ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಐತಿಹಾಸಿಕ ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ಟೇಡಿಯಂನ್ನು ಕೆಡವಲು ಚಿಂತನೆ ನಡೆಸಿದೆ ಎಂದು ಬಿಜೆಪಿ ಹಿರಿಯ ನಾಯಕರ ಹೇಳಿಕೆ ಉಲ್ಲೇಖಿಸಿ ಅಹ್ಮದಾಬಾದ್ ಮಿರರ್ ವರದಿ ಮಾಡಿದೆ.
ವಲ್ಲಭಬಾಯಿ ಪಟೇಲ್ ಸ್ಟೇಡಿಯಂನ್ನು 1960ರ ದಶಕದಲ್ಲಿ ವಾಸ್ತುಶಿಲ್ಪಿ ಚಾರ್ಲ್ಸ್ ಕೊರಿಯಾ ಮತ್ತು ಇಂಜಿನಿಯರ್ ಮಹೇಂದ್ರ ರಾಜ್ ವಿನ್ಯಾಸಗೊಳಿಸಿದ್ದರು. ಇದರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗುತ್ತಿತ್ತು.
ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂ, ಭಾರತದ ಸ್ವಾತಂತ್ರ್ಯ ನಂತರದ ಅವಧಿಯನ್ನು ನಿರೂಪಿಸುವ ಪ್ರಗತಿಪರ ಆದರ್ಶಗಳು ಮತ್ತು ಪ್ರಾಯೋಗಿಕ ಮನೋಭಾವವನ್ನು ಪ್ರತಿನಿಧಿಸುತ್ತದೆ ಎಂದು ನ್ಯೂಯಾರ್ಕ್ ಮೂಲದ ಹೆರಿಟೇಜ್ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.
ನಾವು ಸ್ಟೇಡಿಯಂನ್ನು ಕೆಡವುವ ಬಗ್ಗೆ ಯೋಚಿಸುತ್ತಿದ್ದೇವೆ. ದುರಸ್ತಿಗೆ ಕೋಟಿಗಟ್ಟಲೆ ಖರ್ಚು ಮಾಡುವ ಬದಲು, ಹೊಸದನ್ನು ನಿರ್ಮಿಸುವುದು ಉತ್ತಮ ಉಪಾಯವಾಗಿದೆ. ಅದು ಇನ್ನೂ 50-60 ವರ್ಷಗಳವರೆಗೆ ಇರುತ್ತದೆ ಎಂದು ಮುನ್ಸಿಪಲ್ ಕಾರ್ಪೋರೇಷನ್ ಮೂಲಗಳು ಹೇಳಿರುವುದಾಗಿ ಅಹ್ಮದಾಬಾದ್ ಮಿರರ್ ವರದಿ ಮಾಡಿದೆ.
ಅಹಮದಾಬಾದ್ ಮಿರರ್ ವರದಿ ಪ್ರಕಾರ , ಕ್ರೀಡಾಂಗಣವು, ಬಿರುಕು ಬಿಟ್ಟಿದೆ. ಆಸನ ಪ್ರದೇಶಗಳು ಮತ್ತು ಗೇಟ್‌ಗಳು ತುಕ್ಕು ಹಿಡಿದು ಅಪಾಯದಲ್ಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಇದು ಸೂಕ್ತವಾಗಿಲ್ಲ ಎಂದು ವರದಿ ತಿಳಿಸಿದೆ.
ಇದನ್ನು ಓದಿ: ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವು ರೋಗವಿದ್ದಂತೆ: ಪ್ರಿಯಾಂಕ ಖರ್ಗೆ


