Homeಮುಖಪುಟಸುಪ್ರೀಂ ಕೋರ್ಟ್‌ಗೆ ಅವಮಾನ - OPIndia, ನೂಪುರ್ ಜೆ ಶರ್ಮಾ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

ಸುಪ್ರೀಂ ಕೋರ್ಟ್‌ಗೆ ಅವಮಾನ – OPIndia, ನೂಪುರ್ ಜೆ ಶರ್ಮಾ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

- Advertisement -
- Advertisement -

ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿಕಾರಿದ್ದ ಬೆನ್ನಲ್ಲೆ ಸುಪ್ರೀಂ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದಕ್ಕಾಗಿ OPIndia ಮತ್ತು ಅದರ ಸಂಪಾದಕಿ ನೂಪುರ್ ಜೆ ಶರ್ಮಾ ವಿರುದ್ಧ ಟಿಎಂಸಿ ಮುಖಂಡ ಸಾಕೇತ್ ಗೋಖಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

ನೂಪೂರ್ ಜೆ ಶರ್ಮಾ ಎನ್ನುವವರು ಬಿಜೆಪಿ-ಆರ್‌ಎಸ್‌ಎಸ್‌ ಬೆಂಬಲಿತ ಒಪಿಇಂಡಿಯಾ ಎನ್ನುವ ಪ್ರಪಗಂಡಾ ವೆಬ್‌ಸೈಟ್‌ನ ಸಂಪಾದಕಿಯಾಗಿದ್ದಾರೆ. ಅದಕ್ಕೆ ಬಿಜೆಪಿಯಿಂದ ಉಚ್ಛಾಟನೆಯಾಗಿರುವ ಮತ್ತೊಬ್ಬ ನೂಪುರ್ ಶರ್ಮಾ ಕೂಡ ಈ ಹಿಂದೆ ಬರೆಯುತ್ತಿದ್ದರು.

ಸುಪ್ರೀಂ ಕೋರ್ಟ್ ಅನ್ನು ತೀವ್ರವಾಗಿ ಅವಮಾನಿಸಿದ್ದಕ್ಕಾಗಿ ಬಿಜೆಪಿ ಮುಖವಾಣಿ OPIndia ಮತ್ತು ಅದರ ಸಂಪಾದಕಿ ನೂಪುರ್ ಜೆ ಶರ್ಮಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಕೋರಿ ಭಾರತದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್‌ರವರಿಗೆ ಪತ್ರ ಬರೆಯಲಾಗಿದೆ.

ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ ಆರೋಪಿ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ “ದೇಶದಲ್ಲಿ ಉಂಟಾದ ಉದ್ವಿಗ್ನ ವಾತಾವರಣಕ್ಕೆ ನೂಪುರ್ ಶರ್ಮಾ ಒಬ್ಬರೆ ಕಾರಣವಾಗಿದ್ದಾರೆ, ಹಿಡಿತವಿಲ್ಲದ ನಾಲಿಗೆಯಿಂದ ರಾಷ್ಟ್ರಕ್ಕೆ ಬೆಂಕಿ ಹಚ್ಚಿದೆ, ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು” ಎಂದು ಸುಪ್ರೀಂ ಅಭಿಪ್ರಾಯಪಟ್ಟಿತು. ಅಲ್ಲದೆ ನೂಪುರ್ ಶರ್ಮಾ ವಿರುದ್ಧ ಕಿಡಿಕಾರಿತ್ತು.

ಇದಕ್ಕೆ ಪ್ರತಿಯಾಗಿ ಜುಲೈ 1 ರಂದು OPIndia ದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ “ಸುಪ್ರೀಂ ಕೋರ್ಟ್ ಇಸ್ಲಾಂ ಧರ್ಮೀಯರಂತೆ ಮಾತನಾಡುತ್ತದೆ, ಇಸ್ಲಾಮಿಕ್ ಮತಾಂಧರಿಂದ ಹಿಂದೂ ವ್ಯಕ್ತಿಯ ಶಿರಚ್ಛೇದಕ್ಕೆ ನೂಪುರ್ ಶರ್ಮಾ ಅವರ ‘ಸಡಿಲ ನಾಲಿಗೆ’ಯನ್ನು ದೂರುವ ಮೂಲಕ ಕೆಟ್ಟ ವಿಚಾರಣೆ ನಡೆಸುತ್ತದೆ. ಸುಪ್ರೀಂ ಕೋರ್ಟ್ ಷರಿಯಾವನ್ನು ಅನುಸರಿಸುತ್ತದೆಯೇ?” ಎಂದು ಟ್ವೀಟ್ ಮಾಡುವ ಮೂಲಕ ಅವಮಾನ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅದೆ ಟ್ವಿಟರ್ ಹ್ಯಾಂಡಲ್ ನಿಂದ “ಆತ್ಮೀಯ ಮೈಲಾರ್ಡ್‌ಗಳೇ, ನೀವು ಇಸ್ಲಾಮಿಸ್ಟ್‌ಗಳನ್ನು ಸಹ ನಿಮ್ಮ ಸಡಿಲವಾದ ನಾಲಿಗೆಯಿಂದ ಪ್ರಚೋದಿಸಿದ್ದೀರಾ?” ಎಂದು ಬರೆದು ಲೇಖನದ ಲಿಂಕ್ ಒಂದನ್ನು ಪೋಸ್ಟ್ ಮಾಡಲಾಗಿದೆ. ಆ ಲೇಖನದಲ್ಲಿ “ನ್ಯಾಯಾಂಗವು ವಿಚಾರಣೆ ವೇಳೆ ತನ್ನ ಅಪರಿಮಿತ ಬುದ್ಧಿವಂತಿಕೆಯಲ್ಲಿ ಅವರು ಇಸ್ಲಾಮಿಕ್ ಧರ್ಮಗುರುಗಳಾಗಲು ಬಯಸುತ್ತಾರೆಯೇ ಅಥವಾ ನೈಸರ್ಗಿಕ ನ್ಯಾಯವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆಯೇ ಎಂದು ನಿರ್ಧರಿಸುವ ಅಗತ್ಯವಿದೆ” ಎಂದು ಬರೆಯಲಾಗಿದೆ ಎಂದು ಸಾಕೇತ್ ತಿಳಿಸಿದ್ದಾರೆ.

ಈ ರೀತಿಯಾಗಿ ಸುಪ್ರೀಂ ಕೋರ್ಟ್ ಅನ್ನು ಅವಮಾನಿಸಿದ್ದಕ್ಕಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಅವರು ಕೋರಿದ್ದಾರೆ.

ಇದನ್ನೂ ಓದಿ: ಹಿಡಿತವಿಲ್ಲದ ನಾಲಿಗೆಯಿಂದ ರಾಷ್ಟ್ರಕ್ಕೆ ಬೆಂಕಿ ಹಚ್ಚಿದೆ: ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು- ಸುಪ್ರೀಂ

ಕರ್ನಾಟಕದಲ್ಲಿಯೂ ಸಹ ನೂಪುರ್ ಶರ್ಮಾ ವಿರುದ್ಧದ ಸುಪ್ರೀಂ ಕೋರ್ಟ್‌ ಹೇಳಿಕೆಗಳನ್ನು ಖಂಡಿಸಿ ಬಿಜೆಪಿ ಬೆಂಬಲಿಗರಾದ ಚಕ್ರವರ್ತಿ ಸೂಲಿಬೆಲೆ, ಪ್ರಶಾಂತ್ ಸಂಬರ್ಗಿ ಸೇರಿದಂತೆ ಹಲವರು ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಆ ದೇಶದ ಮಾನವನ್ನ ಪ್ರಪಂಚದ ರಾಷ್ಟ್ರಗಳ ಮುಂದೆ ಹರಾಜು ಹಾಕಿದ ಮತ್ತು ನ್ಯಾಯಾಂಗ ನಿಂದನೆ ಕೃತ್ಯ ಎಸಗಿರುವ ಈ ಹೆಂಗಸನ್ನ ಹಿಂದೆಯೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕಿತ್ತು ಆದರೆ ದುರದೃಷ್ಟವಶಾತ್ ಕೇಂದ್ರದಲ್ಲಿ ಇರುವ ಮತಿಯವಾದಿ, ಕೋಮುವಾದಿ ಸರ್ಕಾರವಿರುವುದರಿಂದ ಸಾಧ್ಯವಿಲ್ಲ.

  2. ಈ ಹೊಲಸು ಬಾಯಿನಾ ಪ್ರವಾದಿಯವರ ಬಗ್ಗೆ ಬೊಗಳಿದಾಗಲೇ ಮುಚ್ಚಿಸಿದ್ರೆ ಇವತ್ತು ಸುಪ್ರೀಂ ಕೋರ್ಟ್ ಗೆ ಅವಮಾನ ಮಾಡತಿರಲಿಲ್ಲ. ಇವಳ ಒಂದು ಮಾತು ಇಡೀ ದೇಶ ಹೊತ್ತಿ ಉರಿಯೋ ಹಾಗೆ ಮಾಡಿ ಪ್ರಪಂಚದ ಅತಿ ಚಿಕ್ಕ ಚಿಕ್ಕ ದೇಶಗಳ ಮುಂದೆ ನಮ್ಮ ದೇಶದ ಮರ್ಯಾದೆ ಹೋಯಿತು. ಇವಳನ್ನ ಅವತ್ತೇ ಪೊಲೀಸ್ ಕಸ್ಟಡಿಗೆ ಒಪ್ಸಿದ್ರೆ ಹೇಗಿರ್ತಿತ್ತು,, ಇವರಿಗೆಲ್ಲ ನಡು ರೋಡಲ್ಲಿ ಸಾರ್ವಜನಿಕವಾಗಿ ಗಲ್ಲಿಗೆ ಹಾಕಬೇಕು ಥೂ… ಇವಳು ಒಂದು ಭಾರತೀಯ ಹೆಣ್ಣೇ..?

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...