Homeಮುಖಪುಟದೆಹಲಿ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಪೊಲೀಸ್‌ ವಶಕ್ಕೆ

ದೆಹಲಿ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಪೊಲೀಸ್‌ ವಶಕ್ಕೆ

- Advertisement -
- Advertisement -

ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ವೇಳೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಮತ್ತು ದೆಹಲಿ ವಿಶ್ವವಿದ್ಯಾಲಯದ 80 ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ದೌಲತ್ ರಾಮ್ ಕಾಲೇಜಿನ ಮಾಜಿ ಸಹಾಯಕ ಪ್ರೊಫೆಸರ್ ರಿತು ಸಿಂಗ್ ಅವರನ್ನು ಬೆಂಬಲಿಸಿ ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಲಾಗಿದೆ. 2020ರಲ್ಲಿ ರೀತು ಸಿಂಗ್ ಅವರನ್ನು ದೌಲತ್ ರಾಮ್ ಕಾಲೇಜು ಸೇವೆಯಿಂದ ವಜಾಗೊಳಿಸಿತ್ತು. ಅವರು ಕಾಲೇಜು ಆಡಳಿತ ಮಂಡಳಿಯ ಜಾತಿ ಆಧಾರಿತ ತಾರತಮ್ಯ ಹಾಗೂ ಕಿರುಕುಳದ ವಿರುದ್ಧ ಪ್ರತಿಭಟಿಸುತ್ತಿದ್ದರು. ಈ ವಿಷಯವು ಇದೀಗ ನ್ಯಾಯಾಲಯದಲ್ಲಿದೆ.

ಆಜಾದ್ ತನ್ನ ಬೆಂಬಲಿಗರು ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಲು ಉತ್ತರ ಕ್ಯಾಂಪಸ್‌ಗೆ ಬಂದಿದ್ದರು. ಪ್ರತಿಭಟನೆ ನಡೆಸಲು ಅನುಮತಿ ಇಲ್ಲದ ಕಾರಣ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಂದ್ರಶೇಖರ್‌ ಆಝಾದ್ ಸೇರಿದಂತೆ ಸುಮಾರು 80 ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬುರಾರಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ದೆಹಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್‌ನ ಸದಸ್ಯೆ ಮಾಯಾ ಜಾನ್ ಅವರು ಪ್ರತಿಕ್ರಿಯಿಸಿದ್ದು, ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ಒಳಗೆ ಮತ್ತು ಕ್ಯಾಂಪಸ್‌ನ ಹೊರಗೆ ಪ್ರಜಾಪ್ರಭುತ್ವವು  ವೇಗವಾಗಿ ಕುಗ್ಗುತ್ತಿದೆ ಮತ್ತು ಇದು ಅತ್ಯಂತ ದುರದೃಷ್ಟಕರ. ಇಂದು ನಡೆದಿರುವುದು ನಿಜಕ್ಕೂ ಖಂಡನೀಯ ಅಧಿಕಾರಿಗಳು ಪ್ರತಿಭಟನೆಗೆ ಕಡಿವಾಣ ಹಾಕುತ್ತಿರುವ ರೀತಿ ಖಂಡನೀಯ,  ಆಡಳಿತಾತ್ಮಕ ಸರ್ವಾಧಿಕಾರತ್ವ, ದಮನ ಮತ್ತು ಹೊಣೆಗಾರಿಕೆಯ ಕೊರತೆಯನ್ನು ಸಾಮೂಹಿಕವಾಗಿ ಪ್ರತಿರೋಧಿಸಲು ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕು ಎಂದು ಮಾಯಾ ಜಾನ್ ಹೇಳಿದ್ದಾರೆ.

ಚಂದ್ರಶೇಖರ್ ಆಝಾದ್

ಚಂದ್ರಶೇಖರ್ ಆಝಾದ್ ಸಾಮಾಜಿಕ ಕಾರ್ಯಕರ್ತ, ಅಂಬೇಡ್ಕರ್ ವಾದಿ, ವಕೀಲ ಮತ್ತು ರಾಜಕಾರಣಿಯಾಗಿದ್ದಾರೆ. ಅವರು ಆಝಾದ್‌ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಮತ್ತು ಭೀಮ್‌ ಆರ್ಮಿಯ ಸಹ-ಸಂಸ್ಥಾಪಕರಾಗಿದ್ದಾರೆ.  ಫೆಬ್ರವರಿ 2021ರಲ್ಲಿ ಟೈಮ್ ನಿಯತಕಾಲಿಕವು ಸಿದ್ದಪಡಿಸಿದ್ದ 100 ನಾಯಕರ ವಾರ್ಷಿಕ ಪಟ್ಟಿಯಲ್ಲಿ ಚಂದ್ರಶೇಖರ್ ಆಜಾದ್ ಸ್ಥಾನವನ್ನು ಪಡೆದಿದ್ದರು.

ಏನಿದು ರೀತು ಸಿಂಗ್ ಪ್ರಕರಣ?

ದೆಹಲಿ ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ.ರೀತು ಸಿಂಗ್ ಅವರು ದೌಲತ್ ರಾಮ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಅವರನ್ನು ಯಾವುದೇ ಸೂಚನೆ ನೀಡದೆ ದೌಲತ್ ರಾಮ್ ಕಾಲೇಜಿನಿಂದ ವಜಾಗೊಳಿಸಲಾಗಿತ್ತು.

ನಾನು ದಲಿತ ಸಮುದಾಯಕ್ಕೆ ಸೇರಿದ ಕಾರಣ ನನ್ನನ್ನು ವಜಾಗೊಳಿಸಲಾಗಿದೆ ಎಂದು ಡಾ.ರೀತು ಸಿಂಗ್ ಹೇಳಿದ್ದರು. ದೆಹಲಿ ವಿಶ್ವವಿದ್ಯಾನಿಲಯದ ಕಲಾ ವಿಭಾಗದ ಹೊರಗೆ ಜಾತಿ ತಾರತಮ್ಯದ ವಿರುದ್ಧ ಡಾ.ರೀತು ಸಿಂಗ್ ಪ್ರತಿಭಟನೆ ನಡೆಸಿದ್ದರು. ದೌಲತ್ ರಾಮ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಸವಿತಾ ರಾಯ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಅವರು ಪ್ರತಿಭಟಿಸಿದ್ದರು. ಅವರು ನನ್ನ ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಆಗಸ್ಟ್ 2019ರಲ್ಲಿ ರೀತು ಸಿಂಗ್ ಅವರು ದೌಲತ್ ರಾಮ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾದ ತಾತ್ಕಾಲಿಕ ಉದ್ಯೋಗ ಕೋಟಾದಲ್ಲಿ ಅವರನ್ನು ನೇಮಿಸಲಾಗಿತ್ತು. ಆದರೆ ಒಂದು ವರ್ಷದ ನಂತರ ಅವರನ್ನು ಆ.2020ರಲ್ಲಿ ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ಇದನ್ನು ಓದಿ: ವಿಜಯವಾಡದಲ್ಲಿ ವಿಶ್ವದ ಅತಿದೊಡ್ಡ ‘ಅಂಬೇಡ್ಕರ್’ ಪ್ರತಿಮೆ ಅನಾವರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...