Homeಅಂತರಾಷ್ಟ್ರೀಯಅಫ್ಘಾನ್: ಮಹಿಳೆಯರನ್ನು ಕ್ರಿಕೆಟ್ ಸೇರಿ ಹಲವು ಕ್ರೀಡೆಗಳಿಂದ ಹೊರಗಿಟ್ಟ ತಾಲಿಬಾನ್‌ ಸರ್ಕಾರ

ಅಫ್ಘಾನ್: ಮಹಿಳೆಯರನ್ನು ಕ್ರಿಕೆಟ್ ಸೇರಿ ಹಲವು ಕ್ರೀಡೆಗಳಿಂದ ಹೊರಗಿಟ್ಟ ತಾಲಿಬಾನ್‌ ಸರ್ಕಾರ

- Advertisement -
- Advertisement -

ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಹೊಸ ಸರ್ಕಾರವನ್ನು ರಚನೆ ಮಾಡಿದ್ದು, ನೂತನ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್​ ಹಸನ್​ ಅಕುಂದ್ ಅಧಿಕಾರಕ್ಕೆ ಏರಲಿದ್ದಾರೆ. ಇದೇ ವೇಳೆ ಅಫ್ಘಾನ್ ಮಹಿಳೆಯರಿಗೆ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳಿಂದ ಬ್ಯಾನ್ ಮಾಡಲಾಗಿದೆ.

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿರುವ ತಾಲಿಬಾನ್, ಹಲವು ಇಲಾಖೆಗಳಿಗೆ ಸಚಿವರನ್ನು ನೇಮಿಸಿದೆ.

ಆಸ್ಟ್ರೇಲಿಯಾದ ಎಸ್‌ಬಿಎಸ್ ಟಿವಿಗೆ ಹೇಳಿಕೆ ನೀಡಿರುವ ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್, “ಕ್ರಿಕೆಟ್‌ನಲ್ಲಿ, ಮಹಿಳೆಯರು ತಮ್ಮ ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳದಂತಹ ಪರಿಸ್ಥಿತಿಯನ್ನು ಎದುರಿಸಬಹುದು. ಮಹಿಳೆಯರನ್ನು ಈ ರೀತಿ ನೋಡಲು ಇಸ್ಲಾಂ ಅನುಮತಿಸುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಫ್ಘಾನ್: ಮಹಿಳೆಯರು ಕೆಲಸಕ್ಕೆ ಹೊರ ಹೋಗುವುದು ಸುರಕ್ಷಿತವಲ್ಲ- ತಾಲಿಬಾನ್ ವಕ್ತಾರ

“ಇದು ಮಾಧ್ಯಮದ ಯುಗ, ಕ್ರೀಡೆಯ ಫೋಟೋಗಳು ಮತ್ತು ವಿಡಿಯೊಗಳು ಹರಿದಾಡುತ್ತವೆ. ಅದನ್ನು ಜನರು ನೋಡುತ್ತಾರೆ. ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಅವರ  ಮುಖ ಮತ್ತು ದೇಹ ಕಾಣಿಸುವಂತಹ ರೀತಿಯ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ” ಎಂದಿದ್ದಾರೆ.

20 ವರ್ಷಗಳ ಬಳಿಕ ಮಂಗಳವಾರ (ಸೆ.7) ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಪುರುಷರ ಸರ್ಕಾರ ರಚಿಸಿದ್ದು, ಕ್ಯಾಬಿನೆಟ್ ಕೂಡ ರಚಿಸಿದೆ. ಆದರೆ, ತಮ್ಮ ಸಂಪುಟದಲ್ಲಿ ಒಂದೇ ಒಂದು ಸ್ಥಾನವನ್ನು ಮಹಿಳೆಯರಿಗೆ ನೀಡಿಲ್ಲ. ಇದು ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಸ್ಥಿತಿಯ ಬಗ್ಗೆ ಚಿಂತಿಸುವಂತೆ ಮಾಡಿದೆ.

ಈ ಹಿಂದೆ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸುದ್ದಿಗೋಷ್ಠಿಯಲ್ಲಿ, “ಮಹಿಳೆಯರು ತಮ್ಮ ಸುರಕ್ಷತೆಗಾಗಿ ಕೆಲಸಕ್ಕೆ ಹೋಗಬಾರದು, ನಮ್ಮ ಸೈನಿಕರ ಗುಂಪು ಇನ್ನು ಹಳೆಯ ಮನಸ್ಥಿತಿಯಲ್ಲಿಯೇ ಇದೆ. ಹೊಸ ಬದಲಾವಣೆ ಬರಲು ಸಮಯ ಬೇಕಾಗಿದೆ” ಎಂದಿದ್ದರು.

ತಾಲಿಬಾನಿಗಳ ವಿರುದ್ಧ, ಶಿಕ್ಷಣ ಮತ್ತು ಉದ್ಯೋಗದ ಹಕ್ಕಿಗಾಗಿ ಮಹಿಳೆಯರು ಬುಧವಾರ ಅಫ್ಘಾನ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವಿಡಿಯೊ, ಫೋಟೋಗಳು ಹೊರ ಬರದಂತೆ ತಡೆದ ತಾಲಿಬಾನಿಗಳು, ಪ್ರತಿಭಟನೆಯ ವರದಿ ಮಾಡಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ: ಅಫ್ಘಾನ್ ಮಹಿಳೆಯರ ಪ್ರತಿಭಟನೆ ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನ್‌ನಿಂದ ಹಲ್ಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...