Homeಕರೋನಾ ತಲ್ಲಣ10 ಲಕ್ಷ ಭಾರತೀಯರು ಈಗಾಗಲೇ ಕೋವಿಡ್‌ಗೆ ಬಲಿಯಾಗಿದ್ದಾರೆ, ಶೇ. 80ರಷ್ಟು ಸಾವು ದಾಖಲಾಗುತ್ತಿಲ್ಲ: ಗಣಿತ ತಜ್ಞ...

10 ಲಕ್ಷ ಭಾರತೀಯರು ಈಗಾಗಲೇ ಕೋವಿಡ್‌ಗೆ ಬಲಿಯಾಗಿದ್ದಾರೆ, ಶೇ. 80ರಷ್ಟು ಸಾವು ದಾಖಲಾಗುತ್ತಿಲ್ಲ: ಗಣಿತ ತಜ್ಞ ಮುರಾದ್ ಬನಾಜಿ

- Advertisement -
- Advertisement -

ಲಂಡನ್‌ನ ಮಿಡಲ್‌ಸೆಕ್ಸ್ ವಿಶ್ವವಿದ್ಯಾಲಯದ ಹಿರಿಯ ಗಣಿತ ಉಪನ್ಯಾಸಕರೊಬ್ಬರು, ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ, ಭಾರತದ ಶೇ.80ರಷ್ಟು ಕೋವಿಡ್ ಸಾವುಗಳು ದಾಖಲಾಗಿಲ್ಲ ಅಥವಾ ಅವನ್ನು ಸರ್ಕಾರಗಳು ಮುಚ್ಚಿ ಹಾಕಿವೆ ಎಂದು ಹೇಳಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

ಮಾರ್ಚ್ 2020ರಿಂದ ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಪಥವನ್ನು (ಟ್ರಾಜೆಕ್ಟರಿ) ಸೂಕ್ಷ್ಮವಾಗಿ ಗಮನಿಸುತ್ತಿರುವ ಲಂಡನ್‌ನ ಮಿಡಲ್‌ಸೆಕ್ಸ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಹಿರಿಯ ಉಪನ್ಯಾಸಕ, ಭಾರತೀಯ ಮೂಲದ ಮುರಾದ್ ಬನಾಜಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2021ರ ಮೇ 8 ರ ಹೊತ್ತಿಗೆ, ಸರ್ಕಾರದ ಆರೋಗ್ಯ ಇಲಾಖೆಯ ಅಧಿಕೃತ ಸಾವಿನ ಸಂಖ್ಯೆ 2,38,000 ಕ್ಕಿಂತ ಹೆಚ್ಚಿದೆ. ಮುರಾದ್ ಬನಾಜಿ ಹೇಳುವಂತೆ, ದಾಖಲಾಗದ ಸಾವುಗಳು ಐದು ಪಟ್ಟು ಹೆಚ್ಚಿರುವ ಸಾಧ್ಯತೆ ಇದ್ದೇ ಇದೆ, ಒಟ್ಟು ಕೋವಿಡ್ ಸಾವಿನ ಸಂಖ್ಯೆ (ಅಧಿಕೃತ ಮತ್ತು ದಾಖಲೆಯಿಲ್ಲದ ಸಾವುಗಳುನ್ನು ಸೇರಿಸಿ) ಒಂದು ಮಿಲಿಯನ್ (ಹತ್ತು ಲಕ್ಷ) ದಾಟಿದೆ ಎಂದಿದ್ದಾರೆ.

ದಿ ವೈರ್‌ಗಾಗಿ ಕರಣ್ ಥಾಪರ್‌ಗೆ ನೀಡಿದ 33 ನಿಮಿಷಗಳ ಸಂದರ್ಶನದಲ್ಲಿ, ಬನಾಜಿ ಮುಂಬರುವ ತಿಂಗಳುಗಳಲ್ಲಿ ಸಾವಿನ ಸಂಖ್ಯೆ ಹೇಗೆ ಹೆಚ್ಚಾಗುತ್ತದೆ ಎಂಬುದರ ಕುರಿತು ಭಾರತೀಯ ಮತ್ತು ವಿದೇಶಿ ಸಂಸ್ಥೆಗಳ ಅಂದಾಜುಗಳ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಅಂದಾಜಿನ ಪ್ರಕಾರ, ಜೂನ್ ಮಧ್ಯದ ವೇಳೆಗೆ 4,04,000 ಅಧಿಕೃತ ದಾಖಲಾದ ಸಾವುಗಳು ಸಂಭವಿಸಬಹುದು ಎನ್ನುವ ಅವರು, ಇದನ್ನು ಉತ್ಪ್ರೇಕ್ಷೆ ಎಂದು ತಿಳಿಯಬೇಡಿ ಎಂದಿದ್ದಾರೆ.

ವಾಷಿಂಗ್ಟನ್‌ನ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಎವಾಲ್ಯುಯೇಷನ್ (ಐಎಚ್‌ಎಂಇ) ಮಾಡಿದ ಎರಡು ಅಂದಾಜುಗಳ ಕುರಿತು ಬನಾಜಿ ಪ್ರತಿಕ್ರಿಯಿಸಿದ್ದು, ಜುಲೈ ಅಂತ್ಯದ ವೇಳೆಗೆ 10,18,879 (10 ಲಕ್ಷಕ್ಕೂ ಹೆಚ್ಚು) ಕೋವಿಡ್ ಸಾವುಗಳು ಸಂಭವಿಸಬಹುದು ಎಂದು ಮೊದಲಿನ ವರದಿ ಹೇಳುತ್ತದೆ ಮತ್ತು ಇತ್ತೀಚಿನ ಎರಡನೆ ವರದಿ ಪ್ರಕಾರ ಸೆಪ್ಟೆಂಬರ್ ವೇಳೆಗೆ 1.4 ಮಿಲಿಯನ್ ( 14 ಲಕ್ಷ) ಕೋವಿಡ್ ಸಾವು ಸಂಭವಿಸಬಹುದು ಎಂದಿದ್ದಾರೆ.

‘ಐಎಚ್‌ಎಂಇ ಅಧ್ಯಯನದ ಅಂದಾಜಿನ ಪ್ರಕಾರ ಅಧಿಕೃತ ಮತ್ತು ದಾಖಲೆಯಿಲ್ಲದ ಸಾವುಗಳು ಇದರಲ್ಲಿ ಸೇರಿವೆ. ಎರಡನೆಯದಾಗಿ, ದಾಖಲಾದ ಸಾವುಗಳಿಗಿಂತ ದಾಖಲೆಯಿಲ್ಲದ ಸಾವುಗಳು ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನದ ಅಂದಾಜು ಹೇಳುತ್ತಿದೆ’ ಎಂದು ಬನಾಜಿ ತಿಳಿಸಿದ್ದಾರೆ.

ಸೆಪ್ಟೆಂಬರ್ ವೇಳೆಗೆ, ಭಾರತದ ಸಾವಿನ ಸಂಖ್ಯೆ 1.4 ಮಿಲಿಯನ್ ಎಂದು ನಿರೀಕ್ಷಿಸಿದಾಗ, ಅದು ಯುಎಸ್ ಸಾವಿನ ಸಂಖ್ಯೆ ಆ ಸಮಯದಲ್ಲಿ ಆಗುವುದಕ್ಕಿಂತ ಸುಮಾರು 5 ಲಕ್ಷ ಹೆಚ್ಚಾಗುತ್ತದೆ ಎಂದು ಐಎಚ್‌ಎಂಇ ಹೇಳಿದೆ. ಸೆಪ್ಟೆಂಬರ್ ವೇಳೆಗೆ, ಯುಎಸ್ ಸಾವಿನ ಸಂಖ್ಯೆ 9,49,000 ತಲುಪಲಿದೆ ಎಂದು ಈ ಸಂಸ್ಥೆ ಅಂದಾಜು ಮಾಡಿದೆ.

ದಿ ವೈರ್‌ಗಾಗಿ ಕರಣ್ ಥಾಪರ್ ಮುರಾದ್ ಬನಾಜಿ ಅವರೊಂದಿಗೆ ನಡೆಸಿದ ಸಂದರ್ಶನದ ಪೂರ್ಣ ವಿವರಕ್ಕಾಗಿ ಈ ವಿಡಿಯೋ ನೋಡಿ….

(ಇಲ್ಲಿ ಪ್ರಕಟಿಸಿದ ವಿವರಗಳು ಗಣಿತ ತಜ್ಞ ಬನಾಜಿಯವರ ಅನಿಸಿಕೆಗಳು. ನಾನುಗೌರಿ.ಕಾಂ ಸಂಪಾದಕೀಯದ ಅಭಿಪ್ರಾಯಗಳಲ್ಲ.)


ಇದನ್ನೂ ಓದಿ: ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ: ನರೇಂದ್ರ ಮೋದಿ ಜನಪ್ರಿಯತೆ ದಿಢೀರ್ ಕುಸಿತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಮಾಡದಿದ್ದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ: ಮಾದಿಗ ಸಮುದಾಯದ ನಿರ್ಣಯ

ಮಾ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾದಿಗ ಸಮುದಾಯಕ್ಕೆ ಸರ್ಕಾರಿ ನೇಮಕಾತಿಯಲ್ಲಿ ಶೇ.6 ಒಳಮೀಸಲಾತಿಯನ್ನು ಹಂಚಿಕೆ ಮಾಡದಿದ್ದರೆ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ...

ಗುರುಗ್ರಾಮ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಮೂವರು ಮಹಿಳಾ ಐಪಿಎಸ್ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ ಸುಪ್ರೀಂ

ಗುರುಗ್ರಾಮ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಬುಧವಾರ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ.  ಸಿಜೆಐ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ...

ಗೋವಾ | 25 ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಬಿಜೆಪಿ ಕೌನ್ಸಿಲರ್ ಮಗನ ಬಂಧನ

ಗೋವಾದ ಕುರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯ್ಕ್ ಅವರ ಮಗ ಸೋಹಮ್ ನಾಯ್ಕ್ (20) ಎಂಬಾತನನ್ನು ಸುಮಾರು 25ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಕ್ಷಿಣ ಗೋವಾ ಪೊಲೀಸರು ಬಂಧಿಸಿದ್ದಾರೆ.  ಆರೋಪಿ...

ಇರಾನ್‌ ಕದನ ವಿರಾಮಕ್ಕೆ 15 ಅಂಶಗಳ ಪ್ರಸ್ತಾಪ ಮುಂದಿಟ್ಟ ಟ್ರಂಪ್

ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭಗೊಂಡು ನಾಲ್ಕು ವಾರಗಳು ಪೂರ್ಣಗೊಳ್ಳುವಾಗ, ಈವರೆಗೆ ಸುಮಾರು 2000 ಜೀವಗಳನ್ನು ಬಲಿ ಪಡೆದ ಹಾಗೂ ಜಾಗತಿಕವಾಗಿ ಇಂಧನ ಸಮಸ್ಯೆಯನ್ನು ಹುಟ್ಟು ಹಾಕಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಇರಾನ್‌ ಮುಂದೆ...

ಗುಜರಾತ್: ತೀವ್ರ ವಿರೋಧದ ನಡುವೆಯೂ ಏಕರೂಪ ನಾಗರೀಕ ಸಂಹಿತೆ ಮಸೂದೆ ಅಂಗೀಕಾರ; ಇದು ‘ಮುಸ್ಲಿಂ ವಿರೋಧಿ’ ಎಂದ ಕಾಂಗ್ರೆಸ್

ಗುಜರಾತ್ ವಿಧಾನಸಭೆ ಮಂಗಳವಾರ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಅಂಗೀಕರಿಸಿದೆ. ಇದು ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ಸಾಮಾನ್ಯ ಕಾನೂನು ಚೌಕಟ್ಟನ್ನು ರಚಿಸುವ ಗುರಿಯನ್ನು...

ಅಜಿತ್ ಪವಾರ್ ಸಾವಿನ ಕುರಿತು ಹಲವು ಅನುಮಾನ : ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಈ ಹಿಂದೆ ಸರಣಿ ಸುದ್ದಿಗೋಷ್ಠಿಗಳನ್ನು ನಡೆಸಿದ್ದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, ಮಂಗಳವಾರ (ಮಾ.24) ಬೆಂಗಳೂರಿನ...

ಇಂಧನ ಕೊರತೆ ವದಂತಿ: ಆತಂಕದಿಂದ ಕುಕ್ಕರ್, ಹಾಲಿನ ಡಬ್ಬಿ, ನೀರಿನ ಬಕೆಟ್ ಗಳಲ್ಲಿ ಇಂಧನ ಸಂಗ್ರಹಣೆಗೆ ಮುಂದಾದ ಜನರು

ಇಂಧನ ಕೊರತೆಯ ವದಂತಿಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಜನರು ಕುಕ್ಕರ್, ಅಡುಗೆ ಪಾತ್ರೆ, ಹಾಲಿನ ಡಬ್ಬಿಗಳು, ನೀರಿನ ಟ್ಯಾಂಕರ್, ನೀರಿನ ಬಕೆಟ್ ಮತ್ತು ಬ್ಯಾರೆಲ್‌ಗಳಂತಹ ಅಡುಗೆ ಸಲಕರಣೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು...

ಪಂಜಾಬ್: ಮಹಿಳೆಗೆ ಲೈಂಗಿಕ ಶೋಷಣೆ, ಬೆದರಿಕೆ ಆರೋಪ; ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಬಂಧನ 

ಕಳೆದ ಸೆಪ್ಟೆಂಬರ್‌ನಿಂದ ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಅವರನ್ನು ಪಂಜಾಬ್ ಪೊಲೀಸರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸನೂರ್‌ನಿಂದ ಮೊದಲ ಬಾರಿಗೆ ಶಾಸಕರಾಗಿರುವ ಪಠಣಮಜ್ರಾ...

ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ : ಕಾಂಗ್ರೆಸ್ ಆರೋಪ

ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಿರುವನಂತಪುರಂ ಜಿಲ್ಲೆಯ ನೇಮಮ್...

2026ರ ಮೊದಲ 74 ದಿನಗಳಲ್ಲಿ 170 ಕಸ್ಟಡಿ ಸಾವುಗಳು ವರದಿ; ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ 

2026 ರ ಮೊದಲ 74 ದಿನಗಳಲ್ಲಿ (ಜನವರಿ 1 ರಿಂದ ಮಾರ್ಚ್ 15 ರವರೆಗೆ) ಭಾರತದಾದ್ಯಂತ ಒಟ್ಟು 170 ಕಸ್ಟಡಿ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ. ಗೃಹ...