Homeಮುಖಪುಟಅಕ್ರಮ ಹಣ ವರ್ಗಾವಣೆ:ಮಾಜಿ ನ್ಯಾಯಾಧೀಶರ ಬಂಧನ

ಅಕ್ರಮ ಹಣ ವರ್ಗಾವಣೆ:ಮಾಜಿ ನ್ಯಾಯಾಧೀಶರ ಬಂಧನ

- Advertisement -
- Advertisement -

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪಂಚಕುಲ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸುಧೀರ್ ಪರ್ಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಗುರುಗ್ರಾಮದಲ್ಲಿರುವ ಇ.ಡಿ. ಕಚೇರಿಯಲ್ಲಿ ವಿಚಾರಣೆ ನಡೆಸಿದ ಬಳಿಕ ಸುಧೀರ್‌ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆ ಅಡಿಯಲ್ಲಿ ಕಸ್ಟಡಿಗೆ ಪಡೆಯಲಾಗಿದೆ. ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಹೆಚ್ಚಿನ ವಿಚಾರಣೆಗೆ ಇಡಿ ಅಧಿಕಾರಿಗಳು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

ಸುಧೀರ್‌ ಪರ್ಮಾರ್ ಅವರನ್ನು ಮೂರನೇ ಬಾರಿಗೆ ವಿಚಾರಣೆಗೆ ಕರೆದಿದ್ದ ಇ.ಡಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಿಂದ ಅನುಮತಿ ಪಡೆದು ಅವರನ್ನು ಬಂಧಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್‌ ಅವರ ಸೋದರಳಿಯ ಅಜಯ್‌ ಪರ್ಮಾರ್‌, ‘M3M ಗ್ರೂಪ್’ ರಿಯಲ್‌ ಎಸ್ಟೇಟ್‌ ಕಂಪನಿಯ ಪ್ರಚಾರಕರಾದ ಬಸಂತ್‌ ಬನ್ಸಾಲ್‌ ಮತ್ತು ಅವರ ಮಗ ಪಂಕಜ್‌ ಬನ್ಸಾಲ್‌ ಎಂಬುವವರನ್ನು ಹಾಗೂ  ರಿಯಲ್ ಎಸ್ಟೇಟ್‌ ಕಂಪನಿ ‘IREO ಗ್ರೂಪ್‌’ ಮಾಲೀಕ ಲಲಿತ್ ಗೋಯಲ್‌ ಎಂಬುವರನ್ನು ಇ.ಡಿ. ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಬಂಧಿಸಿತ್ತು.

ಪಂಚಕುಲದ ವಿಶೇಷ ಪಿಎಂಎಲ್‌ಎ ನ್ಯಾಯಾಲಯದಲ್ಲಿ ನಿಯೋಜನೆಗೊಂಡಿದ್ದ ಮಾಜಿ ವಿಶೇಷ ಸಿಬಿಐ ಮತ್ತು ಇಡಿ ನ್ಯಾಯಾಧೀಶರಾಗಿದ್ದ ಸುಧೀರ್ ಪರ್ಮಾರ್ ಮತ್ತು ಅವರ ಸೋದರಳಿಯ ಅಜಯ್ ಪರ್ಮಾರ್ ಮತ್ತು ರೂಪ್ ಕುಮಾರ್ ವಿರುದ್ಧ ಹರಿಯಾಣ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳವು ಏಪ್ರಿಲ್‌ನಲ್ಲಿ ಎಫ್ ಐಆರ್ ದಾಖಲಿಸಿದೆ.

ಪಂಚಕುಲ ವಿಶೇಷ ನ್ಯಾಯಾಲಯದಿಂದ ನ್ಯಾಯಾಧೀಶರಾಗಿದ್ದ ಸುಧೀರ್‌ ಪರ್ಮಾರ್‌ ಎಸಿಬಿ ಪ್ರಕರಣ ಸಂಬಂಧ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಅವರನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಅಮಾನತು ಮಾಡಿತ್ತು.

ಇದನ್ನು ಓದಿ: ಸ್ಮೃತಿ ಇರಾನಿಗೆ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಕೆರಳಿಸಲಿಲ್ಲ, ರಾಹುಲ್ ‘ಫೈಯಿಂಗ್ ಕಿಸ್’ ಕೆರಳಿಸಿದೆ: ಸ್ವಾತಿ ಮಾಲಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...