ರೈತರ ಹೋರಾಟದಲ್ಲಿ ರೈತರೊಂದಿಗೆ ನಿಂತ ವಾಷಿಂಗ್‌ ಮಷಿನ್‌ಗಳು..!

ದೇಶದ ಐತಿಹಾಸಿಕ ಹೋರಾಟದಲ್ಲಿ ನಿರತರಾಗಿರುವ ರೈತರ ಜೊತೆಗೆ ಇಡೀ ದೇಶವೇ ನಿಂತಿದೆ. ಇಂತಹ ಒಂದು ಹೋರಾಟದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದಾರೆ. ಕಳೆದ 50 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಠಿಕಾಣಿ ಹೂಡಿರುವ ರೈತರ ಬಟ್ಟೆ ಸ್ವಚ್ಛಗೊಳಿಸಲು ಸುಮಾರು 500ಕ್ಕೂ ಹೆಚ್ಚು ವಾಷಿಂಗ್‌ ಮಷಿನ್‌ಗಳು ಕಾರ್ಯನಿರ್ವಹಿಸುತ್ತಿವೆ.

ಪ್ರತಿಭಟನಾ ಸ್ಥಳದಲ್ಲಿ ಖಾಲ್ಸಾ ಏಡ್‌ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ರೈತರು ಮತ್ತು ಬೆಂಬಲಿಗರು ಇಲ್ಲಿ ವಾಷಿಂಗ್‌ ಮಷಿನ್‌ಗಳನ್ನು ಇಟ್ಟಿದ್ದಾರೆ. ತಮ್ಮ ಕೈಯಲ್ಲಿ ಆದಷ್ಟು, ತಮ್ಮ ಶಕ್ತಿಗೆ ಮೀರಿದಷ್ಟು ಮಷಿನ್‌ಗಳನ್ನು ಇಲ್ಲಿಡುವ ಪ್ರಯತ್ನ ಮಾಡಿದ್ದಾರೆ.

‘ಖಾಲ್ಸಾ ಏಡ್’ ಸಂಸ್ಥೆ‌ ಟಿಕ್ರಿ ಗಡಿಯೊಂದರಲ್ಲೇ 10 ಮಷಿನ್‌ಗಳನ್ನು ಇಟ್ಟಿದೆ. ಬೇರೆ ಬೇರೆ ಗಡಿಗಳಲ್ಲಿ ಕನಿಷ್ಠ ಆರು ವಾಷಿಂಗ್‌ ಮಷಿನ್‌ಗಳನ್ನು ಇದೊಂದೇ ಸಂಸ್ಥೆ ನೀಡಿದೆ. ಇದೆ ರೀತಿ ಪಂಜಾಬ್‌ನಿಂದ ಬಂದ ಇಬ್ಬರು ಯುವಕರ ತಂಡ ಸಿಂಘು ಗಡಿಯ ಆರಂಭದಲ್ಲೇ ಎರಡು ಮಷಿನ್‌ಗಳ ಮೂಲಕ ರೈತರ ಬಟ್ಟೆ ಒಗೆದು, ಒಣಗಿಸಿ ಕೊಡುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಭಕ್ತಕುಳಾವಿಗಳ ಬೆಂಬಲ ಬೆಲೆ: ರಾಜರಾಂ ತಲ್ಲೂರು ಬರಹ

ಎಲ್ಲಾ ‘ಗುರು ಕಾ ಲಂಗರ್‌’ಗಳಲ್ಲಿ ಎರಡೆರಡು ವಾಷಿಂಗ್‌ ಮಷಿನ್‌ಗಳನ್ನು ಇಡಲಾಗಿದೆ. ಈ ಮೂಲಕ ಲಂಗರ್‌ ಸೇವೆ ಮತ್ತು ಬಟ್ಟೆ ತೊಳೆದುಕೊಡುವ ಸೇವೆಯನ್ನು ಮಾಡಲಾಗುತ್ತಿದೆ.

ಪಂಜಾಬ್‌ನ ಲೂದಿಯಾನ ಮೂಲದ ಪ್ರಿನ್ಸ್‌ ಪಾಲ್‌ ಸಿಂಗ್‌ ಎಂಬುವರು ನಾಲ್ಕು ವಾಷಿಂಗ್‌ ಮಷಿನ್‌ಗಳನ್ನು ಸಿಂಘು ಗಡಿಯಲ್ಲಿ ಇಡುವ ಮೂಲಕ ರೈತರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿ ಚಲೋಗೆ ಸಾಥ್‌ ನೀಡಲು ಬಂದಿದ್ದ ಪ್ರಿನ್ಸ್‌ ಪಾಲ್‌ ಸಿಂಗ್‌ ಕೆಲ ದಿನಗಳು ಇಲ್ಲಿಯೇ ಟೆಂಟ್‌ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ವಾಷಿಂಗ್‌ ಮಷಿನ್‌ಗಳನ್ನು ಇಟ್ಟಿರುವ ಹಿಂದಿನ ಕಥೆಯನ್ನು ನಾನುಗೌರಿ.ಕಾಂ ಜೊತೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜನವರಿ 26 ಕ್ಕೆ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ: ಬೆದರಿ ಸುಪ್ರೀಂ ಕೋರ್ಟ್‌ ಮೊರೆ ಹೋದ…

“ನಾವು ಇಲ್ಲಿಂದ 350 ಕಿಲೊಮೀಟರ್ ದೂರದಲ್ಲಿರುವ ಲೂದಿಯಾನದಿಂದ ಬಂದಿದ್ದೇವೆ. ಮೊದಲು ಇಲ್ಲಿಗೆ ಬಂದು ಟೆಂಟ್‌ ಹಾಕಿಕೊಂಡಿದ್ದ ಸಂದರ್ಭದಲ್ಲಿ ಬಟ್ಟೆ ಕೊಳೆಯಾಗಿತ್ತು. ಅವುಗಳನ್ನು ವಾಶ್‌ ಮಾಡಿಸಲು 350 ಕಿಲೋಮೀಟರ್‌ ದೂರ ಮತ್ತೆ ಪ್ರಯಾಣಿಸಬೇಕಾಯಿತು. ಸ್ವತಃ ಕಷ್ಟಕ್ಕೆ ಒಳಗಾದ ಮೇಲೆ ನನಗೆ ರೈತರ ಕಷ್ಟ ಅನುಭವಕ್ಕೆ ಬಂತು. ನಾನು ಮತ್ತೆ ಊರಿಗೆ ಹೋಗಿ ಅಲ್ಲಿಂದ ನಾಲ್ಕು ವಾಷಿಂಗ್‌ ಮಷಿನ್‌ಗಳನ್ನು ಕೊಂಡು ತಂದು ಇಲ್ಲಿ ಇಟ್ಟಿದ್ದೇನೆ” ಎನ್ನುತ್ತಾರೆ.

“ಮೊದಲಿಗೆ ನಾನೊಬ್ಬನೇ ಇದ್ದೆ. ಈಗ ಇಲ್ಲಿನ ಸ್ಥಳೀಯ ಪಂಕ್ಚರ್‌ ಅಂಗಡಿಯಲ್ಲಿ ಕೆಲಸ ಮಾಡುವ ಯುವಕರು ಸಹಾಯಕ್ಕೆ ಬಂದಿದ್ದಾರೆ. ಜೊತೆಗೆ ಪ್ರತಿಭಟನೆಯಲ್ಲಿ ಇರುವ ಯುವಕರು ಸಾಥ್‌ ನೀಡುತ್ತಿದ್ದಾರೆ. ಪಕ್ಕದಲ್ಲಿರುವ ಮನೆ ಮಾಲೀಕ ಬಟ್ಟೆ ಒಗೆಯಲು ಬೇಕಾದ ನೀರು ಮತ್ತು ವಿದ್ಯುತ್‌ ಶಕ್ತಿ ವ್ಯವಸ್ಥೆಯನ್ನು ಉಚಿತವಾಗಿ ನೀಡಿದ್ದಾರೆ” ಎಂದು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕೃತಜ್ಞತೆಯಿಲ್ಲದ ಕಾರಣಕ್ಕೆ ಯಡಿಯೂರಪ್ಪ ಹೆಚ್‌‌.ವಿಶ್ವನಾಥ್‌‌ರನ್ನು ಮಂತ್ರಿ ಮಾಡಿಲ್ಲ: ಸಿದ್ದರಾಮಯ್ಯ

“ನಮ್ಮಗಳ ಜೊತೆಗೆ ಇಲ್ಲಿ ಹಲವು ಸಂಘಟನೆಗಳು ವಾಷಿಂಗ್‌ ಮಷಿನ್‌ ಹಾಕಿಕೊಂಡಿವೆ. ಅವರುಗಳನ್ನು ಹೊರತುಪಡಿಸಿ ನಮಗೆ ಪ್ರತಿದಿನ ಕನಿಷ್ಟ 300 ಜನ ರೈತರು ಬಟ್ಟೆ ನೀಡುತ್ತಾರೆ. ಬಟ್ಟೆ ವಾಶ್‌ ಮಾಡಿಕೊಡಲು 20 ನಿಮಿಷ ಸಮಯ ಕೇಳುತ್ತೇವೆ. ನಂತರ ಬಂದು ಕಲೆಕ್ಟ್‌ ಮಾಡಿಕೊಳ್ಳಲು ತಿಳಿಸಲಾಗುತ್ತದೆ. ಇದೊಂದು ಸೇವೆ ಎಂದು ನಾವು ಪರಿಗಣಿಸಿದ್ದೇವೆ. ನಮ್ಮ ರೈತರ ಕಷ್ಟಕ್ಕೆ ನಾವು ನಿಲ್ಲಬೇಕು. ಇದು ದೇಶದ ಎಲ್ಲಾ ರೈತರ ಸಮಸ್ಯೆ. ಕೇಂದ್ರ ಸರ್ಕಾರ ಮೂರು ಕರಾಳ ಕಾನೂನುಗಳನ್ನು ವಾಪಸ್‌ ಪಡೆಯುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ನಾನು ಇಲ್ಲಿ ಸೇವೆ ಸಲ್ಲಿಸುತ್ತಲೇ ಇರುತ್ತೇನೆ” ಎಂದಿದ್ದಾರೆ ಪ್ರಿನ್ಸ್‌ ಪಾಲ್‌ ಸಿಂಗ್.

ಇದೇ ರೀತಿ ಹಲವು ವಾಷಿಂಗ್‌ ಮಷಿನ್ ಟೆಂಟ್‌ಗಳನ್ನು ಹಾಕಿರುವ ಜನ ಕೂಡ ಪ್ರತಿಭಟನೆ ಅಂತ್ಯವಾಗುವವರೆಗೂ ನಾವು ಸೇವೆ ಸಲ್ಲಿಸುತ್ತೇವೆ ಎನ್ನುತ್ತಾರೆ.

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ


ಇದನ್ನೂ ಓದಿ: ಸಂಪುಟ ವಿಸ್ತರಣೆ-ಸ್ಫೋಟಗೊಂಡ ಭಿನ್ನಮತ: ನಮ್ಮ ಭಿಕ್ಷೆಯಿಂದಲೇ ಯಡಿಯೂರಪ್ಪ ಸಿಎಂ ಆಗಿದ್ದು..!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here