ಅಶಿಸ್ತಿನ ನಡವಳಿಕೆ ಮತ್ತು ಪದೇ ಪದೇ ಗಲಾಟೆ ಮಾಡಿದ ಆರೋಪದ ಮೇಲೆ ಲೋಕಸಭೆಯು ಕಾಂಗ್ರೆಸ್‌ನ ಸಭಾನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಗುರುವಾರ ಅಮಾನತುಗೊಳಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಚೌಧರಿ ಅವರ ನಡವಳಿಕೆಯನ್ನು ಪರಿಶೀಲಿಸುವಂತೆ ಲೋಕಸಭೆಯ ವಿಶೇಷಾಧಿಕಾರಗಳ ಸಮಿತಿಯನ್ನು ಕೇಳಲಾಗಿದೆ. ಅವರು ನಿರ್ಧಾರ ತೆಗೆದುಕೊಳ್ಳುವವರೆಗೆ ಅಮಾನತುಗೊಳಿಸಲಾಗುವುದು ಎಂದು ಹೇಳಲಾಗಿದೆ.
ಗುರುವಾರ, ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತ್ಯುತ್ತರ ನೀಡುತ್ತಿದ್ದಾಗ ಚೌಧರಿ ಇತರ ಕಾಂಗ್ರೆಸ್ ಸಂಸದರೊಂದಿಗೆ ಕೆಳಮನೆಯಿಂದ ಹೊರನಡೆದಿದ್ದರು.
ಜುಲೈ 20ರಿಂದ ಮಣಿಪುರದ ಅಶಾಂತಿಯ ಬಗ್ಗೆ ಪ್ರಧಾನಿ ಮಾತನಾಡುವಂತೆ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಮಂಡಿಸಿದವು. ಗುರುವಾರದವರೆಗೆ ಪ್ರಧಾನಿ ಮೋದಿ ಅವರು ಒಂದು ದಿನವೂ ಸಂಸತ್ತಿಗೆ ಹಾಜರಾಗಿ ಆ ಬಗ್ಗೆ ಮಾತನಾಡಿರಲಿಲ್ಲ.
ಅವಿಶ್ವಾಸ ನಿರ್ಣಯದ ಕುರಿತು ಗುರುವಾರ ಮಾತನಾಡಿದ ಮೋದಿ ಒಂದು ಗಂಟೆಗೂ ಹೆಚ್ಚು ಕಾಲ ಮಣಿಪುರದ ಬಗ್ಗೆ ಮಾತನಾಡಲೇ ಇಲ್ಲ. ವಿರೋಧ ಪಕ್ಷದ ಸಂಸದರು ಹೋದ ನಂತರ ರಾಜ್ಯದ ಪರಿಸ್ಥಿತಿಯನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದರು.
ಇದನ್ನೂ ಓದಿ: ಸ್ಮೃತಿ ಇರಾನಿಗೆ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಕೆರಳಿಸಲಿಲ್ಲ, ರಾಹುಲ್ ‘ಫೈಯಿಂಗ್ ಕಿಸ್’ ಕೆರಳಿಸಿದೆ: ಸ್ವಾತಿ ಮಾಲಿವಾಲ್
ಮೋದಿಯವರ ಭಾಷಣದ ನಂತರ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಚೌಧರಿ ಅವರನ್ನು ಅಮಾನತುಗೊಳಿಸುವಂತೆ ನಿರ್ಣಯವನ್ನು ಮಂಡಿಸಿದರು. ಅವರು ಪ್ರಧಾನಿ ಅಥವಾ ಇತರ ಮಂತ್ರಿಗಳು ಮಾತನಾಡುವಾಗ ಅಡ್ಡಿಪಡಿಸುತ್ತಾರೆ ಎಂದು ಲೋಕಸಭೆಯಲ್ಲಿ ಧ್ವನಿಮತದ ಮೂಲಕ ನಿರ್ಣಯವನ್ನು ಅಂಗೀಕರಿಸಲಾಯಿತು.
ಚೌಧರಿ ಅವರು ಹಿಂದಿನ ದಿನ ಸದನವನ್ನುದ್ದೇಶಿಸಿ ಮಾತನಾಡುತ್ತಾ, ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮೋದಿಯವರ ಮೌನವನ್ನು ಪ್ರಶ್ನಿಸಲು ಹಿಂದೂ ಮಹಾಕಾವ್ಯ ಮಹಾಭಾರತದ ಉಲ್ಲೇಖವನ್ನು ಮಾಡಿದ್ದರು.
ಕಾಂಗ್ರೆಸ್ ಸಂಸದರು ಸಂಯಮ ತೋರಿಸುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಒತ್ತಾಯಿಸಿದರು. ಆಗ ಚೌಧರಿ ಅವರ ಭಾಷಣದ ಕೆಲವು ಭಾಗಗಳನ್ನು ಖಡತದಿಂದ ತಗೆದುಹಾಕಲು ಸೂಚಿಸಿದರು.
ಒಬ್ಬ ಆಡಳಿತಗಾರ ಮೌನವಾಗಿರುತ್ತಾನೆ ಮತ್ತು ಜನರ ನೋವಿಗೆ ಕುರುಡನಾಗಿದ್ದಾನೆ ಎಂದು ವಿವರಿಸಲು ಕೆಲವು ರೂಪಕಗಳನ್ನು ಬಳಸಿರುವುದಾಗಿ ಚೌಧರಿ ಹೇಳಿದರು.
”ಜನರ ದೃಷ್ಟಿಯಲ್ಲಿ ನಾನು ಯಾವುದೇ ಪದವನ್ನು ತಪ್ಪು ಸಂದರ್ಭದಲ್ಲಿ ಬಳಸಿದ್ದರೆ, ನಾನು ರಾಜಕೀಯವನ್ನು ತೊರೆಯಲು ಸಿದ್ಧ” ಎಂದು ಹೇಳಿದರು.
”ಚೌಧರಿ ಅವರ ಅಮಾನತು ಪ್ರಜಾಪ್ರಭುತ್ವ ವಿರೋಧಿ ಮತ್ತು ದುರದೃಷ್ಟಕರ. ಇದು ಅಧಿಕಾರದ ದುರಹಂಕಾರ ಮತ್ತು ದುರುದ್ದೇಶವನ್ನು ತೋರಿಸುತ್ತದೆ” ಎಂದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
धन्यवाद प्रधानमंत्री जी,
आख़िरकार आपने मणिपुर हिंसा पर सदन में अपनी बात रखी। हमें भरोसा है कि मणिपुर में शांति बहाली की गति तेज़ होगी, राहत शिविरों से लोग अपने घरों को लौटेंगे। उनका पुनर्वास होगा, उनके साथ इंसाफ होगा।
आपने अगर अपना राजहठ और अहंकार पहले त्याग दिया होता तो संसद…
— Mallikarjun Kharge (@kharge) August 10, 2023


