Homeಚಳವಳಿ100 ಗಂಟೆ ಪೂರೈಸಿದ ಅಂಬೇಡ್ಕರ್ ಓದು ಸರಣಿ: ಅಂಬೇಡ್ಕರ್ ಬರಹಗಳನ್ನು ಕೇಳಲು ಇರುವ ಜ್ಞಾನ ಭಂಡಾರವಿದು

100 ಗಂಟೆ ಪೂರೈಸಿದ ಅಂಬೇಡ್ಕರ್ ಓದು ಸರಣಿ: ಅಂಬೇಡ್ಕರ್ ಬರಹಗಳನ್ನು ಕೇಳಲು ಇರುವ ಜ್ಞಾನ ಭಂಡಾರವಿದು

ಶೇ.50 ರಷ್ಟು ಮಹಿಳೆಯರು ಓದಿದ್ದಾರೆ. ಸುಮಾರು 6-7 ಲಕ್ಷ ಜನರು ಕೇಳಿಸಿಕೊಂಡಿದ್ದಾರೆ. ಹಲವರು ಮೊದಲ ಬಾರಿಗೆ ಅಂಬೇಡ್ಕರ್ ಬರಹಗಳನ್ನು ಓದಿದ್ದಾರೆ. ಇದು ಸರಣಿಯ ಯಶಸ್ಸು.

- Advertisement -
- Advertisement -

ಇಂದು ಬಾಬಾ ಸಾಹೇಬ್ ಭೀಮ್‌ರಾವ್ ಅಂಬೇಡ್ಕರ್‌ರವರ 131ನೇ ಜನ್ಮದಿನ. ಅಂಬೇಡ್ಕರ್ ನೆನಪಿನಲ್ಲಿ ಜಗತ್ತಿನಾದ್ಯಂತ ಸಮಾನತೆಯ ದಿನವನ್ನಾಗಿ ಇಂದು ಆಚರಿಸಲಾಗುತ್ತಿದೆ. ಅಂಬೇಡ್ಕರ್ ಬದುಕು, ಬರಹ ಹೋರಾಟದ ಕುರಿತು ಚರ್ಚೆ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ಅಂಬೇಡ್ಕರ್‌ರವರ ಮೂಲ ಬರಹಗಳನ್ನು ಕನ್ನಡದಲ್ಲಿ ಕೇಳುವ ವಿಶಿಷ್ಟ ಪ್ರಯತ್ನವಾದ ‘ಅಂಬೇಡ್ಕರ್ ಓದು ಸರಣಿಯು’ 100 ಗಂಟೆಗಳ ಕಾಲ ಪೂರೈಸಿ ಮುನ್ನಡೆಯುತ್ತಿದೆ. ಆ ಮೂಲಕ ಡಿಜಿಟಲ್ ಮಾಧ್ಯಮಗಳಲ್ಲಿಯೂ ಅಂಬೇಡ್ಕರ್ ವಿಚಾರಗಳು ಹರಿದಾಡುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಜಾನಪದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಅರುಣ್ ಜೋಳದ ಕೂಡ್ಲಿಗಿಯವರು ಸೆಪ್ಟೆಂಬರ್ 7, 2020 ರಂದು ಆರಂಭಿಸಿದ ಈ ಅಂಬೇಡ್ಕರ್ ಓದು ಸರಣಿಯಲ್ಲಿ ಒಟ್ಟು 470 ಸಂಚಿಕೆಗಳು ಯೂಟ್ಯೂಬ್‌ನಲ್ಲಿ ಪ್ರಸಾರವಾಗಿವೆ. 321 ಜನ ಅಂಬೇಡ್ಕರ್‌ರವರ ಬರಹಗಳನ್ನು ಓದಿಕೊಂಡು ನಂತರ ಆಡಿಯೊ ಮಾಡಿ ಇನ್ನಿತರರು ಕೇಳುವಂತೆ ಮಾಡಿದ್ದಾರೆ. ಅದರಲ್ಲಿ 155 ಮಹಿಳೆಯರು ಸಹ ಸಹಭಾಗಿಗಳಾಗಿರುವುದು ವಿಶೇಷವಾಗಿದೆ.

Arun jolad Kudligi ಯೂಟ್ಯೂಬ್ ಚಾನೆಲ್‌ನಲ್ಲಿ ಈ ಎಲ್ಲಾ 470 ಸಂಚಿಕೆಗಳನ್ನು ಯಾರೂ ಬೇಕಾದರೂ ಉಚಿತವಾಗಿ ಕೇಳಬಹುದಾಗಿದೆ. ಅಂಬೇಡ್ಕರ್‌ರವರು ಬರೆದಿರುವ ‘ಹಿಂದೂ ಧರ್ಮದ ತತ್ವಜ್ಞಾನ, ಬುದ್ಧ ಮತ್ತು ಆತನ ಧಮ್ಮ, ಸ್ಟೇಟ್ಸ್ ಅಂಡ್ ಮೈನಾರೀಟಿಸ್’ ಸೇರಿದಂತೆ ಹಲವಾರು ಪುಸ್ತಕಗಳ ಪ್ರಮುಖ ಭಾಗಗಳನ್ನು ಆಡಿಯೋ ಮಾಡುವ ಮೂಲಕ “ಅಂಬೇಡ್ಕರ್ ಕೇಳು” ಎಂಬುದಾಗಿ ಈ ಅಭಿಯಾನ ನಡೆಯುತ್ತಿದೆ. ಅಲ್ಲದೆ ಈ ಸರಣಿಯಲ್ಲಿ ಅಂಬೇಡ್ಕರ್‌ರವರ ಲೇಖನಗಳು- ಬರಹಗಳು, ಪತ್ರಿಕಾ ಹೇಳಿಕೆಗಳು, ಭಾಷಣಗಳು, ಟಿಪ್ಪಣಿಗಳು ಮತ್ತು ಪತ್ರಗಳು ಸಹ ಇದ್ದು, ಅಂಬೇಡ್ಕರ್‌ರವರ ನಿಲುವುಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ.

“ಇಂದು ಹೆಚ್ಚಿನ ಜನರು ತಮ್ಮ ಹೆಚ್ಚಿನ ಸಮಯವನ್ನು ಡಿಜಿಟಲ್ ಸ್ಪೇಸ್‌ಗಳಲ್ಲಿ ವ್ಯಯಿಸುತ್ತಿದ್ದಾರೆ. ಅಲ್ಲಿಯೂ ಸಹ ಅಂಬೇಡ್ಕರ್‌ ಬರಹಗಳು ಕೇಳಲು, ಓದಲು ಸಿಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ಈ ಸರಣಿ ಆರಂಭಿಸಿದೆವು. ಎಲ್ಲರ ಅಂಬೇಡ್ಕರ್ ಎನ್ನುವ ತತ್ವದಡಿ ಸಹಭಾಗಿತ್ವದ ಒಳಗೊಳ್ಳುವಿಕೆಯ ಮೂಲಕ ಇದು ಯಶಸ್ಸು ಗಳಿಸಿದೆ. ಹಾಗಾಗಿ ಇದು ಎಲ್ಲರ ಸಹಭಾಗಿತ್ವದ ಗೆಲುವು ಎಂದು ಕರೆಯಬಹುದು” ಎನ್ನುತ್ತಾರೆ ಸರಣಿಯನ್ನು ಆರಂಭಿಸಿದ ಅರುಣ್ ಜೋಳದ ಕೂಡ್ಲಿಗಿಯವರು.

ಶೇ.50 ರಷ್ಟು ಮಹಿಳೆಯರು ಈ ಅಭಿಯಾನದ ಭಾಗವಾಗಿದ್ದಾರೆ. ಸುಮಾರು 6-7 ಲಕ್ಷ ಜನರು ಈ ಬರಹಗಳನ್ನು ಕೇಳಿಸಿಕೊಂಡಿದ್ದಾರೆ. ಇದುವರೆಗೂ ಅಂಬೇಡ್ಕರ್ ಬರಹಗಳನ್ನು ಓದಲು ಸಾಧ್ಯವಾಗದಿದ್ದವರು ಈ ಸರಣಿ ಆರಂಭವಾದ ನಂತರ ಮೊದಲ ಬಾರಿಗೆ ಅಂಬೇಡ್ಕರ್ ಬರಹಗಳನ್ನು ಓದಿದ್ದಾರೆ. ಅಂಬೇಡ್ಕರ್ ಚಿಂತನೆಗೆ ಪ್ರವೇಶ ಮಾಡಲಾಗದಿರುವವರನ್ನು ಗುರುತಿಸಿ ಒಳಗೊಳ್ಳುತ್ತಿದ್ದೇವೆ, ಇದೆಲ್ಲವೂ ಈ ಸರಣಿಯ ಸಾಧನೆ ಎಂದು ಅವರು ಹೇಳುತ್ತಾರೆ.

ಇನ್ನು ಮುಂದೆ ಅಂಬೇಡ್ಕರ್‌ರವರ ಬಹುಮುಖ್ಯವಾದ ದೊಡ್ಡ ಪುಸ್ತಕಗಳನ್ನು ಓದುವ ಯೋಜನೆ ಹಾಕಿಕೊಂಡಿದ್ದೇವೆ. ಹಿಂದೂ ಧರ್ಮದ ತತ್ವಜ್ಞಾನ ಎಂಬ 100 ಪುಟದ ಪುಸ್ತಕವನ್ನು 20 ಜನರು ಓದಲು ಹಂಚಿಕೊಂಡಿದ್ದೇವೆ. ಅಂಬೇಡ್ಕರ್‌ರವರ ಎಲ್ಲಾ ಬರಹಗಳನ್ನು ಇಲ್ಲಿ ತರಲು ಸಾಧ್ಯವಾಗದಿದ್ದರೂ ಅಂಬೇಡ್ಕರ್‌ರವರು ಬರೆದ, ಆಲೋಚಿಸಿದ ನೂರಾರು ಕ್ಷೇತ್ರಗಳ ಪ್ರಮುಖ ಭಾಗಗಳನ್ನು ಇಲ್ಲಿ ತರಲು ಉದ್ದೇಶಿಸಿದ್ದೇವೆ ಎಂದರು.

ಅಂಬೇಡ್ಕರ್ ಬರಹಗಳನ್ನು ಕೇಳಲು ಇರುವ ಅದ್ಭುತ ಜ್ಞಾನ ಭಂಡಾರವಾಗಿ ಈ ಅಂಬೇಡ್ಕರ್ ಓದು ಸರಣಿ ರೂಪುಗೊಂಡಿದೆ ಮತ್ತು ಮುಂದುವರೆಯುತ್ತಿದೆ. ನಿಮ್ಮ ಮೊಬೈಲ್‌ಗೆ ಒಂದು ಹೆಡ್‌ಫೋನ್ ಸಿಕ್ಕಿಸಿ ನಿಮ್ಮ ನಿಮ್ಮ ಕೆಲಸ ಮಾಡುತ್ತಲೇ ಅಂಬೇಡ್ಕರ್ ಚಿಂತನೆಗಳನ್ನು ಕೇಳಿಸಿಕೊಂಡು ಮನಸ್ಸಿಗೆ ಇಳಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ಮುಂದೆಯು ಕೇಳಲು ಚಾನೆಲ್ ಸಬ್‌ಸ್ಕ್ರೈಬ್‌ ಮಾಡಿ. ಅದೇ ರೀತಿಯಾಗಿ ನೀವು ಸಹ ಅಂಬೇಡ್ಕರ್ ಬರಹಗಳನ್ನು ಓದಿ ಸರಣಿಗೆ ಕೊಡುಗೆ ನೀಡಲು ಬಯಸಿದರೆ ಆಯೋಜಕರಾದ ಡಾ. ಅರುಣ್ ಜೋಳದ ಕೂಡ್ಲಿಗಿಯವರನ್ನು (9901445702) ಸಂಪರ್ಕಿಸಬಹುದು.


ಇದನ್ನೂ ಓದಿ: ಹಲವು ಧ್ವನಿಗಳಲ್ಲಿ ಅಂಬೇಡ್ಕರ್ ವಿಚಾರಗಳನ್ನು ಹಿಡಿದಿಡುತ್ತಿರುವ ಓದು ಅಭಿಯಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...