Homeಮುಖಪುಟಅಮೇಜಾನ್, ನೆಟ್ ಫ್ಲಿಕ್ಸ್ ಥರ ಅಂಗೈಯಲ್ಲಿ ಸಿನೆಮಾ ತೋರಿಸುವುದು ಕೋಟಿ ವ್ಯವಹಾರ ಎಂಬುದು ನಿಮಗೆ ಗೊತ್ತಾ?

ಅಮೇಜಾನ್, ನೆಟ್ ಫ್ಲಿಕ್ಸ್ ಥರ ಅಂಗೈಯಲ್ಲಿ ಸಿನೆಮಾ ತೋರಿಸುವುದು ಕೋಟಿ ವ್ಯವಹಾರ ಎಂಬುದು ನಿಮಗೆ ಗೊತ್ತಾ?

- Advertisement -
- Advertisement -

ತಂತ್ರಜ್ಞಾನ ಬದಲಾದಂತೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಿರುತ್ತವೆ .ಹಾಗೇಯೆ ಸಿನೆಮಾ ಮತ್ತು ದೃಶ್ಯ ಮಾಧ್ಯಮ ರಂಗದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳಾದವು. ಮೊದಲಿಗೆ ದೂರದರ್ಶನ ಬಂದಾಗ ಹಳ್ಳಿಗಳಲ್ಲಿ ಕೆಲವು ಶ್ರೀಮಂತರ ಮನೆಗಳಲ್ಲಿ ಮಾತ್ರ ಟಿವಿ ಇರುತ್ತಿತ್ತು. ಆಗ ಜನ ವಾರಕ್ಕೆ ಒಮ್ಮೆ ಬರುವ ಸಿನೆಮಾಗಾಗಿ ಕಾಯುತ್ತಿದ್ದರು. ಥೀಯೇಟರ್‍ ಗಳಿಗೆ ಹೋಗಲಾರದ ಜನ ವರ್ಷನು ಗಟ್ಟಲೇ ಹೊಸ ಸಿನೆಮಾ ಟಿವಿಯಲ್ಲಿ ಬರುವುದನ್ನು ಕಾಯುತ್ತಿದ್ದರು. ಈಗ ನಿರಂತರ 24/7 ಸುದ್ದಿವಾಹಿನಿಗಳ ಹಾಗೆ, ಸಿನೆಮಾ ಚಾನೆಲ್ ಗಳು ಸಹ ಬಂದಿದ್ದು ಸಾಕಷ್ಟು ಸಿನೆಮಾಗಳನ್ನು ನೋಡಬಹುದಾಗಿದೆ. ಆದರೆ ಈಗಲೂ ಬಿಡುಗಡೆಯಾದ ಹೊಸ ಸಿನೆಮಾ ಟಿವಿಯಲ್ಲಿ ಬರಲು ಸಾಕಷ್ಟು ತಿಂಗಳ ಸಮಯ ತೆಗೆದುಕೊಳ್ಳತ್ತಿದೆ. ಕೆಲವರು ತಮ್ಮ ನೆಚ್ಚಿನ ನಾಯಕರ ಸಿನೆಮಾಗಳನ್ನು ನೋಡಲೇಬೇಕೆಂದು ಪೈರೆಸಿ ಡಿವಿಡಿ, ಸಿಡಿ ನೋಡುತ್ತಿದ್ದರಾದರು ಅವು ಕ್ಯಾಮರ ಪ್ರಿಂಟ್ ಆಗಿದ್ದು ಗುಣಮಟ್ಟದ್ದಾಗಿರುತ್ತಿರಲಿಲ್ಲ.

ಅವರೆಲ್ಲರ ಸಮಸ್ಯೆ ನೀಗಿಸಿದ್ದೆ ನೆಟ್‍ಪ್ಲಿಕ್ಸ್, ಆಮೇಜಾನ್ ಪ್ರೈಮ್‍ನಂತಹ ಓವರ್ ದಿ ಟಾಪ್ (ಓಟಿಟಿ) ನಂತಹ ವೇದಿಕೆಗಳು. ಇವು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಒಂದು ತಿಂಗಳ ಒಳಗೆ ಜನರಿಗೆ ತಲುಪಿಸುತ್ತಿವೆ. ರಾಷ್ಟ್ರೀಯ, ಅಂತರಾಷ್ಟ್ರೀಯ, ಮತ್ತು ಸ್ಥಳೀಯ ಸಿನೆಮಾಗಳೇ ಅಲ್ಲದೇ ವೆಬ್‍ಸೀರಿಸ್, ಕಿರುಚಿತ್ರ, ಡಾಕ್ಯುಮೆಂಟರಿ, ಧಾರವಾಹಿ ಇನ್ನೂ ವಿಭಿನ್ನವಾದ ಮನರಂಜನೆ, ಜ್ಞಾನ ಇವೆಲ್ಲವನ್ನು ಕೊಡುತ್ತಿವೆ. ಟಿವಿಯಲ್ಲಿ ಮತ್ತು ಮೋಬೈಲ್‍ನಲ್ಲೂ ಸಮಯವಿದ್ದಾಗ ನೋಡುವ ಅವಕಾಶವನ್ನು ಕಲ್ಪಿಸಿವೆ. ಆದರೆ ಒಂದೇ ಕಂಡಿಷನ್ ಏನಪ್ಪ ಅಂದ್ರೆ ಇವುಗಳಿಗೆ ಇಂತಿಷ್ಟು ಎಂದು ದುಡ್ಡು ಕೊಡಬೇಕು. ಇದಕ್ಕಿಂತ ಮುಂಚೆ ಯೂಟೂಬ್‍ನಲ್ಲಿ ಕೆಲವು ಸಿನೆಮಾಗಳು ಸಿಗುತ್ತಿದ್ದವು ಆದರೆ ಓಟಿಟಿ ವೇದಿಕೆಗಳು ಹೊಸತನಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ.

ಒಟಿಟಿ ಅಂದರೆ ನೇರವಾಗಿ ಕಂಟೆಂಟ್ (ಮೀಡಿಯಾ)ಗಳನ್ನು ಇಂಟರ್ ನೆಟ್ ಮೂಲಕ ಕೇಬಲ್, ಟೆಲಿಕಮ್ಯೂನಿಕೇಶ್ ಇತರ ತಡೆಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವುದಾಗಿದೆ. ಇವುಗಳಲ್ಲಿ ಅಮೇಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ಗಳು ಇಂದು ಹೆಚ್ಚು ಪ್ರಸಿದ್ದವಾಗಿವೆ. ನೀವು ಒಂದು ಚಂದಾದಾರರಾದರೆ 5 ಟಿವಿ ಅಥವಾ ಮೊಬೈಲ್ ಗಳಲ್ಲಿ ಸೇವೆಯನ್ನು ಪಡೆಯಬಹುದಾಗಿದೆ. ನೂತನ ಚಲನಚಿತ್ರಗಳು, ರಿಯಾಲಿಟಿ ಶೋ ಗಳು, ಕ್ರೀಡೆ, ಧಾರವಾಹಿ, ವೆಬ್ ಸೀರೀಸ್ ಎಲ್ಲವೂ ಸಿಗುತ್ತವೆ. ಕೆಲವೊಂದು ಜಾಗತಿಕ ಸಿನೆಮಾಗಳು ನಿಮ್ಮೂರಿನ ಚಿತ್ರಮಂದಿರಕ್ಕೆ ಬರದೇ ಹೋಗಬಹುದು. ಆಗ ನೀವು ಚಿಂತಿಸಬೇಕಿಲ್ಲ. ಈ ಒಟಿಟಿಗಳ ಮೂಲಕ ಮನೆಯಿಂದಲೇ ವೀಕ್ಷಿಸಬಹುದಾಗಿದೆ.

ಅಂತರ್ಜಾಲದ ಯುಗದಲ್ಲಿ ಡಿಜಿಟಲ್ ಸೇವೆಗಳ ಉಪಯುಕ್ತತೆಗಳು ಶರವೇಗವಾಗಿ ವೃದ್ಧಿಸುತ್ತಿವೆ. 4ಜಿ ಸೇವೆಯ ರಂಗಪ್ರವೇಶದ ಜೊತೆ ಭಾರತದಲ್ಲಿ ಓಟಿಟಿ ವೇದಿಕೆಗಳ ಮೇಲೆ ಆನ್ ಡಿಮಾಂಡ್ ವಿಡಿಯೋ ಸೇವೆಗಳ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ಉದ್ಯಮಗಳು ಅಭಿಪ್ರಾಯಪಡುತ್ತಿವೆ. ಅಂತರಾಷ್ಟ್ರೀಯ ವೃತ್ತಿ ನೈಪುಣ್ಯ ಸೇವೆಗಳ ಕಂಪನಿ ಪ್ರೈಸ್ ವಾಟರ್‍ಹೌಸ್ ಕೂಪರ್ಸ್(ಪಿಡಬ್ಲೂಸಿ) ವರದಿಯ ಪ್ರಕಾರ 2018 ಮುಗಿಯುವ ವೇಳೆಗೆ ನಮ್ಮ ಭಾರತದಲ್ಲಿ ಓಟಿಟಿ ವಿಡಿಯೋ ಸೇವೆಗಳ ಮಾರುಕಟ್ಟೆ 63.8ಕೋಟಿ ಡಾಲರ್ (ಸುಮಾರು ರೂ 4,466 ಕೋಟಿ)ಗಳಿಗೆ ತಲುಪಿತ್ತು. 2023ರ ಹೊತ್ತಿಗೆ ವಾರ್ಷಿಕವಾಗಿ 21.8% ರಷ್ಟು ವೃದ್ದಿಯಿಂದ 170 ಕೋಟಿ ಡಾಲರ್ (ರೂ.11,900ಕೋಟಿಗಳಿಗೆ) ತಲುಪಲಿದೆ ಎಂದು ಪಿಡಬ್ಲೂಸಿ ಅಂದಾಜು ಮಾಡಿದೆ.

ವಿಡಿಯೋ ಆನ್ ಡಿಮಾಂಡ್‍ನ ಸಬ್‍ಸ್ಕ್ರಿಪ್ಶನ್ ಡಿಮಾಂಡ್ ವಾರ್ಷಿಕವಾಗಿ 23.3%ರಷ್ಟು ವೃದ್ದಿಯಾಗಿ 150 ಕೋಟಿ ಡಾಲರ್‍ಗಳಿಗೆ ತಲುಪಲಿದೆಯೆಂದು ಸಿಡಬ್ಲೂಸಿ ವರದಿಯಲ್ಲಿ ಹೇಳಿದೆ. ಅಂದರೆ 2023ರ ಹೊತ್ತಿಗೆ ಒಟಿಟಿ ಕಂಪನಿಗಳ ಒಟ್ಟು ಆದಾಯದಲ್ಲಿ ವಿಡಿಯೋಗಳ ಸಬ್‍ಸ್ಕ್ರಿಪ್ಶನ್ ನಿಂದ ಬರುವ ಪಾಲು 84%ರಷ್ಟಕ್ಕೆ ತಲುಪಲಿದೆ. ಈಗ ಜಾಹಿರಾತಿನಿಂದಲೇ ಹೆಚ್ಚು ಆದಾಯ ಬರುತ್ತಿದೆ. ಅಷ್ಟೇ ಅಲ್ಲದೇ ನಾಲ್ಕು ವರ್ಷಗಳಲ್ಲಿ ಭಾರತದ ಒಟಿಟಿ ಮಾರುಕಟ್ಟೆ ಕೋರಿಯಾ ದೇಶವನ್ನು ಮೀರಿಸಲಿದೆ. ಪ್ರಪಂಚದಲ್ಲೇ 8ನೇ ಅತಿದೊಡ್ಡ ಒಟಿಟಿ ಮಾರುಕಟ್ಟೆ ಆಗಲಿದೆಯೆಂದು ಸಿಡಬ್ಲೂಸಿ ವರದಿ ಹೇಳುತ್ತಿದೆ. 2023 ಕೊನೆಗೆ ಜಗತ್ತಿನ ಓಟಿಟಿ ಮಾರುಕಟ್ಟೆಯ ಪರಿಮಾಣ 7,280 ಕೋಟಿ ಡಾಲರ್‍ಗಳ ಮಟ್ಟಕ್ಕೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

ಮನರಂಜನೆಯ ಕ್ಷೇತ್ರದಲ್ಲಿ ಅತ್ಯಧಿಕ ವೃದ್ಧಿ ಓಟಿಟಿಯದೇ…

ಭವಿಷ್ಯತ್ತಿನಲ್ಲಿ ಮಾಧ್ಯಮ , ಮನರಂಜನೆ ರಂಗದಲ್ಲಿ ಓಟಿಟಿ ಸೇವೆಗಳೆ ಹೆಚ್ಚಾಗುತ್ತಿವೆಯೆಂದು ವಿಶ್ಲೇಷಕರು ಹೇಳುತ್ತಿದ್ದಾರೆ. ನಾಲ್ಕು ವರ್ಷದಲ್ಲಿ ಒಟಿಟಿ, ಆನಲೈನ್ ಗೇಮಿಂಗ್, ಅಂತರ್ಜಾಲ ಧಾರವಾಹಿ ವಿಭಾಗದಲ್ಲಿ ಅತ್ಯಧಿಕ ವೃಧ್ದಿಯನ್ನು ನಮೂದಿಸಿವೆ ಎಂದು ಹೇಳುತ್ತಿದೆ. ಎರ್ನೆಸ್ಟ್ ಅಂಡ್ ಯಂಗ್ ವರದಿಯ ಪ್ರಕಾರ 2020ರ ಹೊತ್ತಿಗೆ ದೇಶದಲ್ಲಿ ಒಟಿಟಿ ಸೇವೆಯ ವಿನಿಯೋಗದಾರರ ಸಂಖ್ಯೆ 50ಕೋಟಿಗಳಿಗೆ ತಲಪುವ ಅವಕಾಶವಿದೆ. ಪ್ರಸ್ತುತ ದೇಶದಲ್ಲಿ ಹಿಂದಿ, ಇಂಗ್ಲೀಷ್ ಸಿನೆಮಾಗಳು, ವೆಬ್‍ಸೀರಿಸ್‍ಗಳು, ಇತರ ವಿಡಿಯೋ ಕಂಟೆಂಟ್‍ಗಳನ್ನು ಕಲ್ಪಿಸುವ ಒಟಿಟಿ ಪ್ಲೇಯರ್‍ಗಳೇ ಅಧಿಕ, ಭವಿಷ್ಯತ್ತಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಆನ್ ಡಿಮಾಂಡ್ ವಿಡಿಯೋಗಳು ನೀಡುವ ಸಂಸ್ಥೆಗಳು ರಂಗಪ್ರವೇಶ ಮಾಡಲಿವೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಟಿವಿ ವಾಹಿನಿಗಳ ಹವಾ ಕಡಿಮೆಯಾಗಿಲ್ಲ

ಒಟಿಟಿ ಸೇವೆಗಳು ವೇಗವಾಗಿ ವೃದ್ಧಿ ಹೊಂದುತ್ತಿದ್ದರೂ ಸಹ ಕೇಬುಲ್, ಸೆಟಲೈಟ್ ಟಿವಿ ಚಾನೆಲ್ ಗಳ ಹವಾ ಮುಂದೆಯೂ ಸಹ ಇದೇ ರೀತಿ ಮುಂದುವರೆಯಲಿದೆ ಎಂದು ಮನರಂಜನೆಯ ಕ್ಷೇತ್ರದ ತಜ್ಞರ ಅಭಿಪ್ರಾಯವಾಗಿದೆ. ಕಳೆದ ವರ್ಷದ ಪೇ ಟಿವಿ ಸೇವೆಗಳ ಆದಾಯ 1000 ಕೋಟಿ ಡಾಲರ್ (70000ರೂ ಕೋಟಿ) ಗಳಿಗೆ ತಲುಪಲಿದೆ. 2023ಕ್ಕೆ ಭಾರತ ಜಗತ್ತಿನಲ್ಲೇ ಅತಿದೊಡ್ಡ ಟಿ.ವಿ ಜಾಹಿರಾತು ಮಾರುಕಟ್ಟೆಯಾಗಿ ಅವತರಿಸಲಿದೆ ಎಂದು ಸಿಡಬ್ಲೂಸಿ ಹೇಳುತ್ತಿದೆ. ಟಿವಿ ಜಾಹಿರಾತು ಮಾರುಕಟ್ಟೆ ವರ್ಷ ವರ್ಷ 10.7ರಷ್ಟು ವೃದ್ಧಿಸುತ್ತಿದ್ದು, ಬರುವ ನಾಲ್ಕು ವರ್ಷದಲ್ಲಿ 680 ಕೋಟಿ ಡಾಲರ್‍ಗಳಿಗೆ ತಲುಪಬಹುದೆಂದು ಅಂದಾಜು.

ಭಾರತದಲ್ಲಿ ಎಲ್ಲಾ ವರ್ಗದವರು ಸಿನೆಮಾಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಕಾಲಕಾಲಕ್ಕೆ ಹೊಚ್ಚಹೊಸ ಸಿನೆಮಾಗಳನ್ನು ಸಿಗುವಂತೆ ಮಾಡುವುದು ಕಷ್ಟ. ನಿರಂತರ ಅಧ್ಯಯನಗಳು, ಸಾಮಾಜಿಕ ಜಾಲತಾಣಗಳ ಮೂಲಕ ವಿನಿಯೋಗದಾರರು ಹಚ್ಚು ಇಷ್ಟಪಡುತ್ತಿರುವ ಸಿನೆಮಾಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಅಮೇಜಾನ್ ಪ್ರೈಮ್ ವಿಡಿಯೋ ಕಂಟೆಂಟ್ ವಿಭಾಗ ಅಧಿಪತಿ ವಿಜಯ್ ಸುಬ್ರಮಣ್ಯ ಹೇಳುತ್ತಾರೆ.

ಪ್ರಸ್ತುತ ದೇಶದಲ್ಲಿ ವಿಡಿಯೋ ಆನ್ ಡಿಮಾಂಡ್ ವ್ಯಾಪಾರಗಳಿಗೆ ಬಹುತೇಕ ಆದಾಯ ಜಾಹೀರಾತು ಮೂಲಕವೇ ಬರುತ್ತಿದೆ. ಭವಿಷ್ಯತ್ತಿನಲ್ಲಿ ಸಬ್‍ಸ್ಕ್ರಿಪಷನ್ ರೆವೆನ್ಯೂ ಭಾರಿ ಮೊತ್ತದಲ್ಲಿ ಬೆಳೆಯಲಿದೆ ಎಂದು ವೂಟ್ ವಿಡಿಯೋ ಆನ್ ಡಿಮಾಂಡ್ ವಿಭಾಗದ ಮುಖ್ಯಸ್ಥ ಆಕಾಶ್ ಬ್ಯಾನರ್ಜಿ ಅಭಿಪ್ರಾಯಪಡುತ್ತಾರೆ.

ನಮ್ಮ ದೇಶದಲ್ಲಿ ಸುಮಾರು 40 ಒಟಿಟಿ ಕಂಪೆನಿಗಳಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ನೆಟ್‍ಪ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಹಾಟ್‍ಸ್ಟಾರ್, ಜೆಡ್‍ಈಈ5, ಹಿರೋಸ್ ನವ್, ವೋಟ್, ಸೋನಿ ಲೈವ್, ಏರಟೆಲ್ ಟಿವಿ, ವೊಡಾಫೋನ್ ಪ್ಲೇ, ಜೀಯೋ ಟಿವಿ, ವಯಾಕಾಮ್ 18 ಮುಂತಾದವು..

ಪ್ರಪಂಚಾದ್ಯಾಂತ ಸಿನಿಮಾಗಳನ್ನು ಎಲ್ಲರು ನೋಡತ್ತಾರೆ. ಕೆಲವರಿಗೆ ಆಕ್ಷನ್ ಇಷ್ಟ ಆಗಬಹುದು, ಕೆಲವರಿಗೆ ಯುದ್ದ ಆಧಾರಿತ, ಫಿಕ್ಷನ್, ಕಾಮಿಡಿ, ಹಾರರ್ ಈ ರೀತಿ ಇಷ್ಟ ಆಗಬಹುದು. ಮುಂಚೆ ಟಿವಿಗಳಲ್ಲಿ ಸಿನೆಮಾ ಮತ್ತು ಧಾರಾವಾಹಿ ಮಾತ್ರ ಇತ್ತು. ಈಗ ರಿಯಾಲಿಟಿ ಶೋಗಳು ಬಂದಿದಾವೆ ಆದರೆ ಅವೂ ಕೂಡ ಸತ್ವ ಕಳೆದುಕೊಳ್ಳುತ್ತಿರೋ ಸಮಯದಲ್ಲಿ ಈ ಒಟಿಟಿಗಳಲ್ಲಿ ಯಾವುದೇ ಜಾಹೀರಾತು ಇಲ್ಲದೇ ಕುಟುಂಬದ ಜೊತೆ ಕೂತು ನೋಡಬಹುದು. ತಿಂಗಳಿಗೆ 100 ರಿಂದ 200ರೂ ನಷ್ಟು ಖರ್ಚು ಬರುತ್ತದೆ ಅಷ್ಟೇ. ಅದೇ ನೀವು ಕುಟುಂಬದ ಜೊತೆ ಥೀಯೆಟರ್‍ಗೆ ಹೋದರೆ ಇನ್ನೂ ಜಾಸ್ತಿ ಖರ್ಚು ಆಗುತ್ತೆ. ಆನ್‍ಲೈನ್ ಸ್ಟ್ರೀಮಿಂಗ್ ನಲ್ಲಿರುವ ಪ್ರಯೋಜನ ಅಂದರೆ ನಾವು ಎಲ್ಲಿಯವರೆಗೂ ನೋಡಿ ನಿಲ್ಲಿಸಿರುತ್ತೇವೋ, ಮತ್ತೆ ಸಮಯ ಸಿಕ್ಕಾಗ ಮತ್ತೆ ಅಲ್ಲಿಂದಲೇ ನೋಡಬಹುದು. ಹಾಗೂ ಯಾವುದೇ ದೇಶದ ಭಾಷೆಯಾಗಲಿ ಡಬ್ಬಿಂಗ್ ಇಲ್ಲದಿದ್ದರೆ ಸಬ್‍ಟೈಟಲ್ ಹಾಕಿಕೊಂಡು ನೋಡಬಹುದು. ಸಿನೆಮಾಗಳು ಅಂದ್ರೆ ಬರೀ ಮನರಂಜನೆಯಲ್ಲ ಇದರಿಂದ ಇತಿಹಾಸ, ಜ್ಞಾನ ಎಲ್ಲವೂ ಸಿಗುತ್ತದೆ ಎನ್ನುತ್ತಾರೆ ಟ್ರಾವೆಲ್ ಅಡ್ವೈಸರ್, ಸಿನೆಮಾ ಪ್ರೇಮಿ ಮೋಹನ್ ಕುಮಾರ್ ರವರು. ಇವರು ಬೇರೆ ಬೇರೆ ಭಾಷೆಗಳ ಸಿನೆಮಾಗಳನ್ನು ನೋಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಅವುಗಳನ್ನು ಪರಿಚಯಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ.

ಸೌಜನ್ಯ: ಆಂಧ್ರಜ್ಯೋತಿ ಬಿಸೆನೆಸ್ ಡೆಸ್ಕ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...