Homeರಾಜಕೀಯಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ ಆಗಿ ಬಿಜೆಪಿ ಶಾಸಕ ಆಯ್ಕೆ

ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ ಆಗಿ ಬಿಜೆಪಿ ಶಾಸಕ ಆಯ್ಕೆ

ಶಿವಸೇನೆ ಶಾಸಕಿ ಬಿಜೆಪಿ ಪರವಾಗಿ ಮತ ನೀಡುವಾಗ ‘ಇಡಿ, ಇಡಿ’ ಎಂದು ಕೂಗಿದ ಪ್ರತಿಪಕ್ಷಗಳ ಶಾಸಕರು

- Advertisement -
- Advertisement -

ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಆಗಿ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ 164 ಮತಗಳಿಂದ ಭಾನುವಾರ ಆಯ್ಕೆಯಾಗಿದ್ದಾರೆ. ಶಿವಸೇನೆಯ ಶಾಸಕ ರಾಜನ್ ಸಾಲ್ವಿ 107 ಮತಗಳನ್ನು ಪಡೆದಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಸೋಮವಾರ ವಿಧಾನ ಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಸಲಿದೆ. ಆದರೆ ಸ್ಪೀಕರ್‌‌ ಆಗಿ ಏಕನಾಥ್‌ ಶಿಂಧೆ ಮತ್ತು ಬಿಜೆಪಿ ಮೈತ್ರಿಯ ಅಭ್ಯರ್ಥಿ ಗೆಲುವು ಕಂಡಿದ್ದರಿಂದ, ವಿಶ್ವಾಸ ಮತ ಯಾಚನೆಯ ಗೆಲುವು ಕೂಡಾ ಭಾಗಶಃ ನಿಚ್ಚಳವಾಗಿದೆ.

2021ರ ಫೆಬ್ರವರಿಯಲ್ಲಿ ಕಾಂಗ್ರೆಸ್‌ನ ನಾನಾ ಪಟೋಲೆ ಅವರು ತಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಲು ರಾಜೀನಾಮೆ ನೀಡಿದ ನಂತರ ಅಸೆಂಬ್ಲಿ ಸ್ಪೀಕರ್ ಹುದ್ದೆ ಖಾಲಿಯಾಗಿತ್ತು. ಈ ನಡುವೆ ಉಪಸಭಾಪತಿ ನರಹರಿ ಜಿರ್ವಾಲ್ ಅವರು ಹಂಗಾಮಿ ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸ್ಪೀಕರ್ ಆಯ್ಕೆಗಾಗಿ ಚುನಾವಣೆ ನಡೆಯುತ್ತಿರುವ ವೇಳೆ ಶಿವಸೇನೆ ಶಾಸಕಿ ಯಾಮಿನಿ ಯಶವಂತ್ ಜಾಧವ್‌‌ ಅವರು ಬಿಜೆಪಿ ಪರವಾಗಿ ಮತ ನೀಡಿದಾಗ ಪ್ರತಿಪಕ್ಷಗಳ ಬೆಂಚ್‌ಗಳಲ್ಲಿ ಶಾಸಕರು “ಇಡಿ, ಇಡಿ” ಎಂದು ಕೂಗಿದ್ದಾರೆ.

ಸ್ಪೀಕರ್‌ ಆಯ್ಕೆಯ ನಂತರ ಮಾತನಾಡಿದ ನೂತನ ಸಿಎಂ ಏಕನಾಥ ಶಿಂಧೆ, “ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ದೊಡ್ಡ ವ್ಯಕ್ತಿ. ನನಗಾಗಿ ಮುಖ್ಯಮಂತ್ರಿ ಕುರ್ಚಿ ತ್ಯಾಗ ಮಾಡಿದ್ದಾರೆ. 50 ಶಾಸಕರು ನನ್ನಂತಹ ಸಣ್ಣ ಕಾರ್ಯಕರ್ತರ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನು ಬಾಳಾಸಾಹೇಬ್ ಠಾಕ್ರೆಯವರ ಶಿವಸೈನಿಕ. ಹೊಸ ಸರ್ಕಾರ ಆಶಾದಾಯಕವಾಗಿ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತಾಪಿಸುವ ಪ್ರತಿಯೊಬ್ಬ ಶಾಸಕರಿಗೂ ನ್ಯಾಯ ನೀಡುತ್ತದೆ” ಎಂದು ಹೇಳಿದ್ದಾರೆ.

ಅಂದು ಅಮಿತ್ ಶಾ ಕೊಟ್ಟ ಮಾತು ಉಳಿಸಿಕೊಂಡಿದ್ದರೆ, ಇಂದು ಮಹಾರಾಷ್ಟ್ರ ಬಿಜೆಪಿ ಸಿಎಂ ಹೊಂದಿರುತ್ತಿತ್ತು: ಉದ್ಧವ್ ಠಾಕ್ರೆಇದನ್ನೂ ಓದಿ: 

ನೂತನ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತನಾಡಿ, “ರಾಹುಲ್ ನಾರ್ವೇಕರ್ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಭಾರತದಲ್ಲೇ ಅತಿ ಕಿರಿಯ ವಿಧಾನಸಭಾ ಸ್ಪೀಕರ್. ಬಿಜೆಪಿ-ಶಿವಸೇನೆ ಮೈತ್ರಿಕೂಟದ ಈ ಸರ್ಕಾರವು ಏಕನಾಥ್ ಶಿಂಧೆ ನೇತೃತ್ವದಲ್ಲಿ ಮಹಾರಾಷ್ಟ್ರದ ಎಲ್ಲಾ ಆಕಾಂಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತದೆ ಮತ್ತು ಸ್ಪೀಕರ್ ಅದಕ್ಕೆ ಸಹಕರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...