Homeಮುಖಪುಟ'ಹಳೆಯ' ಸಂಸತ್ ಭವನದ ಗತವೈಭವದ ಕುರಿತು ಒಂದಿಷ್ಟು

‘ಹಳೆಯ’ ಸಂಸತ್ ಭವನದ ಗತವೈಭವದ ಕುರಿತು ಒಂದಿಷ್ಟು

- Advertisement -
- Advertisement -

ನೂತನ ಸೆಂಟ್ರಲ್ ವಿಸ್ತಾ ನಿರ್ಮಾಣಗೊಂಡ ಬಳಿಕ 96 ವರ್ಷ ಇತಿಹಾಸವಿರುವ ಸಂಸತ್ ಭವನಕ್ಕೆ ‘ಹಳೆಯ’ ವಿಶೇಷಣ ಸೇರಿಕೊಂಡಿದೆ. ಅಷ್ಟು ಮಾತ್ರವಲ್ಲದೆ ವಿಶಿಷ್ಟ ವಾಸ್ತುಶಿಲ್ಪ ಮತ್ತು ಐತಿಹಾಸಿಕ ತೀರ್ಮಾನಗಳಿಗೆ ಸಾಕ್ಷಿಯಾದ ಅದು ಇತಿಹಾಸದ ಪುಟ ಸೇರುತ್ತಿದೆ. ಎಲ್ಲರ ಗಮನ ಸೆಂಟ್ರಲ್ ವಿಸ್ತಾದ ಉದ್ಘಾಟನೆಯ ಸುತ್ತ ನೆಟ್ಟಿರುವಾಗ ಹಿಂದಿನ ಸಂಸತ್ ಭವನದ ವಿಶೇಷತೆಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ ಜನವರಿ 18, 1927 ರಂದು ಅಂದಿನ ವೈಸರಾಯ್ ಲಾರ್ಡ್ ಇರ್ವಿನ್‌ರವರಿಂದ ಕೌನ್ಸಿಲ್ ಹೌಸ್ (ಸಂಸತ್ ಭವನ) ಉದ್ಘಾಟನೆಗೊಂಡಿತು. ಅದರ ಆಕರ್ಷಕ ವೃತ್ತಾಕಾರದ ವಿನ್ಯಾಸ ಮತ್ತು ಮೊದಲ ಮಹಡಿಯಲ್ಲಿ 144 ಕೆನೆ ಮರಳುಗಲ್ಲಿನ ಕಂಬಗಳ ಮೂಲಕ ಕಣ್ಮನ ಸೆಳೆಯಿತು. ಸುಮಾರು ಆರು ಎಕರೆ ವಿಸ್ತೀರ್ಣದಲ್ಲಿ 560 ಅಡಿ ವ್ಯಾಸ ಮತ್ತು ಒಂದು ಮೈಲಿನ ಮೂರನೇ ಒಂದು ಭಾಗದಷ್ಟು ಸುತ್ತಳತೆ ಹೊಂದಿರುವ ಈ ಕಟ್ಟಡವನ್ನು ಸರ್ ಹರ್ಬರ್ಟ್ ಬೇಕರ್ ಅವರು ಸರ್ ಎಡ್ವಿನ್ ಲುಟ್ಯೆನ್ಸ್ ಅವರೊಂದಿಗೆ ವಿನ್ಯಾಸಗೊಳಿಸಿದರು.

ಬ್ರಿಟಿಷರು ಕಲ್ಕತ್ತಾದಿಂದ ದೆಹಲಿಗೆ ಆಡಳಿತವನ್ನು ವರ್ಗಾವಣೆಗೊಳಿಸಿದ ನಂತರ 1920ರಲ್ಲಿ ಕೌನ್ಸಿಲ್ ಹೌಸ್ ಸ್ಥಾಪನೆಗೆ ಅಡಿಗಲ್ಲು ಹಾಕಿದ್ದರು. ವೈಸರಾಯ್ ಹೌಸ್ (ಈಗ ರಾಷ್ಟ್ರಪತಿ ಭವನ) ಮತ್ತು ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ‘ನವದೆಹಲಿ’ಯ ಕೇಂದ್ರಬಿಂದುವಾಗಿ ಈ ಸಂಸತ್ ಭವನ ಇರುವಂತೆ ಲುಟ್ಯೆನ್ಸ್ ಮತ್ತು ಬೇಕರ್ ವಿನ್ಯಾಸಗೊಳಿಸಿದ್ದರು.

ಭಾರತದ ಭವಿಷ್ಯದ ಬಗ್ಗೆ ಸ್ಪಷ್ಟ ಮುನ್ನೋಟ ಹೊಂದಿದ್ದ ಕ್ರಾಂತಿಕಾರಿ ಹೋರಾಟಗಾರರಾದ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ದೇಶದ ಗಮನ ಸೆಳೆಯಲು ಬಾಂಬ್ ಎಸೆದಿದ್ದು ಇದೇ ಭವನದಲ್ಲಿ. ಬ್ರಿಟಿಷರು ಜಾರಿಗೆ ತಂದಿದ್ದ ಪಬ್ಲಿಕ್ ಸೇಪ್ಟಿ ಬಿಲ್ ಮತ್ತು ಟ್ರೇಡ್ ಡಿಸ್ಪೂಟ್ ಬಿಲ್ ಎಂಬ ಕರಾಳ ಕಾನೂನುಗಳನ್ನು ವಿರೋಧಿಸಿ, ಕಿವುಡರಿಗೆ ಕೇಳಿಸುವಂತಾಗಬೇಕಾದರೆ ದೊಡ್ಡ ದನಿಯಲ್ಲಿಯೇ ಮಾತನಾಡಬೇಕು ಎಂಬ ಆಶಯದಿಂದ ಪಾರ್ಲಿಮೆಂಟಿನಲ್ಲಿ ಯಾವುದೇ ಸಾವು ನೋವು ಉಂಟಾಗದಂತೆ ಬಾಂಬ್ ಸ್ಪೋಟಿಸಿ ಬಂಧನಕ್ಕೆ ಒಳಗಾಗಿದ್ದರು. ಆನಂತರ ಕೋರ್ಟಿನ ವಿಚಾರಣೆಯ ವೇಳೆ ತಮ್ಮ ಹರಿತದ ಮಾತುಗಳ ದೇಶದ ಗಮನ ಸೆಳೆದಿದ್ದು ಇತಿಹಾಸ.

ಈ ಕಟ್ಟಡವು ಭಾರತದ ಸ್ವಾತಂತ್ರ್ಯದ ಅರುಣೋದಯವನ್ನು ಕಂಡಿದೆ. ಆಗಸ್ಟ್ 15, 1947 ರಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮಾಡಿದ ಐತಿಹಾಸಿಕ ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾಷಣಕ್ಕೆ ಸಾಕ್ಷಿಯಾಗಿದೆ.

ಅಂದಿನಿಂದ ಇಂದಿನವರೆಗೂ ಸಂಸತ್ ಭವನ ವಿದ್ವತ್‌ಪೂರ್ಣ ಚರ್ಚೆಗಳಿಗೆ, ನೂರಾರು ಮಸೂದೆಗಳ ಮಂಡನೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಒಬ್ಬ ವ್ಯಕ್ತಿಯ ‘ಅಹಂ’ನಿಂದ ರಾಷ್ಟ್ರಪತಿಗಳ ಸಾಂವಿಧಾನಿಕ ಹಕ್ಕಿಗೆ ವಂಚನೆ: ಕಾಂಗ್ರೆಸ್ ಟೀಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್ ವಿಶೇಷ ಆರ್ಥಿಕ ವಲಯದಿಂದ ಪಡೆದ ವಿದ್ಯುತ್‌ಗಾಗಿ ಅದಾನಿ ಕಂಪನಿಗೆ ಕಸ್ಟಮ್ಸ್ ಸುಂಕ ವಿನಾಯಿತಿ ನೀಡಲು ಸುಪ್ರೀಂ ಅನುಮತಿ

ಮುಂದ್ರಾದಲ್ಲಿರುವ ತನ್ನ SEZ ಘಟಕದಿಂದ ದೇಶೀಯ ಸುಂಕ ಪ್ರದೇಶಕ್ಕೆ (DTA) ಸರಬರಾಜು ಮಾಡುವ ವಿದ್ಯುತ್ ಮೇಲಿನ ಕಸ್ಟಮ್ಸ್ ಸುಂಕವನ್ನು ವಿಧಿಸುವುದರಿಂದ ಅದಾನಿ ಪವರ್‌ಗೆ ವಿನಾಯಿತಿ ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್‌ನ ಜೂನ್ 28, 2019...

ಅರಣ್ಯ ಭೂಮಿ ಒತ್ತುವರಿ ಆರೋಪ; ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಕಾಂಗ್ರೆಸ್, ಬಿಜೆಪಿ ಶಾಸಕರು

ಬೀದರ್ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಹುಮನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್...

ಅಮೆರಿಕಾ: ಭಾರತೀಯ ಮಹಿಳೆ ಶವವಾಗಿ ಪತ್ತೆ, ಮಾಜಿ ಗೆಳೆಯ ಹತ್ಯೆ ಮಾಡಿ ಭಾರತಕ್ಕೆ ಪರಾರಿಯಾಗಿರುವ ಶಂಕೆ

ಕಳೆದ ವಾರ ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಮಹಿಳೆ ನಿಕಿತಾ ಗೋಡಿಶಾಲಾ ಅಮೆರಿಕಾದ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆಕೆಯ ಮಾಜಿ ಗೆಳೆಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆತ ಆಕೆಯನ್ನು ಕೊಂದು ಭಾರತಕ್ಕೆ...

ಐಪಿಎಲ್ ಪ್ರಸಾರ ಅನಿರ್ದಿಷ್ಟಾವಧಿಗೆ ನಿಷೇಧಿಸಲು ಆದೇಶಿಸಿದ ಬಾಂಗ್ಲಾದೇಶ ಸರ್ಕಾರ

2026 ರ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ (ಐಪಿಎಲ್‌) ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್‌ ಕೈಬಿಟ್ಟ ಬಳಿಕ, ಐಪಿಎಲ್‌ ಪ್ರಸಾರ ಮತ್ತು ಪ್ರಚಾರದ ಮೇಲೆ ಬಾಂಗ್ಲಾದೇಶ ಸರ್ಕಾರ ಅನಿರ್ದಿಷ್ಟಾವಧಿ ನಿಷೇಧ ಹೇರಿದೆ. ಈ ನಿರ್ಧಾರವನ್ನು...

‘ನನ್ನನ್ನು ಸಂತೋಷಗೊಳಿಸುವುದು ಮುಖ್ಯ’: ಭಾರತದ ಮೇಲೆ ಸುಂಕ ಏರಿಸುವ ಬೆದರಿಕೆ ಹಾಕಿದ ಟ್ರಂಪ್

‘ರಷ್ಯಾದ ತೈಲ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡದಿದ್ದಲ್ಲಿ ಭಾರತದ ಮೇಲಿನ ಸುಂಕ ಹೆಚ್ಚಿಸುತ್ತೇವೆ’ ಎಂದು ಟ್ರಂಪ್ ಏರ್‌ಫೋರ್ಸ್ ಒನ್ ವಿಮಾನ ಪ್ರಯಾಣದ ವೇಳೆ ವರದಿಗಾರರೊಂದಿಗೆ ತಿಳಿಸಿದ್ದನ್ನು ‘ಎಎನ್‌ಐ’ ಸುದ್ದಿ ಸಂಸ್ಥೆ ‘ಎಕ್ಸ್’ನಲ್ಲಿ ಪ್ರಕಟಿಸಿದೆ. ರಷ್ಯಾ...

ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್-ಶಾರ್ಜೀಲ್ ಇಮಾಮ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ್ದು ಯಾಕೆ?

2020 ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನಿರಾಕರಿಸಿದೆ. ಆದರೆ, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್,...

ವೆನೆಜುವೆಲಾ-ಅಮೇರಿಕಾ ಸಂಘರ್ಷ: ಭಾರತದ ಆರ್ಥಿಕತೆಯ ಮೇಲಾಗುವ ಪರಿಣಾಮಗಳೇನು?

ಅಮೆರಿಕ ಮತ್ತು ವೆನೆಜುವೆಲಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ಈ ಸಂಘರ್ಷವು ಭಾರತದ ತೈಲ ಆಮದು ಮಸೂದೆ ಮತ್ತು ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದೇ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ವೆನೆಜುವೆಲಾ ದೇಶದ ಅಧ್ಯಕ್ಷ...

ಮಹಾರಾಷ್ಟ್ರ| ಬಂಗಾಳಿ ಭಾಷೆ ಮಾತನಾಡಿದ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಮೇಲೆ ಹಲ್ಲೆ

ತಮ್ಮ ಮಾತೃ ಭಾಷೆ ಬಂಗಾಳಿಯಲ್ಲಿ ಮಾತನಾಡಿದ್ದಕ್ಕಾಗಿ ಬಾಂಗ್ಲಾದೇಶೀಯರು ಎಂದು ಶಂಕಿಸಿ ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಮೂವರು ವಲಸೆ ಕಾರ್ಮಿಕರ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರು ತಮ್ಮ...

ವೆನೆಜುವೆಲಾ ದಾಳಿಯ ನಂತರ ಕೊಲಂಬಿಯಾ, ಕ್ಯೂಬಾ, ಮೆಕ್ಸಿಕೊ, ಗ್ರೀನ್‌ಲ್ಯಾಂಡ್‌ಗೆ ಟ್ರಂಪ್ ಬೆದರಿಕೆ

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡೊರೊ ಅವರನ್ನು ವಾಷಿಂಗ್ಟನ್ ಅಪಹರಿಸಿದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಮತ್ತು ಕ್ಯೂಬಾ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರನ್ನು...

ಯುಎಸ್‌| ಐತಿಹಾಸಿಕ ಪಾರ್ಸಿಪ್ಪಾನಿ ನಗರದ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಭಾರತೀಯ-ಅಮೆರಿಕನ್ ಪ್ರಜೆ ಪುಲ್ಕಿತ್ ದೇಸಾಯಿ

ಅಮೆರಿಕದ ನೌಕಾಪಡೆಯ ಅನುಭವಿ ಮತ್ತು ತಂತ್ರಜ್ಞಾನ ವೃತ್ತಿಪರ ಪುಲ್ಕಿತ್ ದೇಸಾಯಿ ಅವರು ನ್ಯೂಜೆರ್ಸಿಯ ಪಾರ್ಸಿಪ್ಪಾನಿಯ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಾರೀ ಪೈಪೋಟಿಯ ಸ್ಪರ್ಧೆಯ ಚುನಾವಣೆಯ ನಂತರ ಅಧಿಕಾರ ವಹಿಸಿಕೊಂಡ ಮೊದಲ ಭಾರತೀಯ-ಅಮೆರಿಕನ್...