ಎತ್ತುವ ಪ್ರಶ್ನೆಗಳು ಯಾರ ಮನೆ ಬಾಗಿಲೆದುರು ನಿಲ್ಲುತ್ತವೆ?

“ನನ್ನ ಸಂಸ್ಥೆಯ ಸಂಬಂಧದ ಅಧಿಕೃತ ಹಣಕಾಸು ವ್ಯವಹಾರಗಳನ್ನು ಹಲವರ ಜೊತೆ ಹುದ್ದೆಯ ಕಾರಣಕ್ಕಾಗಿ ಅಧಿಕೃತವಾಗಿ ಮಾತನಾಡಿದ್ದೇನೆ. ನಾನು ಕೆಲಸ ಮಾಡುವ ಸಂಸ್ಥೆಯ ಅಧಿಕೃತ ಹಣಕಾಸು ವ್ಯವಹಾರಗಳಲ್ಲಿ ನನ್ನ ಭಾಗಿದಾರಿಕೆಯ ಅಗತ್ಯವಿದ್ದಾಗ ಆ ಕರ್ತವ್ಯ ಮಾಡುವುದು ಅನಿವಾರ್ಯ. ನಾನು ವರ್ಷಗಳ ಹಿಂದೆ ಯಾರ ಜೊತೆಯೋ ಮೂರ್ನಾಲ್ಕು ಬಾರಿ ಮಾತನಾಡಿದ್ದ ಫೋನ್ ಕರೆಯನ್ನು ಎಡಿಟ್ ಮಾಡಿ ಅದನ್ನೆಲ್ಲಾ ಜೋಡಿಸಿ ಒಂದು ಫೋನ್ ಕರೆ ಎಂದು ಬಿಂಬಿಸಿ ನನ್ನ ಆಡಿಯೋವನ್ನು ಪ್ರಸಾರ ಮಾಡಲಾಗಿದೆ” ಎಂದು ನವೀನ್ ಸೂರಿಂಜೆ ಹೇಳಿದ್ದಾರೆ.

“ಈವರೆಗೂ ವೈಯುಕ್ತಿಕವಾಗಿ ಯಾವುದೇ ರೀತಿಯಲ್ಲಿ ನನ್ನ ಸಿದ್ದಾಂತದಲ್ಲಿ ರಾಜಿಯಾಗಿಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ಬೇಕಾಗುವಷ್ಟು ಮಾತ್ರವಲ್ಲದೆ ಸಾಕು ಸಾಕಾಗುವಷ್ಟು ವೇತನವನ್ನು ನಾನು ಪಡೆಯುತ್ತಿದ್ದೇನೆ” ಎಂದು ನವೀನ್ ಸೂರಿಂಜೆ ಹೇಳಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿರುವ ಪವರ್‌ ಟಿವಿ ಮುಖ್ಯಸ್ಥ ರಾಕೇಶ್‌ ಶೆಟ್ಟಿ, “ಅವರು ಮಾತನಾಡಿರುವುದು ಸೇರಿದಂತೆ ಎಲ್ಲಾ ದಾಖಲೆಗಳು ನಮ್ಮಲ್ಲಿ ಇವೆ. ನಾವು ಯಾವುದನ್ನೂ ಎಡಿಟ್‌ ಮಾಡಿಲ್ಲ. ಮೂಲ ದಾಖಲೆಗಳನ್ನು ಇಟ್ಟುಕೊಂಡು ನಾವು ಮಾತನಾಡಿದ್ದೇವೆ, ಈ ಬಗ್ಗೆ ಮೂಲ ದಾಖಲೆಗಳನ್ನು ಪೊಲೀಸರು ಕೇಳುತ್ತಾರೆ ಎಂಬ ವಿವೇಚನೆ ನಮಗೂ ಇದೆ. ನಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ಪೊಲೀಸ್ ಠಾಣೆಗೆ ದಾಖಲು ಮಾಡುತ್ತೇವೆ. ಅವರ ಜೊತೆ ನಮಗೆ ಯಾವುದೆ ವೈಯಕ್ತಿಕ ದ್ವೇಷ ಇಲ್ಲ, ನನಗೆ ನವೀನ್‌ ಸೂರಿಂಜೆ ಯಾರು ಎಂದೇ ಗೊತ್ತಿಲ್ಲ. ಅನ್ಯಾಯ ಆದವರು ಬಂದು, ಈ ಬಗ್ಗೆ ದಾಖಲೆ ಕೊಟ್ಟಿದ್ದಾರೆ. ಬೇಕಿದ್ದರೆ ನವೀನ್ ಸೂರಿಂಜೆಗೂ ಈ ಬಗ್ಗೆ ಒಂದು ಪ್ರತಿಯನ್ನು ಕೊಡುವ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅನಿಮೇಷನ್‌ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್‌ ಫಸ್ಟ್‌ ಕನ್ನಡ?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರೂರ್ ಕಾಲ್ತುಳಿತ : ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ...

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...