Homeಮುಖಪುಟಅಗ್ನಿಪಥ ಯೋಜನೆ : ಜೂ.24 ರಂದು ರೈತ ಸಂಘಟನೆಯಿಂದ ದೇಶಾದ್ಯಂತ ಪ್ರತಿಭಟನಾ ದಿನ

ಅಗ್ನಿಪಥ ಯೋಜನೆ : ಜೂ.24 ರಂದು ರೈತ ಸಂಘಟನೆಯಿಂದ ದೇಶಾದ್ಯಂತ ಪ್ರತಿಭಟನಾ ದಿನ

- Advertisement -
- Advertisement -

ಸಶಸ್ತ್ರ ಪಡೆಗಳ ನೇಮಕಾತಿಯ ಹೊಸ ಅಗ್ನಿಪಥ ಯೋಜನೆ ವಿರುದ್ಧ ಯುವಜನತೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನೆಗೆ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಬೆಂಬಲವನ್ನು ಘೋಷಿಸಿದೆ.

ಅಗ್ನಿಪಥ ವಿರುದ್ಧದ ಪ್ರತಿಭಟನೆಯನ್ನು ಶಾಂತಿಯುತವಾಗಿಡಲು ಮನವಿ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾವು ಈ ಯೋಜನೆಯನ್ನು ಸೇನಾ ವಿರೋಧಿ, ರೈತ ವಿರೋಧಿ ಮತ್ತು ದೇಶ ವಿರೋಧಿ ಎಂದು ಆರೋಪಿಸಿದೆ.

“ಜೈ ಜವಾನ್ ಜೈ ಕಿಸಾನ್” ಘೋಷಣೆಯ ಸ್ಪೂರ್ತಿಯನ್ನು ನಾಶಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ, ಈ ಹೋರಾಟದಲ್ಲಿ ಸೈನಿಕರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದು ರೈತ ಚಳವಳಿಯ ಕರ್ತವ್ಯವಾಗಿದೆ. ಅದರಂತೆಯೇ ಸಂಯುಕ್ತ ಕಿಸಾನ್ ಮೋರ್ಚಾ ಈ ಶುಕ್ರವಾರ (ಜೂನ್ 24) ರಂದು ದೇಶಾದ್ಯಂತ ಪ್ರತಿಭಟನಾ ದಿನವನ್ನು ಆಚರಿಸಲಿದೆ ಎಂದು ಸಂಘಟನೆ ತಿಳಿಸಿದೆ. ಈ ನಿರ್ಧಾರವನ್ನು ಕರ್ನಾಲ್ (ಹರಿಯಾಣ) ನಲ್ಲಿ ನಡೆದ ಸಂಯುಕ್ತ ಕಿಸಾನ್ ಮೋರ್ಚಾದ 7 ಸದಸ್ಯರ ಸಮನ್ವಯ ಸಮಿತಿ ತೆಗೆದುಕೊಂಡಿದೆ.

ಇದನ್ನೂ ಓದಿ: ಅಗ್ನಿಪಥ್‌ ಹಿಂಪಡೆಯುವ ಪ್ರಶ್ನೆಯೆ ಇಲ್ಲ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್

ಈ ಅಗ್ನಿಪಥ ಯೋಜನೆಯು ದೇಶದ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದು ಆರೋಪಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಇದು ರಾಷ್ಟ್ರೀಯ ಭದ್ರತೆ ಮತ್ತು ನಿರುದ್ಯೋಗಿ ಯುವಕರ ಕನಸುಗಳೊಂದಿಗೆ ಮಾತ್ರವಲ್ಲದೆ ದೇಶದ ರೈತ ಕುಟುಂಬಗಳೊಂದಿಗೆ ಆಟವಾಡುತ್ತಿದೆ ಎಂದು ಹೇಳಿದೆ. ಈ ದೇಶದ ಸೈನಿಕ ಸಮವಸ್ತ್ರ ಧರಿಸಿರುವ ರೈತ. ಬಹುತೇಕ ಸೈನಿಕರು ರೈತ ಕುಟುಂಬದವರು. ಸೇನಾ ಉದ್ಯೋಗವು ಲಕ್ಷಾಂತರ ರೈತ ಕುಟುಂಬಗಳ ಗೌರವ ಮತ್ತು ಆರ್ಥಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. “ಒಂದು ಶ್ರೇಣಿ ಒಂದು ಪಿಂಚಣಿ” ಎಂಬ ಭರವಸೆಯೊಂದಿಗೆ ಮಾಜಿ ಸೈನಿಕರನ್ನು ಒಟ್ಟುಗೂಡಿಸಿ ವಿಜಯೋತ್ಸವದ ಅಭಿಯಾನವನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈಗ “ನೋ ರ್‍ಯಾಂಕ್  ನೋ ಪೆನ್ಷನ್” ಎಂಬ ಈ ಯೋಜನೆಗೆ ಚಾಲನೆ ನೀಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ತಿಳಿಸಿದೆ.

ಜೂನ್ 24 ಶುಕ್ರವಾರದಂದು ಯೋಜನೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನಾ ದಿನವನ್ನು ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ. ಅಂದು “ಜೈ ಜವಾನ್ ಜೈ ಕಿಸಾನ್” ಘೋಷಣೆಯೊಂದಿಗೆ ಎಲ್ಲಾ ಜಿಲ್ಲೆ, ತಾಲೂಕು ಪ್ರಧಾನ ಕಚೇರಿಗಳಲ್ಲಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಿ ನಂತರ ಭಾರತದ ರಾಷ್ಟ್ರಪತಿ, ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಜೊತೆಗೆ ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ಸುಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯನ್ನು ವಿರೋಧಿಸುವ ಎಲ್ಲಾ ಯುವಕರು ಈ ಶಾಂತಿಯುತ ಪ್ರತಿಭಟನೆಯ ಘನತೆಯನ್ನು ಗೌರವಿಸುವ ಮೂಲಕ ಈ ಪ್ರತಿಭಟನಾ ದಿನದಲ್ಲಿ ಪಾಲ್ಗೊಳ್ಳಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಮನವಿ ಮಾಡಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ದೇಶದ ಎಲ್ಲಾ ಸಮೂಹ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದೆ.


ಇದನ್ನೂ ಓದಿ: ಅಗ್ನಿಪಥ್‌ ಹಿಂಪಡೆಯುವ ಪ್ರಶ್ನೆಯೆ ಇಲ್ಲ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Farmers associations sd not interfear this matter against defense decisions..
    Farmers associations leaders will loose their publicity and ethics for standing against good rules .
    Farmers leaders decisions are not all farmers decisions.
    It’s for their own welfare..
    Anti national teams try to utilize farmers card blindly..
    Protest sd hv sm honest point of damages against farmers. not any groups…

LEAVE A REPLY

Please enter your comment!
Please enter your name here

- Advertisment -

ಶಿಕ್ಷೆ ಮುಗಿದ 3 ವರ್ಷಗಳ ನಂತರ ಪಾಕಿಸ್ತಾನ ಜೈಲಿನಲ್ಲಿ ಗುಜರಾತ್ ಮೀನುಗಾರ ಸಾವು

2022 ರಲ್ಲಿ ಅಜಾಗರೂಕತೆಯಿಂದ ಅಂತರರಾಷ್ಟ್ರೀಯ ಗಡಿ ರೇಖೆಯನ್ನು ದಾಟಿದ ನಂತರ ಪಾಕಿಸ್ತಾನ ಏಜೆನ್ಸಿಗಳಿಂದ ಬಂಧಿಸಲ್ಪಟ್ಟ ಗುಜರಾತ್‌ನ ಮೀನುಗಾರನೊಬ್ಬ ಜನವರಿ 16 ರಂದು ಕರಾಚಿ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಮೂರು ವರ್ಷಗಳ ಹಿಂದೆ ಆತನ ಶಿಕ್ಷೆಯನ್ನು...

ಸ್ಥಳದಲ್ಲೇ ದಂಡ ಪಾವತಿಸುವಂತೆ ಸಂಚಾರ ಪೊಲೀಸರು ಒತ್ತಾಯಿಸುವಂತಿಲ್ಲ: ತೆಲಂಗಾಣ ಹೈಕೋರ್ಟ್

ಸಂಚಾರ ನಿಯಮ ಉಲ್ಲಂಘಿಸುವವರ ಬ್ಯಾಂಕ್ ಖಾತೆಗಳಿಂದ ಸ್ವಯಂಚಾಲಿತವಾಗಿ ದಂಡ ಕಡಿತಗೊಳಿಸಬೇಕೆಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೂಚಿಸಿದ ಕೆಲವು ದಿನಗಳ ನಂತರ ಮಹತ್ವದ ತೀರ್ಪು ನೀಡಿರುವ ತೆಲಂಗಾಣ ಹೈಕೋರ್ಟ್, ಪೊಲೀಸರು ನಾಗರಿಕರನ್ನು ರಸ್ತೆಯಲ್ಲಿ ನಿಲ್ಲಿಸಿ...

ಎಸ್‌ಸಿ/ಎಸ್‌ಟಿ ಶಾಲೆಗಳ ನವೀಕರಣಕ್ಕೆ ಹಣ ಮಂಜೂರು ಮಾಡದಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ 

ಮಧುರೈ: ತಮಿಳುನಾಡಿನ ಸುಮಾರು 170 ಎಸ್‌ಸಿ/ಎಸ್‌ಟಿ ಶಾಲೆ ಮತ್ತು ಹಾಸ್ಟೆಲ್ ಕಟ್ಟಡಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯಗಳಿಗೆ ತಮಿಳುನಾಡು ಆದಿ ದ್ರಾವಿಡರ್ ವಸತಿ ಅಭಿವೃದ್ಧಿ ನಿಗಮ (ಟಿಎಎಚ್‌ಡಿಸಿಒ) 50 ಕೋಟಿ ರೂ.ಗಳನ್ನು ಖರ್ಚು...

ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ರಾಜ್ಯ ಸಂಸ್ಥೆ ತನಿಖೆ ಮಾಡಬಹುದು : ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರಿ ನೌಕರರು ಮಾಡುವ ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ಶಿಕ್ಷಾರ್ಹ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ರಾಜ್ಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಲು ಮತ್ತು ಆರೋಪಪಟ್ಟಿ ಸಲ್ಲಿಸಲು ಸಮರ್ಥರು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಗ್ಯಾಂಗ್‌ಸ್ಟರ್‌ಗಳ ವಿರುದ್ಧ ರಾಜ್ಯಾದ್ಯಂತ ಕಾರ್ಯಚರಣೆ ಆರಂಭಿಸಿದ ಪಂಜಾಬ್ ಸರ್ಕಾರ

ಮಾದಕ ವಸ್ತುಗಳ ವಿರುದ್ಧದ ತನ್ನ ಕಾರ್ಯಾಚರಣೆಯಿಂದ ಸ್ಫೂರ್ತಿ ಪಡೆದು, ಪಂಜಾಬ್ ಸರ್ಕಾರ ಮಂಗಳವಾರ ಗ್ಯಾಂಗ್‌ಸ್ಟರ್‌ಗಳ ವಿರುದ್ಧ ರಾಜ್ಯಾದ್ಯಂತ ಅಭಿಯಾನ ಆರಂಭಿಸಿದ್ದು, ಶಸ್ತ್ರಾಸ್ತ್ರ ಪೂರೈಕೆ ಸರಪಳಿಗಳು, ಲಾಜಿಸ್ಟಿಕ್ಸ್, ಅಡಗುತಾಣಗಳು ಮತ್ತು ಸಂವಹನ ಜಾಲಗಳು ಸೇರಿದಂತೆ...

‘ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ‘ನನ್ನ ಹೆಸರೇ’ ಆಸರೆ’: ಪ್ರಿಯಾಂಕ್ ಖರ್ಗೆ ಆಕ್ರೋಶ 

ಬೆಂಗಳೂರು: ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಎನ್ನುವಂತೆ, ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ನನ್ನ ಹೆಸರೇ ಆಸರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ "ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು...

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ರದ್ದುಗೊಳಿಸಲು ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯ : ತಮಿಳುನಾಡು ಸಿಎಂ ಸ್ಟಾಲಿನ್

ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರು ವಾರ್ಷಿಕ ಭಾಷಣ ಮಾಡುವ ಸಂಪ್ರದಾಯವನ್ನು ರದ್ದುಗೊಳಿಸುವ ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಘೋಷಿಸಿದ್ದಾರೆ. ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌ ರವಿ ನಡುವೆ ಜಟಾಪಟಿ ನಡೆದು,...

ಅಸ್ಸಾಂ| ದನ ಕಳ್ಳತನದ ಶಂಕೆಯಿಂದ ಗುಂಪು ದಾಳಿ; ಓರ್ವ ಸಾವು-ನಾಲ್ವರ ಸ್ಥಿತಿ ಗಂಭೀರ

ದನ ಕಳ್ಳತನದ ಶಂಕೆಯ ಮೇಲೆ ಗುಂಪೊಂದು ದಾಳಿ ಮಾಡಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ (ಜ.19) ಅಸ್ಸಾಂನ ಕೊಕ್ರಜಾರ್‌ನಲ್ಲಿ ನಡೆದಿದೆ. ಬಲಿಪಶುಗಳು, ರಸ್ತೆ ನಿರ್ಮಾಣ ಯೋಜನೆಯೊಮದರಲ್ಲಿ...

ಕರ್ನಾಟಕ: ಐದು ವರ್ಷಗಳಲ್ಲಿ ಎಸ್‌ಸಿ/ಎಸ್‌ಟಿಗಳ ಮೇಲಿನ ಅಪರಾಧಗಳು ಶೇ. 37.7 ರಷ್ಟು ಏರಿಕೆ; ಬೆಂಗಳೂರಿನದೇ ಅಗ್ರಸ್ಥಾನ

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (SC/ST) ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಕಠಿಣ ಕಾನೂನುಗಳಿದ್ದರೂ, ಈ ಸಮುದಾಯಗಳ ಮೇಲಿನ ಅಪರಾಧಗಳು ಕಳೆದ ಐದು ವರ್ಷಗಳಲ್ಲಿ ಶೇ. 37.74 ರಷ್ಟು ಹೆಚ್ಚಾಗಿದ್ದು,...

‘ನಿತಿನ್ ನಬಿನ್ ನನ್ನ ಬಾಸ್, ನಾನು ಕೆಲಸಗಾರ..’; ಬಿಜೆಪಿ ನೂತನ ಮುಖ್ಯಸ್ಥರನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅತ್ಯಂತ ಕಿರಿಯ ವಯಸ್ಸಿನ ನಿತಿನ್ ನಬಿನ್ ಅವರನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಪಕ್ಷದ ಪರಂಪರೆಯನ್ನು ಮುಂದುವರಿಸುವ 'ಸಹಸ್ರಮಾನದ' ವ್ಯಕ್ತಿ ಎಂದು ಕರೆದರು. "ಪಕ್ಷದ...