Homeಚಳವಳಿಪ್ರತಿಭಟನಾ ಸ್ಥಳದಲ್ಲೆ ಲೋಹ್ರಿ (ಸಂಕ್ರಾಂತಿ) ಆಚರಿಸಿ, ಕೇಂದ್ರಕ್ಕೆ ತಲೆ ಬಾಗುವುದಿಲ್ಲವೆಂದ ರೈತರು

ಪ್ರತಿಭಟನಾ ಸ್ಥಳದಲ್ಲೆ ಲೋಹ್ರಿ (ಸಂಕ್ರಾಂತಿ) ಆಚರಿಸಿ, ಕೇಂದ್ರಕ್ಕೆ ತಲೆ ಬಾಗುವುದಿಲ್ಲವೆಂದ ರೈತರು

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಮುದಾಯವು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಜಾಬಿಗಳ ಬಹುಮುಖ್ಯ ಹಬ್ಬಗಳಲ್ಲಿ ಒಂದಾಗಿರುವ ’ಲೋಹ್ರಿ’ಯನ್ನು ಪ್ರತಿಭಟನಾ ಸ್ಥಳದಲ್ಲೇ ಆಚರಿಸಿದ್ದಾರೆ. ಈ ಮೂಲಕ ಯಾವುದೆ ಕಾರಣಕ್ಕೂ ತಮ್ಮ ಬೇಡಿಕೆ ಈಡೇರದೆ ಮನೆಗೆ ತೆರಳುವುದಿಲ್ಲ ಎಂಬ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ.

ಲೋಹ್ರಿ ಹಬ್ಬವು ಪಂಜಾಬಿಗಳ ಸಂಕ್ರಾಂತಿ ಹಬ್ಬವಾಗಿದೆ. ಇದು ಚಳಿಗಾಲದ ಸಮಯದಲ್ಲಿ ಬರುತ್ತದೆ. ಲೋಹ್ರಿ ಹಬ್ಬದ ಮಹತ್ವ ಮತ್ತು ದಂತಕಥೆಗಳು ಪಂಜಾಬ್ ಪ್ರಾಂತ್ಯದಾದ್ಯಂತ ಪ್ರಚಲಿತದಲ್ಲಿದೆ. ಹಬ್ಬದ ದಿನದಂದು ಪಿರಮಿಡ್ ರೀತಿಯಲ್ಲಿ ಕಟ್ಟಿಗೆಗಳನ್ನು ಒಟ್ಟು ಮಾಡಿ, ಅದಕ್ಕೆ ಬೆಂಕಿ ಹಚ್ಚಿ ಅದರ ಸುತ್ತ ಹಾಡುತ್ತಾ ಭಾಂಗ್ರಾ ಮತ್ತು ಗಿಡ್ಡಾ ಶೈಲಿಯ ನೃತ್ಯ ಮಾಡುತ್ತಾರೆ.

ಇದನ್ನೂ ಓದಿ: ರೈತರ ಹೋರಾಟದಲ್ಲಿ ರೈತರೊಂದಿಗೆ ನಿಂತ ವಾಷಿಂಗ್‌ ಮಷಿನ್‌ಗಳು..!

ಈ ಬಾರಿ ಪಂಜಾಬ್‌ ಪ್ರಾಂತ್ಯದ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರದೊಂದಿಗೆ ಇದುವರೆಗಿನ ಮಾತುಕತೆಗಳು ವಿಫಲವಾಗಿದೆ. ಕೇಂದ್ರ ಸರ್ಕಾರ ತನ್ನ ಪಟ್ಟನ್ನು ಬಿಡದೆ ಎಲ್ಲಾ ರೀತಿಯಲ್ಲಿ ಆಂದೋಲನವನ್ನು ಧಮನಿಸಲು ನೋಡುತ್ತಿದೆ. ಇದರಿಂದ ಆಕ್ರೋಶಗೊಂಡಿರುವ ರೈತರು ಜನವರಿ 26 ರಂದು ದೆಹಲಿಗೆ ಟ್ರಾಕ್ಟರ್‌ ರ್‍ಯಾಲಿಯನ್ನು ಆಯೋಜಿಸಿದ್ದಾರೆ. ಕೇಂದ್ರ ಸರ್ಕಾರ ಇದರಿಂದ ಬೆಚ್ಚಿ ಬಿದ್ದು ರ್‍ಯಾಲಿಯನ್ನು ತಡೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ಬುಧವಾರ ಪ್ರತಿಭಟನಾ ನಿರತ ರೈತರು ಲೋಹ್ರಿ ಹಬ್ಬವನ್ನು ಪ್ರತಿಭಟನಾ ಸ್ಥಳದಲ್ಲೇ ಆಚರಿಸಿದರು. ಕೇಂದ್ರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ಪ್ರತಿಗಳನ್ನು ಲೋಹ್ರಿ ಹಬ್ಬದಂದು ಹಚ್ಚುವ ಬೆಂಕಿಗೆ ಆಹುತಿ ಮಾಡುತ್ತಾ ಕೇಂದ್ರದ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸಿಖ್‌ ಧರ್ಮದ ಮತ್ತೊಂದು ಹಬ್ಬವಾದ “ಚೊಟೆ ಸಾಹಿಬ್‌ಝಾದೇ ಹುತಾತ್ಮ ದಿನ”ವನ್ನು ಕೂಡಾ ರಸ್ತೆಗಳಲ್ಲೆ ಆಚರಿಸಿದ್ದರು. ಇದು ಡಿಸೆಂಬರ್‌ 21 ರಿಂದ 26 ರವರೆಗೆ ನಡೆದಿತ್ತು.

ಇದನ್ನೂ ಓದಿ: ನೀವು ಯಾರ ಪರ?: ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ರೈತರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...