Homeಅಂಕಣಗಳುಗಾಂಧಿ ಕಥನಕ್ಕೂ ಪ್ರಶಸ್ತಿ

ಗಾಂಧಿ ಕಥನಕ್ಕೂ ಪ್ರಶಸ್ತಿ

- Advertisement -
- Advertisement -

ಗಾಂಧೀಜಿಯನ್ನು ಕೊಂದವರನ್ನು ವೇದಿಕೆಯ ಮೇಲೆ ಸಮರ್ಥಿಸಿಕೊಳ್ಳುವವರನ್ನು ಮಟ್ಟಹಾಕದ, ಅಂತಹವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿರುವವರು ದೇಶ ಆಳುತ್ತಿರುವ ಸಮಯದಲ್ಲಿ ಗಾಂಧೀಜಿ ಕುರಿತ ಪುಸ್ತಕ ಬರೆದವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟಿರುವುದು ಶ್ಯಾನೆ ಸಂಶಯಗಳಿಗೆ ಎಡೆಮಾಡಿಕೊಟ್ಟಿರುವುದಲ್ಲದೆ, ಸ್ವತಹ ಬರೆದವರಿಗೇ ಅಚ್ಚರಿ ಮೂಡಿಸಿದೆಯಲ್ಲಾ! ಯಾಕೆಂದರೆ, ಈ ಬಿಜೆಪಿ ಸರಕಾರ ಏನೇ ಮಾಡಿದರು ಅಲ್ಲೊಂದು ಸಂಚು ಅಂತರ್ಗತವಾಗಿ ಕೆಲಸ ಮಾಡಿರುತ್ತದೆ. ಇರಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಒಂದು ಸ್ವತಂತ್ರ ಸಂಸ್ಥೆ ಎಂಬ ಸಮರ್ಥನೆ ಇದ್ದೇ ಇರುತ್ತದೆ. ಆದರೆ ಇಂದು ದೇಶದ ಸ್ವತಂತ್ರ ಸಂಸ್ಥೆಗಳು ಹಿಡಿದಿರುವ ದಾರಿ ನೋಡಿದರೆ ಸರ್ಕಾರದ ಕೈವಾಡಗಳ ಬಗ್ಗೆ ಅನುಮಾನ ಮೂಡದೇ ಇರದು.

ಇಂತಹ ಅನುಮಾನದಲ್ಲಿಯೇ ಯೋಚಿಸುವುದಾದರೆ ಈ ಸರ್ಕಾರಕ್ಕೆ ಮುಂದೆ ಗಾಂಧೀಜಿಯೂ ಬೇಕಾಗಬಹುದು. (ಸದ್ಯಕ್ಕೆ ವಿದೇಶಗಳಲ್ಲಿ ಹಾರ ಹಾಕುವುದಕ್ಕೆ ಮಾತ್ರ ಸೀಮಿತವಾಗಿದೆ ಗಾಂಧಿ ಪ್ರೇಮ!). ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ ಕಥನ ಬರೆದವರ ಈವರೆಗಿನ ಬದುಕು ಮತ್ತು ಬರವಣಿಗೆಯನ್ನೂ ಪ್ರಶಸ್ತಿ ಕೊಟ್ಟವರು ಪರಿಗಣಿಸಿರಬಹುದು. ಅದರಲ್ಲಿ ಪ್ರಧಾನವಾಗಿ, ಬೋಫೋರ್ಸು ಹಗರಣದಷ್ಟೇ ಗಂಭೀರವಾದ ರಫೇಲ್ ಹಗರಣದ ಬಗ್ಗೆ ಗಾಂಧಿ ಕಥನದ ಲೇಖಕರು ಬರೆಯುತ್ತಾ ಈ ರಫೇಲ್ ಒಪ್ಪಂದವನ್ನು ಪ್ರಧಾನಿಯವರು ತ್ವರಿತವಾಗಿ ಮುಗಿಸಿದ್ದಾರೆ, ಇದರಲ್ಲಿ ಅವರ ಸ್ವಂತ ಹಿತಾಸಕ್ತಿ ಏನೂ ಇಲ್ಲ ಎಂದು ಬರೆದಾಗ, ಕ್ಯಾರವಾನ್ ಪತ್ರಿಕೆ ಮೂವತ್ತು ಪೇಜಿನಲ್ಲಿ ರಫೇಲ್ ಹಗರಣದ ವರದಿ ಪ್ರಕಟಿಸಿತ್ತು. ಮುಂದೆ ಇದೇ ಲೇಖಕರು ಬದಲಾಗುತ್ತಿರುವ ಆರೆಸ್ಸೆಸ್ ಎಂದು ವಕಾಲತ್ತು ವಹಿಸಿದರು. ಅದಾದ ಮೇಲೆ ತಮ್ಮ ಮನೆಯ ಮುಂದೆಯೇ ಮಹೇಂದ್ರ ಟಿಕಾಯತ್ ರೈತಚಳವಳಿ ಸಭೆ ಮಾಡಿದಾಗ, ಲೇಖಕರು ತಮ್ಮ ಅನಿಸಿಕೆ ಬಿಟ್ಟು, ರೈತನಾಯಕರಿಗೇ ಈ ಬಗ್ಗೆ ಬರೆಯಿರಿ ಎಂದು ಅಹ್ವಾನ ಕೊಟ್ಟರು. ಸದ್ಯದ ಎಡ ಬಲದ ಚರ್ಚೆಯಲ್ಲಿ ಗಾಂಧಿ ಕಥನಕಾರರು ಬಲಗಡೆಯಿದ್ದಾರೆಂದೂ, ಎಡ ಮತ್ತು ಬಲದ ನಡುವೆ ಹೃದಯವಿದ್ದು ಅದು ಎಡಭಾಗದಲ್ಲಿದೆ ಎಂದೂ, ಗಾಂಧಿ ಕಥನಕಾರರನ್ನು ಕಂಡರಾಗದವರ ಹೇಳಿಕೆ ಕೊಡುತ್ತಿದ್ದಾರೆಲ್ಲಾ ಥೂತ್ತೇರಿ.

ಗಾಂಧಿ ಎಂಬ ಮುಕುಟಮಣಿಯನ್ನು ಸ್ಪರ್ಶಿಸಿದವರಿಗೆಲ್ಲಾ ಒಳ್ಳೆಯದಾಗಿದೆ ಮತ್ತು ಪ್ರಶಸ್ತಿಗಳೂ ಬಂದಿವೆ. ಪ್ರಶಸ್ತಿ ಎಂದ ಮೇಲೆ ಅಲ್ಲೊಂದಿಷ್ಟು ಕಾಸು ಇದ್ದೇ ಇರುತ್ತದೆ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ಗಾಂಧಿ ಕಾರಣವಾಗಿ ಈ ದೇಶದಲ್ಲಿ ಶತಮಾನದಿಂದಲೂ ಅಸಂಖ್ಯಾತ ಜನರು ಪಾವನವಾಗಿದ್ದಾರೆ.
ಗಾಂಧೀಜಿಯವರ ನಂತರ ನಮ್ಮ ಸಮಾಜವಾದಿಗಳು ಅವರ ಮುಂದುವರಿಕೆಯಾಗಿ
ಗೋಚರಿಸಬೇಕಿತ್ತು. ಆದರೆ ನಮ್ಮ ಸಮಾಜವಾದಿಗಳು ಹೋರಾಡಿದ್ದು ತಮ್ಮಗಳ ವಿರುದ್ಧವೇ. ಹೀಗೆ ಎಲ್ಲರನ್ನ ಕಳೆದುಕೊಂಡು ಏಕಾಂತಗೊಂಡಿರುವ ಸಮಾಜವಾದಿಗಳಿಗೆ ಗಾಂಧಿಯೇ ದಿಕ್ಕಾಗಿದ್ದಾರೆ. ಗಾಂಧಿಯವರ ಕಥನ ರೂಪುಗೊಂಡು ಹೊಸ ಸಂವೇದನೆಯ ಗಾಳಿ ಬೀಸಿದ್ದರೂ, ಲೇಖಕರ ಪೂರ್ವಗ್ರಹಗಳು ಹಾಗೂ ಹಠಮಾರಿತನಗಳೇನಾದರೂ ಕಥನದಲ್ಲಿ ಸೂಕ್ಷ್ಮವಾಗಿ ಬೆರೆತು ಕೆಲಸ ಮಾಡಿವೆಯೇ ಎಂಬುದನ್ನು ಕಲಿತ ಸಮಾಜವಾದಿಗಳು ಪತ್ತೆಹಚ್ಚಿ ಹೇಳಬೇಕೆಂದು ಗಾಂಧಿವಾದಿಗಳ ಗೊಣಗಾಟವಾಗಿದೆಯಂತಲ್ಲಾ ಥೂತ್ತೆರಿ.

ನಮ್ಮ ಕರ್ನಾಟಕದಲ್ಲಿ ವಿರೋಧಪಕ್ಷಕ್ಕೊಂದು ವಿರೋಧ ಪಕ್ಷವಿದೆಯಂತಲ್ಲಾ! ರಾಷ್ಟ್ರಮಟ್ಟದ ವಿರೋಧಿ ನಾಯಕರೆಲ್ಲಾ ಬಂದು ಕುಮಾರಸ್ವಾಮಿಯನ್ನ ಮುಖ್ಯಮಂತ್ರಿಯಾಗಿಸಿ ಆಶೀರ್‍ವಾದ ಮಾಡಿ ಹೋದರು. ಇದೊಂತರ ಶ್ರೀಮಂತರ ಮದುವೆಗೆ ದೇಶದ ಗಣ್ಯರೆಲ್ಲಾ ಬಂದು ಭಾಗವಹಿಸಿದಂತಹ ಪ್ರಸಂಗ. ವರ ಮತ್ತು ವಧುವಿಗೆ ತಾಳೆಯಾಗದೆ, ತಾಜ್ ವೆಸ್ಟ್‌ಎಂಡ್ ಹೋಟೆಲಿನಲ್ಲಿ ಶುರುವಾದ ಸಂಸಾರ ಬಹಳದಿನ ಬಾಳಿಕೆ ಬರಲಿಲ್ಲ. ಹಾಡುಹಗಲೇ ಡೈವರ್ಸು ನಡೆದೇಹೋಯ್ತು. ಇದರ ಸತ್ಯಾಸತ್ಯತೆ ಗ್ರಹಿಸಲಾರದವರೆ ಅಂದಿನಿಂದಲೂ ವರಲುತ್ತ ಡೈವರ್ಸಿಗೆ ಕಾರಣರಾದವರನ್ನು ಹಾದಿಬೀದಿಯಲ್ಲಿ ಬೈಯುತ್ತ ಕಿರುಚುತ್ತಿರಬೇಕಾದರೆ, ಅವರ ಮಾತುಗಳೆಲ್ಲಾ ವಿರೋಧಪಕ್ಷಕ್ಕೊಂದು ವಿರೋಧ ಪಕ್ಷವನ್ನೇ ರೂಪಿಸುತ್ತಿದೆಯಂತಲ್ಲಾ. ಉದಾಹರಣೆಗೆ ರಾಜ್ಯದ ಕಂಟ್ರ್ಯಾಕ್ಟರುಗಳು ಈ ಆಳುವ ರಾಜಕಾರಣಗಳಿಗೆ ನಲವತ್ತು ಪರಸೆಂಟ್ ಕಮಿಶನ್ ಕೊಡಲಾಗುವುದಿಲ್ಲ ಎಂದು ಪತ್ರ ಬರೆದರು. ಕೂಡಲೇ ಕುಮಾರಣ್ಣ ಸದರಿ ಪರಸೆಂಟೇಜ್ ಸಿದ್ದರಾಮಯ್ಯನವರ ಕಾಲದಲ್ಲಿರಲಿಲ್ಲ ಎಂದು ಅವರು ಎದೆ ಮುಟ್ಟಿ ಹೇಳಲಿ ಎಂದು ಸವಾಲೆಸೆದರು. ಹಾಗಾದರೆ ಕುಮಾರಣ್ಣ ತಾಜ್ ವೆಸ್ಟ್ ಹೋಟೆಲಿನಲ್ಲಿದ್ದಾಗ ಪರಸಂಟೇಜು ಸ್ಟಾಪಾಗಿತ್ತೇ ಎಂದು ರೇವಣ್ಣಾಭಿಮಾನಿಗಳ ಪ್ರಶ್ನೆಯಾಗಿದೆಯಂತಲ್ಲಾ? ಪರಸೆಂಟೇಜು ಕೊಟ್ಟುಕೊಟ್ಟು ಸುಸ್ತಾಗಿರುವ ಕಂಟ್ರ್ಯಾಕ್ಟರ್ ಪರವಾಗಿ ನಿಂತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದ್ದ ಕುಮಾರಣ್ಣ ಉಲ್ಟಾಹೊಡೆದು ವಿರೋಧಪಕ್ಷ ಕಾಂಗ್ರೆಸ್‌ಗೆ ಸರಿಯಾದ ವಿರೋಧಪಕ್ಷವಾಗಿ ಕೆಲಸ ಮಾಡುತ್ತಿದ್ದಾರಂತಲ್ಲಾ ಥೂತ್ತೇರಿ.

ದೀರ್ಘಕಾಲದಿಂದಲೂ ಎಲ್‌ಕೆಜಿಯ ಮಕ್ಕಳಿಗೂ ಹಿಂದಿ ಕಲಿಸುತ್ತಿರುವ ಅಪಾಯದ ಬಗ್ಗೆ ಕನ್ನಡಿಗರ ಒಟ್ಟಾರೆಯಾಗಿ ಗಂಭೀರ ಅರಿವು ಮೂಡಿಲ್ಲ. ತಮ್ಮ ಮಾತೃಭಾಷೆಯನ್ನ ಕೊಂದು ಹಿಂದಿ ಉಳಿಸಲು ಹೋರಾಡುತ್ತಿರುವ ದೃಶ್ಯ ಆತ್ಮಹತ್ಯಾತ್ಮಕವಾಗಿದೆಯೆಲ್ಲಾ ಎಂಬುದು ಕೂಡ. ಇನ್ನ ಬಿಜೆಪಿ ಸರಕಾರ ಬಂದ ಮೇಲೆ ಅದರ ಎಂದಿನ ಸಂಚಿನ ಫಲವಾಗಿ ನಮ್ಮ ರೈಲುಗಳ ಮೈಮೇಲಿಂದ ಕನ್ನಡ ಅಳಿಸಿಹೋಯ್ತು, ಮೈಲಿಗಲ್ಲಿನಿಂದಲೂ ಕನ್ನಡ ಹೋಗಿದೆ. ಗ್ರಾಮಾಂತರ ಪ್ರದೇಶದ ಹೋಟೆಲುಗಳ ಮೆನು ಕಾರ್ಡಿನಿಂದ ಕೂಡ ಕನ್ನಡ ಮರೆಯಾಗಿದೆ. ನಿಮ್ಮ ಯಾವುದೇ ಅಂಗಡಿ ಮುಂಗಟ್ಟು ಹೋಟೆಲು ಇತ್ಯಾದಿ ಕಟ್ಟಡಗಳ ಮೇಲೆ ಮಾತೃಭಾಷೆ ಪ್ರಧಾನವಾಗಿದ್ದು ಉಳಿದ ಭಾಷೆ ಸಣ್ಣದಾಗಿರಲಿ ಎಂಬ ಆದೇಶಕ್ಕೆ ಕೂಡ ಮೂರು ಕಾಸಿನ ಬೆಲೆಯಿಲ್ಲದಂತಾಗಿದೆಯೆಲ್ಲಾ ಥೂತ್ತೆರಿ.


ಇದನ್ನೂ ಓದಿ: ಡಿ.ಎಸ್. ನಾಗಭೂಷಣ್ ಅವರ ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...