Homeಚಳವಳಿಹೋರಾಟವನ್ನು ಬೆಚ್ಚಗಿರಿಸುತ್ತಿರುವ 'ಟ್ರ್ಯಾಲಿ' ಎಂಬ ರೈತರ ಬದುಕಿನ ಬಂಡಿ!

ಹೋರಾಟವನ್ನು ಬೆಚ್ಚಗಿರಿಸುತ್ತಿರುವ ‘ಟ್ರ್ಯಾಲಿ’ ಎಂಬ ರೈತರ ಬದುಕಿನ ಬಂಡಿ!

ಹೊಲದಲ್ಲಿ ಕೃಷಿ ಜೀವನದ ಪ್ರಮುಖ ಅಂಗವಾಗಿದ್ದ ಈ ಟ್ರ್ಯಾಕ್ಟರ್‌ಗಳು, ಐತಿಹಾಸಿಕ ಹೋರಾಟದಲ್ಲಿಯೂ ನಮ್ಮ ಕೈ ಬಿಟ್ಟಿಲ್ಲ ಎನ್ನುತ್ತಾರೆ ರೈತರು

- Advertisement -
- Advertisement -

ಐತಿಹಾಸಿಕ ರೈತ ಹೋರಾಟದಲ್ಲಿ ರೈತರ ಜೀವನದ ಬಹುಭಾಗವನ್ನು ಆವರಿಸಿರುವುದು ಟ್ರ್ಯಾಲಿಗಳಾಗಿದೆ. ಕೃಷಿ ಕ್ಷೇತ್ರದಲ್ಲಿ ಉಳುಮೆ ಮಾಡುವ, ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಪಾತ್ರ ವಹಿಸುತ್ತಿದ್ದ ಈ ಟ್ರ್ಯಾಕ್ಟರ್‌ಗಳು ಈಗ ಹೋರಾಟನಿರತ ರೈತರ ವಾಸ್ತವ್ಯದ ಟ್ರ್ಯಾಲಿಗಳಾಗಿ ಮಾರ್ಪಾಡಾಗಿವೆ. ದೊಡ್ಡ ಹೋರಾಟಕ್ಕೆ ಸಾಕ್ಷಿಯಾಗಿರುವ ಸಿಂಘು ಗಡಿ, ಟಿಕ್ರಿ ಬಾರ್ಡರ್‌, ದಾರುಹೇರಾ ಬಾರ್ಡರ್‌ಗಳಲ್ಲಿ ಈ ಟ್ರ್ಯಾಲಿಗಳ ಪಾತ್ರ ಅತಿ ಮಹತ್ವದ್ದು. ಶಹಜಾನ್‌ಪುರ್‌, ಗಾಜಿಯಾಪುರ್ ಮತ್ತು ಚಿಲ್ಲಾ (ನೊಯಿಡಾ ಗೇಟ್)ಗಳಲ್ಲಿ ಟ್ರ್ಯಾಲಿ ಮತ್ತ ಟೆಂಟ್‌ ಎರಡರ ಬಳಕೆಯು ಹೆಚ್ಚಾಗಿದೆ.

ಪ್ರತಿಭಟನಾ ಸ್ಥಳಗಳಲ್ಲಿ ರೈತರು ಮತ್ತು ಪ್ರತಿಭಟನಾಕಾರರ ಬೆಂಬಲಿಗರ ಮನೆಗಳಾಗಿ ಮಾರ್ಪಾಡಾಗಿರುವ ಟ್ರ್ಯಾಲಿಗಳ ಒಳ ವಿನ್ಯಾಸವನ್ನು ತಮಗೆ ಅನುಕೂಲವಾಗುವಂತೆ ಬದಲಿಸಿಕೊಂಡಿದ್ದಾರೆ. ಚಳಿ, ಅತಿಯಾದ ಗಾಳಿ ಮತ್ತು ಮಳೆಗೆ ಜಗ್ಗದಂತಹ ಟ್ರ್ಯಾಲಿಗಳ ಮರುನಿರ್ಮಾಣ ಕೂಡ ಕೊಂಚ ಕಷ್ಟದ ಕೆಲಸವೆ. ಆದರೂ ಉತ್ತಮ ಟ್ರ್ಯಾಲಿಗಳನ್ನು ರೈತರು ಕಟ್ಟಿದ್ದಾರೆ.

ಇದನ್ನೂ ಓದಿ: ನೀವು ಯಾರ ಪರ?: ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ರೈತರು

ಟ್ರ್ಯಾಲಿಗಳಲ್ಲಿ ವಾಸಿಸುವವರಿಗೆ ಬೇಕಾದ ವಿದ್ಯುತ್‌ ದೀಪಗಳ ವ್ಯವಸ್ಥೆ, ಚಾರ್ಜಿಂಗ್‌ ವ್ಯವಸ್ಥೆ, ಮಲಗಲು ಸ್ಥಳ, ಹೊದಿಕೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಹೊರಗಡೆಯಿಂದ ಗಾಳಿ ಒಳಗೆ ಹೋಗದಂತೆ ತಡೆಯಲು ದಪ್ಪದ ಟಾರ್ಪಾಲ್‌ಗಳನ್ನು ಜೋಡಿಸಿದ್ದಾರೆ. ಇನ್ನು ಟ್ರ್ಯಾಲಿ ಹತ್ತಲು ಮತ್ತು ಇಳಿಯಲು ಉಪಯೋಗವಾಗುವಂತೆ ಮರದ ಮೆಟ್ಟಿಲುಗಳನ್ನು ಮಾಡಿ ಅದನ್ನು ಟ್ರ್ಯಾಕ್ಟರ್‌ಗಳಿಗೆ ಜೋಡಿಸಲಾಗಿದೆ.

ಕೆಲವು ಟ್ರ್ಯಾಲಿಗಳಲ್ಲಿ ಹಾಸಿಗೆ ಹಾಸುವ ಜಾಗದಲ್ಲಿ ಮೊದಲು ಭತ್ತದ ಹುಲ್ಲು ಹಾಕಲಾಗಿದೆ. ಹುಲ್ಲಿನ ಮೇಲೆ ಟಾರ್ಪಾಲ್‌ ಅದರ ಮೇಲೆ ಹಾಸಿಗೆ ನಂತರ ಅದರ ಮೇಲೆ ಬೆಡ್‌ಶೀಟ್‌ಗಳನ್ನು ಹಾಕಲಾಗುತ್ತದೆ. “ಇದು ಬೆಚ್ಚಗಿನ ಅನುಭವ ನೀಡುತ್ತದೆ, ಹಾಗಾಗಿ ಹಾಸಿದ್ದೇವೆ” ಎಂದು ರೈತರು ಹೇಳುತ್ತಾರೆ. ಮಕ್ಕಳು, ಮಹಿಳೆಯರ ಸುರಕ್ಷತೆಗೂ ಹೆಚ್ಚು ಆದ್ಯತೆ ನೀಡಬೇಕಾಗಿರುವುದರಿಂದ ಟ್ರ್ಯಾಲಿಗಳನ್ನು ಮತ್ತಷ್ಟು ಗಟ್ಟಿಯಾಗಿ ನಿರ್ಮಿಸಿರುತ್ತಾರೆ.

ಟ್ರ್ಯಾಲಿಗಳನ್ನು ನಿರ್ಮಿಸಿರುವ ಟ್ರ್ಯಾಕ್ಟರ್‌ಗಳು ನಮ್ಮ ಭಾಗದ ಟ್ರ್ಯಾಕ್ಟರ್‌ಗಳ ರೀತಿಯಲ್ಲಿ ಟೊಳ್ಳಾಗಿರದೆ, ಗಟ್ಟಿ ಮುಟ್ಟಾಗಿ ಇರುತ್ತವೆ. ಲಾರಿಗಳ ರೀತಿಯಲ್ಲಿ ಇಲ್ಲಿನ ಟ್ರ್ಯಾಕ್ಟರ್‌ಗಳಿವೆ. ತಮ್ಮ ಮನೆಯ ಸದಸ್ಯನಂತೆ ಟ್ರ್ಯಾಕ್ಟರ್‌ಗಳನ್ನು ನೋಡಿಕೊಳ್ಳುವುದಾಗಿ ಇಲ್ಲಿನ ಜನ ಹೇಳುತ್ತಾರೆ. ದೇವರಿಗೆ ಪೂಜೆ ಮಾಡುವಂತೆ ದಿನ ಟ್ರ್ಯಾಕ್ಟರ್‌ಗಳಿಗೂ ಇಲ್ಲಿನ ರೈತರು ಪೂಜೆ ಸಲ್ಲಿಸುತ್ತಾರೆ.

ಇದನ್ನೂ ಓದಿ: ಭಕ್ತಕುಳಾವಿಗಳ ಬೆಂಬಲ ಬೆಲೆ: ರಾಜರಾಂ ತಲ್ಲೂರು ಬರಹ

ಹೊಲದಲ್ಲಿ ನಮ್ಮ ಕೃಷಿ ಜೀವನದ ಪ್ರಮುಖ ಅಂಗವಾಗಿದ್ದ ಟ್ರ್ಯಾಕ್ಟರ್‌ಗಳು, ಈ ನಮ್ಮ ಐತಿಹಾಸಿಕ ಹೋರಾಟದಲ್ಲಿಯೂ ನಮ್ಮ ಕೈ ಬಿಟ್ಟಿಲ್ಲ. ಇಲ್ಲೂ ನಮ್ಮ ಜೊತೆಗೆ ಪ್ರತಿಭಟನೆಯಲ್ಲಿ ನಮ್ಮ ಮನೆಗಳಾಗಿ ತಮ್ಮ ಕಾರ್ಯನಿವರ್ಹಿಸುತ್ತಿವೆ ಎಂದು ರೈತರು ಮನದುಂಬಿ ಹೇಳುತ್ತಾರೆ.

ಜನವರಿ 7 ರ ಟ್ರ್ಯಾಕ್ಟರ್‌ ಮಾರ್ಚ್‌ ಪೂವಾಭ್ಯಾಸದಲ್ಲೂ ಸಾಥ್‌ ನೀಡಿರುವ ಇವುಗಳು ಮುಂದೆ ಜನವರಿ 26 ರ ಗಣರಾಜ್ಯೋತ್ಸವದಂದು ನಡೆಯಲಿರುವ ಐತಿಹಾಸಿಕ ಟ್ರ್ಯಾಕ್ಟರ್‌ ರ್‍ಯಾಲಿಯಲ್ಲೂ ನಮ್ಮ ಶಕ್ತಿ ಪ್ರದರ್ಶನಕ್ಕೆ ಸಾಥ್‌ ನೀಡಲಿವೆ. ಪಂಜಾಬ್‌, ಹರಿಯಾಣ, ರಾಜಸ್ಥಾನ, ಕೇರಳದಿಂದಲೂ ಈಗಾಗಲೇ ಸಾವಿರಾರು ಟ್ರ್ಯಾಕ್ಟರ್‌ಗಳು ದೆಹಲಿಯತ್ತ ಬರುತ್ತಿವೆ. ಇವು ನಮ್ಮ ಟ್ರ್ಯಾಕ್ಟರ್‌, ಟ್ರ್ಯಾಲಿ ಮಾತ್ರವಲ್ಲ ನಮ್ಮ ಜೀವನದ ಸಾಥಿ (ಗೆಳೆಯ) ಎಂದು ರೈತರು ಹೆಮ್ಮೆಯಿಂದ ಹೇಳುತ್ತಾರೆ.

ಇದನ್ನೂ ಓದಿ: ಪ್ರತಿಭಟನಾ ಸ್ಥಳದಲ್ಲೆ ಲೋಹ್ರಿ (ಸಂಕ್ರಾಂತಿ) ಆಚರಿಸಿ, ಕೇಂದ್ರಕ್ಕೆ ತಲೆ ಬಾಗುವುದಿಲ್ಲವೆಂದ ರೈತರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. As the Supreme court of India stayed the three agriculture laws and constituted a committee to resolve the issue, the so called leaders of farmers should a obey the supreme order

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...