ಲಂಡನ್‌ನ ಮಿಡಲ್‌ಸೆಕ್ಸ್ ವಿಶ್ವವಿದ್ಯಾಲಯದ ಹಿರಿಯ ಗಣಿತ ಉಪನ್ಯಾಸಕರೊಬ್ಬರು, ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ, ಭಾರತದ ಶೇ.80ರಷ್ಟು ಕೋವಿಡ್ ಸಾವುಗಳು ದಾಖಲಾಗಿಲ್ಲ ಅಥವಾ ಅವನ್ನು ಸರ್ಕಾರಗಳು ಮುಚ್ಚಿ ಹಾಕಿವೆ ಎಂದು ಹೇಳಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

ಮಾರ್ಚ್ 2020ರಿಂದ ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಪಥವನ್ನು (ಟ್ರಾಜೆಕ್ಟರಿ) ಸೂಕ್ಷ್ಮವಾಗಿ ಗಮನಿಸುತ್ತಿರುವ ಲಂಡನ್‌ನ ಮಿಡಲ್‌ಸೆಕ್ಸ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಹಿರಿಯ ಉಪನ್ಯಾಸಕ, ಭಾರತೀಯ ಮೂಲದ ಮುರಾದ್ ಬನಾಜಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2021ರ ಮೇ 8 ರ ಹೊತ್ತಿಗೆ, ಸರ್ಕಾರದ ಆರೋಗ್ಯ ಇಲಾಖೆಯ ಅಧಿಕೃತ ಸಾವಿನ ಸಂಖ್ಯೆ 2,38,000 ಕ್ಕಿಂತ ಹೆಚ್ಚಿದೆ. ಮುರಾದ್ ಬನಾಜಿ ಹೇಳುವಂತೆ, ದಾಖಲಾಗದ ಸಾವುಗಳು ಐದು ಪಟ್ಟು ಹೆಚ್ಚಿರುವ ಸಾಧ್ಯತೆ ಇದ್ದೇ ಇದೆ, ಒಟ್ಟು ಕೋವಿಡ್ ಸಾವಿನ ಸಂಖ್ಯೆ (ಅಧಿಕೃತ ಮತ್ತು ದಾಖಲೆಯಿಲ್ಲದ ಸಾವುಗಳುನ್ನು ಸೇರಿಸಿ) ಒಂದು ಮಿಲಿಯನ್ (ಹತ್ತು ಲಕ್ಷ) ದಾಟಿದೆ ಎಂದಿದ್ದಾರೆ.

ದಿ ವೈರ್‌ಗಾಗಿ ಕರಣ್ ಥಾಪರ್‌ಗೆ ನೀಡಿದ 33 ನಿಮಿಷಗಳ ಸಂದರ್ಶನದಲ್ಲಿ, ಬನಾಜಿ ಮುಂಬರುವ ತಿಂಗಳುಗಳಲ್ಲಿ ಸಾವಿನ ಸಂಖ್ಯೆ ಹೇಗೆ ಹೆಚ್ಚಾಗುತ್ತದೆ ಎಂಬುದರ ಕುರಿತು ಭಾರತೀಯ ಮತ್ತು ವಿದೇಶಿ ಸಂಸ್ಥೆಗಳ ಅಂದಾಜುಗಳ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಅಂದಾಜಿನ ಪ್ರಕಾರ, ಜೂನ್ ಮಧ್ಯದ ವೇಳೆಗೆ 4,04,000 ಅಧಿಕೃತ ದಾಖಲಾದ ಸಾವುಗಳು ಸಂಭವಿಸಬಹುದು ಎನ್ನುವ ಅವರು, ಇದನ್ನು ಉತ್ಪ್ರೇಕ್ಷೆ ಎಂದು ತಿಳಿಯಬೇಡಿ ಎಂದಿದ್ದಾರೆ.

ವಾಷಿಂಗ್ಟನ್‌ನ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಎವಾಲ್ಯುಯೇಷನ್ (ಐಎಚ್‌ಎಂಇ) ಮಾಡಿದ ಎರಡು ಅಂದಾಜುಗಳ ಕುರಿತು ಬನಾಜಿ ಪ್ರತಿಕ್ರಿಯಿಸಿದ್ದು, ಜುಲೈ ಅಂತ್ಯದ ವೇಳೆಗೆ 10,18,879 (10 ಲಕ್ಷಕ್ಕೂ ಹೆಚ್ಚು) ಕೋವಿಡ್ ಸಾವುಗಳು ಸಂಭವಿಸಬಹುದು ಎಂದು ಮೊದಲಿನ ವರದಿ ಹೇಳುತ್ತದೆ ಮತ್ತು ಇತ್ತೀಚಿನ ಎರಡನೆ ವರದಿ ಪ್ರಕಾರ ಸೆಪ್ಟೆಂಬರ್ ವೇಳೆಗೆ 1.4 ಮಿಲಿಯನ್ ( 14 ಲಕ್ಷ) ಕೋವಿಡ್ ಸಾವು ಸಂಭವಿಸಬಹುದು ಎಂದಿದ್ದಾರೆ.

‘ಐಎಚ್‌ಎಂಇ ಅಧ್ಯಯನದ ಅಂದಾಜಿನ ಪ್ರಕಾರ ಅಧಿಕೃತ ಮತ್ತು ದಾಖಲೆಯಿಲ್ಲದ ಸಾವುಗಳು ಇದರಲ್ಲಿ ಸೇರಿವೆ. ಎರಡನೆಯದಾಗಿ, ದಾಖಲಾದ ಸಾವುಗಳಿಗಿಂತ ದಾಖಲೆಯಿಲ್ಲದ ಸಾವುಗಳು ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನದ ಅಂದಾಜು ಹೇಳುತ್ತಿದೆ’ ಎಂದು ಬನಾಜಿ ತಿಳಿಸಿದ್ದಾರೆ.

ಸೆಪ್ಟೆಂಬರ್ ವೇಳೆಗೆ, ಭಾರತದ ಸಾವಿನ ಸಂಖ್ಯೆ 1.4 ಮಿಲಿಯನ್ ಎಂದು ನಿರೀಕ್ಷಿಸಿದಾಗ, ಅದು ಯುಎಸ್ ಸಾವಿನ ಸಂಖ್ಯೆ ಆ ಸಮಯದಲ್ಲಿ ಆಗುವುದಕ್ಕಿಂತ ಸುಮಾರು 5 ಲಕ್ಷ ಹೆಚ್ಚಾಗುತ್ತದೆ ಎಂದು ಐಎಚ್‌ಎಂಇ ಹೇಳಿದೆ. ಸೆಪ್ಟೆಂಬರ್ ವೇಳೆಗೆ, ಯುಎಸ್ ಸಾವಿನ ಸಂಖ್ಯೆ 9,49,000 ತಲುಪಲಿದೆ ಎಂದು ಈ ಸಂಸ್ಥೆ ಅಂದಾಜು ಮಾಡಿದೆ.

ದಿ ವೈರ್‌ಗಾಗಿ ಕರಣ್ ಥಾಪರ್ ಮುರಾದ್ ಬನಾಜಿ ಅವರೊಂದಿಗೆ ನಡೆಸಿದ ಸಂದರ್ಶನದ ಪೂರ್ಣ ವಿವರಕ್ಕಾಗಿ ಈ ವಿಡಿಯೋ ನೋಡಿ….

(ಇಲ್ಲಿ ಪ್ರಕಟಿಸಿದ ವಿವರಗಳು ಗಣಿತ ತಜ್ಞ ಬನಾಜಿಯವರ ಅನಿಸಿಕೆಗಳು. ನಾನುಗೌರಿ.ಕಾಂ ಸಂಪಾದಕೀಯದ ಅಭಿಪ್ರಾಯಗಳಲ್ಲ.)


ಇದನ್ನೂ ಓದಿ: ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ: ನರೇಂದ್ರ ಮೋದಿ ಜನಪ್ರಿಯತೆ ದಿಢೀರ್ ಕುಸಿತ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here