ಬಾಲಿವುಡ್ ನಟ ಅಮೀರ್ ಖಾನ್ ಮತ್ತು ನಿರ್ಮಾಪಕಿ ಕಿರಣ್ ರಾವ್ ತಾವಿಬ್ಬರು ವಿಚ್ಛೇದಿತರಾಗಿದ್ದೇವೆ ಎಂದು ಘೋಷಿಸಿದ್ದಾರೆ. ವಿಚ್ಛೇದನೆಗೊಂಡರೂ ಮಗ ಆಜಾದ್ ರಾವ್ ಖಾನ್‌ಗೆ ಇಬ್ಬರೂ ಪೋಷಕರಾಗಿ ಮುಂದುವರೆಯುತ್ತೇವೆ ಎಂದು ಹೇಳಿದ್ದಾರೆ. ಅವರಿಬ್ಬರೂ ಮದುವೆಯಾಗಿ 15 ವರ್ಷಗಳಾಗಿದೆ. ಶನಿವಾರ ಜಂಟಿ ಹೇಳಿಕೆ ನೀಡಿದ ಅವರು, “ತಮ್ಮ ಮಗ ಆಜಾದ್‌ಗೆ ಪೋಷಕರಾಗಿ ಮುಂದುವರೆಯುತ್ತೇವೆ” ಎಂದು ತಿಳಿಸಿದ್ದಾರೆ.
ಅಮೀರ್ ಮತ್ತು ಕಿರಣ್ ನೀಡಿದ ಜಂಟಿ ಹೇಳಿಕೆಯಲ್ಲಿ, “ಈ 15 ಸುಂದರ ವರ್ಷಗಳಲ್ಲಿ ನಾವು ಒಟ್ಟಿಗೆ ಜೀವಮಾನದ ಅನುಭವಗಳು, ಸಂತೋಷ ಮತ್ತು ನಗುವನ್ನು ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ಈಗ ನಾವು ನಮ್ಮ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ. ನಮ್ಮ ಜೀವನ ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಆದರೆ ಪರಸ್ಪರ ಪೋಷಕರಾಗಿ ಮತ್ತು ಕುಟುಂಬವಾಗಿ ಇರುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಹುಜನ ಭಾರತ: ಆದಿವಾಸಿಗಳ ನರಮೇಧ; ನ್ಯಾಯವಿನ್ನೂ ಬಿಸಿಲುಗುದುರೆ!
“ನಾವು ಸ್ವಲ್ಪ ಸಮಯದ ಹಿಂದೆಯೆ ವಿಚ್ಛೇದನ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೆವು. ನಾವು ಮಾಡಿಕೊಂಡಿರುವ ವ್ಯವಸ್ಥೆ ಪ್ರಕಾರ ನಾವಿಬ್ಬರೂ ಪ್ರತ್ಯೇಕವಾಗಿ ವಾಸಿಸಿದರೂ, ವಿಸ್ತೃತ ಕುಟುಂಬದ ರೀತಿಯಲ್ಲಿ ನಮ್ಮ ಜೀವನ ಹಂಚಿಕೊಳ್ಳಲಿದ್ದೇವೆ. ನಮ್ಮ ಮಗ ಆಜಾದ್‌ಗೆ ನಾವಿಬ್ಬರೂ ಪೋಷಕರಾಗಿ ಉಳಿಯುತ್ತೇವೆ. ಅವನನ್ನು ನಾವು ಒಟ್ಟಿಗೆ ಪೋಷಿಸುತ್ತೇವೆ ಮತ್ತು ಬೆಳೆಸುತ್ತೇವೆ. ಚಲನಚಿತ್ರಗಳು, ಪಾನಿ ಫೌಂಡೇಶನ್ ಮತ್ತು ಇತರ ಯೋಜನೆಗಳ ಸಹಯೋಗಿಗಳಾಗಿ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಅವರ ಜಂಟಿ ಹೇಳಿಕೆ ನೀಡಿದೆ.
“ನಮ್ಮ ಸಂಬಂಧದಲ್ಲಿ ಆಗಿರುವ ಈ ಪರಿವರ್ತನೆಯನ್ನು ಅರಿತು ನಮಗೆ ನಿರಂತರವಾಗಿ ಬೆಂಬಲ ನೀಡಿದ ನಮ್ಮ ಕುಟುಂಬವರ್ಗ ಮತ್ತು ಸ್ನೇಹಿತರಿಗೆ ಧನ್ಯವಾದಗಳು. ಇವರ ಬೆಂಬಲ ಇಲ್ಲದಿದ್ದರೆ ನಮ್ಮ ಈ ನಿರ್ಧಾರ ಬಹಳ ಕಷ್ಟಕರವಾಗುತ್ತಿತ್ತು. ನಮ್ಮ ಹಿತೈಷಿಗಳಿಂದ ನಾವು ಶುಭ ಹಾರೈಕೆ ಮತ್ತು ಆಶೀರ್ವಾದಗಳನ್ನ ನಿರೀಕ್ಷಿಸುತ್ತೇವೆ. ಈ ವಿಚ್ಛೇದನವನ್ನು ನೀವು ಅಂತ್ಯವಾಗಿ ನೋಡದೆ, ಹೊಸ ಪ್ರಯಾಣದ ಆರಂಭವಾಗಿ ನೋಡುತ್ತೀರಿ ಎಂದು ಭಾವಿಸುತ್ತೇವೆ” ಎಂದು ಅವರು ವಿನಂತಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ: ಹೊತ್ತಿ ಉರಿದ ದೈತ್ಯ ಹಡಗು – ಸಮುದ್ರ ದಡಕ್ಕೆ ತೇಲಿಬರುತ್ತಿವೆ ಜಲಚರಗಳ ಮೃತದೇಹ
ಕಿರಣ್ ರಾವ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ‘ಲಗಾನ್’ ಚಿತ್ರದ ಸೆಟ್‌ನಲ್ಲಿ ಭೇಟಿಯಾದ ಅವರಿಬ್ಬರು, ಡಿಸೆಂಬರ್ 28, 2005 ರಂದು ವಿವಾಹಿತರಾದರು. ಬಾಡಿಗೆ ತಾಯಿಯ ಮೂಲಕ ಅಜಾದ್ ಅವರನ್ನು ಪಡೆದಿದ್ದರು.
ಅಮೀರ್ ಖಾನ್ ಈ ಹಿಂದೆ ರೀನಾ ದತ್ತಾ ಅವರನ್ನು ಮದುವೆಯಾಗಿದ್ದರು. ಆದರೆ 2002 ರಲ್ಲಿ, ಮದುವೆಯಾಗಿ 16 ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು. ರೀನಾ ಅವರಿಂದ ಅಮೀರ್‌ಗೆ ಐರಾ ಮತ್ತು ಜುನೈದ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಅಮೀರ್ ಖಾನ್ ತಮ್ಮ ‘ಲಾಲ್ ಸಿಂಗ್ ಚಾಧಾ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದು ಟಾಮ್ ಹ್ಯಾಂಕ್ಸ್ ಅಭಿನಯದ ‘ಫಾರೆಸ್ಟ್ ಗಂಪ್’ ಚಿತ್ರದ ಅಧಿಕೃತ ಹಿಂದಿ ರಿಮೇಕ್ ಆಗಿದೆ. ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಮುಖ್ಯ ಪಾತ್ರದಲ್ಲಿದ್ದಾರೆ.
ಇದನ್ನೂ ಓದಿ: ಅಕ್ಕಯ್ ಸಂದರ್ಶನ; ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ; ಇರುವುದು ಮನುಷ್ಯರು ಮತ್ತು ವೈವಿಧ್ಯತೆ
ಇದನ್ನೂ ಓದಿ: ಸಂಪಾದಕೀಯ; ಸಾಂವಿಧಾನಿಕ ನೈತಿಕತೆಯಲ್ಲಿ ಕಮಾನು ಕಟ್ಟಬೇಕಿದೆ ಬಣ್ಣಗಳು


