Homeಮುಖಪುಟಆಂಧ್ರಪ್ರದೇಶ: ಸರ್ಕಾರಿ ಆಸ್ಪತ್ರೆಯಲ್ಲಿ ಮೊಬೈಲ್ ಬೆಳಕಿನಿಂದ ರೋಗಿಗೆ ಚಿಕಿತ್ಸೆ

ಆಂಧ್ರಪ್ರದೇಶ: ಸರ್ಕಾರಿ ಆಸ್ಪತ್ರೆಯಲ್ಲಿ ಮೊಬೈಲ್ ಬೆಳಕಿನಿಂದ ರೋಗಿಗೆ ಚಿಕಿತ್ಸೆ

- Advertisement -
- Advertisement -

ಆಂಧ್ರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳು ವಿದ್ಯುತ್ ಇಲ್ಲದೆ ಮೊಬೈಲ್ ಲೈಟ್‌ನ ಬೆಳಕಿನ ಸಹಾಯದಿಂದ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುವ ವಿಡಿಯೋ ಸಾಮಾಜಿಕ ಜಾಲತಣಾದಲ್ಲಿ ವೈರಲ್ ಆಗಿದೆ.

ಬುಡಕಟ್ಟು ಸಮುದಾಯದ ಜನರು ಹೆಚ್ಚು ವಾಸಿಸುವ ಪ್ರದೇಶವಾದ ಕುರುಪಂ ಮಂಡಲದಲ್ಲಿರುವ ಪಾರ್ವತಿಪುರಂ ಸಮುದಾಯ ಆರೋಗ್ಯ ಕೇಂದ್ರದ ವಿಡಿಯೋ ಇದಾಗಿದೆ. ಘಟನೆಯ ವಿಡಿಯೊವನ್ನು ಹಂಚಿಕೊಂಡಿರುವ ಆಂಧ್ರದ ವಿರೋಧ ಪಕ್ಷದ ನಾಯಕ ಮತ್ತು ತೆಲುಗು ದೇಶಂ ಪಕ್ಷದ  ಮುಖ್ಯಸ್ಥ ಚಂದ್ರಬಾಬು ನಾಯ್ಡು, ವಿದ್ಯುತ್ ಕಡಿತದಿಂದ ಹಲವೆಡೆಗಳಲ್ಲಿ ಸಮಸ್ಯೆ ಉದ್ಭವಿಸುತ್ತದೆ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಕತ್ತಲಿನಲ್ಲಿ ರೋಗಿ ಬೆಡ್ ಮೇಲೆ ಮಲಗಿರುವುದು ಕಂಡು ಬರುತ್ತಿದೆ. ಆಸ್ಪತ್ರೆಯ ಸಿಬ್ಬಂದಿಗಳು ಅವರಿಗೆ ಮೊಬೈಲ್ ಬೆಳಕಿನಲ್ಲಿ ಚಿಕಿತ್ಸೆ ನೀಡುವುದು ಕಂಡು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ  ಜಿಲ್ಲಾ ಸಂಯೋಜಕಿ (ಡಿಸಿಎಚ್‌ಎಸ್) ಡಾ.ವಾಗದೇವಿ, ಆಸ್ಪತ್ರೆಯಲ್ಲಿ ಇನ್‌ವರ್ಟರ್ ಮತ್ತು ಜನರೇಟರ್ ಎರಡನ್ನೂ ಅಳವಡಿಸಲಾಗಿತ್ತು, ಆದರೆ ವೋಲ್ಟೇಜ್ ಏರಿಳಿತದಿಂದ ಅದು ಅಸಮರ್ಪಕವಾಗಿ ವಿದ್ಯುತ್ ಹೋದ ತಕ್ಷಣ ಇನ್ವರ್ಟರ್ ಆನ್ ಆಗಲು ವಿಫಲವಾಗಿದೆ. ವೀಡಿಯೊ ಚಿತ್ರೀಕರಣದ ಬಳಿಕ ಜನರೇಟರ್ ಆನ್ ಮಾಡಲಾಗಿದೆ ಮತ್ತು ಬೆಳಕು ಬಂದಿದೆ ಎಂದು ಹೇಳಿದ್ದಾರೆ.

ಘಟನೆಯ ಹಿಂದಿನ ದಿನ ಮತ್ತು ರಾತ್ರಿ ಭಾರೀ ಮಳೆಯಾಗಿತ್ತು. ಇದರಿಂದ ವೋಲ್ಟೇಜ್ ಏರಿಳಿತವಾಗಿತ್ತು ಮತ್ತು ಇನ್ವರ್ಟರ್ ಆನ್ ಆಗಲು ಸ್ವಲ್ಪ ತಡವಾಗಿತ್ತು ಎಂದು ಡಾ. ವಾಗದೇವಿ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಚಂದ್ರಬಾಬು ನಾಯ್ಡು, ಕುರುಪಂನಿಂದ ವೈರಲ್ ಆಗಿರುವ ವಿಡಿಯೋಗಳು ಭಯವನ್ನುಂಟು ಮಾಡುತ್ತಿದೆ. ಅಲ್ಲಿ ವೈದ್ಯರು ವಿದ್ಯುತ್ ಇಲ್ಲದ ವೇಳೆ ಬ್ಯಾಟರಿ ದೀಪಗಳಿಂದ ರೋಗಿಗೆ ಚಿಕಿತ್ಸೆ ನೀಡಲು ಒತ್ತಾಯಿಸುತ್ತಿದ್ದಾರೆ. ನಿರಂತರ ವಿದ್ಯುತ್ ಕಡಿತದಿಂದ  ಆಂಧ್ರಪ್ರದೇಶದಲ್ಲಿ ಮನೆಗಳಿಗೆ,  ಕೃಷಿ ಮತ್ತು ಕೈಗಾರಿಕೆಗಳಿಗೆ ವ್ಯಾಪಕ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವು ರೋಗವಿದ್ದಂತೆ: ಪ್ರಿಯಾಂಕ ಖರ್ಗೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...