Homeಕರ್ನಾಟಕಒಂದು ರಾಜೀನಾಮೆ ಹುಟ್ಟಿಸಿರುವ ಪ್ರಶ್ನೆಗಳು - ಅರುಣ್ ಜೋಳದ ಕೂಡ್ಲಿಗಿ

ಒಂದು ರಾಜೀನಾಮೆ ಹುಟ್ಟಿಸಿರುವ ಪ್ರಶ್ನೆಗಳು – ಅರುಣ್ ಜೋಳದ ಕೂಡ್ಲಿಗಿ

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ನಿಷ್ಠಾವಂತ ದಕ್ಷ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸಾಮಿ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳನ್ನು ಒಳಗೊಂಡಂತೆ ಚರ್ಚೆಯಾಗುತ್ತಿದೆ. ಈ ಸಂಗತಿಯನ್ನು ಹೇಗೆ ನೋಡಬೇಕು? ಈ ಘಟನೆ ವಯಕ್ತಿಕ ನಿರ್ಧಾರವೆ ಆಗಿದ್ದರೂ, ಇದು ಹುಟ್ಟಿಸುವ ಪ್ರಶ್ನೆಗಳಾವುವು? ಈಗಿರುವ ನಿಷ್ಠಾವಂತ ಪೋಲೀಸ್ ಅಧಿಕಾರಿಗಳಲ್ಲಿ ಮೂಡಿಸಿದ ಭಾವನೆ ಯಾವುದು? ಪೊಲೀಸ್ ಇಲಾಖೆ ಸೇರಿ ದಕ್ಷ ಅಧಿಕಾರಿಯಾಗಬೇಕೆಂಬ ಕನಸು ಕಟ್ಟಿದ ಯುವಜನರ ಅಭಿಪ್ರಾಯವೇನು? ಇಂತಹ ಅಲ್ಪಸಂಖ್ಯಾತ ದಕ್ಷ ಅಧಿಕಾರಿಗಳ ಕಾರಣಕ್ಕೇ ಪೊಲೀಸ್ ಇಲಾಖೆಯ ಮೇಲೆ ಭರವಸೆ ಇಟ್ಟ ಜನರ ಪರ್ಯಾಯವೇನು? ಅಥವಾ ಇಂತಹ ದಕ್ಷ ಅಧಿಕಾರಿಯನ್ನು ಉಳಿಸಿಕೊಳ್ಳಬೇಕಾದ ಸಮಾಜದ ಪ್ರಾಮಾಣಿಕತೆಯು ಬ್ರಷ್ಟಗೊಂಡಿದೆಯೇ? ಎನ್ನುವಂತಹ ಪ್ರಶ್ನೆಗಳಿವೆ. ಹಾಗೆಯೇ ಪೋಲಿಸ್ ಇಲಾಖೆಯನ್ನು ಒತ್ತಡರಹಿತಗೊಳಿಸಬೇಕೆನ್ನುವ ಸಿದ್ಧ ಉತ್ತರವಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸ್ವತಃ ಅಣ್ಣಾಮಲೈ ಬರೆದ ಪತ್ರದಲ್ಲಿ ಮಧುಕರ್ ಶೆಟ್ಟಿ ಸಾವನ್ನು ಪ್ರಸ್ತಾಪಿಸಿದ್ದಾರೆ. ಮಧುಕರ್ ಶೆಟ್ಟಿ ಬ್ರಷ್ಟಾಚಾರವನ್ನು ತೊಡೆದು ಹಾಕುವ ಖಡಕ್ ಅಧಿಕಾರಿಯಾಗಿದ್ದರು. ಅವರ ಸಾವು ಚರ್ಚಾಸ್ಪದವಾಗಿತ್ತು. ಏನಿಲ್ಲವೆಂದರೂ ಬ್ರಷ್ಟಾಚಾರ ವಿರೋಧಿ ಪ್ರಾಮಾಣಿಕ ಅವಿರತ ದುಡಿಮೆಗೂ ಅವರ ಸಾವಿಗೂ ನಂಟಿತ್ತು. ಇದು ಅಣ್ಣಾಮಲೈ ಅವರನ್ನು ಕಾಡಿರಬಹುದು. ಈ ಪತ್ರ ವ್ಯಕ್ತಿಯೊಬ್ಬರ ಬಿಡುವಿಲ್ಲದ ಸಾಮಾಜಿಕ ತೊಡಗುವಿಕೆ, ಕುಟುಂಬದ ಜತೆಗಿನ ಒಡನಾಟ, ತನ್ನದೇ ವಯಕ್ತಿಕ ಖುಷಿ ಸಂಭ್ರಮಗಳ ಕುರಿತ ಜಿಜ್ಞಾಸೆಗಳನ್ನು ಹುಟ್ಟಿಸಿದೆ. ಸಾಮಾಜಿಕ ತೊಡಗುವಿಕೆಯಲ್ಲಿ ಕುಟುಂಬದ ಆಪ್ತತೆ ಮತ್ತು ವಯಕ್ತಿಕ ಖುಷಿಗಳನ್ನು ಕಳೆದುಕೊಳ್ಳುವ `ಸಾರ್ವಜನಿಕತೆ ಮತ್ತು ವಯಕ್ತಿಕತೆಯ’ ಚರ್ಚೆಯನ್ನು ಮುನ್ನಲೆಗೆ ತಂದಿದೆ.

ಅಣ್ಣಾಮಲೈ ಅವರಂತೆ ರಾಜಿನಾಮೆ ಕೊಡದೆಯೂ, ತಮ್ಮ ಕೆಲಸದಲ್ಲಿದ್ದುಕೊಂಡೇ ಯಾವುದೇ ಒತ್ತಡಗಳನ್ನು ಮೈಮೇಲೆ ಹಾಕಿಕೊಳ್ಳದೆ ಕುಟುಂಬದ ಜೊತೆ ಆರಾಮಾಗಿವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಅವರಲ್ಲಿ ಬಹುಪಾಲು ವೃತ್ತಿ ಬದ್ಧತೆಗೆ ಬದಲಾಗಿ ಕುಟುಂಬದ ಬದ್ಧತೆ ಹೆಚ್ಚಿರುವವರು. ಇಡೀ ವ್ಯವಸ್ಥೆಯೇ ಬ್ರಷ್ಟಗೊಂಡಾಗ, ನೀನೊಬ್ಬ ಪ್ರಮಾಣಿಕನಾದರೆ ಸಮಾಜ ಬದಲಾಗುವುದೇ? ಎನ್ನುವ ಸಿನಿಕತನ ಬಹುಜನರನ್ನು ಪ್ರಭಾವಿಸಿದೆ. ಹೀಗಾಗಿ ಅನೇಕ ಅಧಿಕಾರಿ ವರ್ಗದವರು `ನನ್ನೊಬ್ಬನಿಂದ’ ಏನಾಗುವುದಿದೆ ಎಂದು ವ್ಯವಸ್ಥೆಗೆ ಹೊಂದಿಕೊಳ್ಳುತ್ತಾರೆ. ಸಮಸ್ಯೆ ಇರುವುದು ಈ `ನನ್ನೊಬ್ಬನಿಂದ’ ಎನ್ನುವವರ ಸಂಖ್ಯೆಯೂ ದೊಡ್ಡದಾಗುತ್ತಿರುವುದು. ಈ ನನ್ನಂಥವರೊಬ್ಬರಿಂದಲೂ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ ಎನ್ನುವುದನ್ನು ಅಣ್ಣಾಮಲೈ ತೋರಿಸಿದ್ದರು. ಹಾಗಾಗಿ ಅವರ ರಾಜಿನಾಮೆ ಅಘಾತ ತಂದಿದೆ.

ಪೊಲೀಸ್ ಇಲಾಖೆಯ ಆಚೆಗೂ ಸಮಾಜದ ಒಳಿತಿಗಾಗಿ ದುಡಿಯುವ ಬದ್ಧತೆ ಇರುವ ಯಾವುದೇ ಕ್ಷೇತ್ರದ ಕೆಲಸಗಾರರೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲಾರರು. ಸದಾ ತಿರುಗಾಡುತ್ತ ಬರೆವ ಚಿಂತಕ ಪ್ರೊ.ರಹಮತ್ ತರೀಕೆರೆ ಅವರ ಮಗಳು ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವುದಿಲ್ಲವೆಂದು ಅಪ್ಪನ ಕುರಿತು ಸಿಡುಕಿನ ಪದ್ಯ ಬರೆದಿದ್ದಳು. ಈ ನಡುವೆ ಎರಡು ಲಕ್ಷದಷ್ಟು ಸಂಬಳ ಪಡೆದು ಕನಿಷ್ಠ ಪಾಠವನ್ನೂ ಮಾಡದೆ ಅರಾಮಾಗಿ ಕುಟುಂಬದ ಜತೆಗಿರುವ ಅದ್ಯಾಪಕರಿದ್ದಾರೆ.

ಉಸಿರುಕಟ್ಟಿಸಿ ದುಡಿಸಿಕೊಳ್ಳುವ ಕಾರ್ಪೋರೇಟ್ ವಲಯದ ನೌಕರ ವರ್ಗವೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲಾರರು. ಬಹುತೇಕ ಒಪ್ಪಂದದ ದುಡಿಮೆಯಾದ ಕಾರಣ ಅಣ್ಣಾಮಲೈ ಅವರಂತೆ ಬಿಡುಗಡೆಯೂ ಕಷ್ಟವಿದೆ. ಅಂತೆಯೇ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಬದ್ಧತೆಯ ಅವಿರತ ದುಡಿಮೆಗೂ ಕುಟುಂಬದ ಜತೆಗಿನ ಒಡನಾಟಕ್ಕೂ ನೇರ ಸಂಬಂಧವಿದೆ. ಬಹುತೇಕ ತಮ್ಮ ದುಡಿಮೆಯಲ್ಲಿ ಬದ್ಧತೆ ಕಡಿಮೆ ಮಾಡಿಕೊಂಡವರು ಕುಟುಂಬದ ಜತೆ ಹೆಚ್ಚು ಸಮಯ ಕಳೆಯಬಲ್ಲರು. ಅಪವಾದವೆಂಬಂತೆ ಈ ಎರಡನ್ನೂ ಸರಿದೂಗಿಸುವವರ ಸಂಖ್ಯೆ ವಿರಳ. ಹೀಗಾಗಿ ಅಪ್ರಾಮಾಣಿಕತೆ, ಬ್ರಷ್ಟತೆ, ಸೋಮಾರಿತನ, ತನ್ನ ಕರ್ತವ್ಯದ ನಿಷ್ಠೆ ಇಲ್ಲದಿರುವಂತಹ ಗುಣಗಳಿಗೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವಿಕೆಗೂ ಸಂಬಂಧವಿದೆ. ಈ ನೆಲೆಯಲ್ಲಿ ಅಣ್ಣಾಮಲೈ ಅವರ ರಾಜಿನಾಮೆ ಸಾರ್ವಜನಿಕತೆ ಮತ್ತು ವಯಕ್ತಿಕತೆಯ ಚರ್ಚೆಗೆ ಹೊಸ ದಾರಿಗಳನ್ನು ತೆರೆದಿದೆ.

ಎಷ್ಟೋ ಜನ ಆಡಳಿತದಲ್ಲಿ ದಕ್ಷರಾಗಿದ್ದು, ಸಮಾಜದ ಬಗೆಗಿವ ದೃಷ್ಟಿಕೋನದಲ್ಲಿ ದೋಷವಿರುತ್ತದೆ. ಕಿರಣ್ ಬೇಡಿಯಂತಹ ದಕ್ಷ ಅಧಿಕಾರಿ ಕ್ರಿಮಿನಲ್ ಟ್ರೈಬ್ ಬಗೆಗೆ ಅರಣ್ಯವಾಸಿ ಬುಡಕಟ್ಟುಗಳೆಲ್ಲಾ ಕಳ್ಳರು ಎನ್ನುವ ಅರ್ಥದ ಟ್ವೀಟ್ ಮಾಡಿದ್ದರು. ಅಂತಹ ದಕ್ಷ ಅಧಿಕಾರಿಣಿಗೆ ಬುಡಕಟ್ಟುಗಳ ಬಗೆಗೆ ಮಾನವೀಯ ತಿಳಿವಿರಲಿಲ್ಲ. ಹೀಗೆ ಆಡಳಿತಗಾರರಾಗಿ ಪ್ರಾಮಾಣಿಕರಾಗಿದ್ದವರೂ, ಜಾತಿವಾದಿಯಾಗಿಯೂ, ಕೋಮುವಾದಿಯಾಗಿಯೂ, ಕಾರ್ಪೋರೇಟ್ ಪರವಾಗಿಯೂ ವಿಚಾರ ಭ್ರಷ್ಟರಾಗಿರಲಿಕ್ಕೆ ಸಾಧ್ಯವಿದೆ. ಆದರೆ ಅಣ್ಣಾಮಲೈ ಅವರ ಕೆಲವು ಮಾತು ಭಾಷಣಗಳನ್ನು ಕೇಳಿದರೆ ದಕ್ಷ ಅಧಿಕಾರಿ ಹೇಗೋ, ಸಮಾಜದ ಬಗೆಗೆ ಡೆಮಾಕ್ರಟಿಕ್ ಆದ ಜನಪರ ತಿಳಿವಿನಲ್ಲಿ ಸ್ಪಷ್ಟತೆ ಇದ್ದಂತಿದೆ. ಈ ತಿಳಿವೂ ಕೂಡ ಅವರನ್ನು ರಾಜಿನಾಮೆಗೆ ಪ್ರೇರೇಪಿಸಿರಬಹುದು. ಇದುವೆ ಅವರ ಮುಂದಿನ ದಾರಿಯನ್ನೂ ಸ್ಪಷ್ಟಗೊಳಿಸಬೇಕಿದೆ.

ಈ ಹೊತ್ತಿನ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸತ್ಯದ ಪಾಲುದಾರಿಕೆಗಿಂತ ಸುಳ್ಳಿನ ಪಾಲುದಾರಿಕೆ ಹೆಚ್ಚಿದೆ. ಅಂತೆಯೇ ಭ್ರಷ್ಟತೆಯ ಪಾಲುದಾರರೂ ಹೆಚ್ಚುತ್ತಿದ್ದಾರೆ. ಈ ಮಧ್ಯೆ ಲೋಕಕ್ಕೂ ತನಗೂ ಸಂಬಂಧವಿಲ್ಲ ಎಂದು ಮೌನಧರಿಸುವ ಆಡಳಿತ ವರ್ಗ ಮತ್ತು ಮಧ್ಯಮವರ್ಗದ ಸಜ್ಜನರ ಸಂಖ್ಯೆ ದೊಡ್ಡದಿದೆ. ಇಂತಹ ಸಜ್ಜನರ ಮೌನ ಇವೆಲ್ಲವಕ್ಕಿಂತ ಅಪಾಯಕಾರಿಯಾಗಿದೆ. ಹೀಗಾಗಿ ಅಣ್ಣಾಮಲೈ ಅವರ ರಾಜಿನಾಮೆ ಬಹುಜನರನ್ನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರಕವಾಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...