Homeಚಳವಳಿಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ: ರಹಮತ್ ತರೀಕೆರೆ

ಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ: ರಹಮತ್ ತರೀಕೆರೆ

ತೀಸ್ತಾ ಎಂದರೆ ನದಿ ಎಂದರ್ಥ. ನದಿಯನ್ನು ತಡೆಯಬಹುದು, ಆದರೆ ಬತ್ತಿಸಲಾಗುವುದಿಲ್ಲ. - ಕರ್ನಾಟಕ ಜನಶಕ್ತಿ ಸಮ್ಮೇಳನದಲ್ಲಿ ರಹಮತ್ ತರೀಕೆರೆಯವರ ಮಾತುಗಳು

- Advertisement -
- Advertisement -

ಈ ಕಾರ್ಯಕ್ರಮವನ್ನು ತೀಸ್ತಾ ಸೆಟಲ್ವಾಡ್‌ರವರು ಉದ್ಘಾಟಿಸಬೇಕಾಗಿತ್ತು. ಆದರೆ ಅವರನ್ನು ಬಂಧಿಸಲಾಗಿದೆ.  ತೀಸ್ತಾರವರು ನಮ್ಮೊಡನೆ ಇಂದು ಇಲ್ಲದಿದ್ದರೂ ಸಹ ಅವರ ಚಿಂತನೆಗಳು ನಮ್ಮ ಜೊತೆ ಇವೆ. ತೀಸ್ತಾ ಎಂದರೆ ನದಿ ಎಂದರ್ಥ. ನದಿಯನ್ನು ತಡೆಯಬಹುದು, ಆದರೆ ಬತ್ತಿಸಲಾಗುವುದಿಲ್ಲ. ಅವರು ಬಹಳ ಬೇಗ ಬಿಡುಗಡೆಯಾಗಿ ಜನರ ನಡುವೆ ಬರಲಿ ಎಂದು ಹಾರೈಸುತ್ತೇನೆ ಎಂದು ರಹಮತ್ ತರೀಕೆರೆ ತಿಳಿಸಿದರು.

ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ಆರಂಭಗೊಂಡ ಕರ್ನಾಟಕ ಜನಶಕ್ತಿ ಸಂಘಟನೆಯ ಮೂರನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪಂಡಿತ ತಾರನಾಥರು ಕೆಲಸ ಮಾಡಿದ ಕರ್ಮಭೂಮಿ ಇದು. ಅವರು 1921ರಲ್ಲಿ ನದಿ ತೀರದ ಈ ಪ್ರದೇಶದಲ್ಲಿ ಪ್ರೇಮಾಯತನ ಎಂಬ ಆಶ್ರಮವನ್ನು, ಹಮ್‌ದರ್ದ್‌ (ಹಮ್‌ದರ್ದ್‌ ಎಂದರೆ ಬುದ್ಧನ ಮೈತ್ರಿ ಮತ್ತು ಅಂತಃಕರಣದ ಸಂಕೇತ) ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅವರು ಬ್ರೀಟಿಷರ ಮತ್ತು ನಿಜಾಮರ ವಿರುದ್ಧ ಹೋರಾಡಿದ್ದ ಹೋರಾಟಗಾರರಾಗಿದ್ದರು ಎಂದರು.

ಒಬ್ಬ ವೈದ್ಯರಾಗಿ ಅವರು ತಮ್ಮ ಆಶ್ರಮಕ್ಕೆ ಎಲ್ಲಾ ಧರ್ಮದ, ಜಾತೀಯ ಜನರನ್ನು ಆಹ್ವಾನಿಸುತ್ತಿದ್ದರು. ಅಲ್ಲಿ ಸಂಗೀತವನ್ನು ಕಲಿಸುತ್ತಿದ್ದರು, ಯೋಗವನ್ನು ಮತ್ತು ವ್ಯವಸ್ಥೆಯ ವಿರುದ್ಧ ಪ್ರತಿರೋಧವನ್ನು ಕಲಿಸುತ್ತಿದ್ದರು. ಸ್ವತಃ ಅಂತರ್ಜಾತಿ ವಿವಾಹವಾಗಿದ್ದರು. ಅವರ ಶಿಷ್ಯರಲ್ಲಿ ಎಲ್ಲ ಧರ್ಮದವರು ಇದ್ದರು ಎಂದರು. ಅವರು ಪ್ರೇಮ ಎನ್ನುವ ಪತ್ರಿಕೆ ನಡೆಸುತ್ತಿದ್ದರು. ಅಂತಹ ಪ್ರಯೋಗ ಭೂಮಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಮುಖ್ಯ ಎಂದರು.

ಅಪರಾಧಿಗಳು ಇರಬೇಕಿದ್ದ ಸೆರಮನೆಗಳಲ್ಲಿ ಅಪರಾಧದ ವಿರುದ್ಧ ಹೋರಾಡುವವರನ್ನು ತುಂಬಲಾಗುತ್ತಿದೆ. ಇದು ಭಾರತದ ದೊಡ್ಡ ವೈರುದ್ಯವಾಗಿದೆ. ಪತ್ರಕರ್ತರು, ಕಾರ್ಯಕರ್ತರು, ಸ್ಟ್ಯಾಂಡಪ್‌ ಕಾಮಿಡಿಗಳು, ಬುದ್ದಿಜೀವಿಗಳು-ವಿದ್ವಾಂಸರನ್ನು ಜೈಲಿಗೆ ಹಾಕಲಾಗುತ್ತಿದೆ. ಅವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿರುವ ವಿಚಿತ್ರ ಕಾಲಘಟ್ಟದಲ್ಲಿದ್ದೇವೆ ಎಂದು ರಹಮತ್ ತರೀಕೆರೆ ಆತಂಕ ವ್ಯಕ್ತಪಡಿಸಿದರು.

ಕಲ್ಬುರ್ಗಿಯಂತಹ ದೊಡ್ಡ ವಿದ್ವಾಂಸವನ್ನು ಕಲ್ಯಾಣ ನಗರದಲ್ಲಿ ನಾವು ಕಳೆದುಕೊಂಡಿದ್ದೇವೆ. ಕಲ್ಯಾಣ ಎಂಬುದು ಕನ್ನಡಿಗರ ಸ್ವಪ್ನ. ಬಸವಣ್ಣನವರ ಆಶಯ. ಅಲ್ಲಿ ಕಲ್ಬುರ್ಗಿಯವರ ಧಾರುಣ ಹತ್ಯೆಯಾಗಿ ನೆತ್ತರು ಹರಿಯಿತು. ಇದು ಕರ್ನಾಟಕ ಹಿಂಸಾತ್ಮಕ ಪ್ರದೇಶವಾಗಿ ಭಿನ್ನಮತದವರನ್ನು ಕೊಲ್ಲುತ್ತೇವೆ ಎನ್ನುವ ವಿಷಾಧಕರ ಕಾಲಘಟ್ಟದಲ್ಲಿದ್ದೇವೆ. ಆನಂತರ ನಾವು ಗೌರಿಯನ್ನು ಕಳೆದುಕೊಂಡೆವು. ಪ್ರಭುತ್ವ ಮಾಡುತ್ತಿರುವ ಕೊಲೆ, ಹಲ್ಲೆ, ಜೈಲು ಇತ್ಯಾದಿಗಳಿಗೆ ಕೆಲವು ಮಾಧ್ಯಮಗಳು ಬೆಂಬಲಿಸುತ್ತಿವೆ ಮತ್ತು ಸಂಭ್ರಮಿಸುತ್ತಿದೆ ಎಂಬುದು ಶೋಚನೀಯ ಸಂಗತಿ. ತಮ್ಮ ವೃತ್ತಿ ಬಾಂಧವರು ಹಲ್ಲೆಗೆ ಒಳಗಾಗುತ್ತಿದ್ದರೆ, ಬರಹಗಾರರು, ಪತ್ರಕರ್ತರು ಗಾಬರಿಗೊಳ್ಳಬೇಕು. ವಿಷಾಧ, ಆಘಾತಕ್ಕೆ ಒಳಗಾಗಬೇಕು. ಆದರೆ ಒಂದು ವರ್ಗದ ಮಾಧ್ಯಮ ಇದನ್ನು ಸಂಭ್ರಮಿಸುತ್ತಿದೆ. ಬಸವಣ್ಣನವರು ಹೇಳಿದಂತೆ ತಾಯಿಯ ಮೊಲೆ ಹಾಲು ನಂಜಾಗಿ ಕೊಲುವೆಡೆ ಇನ್ಯಾರಿಗೆ ದೂರುವುದು? ಎಂಬ ಸ್ಥಿತಿಗೆ ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಿಕಾ ಸ್ವಾತಂತ್ರ್ಯ ಅಪಾಯಕಾರಿ ಸನ್ನಿವೇಶ ಎದುರಿಸುತ್ತಿರುವ 5 ದೇಶಗಳಲ್ಲಿ ಭಾರತ ಒಂದಾಗಿದೆ. ಹೀಗಲಾದರೂ ಮಾಧ್ಯಮ ನನ್ನ ನೈತಿಕ ಹೊಣೆಗಾರಿಕೆಯನ್ನು ತೋರಿದರೆ ಈ ಪರಿಸ್ಥಿತಿ ಬದಲಾಗಬಹುದು. ತೀಸ್ತಾ ಪತ್ರಕರ್ತ, ವಕೀಲೆ, ಅವರ ಮುತ್ತಾತ ಅಟಾರ್ನಿ ಜನರಲ್ ಆಗಿ ಜನರಲ್ ಡಯರ್‌ ಅವರ ವಿಚಾರಣೆ ಮಾಡಿದ ಹಿನ್ನಲೆಯುಳ್ಳವರು. ತೀಸ್ತಾ ಸೆರೆಮನೆಯಲ್ಲಿರುವುದು ಇದು ಭಾರತದ ಆತ್ಮಸಾಕ್ಷಿಯ ಸಾವು, ಪ್ರಭುತ್ವದ ಕ್ರೌರ್ಯ ಎಂದರು.

ನಾವು ಇಂದು ಎರಡು ಭಾರತದ ಕಲ್ಪನೆಗಳನ್ನು ಮುಖಾಮುಖಿ ಮಾಡಲಾಗುತ್ತಿದೆ. ಒಂದು ದ್ವೇಷದ ಮೂಲಕ ದೇಶ ಕಟ್ಟಬಹುದು, ಇನ್ನೊಂದು ಪ್ರೇಮದ ಮೂಲಕ ದೇಶವನ್ನು ಕಟ್ಟಬಹುದು ಎಂಬು ಎರಡು ಸಿದ್ದಾಂತಗಳನ್ನು ಮುಖಾಮುಖಿಯಾಗುತ್ತಿದ್ದೇವೆ. ಬಾಬ್ರಿ ಮಸೀದಿ ಕೆಡವಿ 30 ವರ್ಷ ಆಗಿದೆ. ಈ 30 ವರ್ಷಗಳಲ್ಲಿ ಧಾರ್ಮಿಕವಾದ, ದ್ವೇ‍ಷ, ಅಸೂಹೆ, ಹಿಂಸೆಗಳಿಲ್ಲದಿದ್ದರೆ ಭಾರತ ಆರ್ಥಿಕವಾಗಿ 10 ಗಾವುದ ಮೇಲೆ ಹೋಗುತ್ತಿತ್ತು. ನಾವೆಲ್ಲವರು ಮನಗಂಡು ಪ್ರಭುತ್ವಕ್ಕೆ ಮನಗಾಣಿಸಬೇಕಾದ ಸಂಗತಿಯೆಂದರೆ ಸಾಮಾಜಿಕ ಸಂಬಂಧಗಳು, ಧಾರ್ಮಿಕ ಸಂಬಂಧಗಳು ಸರಿ ಇಲ್ಲದೆ ದೇಶ ಮುಂದಕ್ಕೆ  ಹೋಗಲು ಸಾಧ್ಯವಿಲ್ಲ. ಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ ಎಂಬ ಸವಾಲನ್ನು ಎದುರಿಸಬೇಕಾಗಿದೆ. ಪ್ರೇಮದ ಭಾರತವನ್ನು ನಾವು ಕಟ್ಟುವ ಕನಸು ಕಾಣಬೇಕಿದೆ.

ಟಿವಿ ಚಾನೆಗಳು ಗುಂಡಿಟ್ಟು ಸಾಯಿಸಬೇಕು ಎಂಬುದನ್ನು ತಲೆಬರೆಹ ಹಾಕಬೇಕು ಎನ್ನವುದು ಏನನ್ನೂ ಸೂಚಿಸುತ್ತಿದೆ?  ‘ಬೆಂಕಿ ಹಚ್ಚುತ್ತೇವೆ’ ಎಂಬ ಮಾತನ್ನು ಪದೇ ಪದೇ ಕೇಳುತ್ತಿದ್ದೇವೆ. ಗುಂಡು ಹೊಡೆಯುತ್ತೇವೆ, ಕಡಿಯುತ್ತೇವೆ ಎನ್ನುತ್ತಿದ್ದಾರೆ. ಸಂವಿಧಾನದ ಪ್ರಕಾರ ಜನಪ್ರತಿನಿಧಿಗಳಾದವರು ಈ ಮಾತುಗಳನ್ನು ಹೇಳುತ್ತಿದ್ದಾರೆ. ಗೂಂಡಗಳು ಈ ಮಾತುಗಳನ್ನು ಹೇಳುತ್ತಿದ್ದಾರೆ. ಯಾವ ಧರ್ಮದವರೂ ಈ ಮಾತು ಹೇಳಿದರೂ ಅವು ನೀಚತನದ ಮಾತುಹಳು. ಇದರಿಂದ ರಾಜಕೀಯ ಪಕ್ಷಗಳಿಗೆ ಲಾಭ ಹೊರತು, ಭಾರತಕ್ಕೆ ಅಲ್ಲ ಎಂದರು.

200 ವರ್ಷದ ಗುಲಾಮಗಿರಿ ವಿರುದ್ಧ ಹೋರಾಡಿ ವಿಮುಕ್ತಿ ಪಡೆದ ದೇಶದಲ್ಲಿ ಈಗ ತಮ್ಮ ಜೊತೆಗೆ ಬದುಕಬೇಕಾದ ಸಹವಾಸಿಗಳ ಭಿನ್ನಮತವನ್ನು ಹಲ್ಲೆ-ಕೊಲೆ ಮೂಲಕ ತೀರಿಸುವುದರಿಂದ ಭಾರತವನ್ನು ಕಟ್ಟಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಸಮಾಜ ಸುಧಾಕರ ಪಠ್ಯನ್ನು ಬಿಡಲಾಗುತ್ತಿದೆ. ಬ್ರಾಹ್ಮಣವಾದಿ, ಮತೀಯವಾದಿ ಸಿದ್ಧಾಂತವನ್ನು ಸೇರಿಸಲಾಗುತ್ತದೆ. ನಮ್ಮ ಮಕ್ಕಳು ಇಂತಹ ಪಠ್ಯಗಳನ್ನು ಓದಿ ಕೂಡಿ ಕಟ್ಟುವ ಭಾರತವನ್ನು ಕಟ್ಟಲಾಗದು. ನಂಜಿನ ಭಾರತ ನಮ್ಮದ್ದಲ್ಲ. ಕೂಡು ಹೋರಾಟ ಪರಿಕಲ್ಪನೆಯನ್ನು ನಾವು ಮಂಡಿಸಬೇಕಾಗಿದೆ. ಜನರ ಕಡೆ ಹೋಗಬೇಕಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ವಿರೋಧಿ ಹೋರಾಟವೂ ಆಶಾಭಾವನೆಯನ್ನು ಮೂಡಿಸಿದೆ. ಅದು ಎಲ್ಲ ಮಹನೀಯರ ಚಿಂತನೆಯನ್ನು ಒಳಗೊಂಡಿತ್ತು. ನಮ್ಮ ಸೂಫಿಗಳು, ಶರಣರು, ದಾಸರು ದಾರಿ ಹಾಕಿಕೊಟ್ಟಿದ್ದಾರೆ. ಆ ದಾರಿಯನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ ಎಂದರು.

ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕುಮಾರ ಸಮತಳರವರು ಮಾತನಾಡಿ, “ಇಂದು ಭಾರತದ ತುಂಬಾ ಕಾರ್ಮೊಡ ಕವಿದಿದೆ. ವಾಕ್‌ ಸ್ವಾತಂತ್ರ್ಯ ಕುಸಿದು ಬಿದ್ದಿದೆ. ಹೋರಾಟ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಭವಿಷ್ಯ ಭಾರತದ ಆಶಯ ಮಣ್ಣುಗೂಡುತ್ತಿದೆ. ಈ ದೇಶವನ್ನು ಬದಲಾವಣೆ ಮಾಡಲು ಎಲ್ಲರೂ ಕೂಡಿ ಮುನ್ನಡೆಯುವುದು ತುಂಬಾ ಅಗತ್ಯವಾಗಿದೆ. ದೆಹಲಿ ಹೋರಾಟ ನಮಗೆ ಹೊಸ ದಾರಿಯನ್ನು ತೋರಿದೆ. ತೀಸ್ತಾ ಜೈಲಿನಲ್ಲಿದ್ದಾರೆ. ನಾವು ಮುಂದೊಂದು ದಿನ ಜೈಲಿಗೆ ಹೋಗಬಹುದು. ಕಾನೂನುಗಳನ್ನು ಆ ನಿಟ್ಟಿನಲ್ಲಿ ರೂಪಿಸಲಾಗಿದೆ. ಈ ಕುರಿತು ಚಿಂತನೆ ನೀಡುವ ಪ್ರಯತ್ನವಾಗಿ ಈ ಸಮ್ಮೇಳನ ನಡೆಯುತ್ತಿದೆ. ಹೊಸ ದಾರಿಯನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಬಂಧಿಸಲ್ಪಟ್ಟಿರುವ ಪತ್ರಕರ್ತ ಮೊಹಮ್ಮದ್ ಜುಬೇರ್, ತೀಸ್ತಾ ಸೆಟಲ್ವಾಡ್, ಮತ್ತು ಶ್ರೀಕುಮಾರ್‌ರವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಯಿತು.

ಇದನ್ನೂ ಓದಿ: ಅಧಿಕಾರಕ್ಕೆ ಸತ್ಯ ನುಡಿದ ತೀಸ್ತಾ ಬಂಧನ; ಸುಪ್ರೀಂ ಕೋರ್ಟ್ ತನ್ನ ಜವಾಬ್ದಾರಿಯನ್ನು ಮರೆಯಿತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಈ ಕಮ್ಯೂನಿಸ್ಟ್ ರು ದೇಶದ ಚರಂಡಿ ನೀರಿದ್ದಂತೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ ,ನಿಮ್ಮ ಸೋಗಲಾಡಿತನದ ಮಾತುಗಳಿಗೆ ರಾಜ್ಯದಲ್ಲಿ ಬೆಲೆ ಇಲ್ಲವೇ ಇಲ್ಲಾ

  2. ನೀವು ಈ ದೇಶದ ಚರಂಡಿ ನೀರಿದ್ದಂತೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ ,ನಿಮ್ಮ ಸೋಗಲಾಡಿತನದ ಮಾತುಗಳಿಗೆ ರಾಜ್ಯದಲ್ಲಿ ಬೆಲೆ ಇಲ್ಲವೇ ಇಲ್ಲಾ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...