ಆಂಧ್ರಪ್ರದೇಶದ ವಿಜಯವಾಡದ ಸ್ವರಾಜ್ ಮೈದಾನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಶ್ವದ ಅತಿ ದೊಡ್ಡ ಪ್ರತಿಮೆಯನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಅನಾವರಣಗೊಳಿಸಿದ್ದಾರೆ.
ವಿಜಯವಾಡದ ಬಂದರ್ ರಸ್ತೆಯಲ್ಲಿರುವ ಸ್ವರಾಜ್ ಮೈದಾನದಲ್ಲಿ ‘ಸಾಮಾಜಿಕ ನ್ಯಾಯದ ಪ್ರತಿಮೆ’ ಹೆಸರಿನ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಅನಾವರಣ ಮಾಡಿದ್ದಾರೆ. ಪ್ರತಿಮೆ ಅನಾವರಣಗೊಳಿಸುವ ಮೊದಲು ಸಾಮಾಜಿಕ ಸಮತಾ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಜಗನ್ ಮೋಹನ್ ರೆಡ್ಡಿ, ಈ ಪ್ರತಿಮೆಯು ದಲಿತರು ಮತ್ತು ದೇಶದ ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸೇರಿದಂತೆ ಸಮಾಜದ ಇತರ ದೀನದಲಿತ ವರ್ಗಗಳ ಆತ್ಮವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
युरोप, अमेरिका असो की आशिया.
जम्मू असो वा कन्याकुमारी 💥तुम जलन बरकरार रखो और हम अपने जलवे बरकरार रखेंगे ♥️#StatueOfSocialJusticepic.twitter.com/dG3KcQWE0F
— Graphite (@Graphit1111) January 19, 2024
ವಿಗ್ರಹದ ಎತ್ತರವು 125 ಅಡಿ ಇದ್ದು, 85 ಅಡಿ ಇರುವ ಮೂರ್ತಿ ಪೀಠವನ್ನು ಸೇರಿಸಿದರೆ, ಪ್ರತಿಮೆಯ ಒಟ್ಟಾರೆ ಎತ್ತರವು 206 ಅಡಿಯಾಗಿದೆ. ಸ್ವರಾಜ್ ಮೈದಾನದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆಯ ಸುತ್ತ ಅನುಭವ ಕೇಂದ್ರ, 2000 ಆಸನ ಸಾಮರ್ಥ್ಯದ ಸಮ್ಮೇಳನ ಸಭಾಂಗಣ, ಉಪಾಹಾರ ಗೃಹ, ಮಕ್ಕಳ ಆಟದ ಆವರಣ, ಕೊಳಗಳು, ಸಂಗೀತ ಕಾರಂಜಿ ಹಾಗೂ ಕಾಲ್ನಡಿಗೆಯ ದಾರಿಯಂತಹ ನಾಗರಿಕ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಹಿಂದೆ ಸ್ವರಾಜ್ ಮೈದಾನ ಎಂದು ಕರೆಯಲ್ಪಡುತ್ತಿದ್ದ ಮೈದಾನ ಈಗ ಅಧಿಕೃತವಾಗಿ ಡಾ.ಬಿ.ಆರ್. ಅಂಬೇಡ್ಕರ್ ಸ್ವರಾಜ್ ಮೈದಾನವಾಗಿದೆ. ಇಂದಿನಿಂದ ಸ್ವರಾಜ್ ಮೈದಾನದ ದ್ವಾರಗಳು ತೆರೆಯಲಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಿಸಲಾಗಿರುವ 125 ಅಡಿ ಎತ್ತರದ ಪ್ರತಿಮೆಯ ವೀಕ್ಷಣೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಇದು ಭಾರತೀಯ ಸಂವಿಧಾನದ ಶಿಲ್ಪಿಗೆ ಸಲ್ಲಿಸುವ ಗೌರವವಾಗಿದೆ. ಈ ಪ್ರತಿಮೆಯು ಭಾರತದಲ್ಲಿನ ಅತಿ ಎತ್ತರದ ಧಾರ್ಮಿಕವಲ್ಲದ ಪ್ರತಿಮೆಯಾಗಿದೆ. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವರದಿ ಮಾಡಿದಂತೆ ಇದು ಭಾರತದಲ್ಲೇ ತಯಾರಿಸಿದ ಪ್ರತಿಮೆ ಆಗಿದೆ. ಆಂಧ್ರ ಪ್ರದೇಶ ಸರ್ಕಾರವು ಈ ಪ್ರತಿಮೆ ವೀಕ್ಷಣೆಗೆ ಅವಕಾಶವನ್ನು ಇಂದಿನಿಂದ ಕಲ್ಪಿಸಿದೆ.
ಈ ಯೋಜನೆಯನ್ನು ನೊಯ್ಡಾ ಮೂಲದ ಡಿಸೈನ್ ಅಸೋಸಿಯೇಟ್ಸ್ ಸಂಸ್ಥೆಗೆ ವಹಿಸಲಾಗಿತ್ತು. ಅನುಭವ ಕೇಂದ್ರವು ಕಾಲಚಕ್ರ ಮಹಾ ಮಂಟಪದ ಕಟ್ಟಡದಲ್ಲಿದೆ. ಇದು ಡಾ. ಅಂಬೇಡ್ಕರ್ ಅವರ ಮೌಲ್ಯಗಳು ಮತ್ತು ನೀತಿಗಳ ಬಗ್ಗೆ ಸ್ಫೂರ್ತಿ ನೀಡುತ್ತದೆ. ಗ್ರಂಥಾಲಯವನ್ನು ಕೂಡ ಅಲ್ಲಿ ನಿರ್ಮಿಸಲಾಗಿದೆ. ಕಂಚಿನ ಪ್ರತಿಮೆಯನ್ನು ದೆಹಲಿಯಲ್ಲಿ ಸಿದ್ಧಪಡಿಸಲಾಗಿದ್ದು. ಅದನ್ನು ಭಾಗಗಳಾಗಿ ವಿಜಯವಾಡಕ್ಕೆ ಸ್ಥಳಾಂತರಿಸಿ ನಿಯಮಿತ ರೀತಿಯಲ್ಲಿ ಸ್ಮೃತಿವನದಲ್ಲಿ ಸ್ಥಾಪಿಸಿ ಸುಂದರವಾಗಿ ಅಲಂಕರಿಸಲಾಗಿದೆ.
ನೆಲ ಮಹಡಿಯಲ್ಲಿ ನಾಲ್ಕು ಸಭಾಂಗಣಗಳಿದ್ದು, ಪ್ರತಿಯೊಂದೂ ನಾಲ್ಕು ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಅವುಗಳಲ್ಲಿ ಒಂದು ಸಿನಿಮಾ ಹಾಲ್ ಮತ್ತು ಉಳಿದ ಮೂರು ಹಾಲ್‌ಗಳಲ್ಲಿ ಅಂಬೇಡ್ಕರ್ ಅವರ ಇತಿಹಾಸವನ್ನು ಹೇಳುವ ಡಿಜಿಟಲ್ ಮ್ಯೂಸಿಯಂ ಇರುತ್ತದೆ.
ಈ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಪ್ರತಿಮೆ ಸ್ಥಾಪನೆ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರವು ವಿಜಯವಾಡದಲ್ಲಿ ಸ್ಥಾಪಿಸಿರುವ ಅಂಬೇಡ್ಕರ್ ಅವರ 206 ಅಡಿ ಮಹಾಶಿಲ್ಪವು ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೆ ಕೂಡ ವಿಶೇಷವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರವು ಈ ಪ್ರತಿಷ್ಠಿತ ಯೋಜನೆಯನ್ನು 2020ರಲ್ಲಿ 268 ಕೋಟಿಗಳ ಅಂದಾಜು ಬಜೆಟ್‌ನೊಂದಿಗೆ ಪ್ರಾರಂಭಿಸಿತು. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಜೂನ್ 2020ರಲ್ಲಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.
M A S S I V E 🔥#StatueOfSocialJustice#JaganannaForSocialJustice pic.twitter.com/6YzIgRdWNc
— Jagan Squad (@JaganSquad) January 17, 2024
ಇದನ್ನು ಓದಿ: ಇಂದೋರ್: ಅನಾಥಾಶ್ರಮದಲ್ಲಿ ಮಕ್ಕಳ ಮೇಲೆ ದೌರ್ಜನ್ಯ


