Homeಚಳವಳಿಒಳಮೀಸಲಾತಿ ಕೇಳುವವರೂ... ನೈತಿಕತೆಯೂ.... : ರಘೋತ್ತಮ ಹೊ.ಬ

ಒಳಮೀಸಲಾತಿ ಕೇಳುವವರೂ… ನೈತಿಕತೆಯೂ…. : ರಘೋತ್ತಮ ಹೊ.ಬ

ದಲಿತರ ಮೇಲೆ ದೌರ್ಜನ್ಯ ನಡೆದಾಗ, ದಬ್ಬಾಳಿಕೆ ನಡೆದಾಗ ದೀರ್ಘ ಮೌನಕ್ಕೆ ಶರಣಾಗುವ ಬಲಪಂಥೀಯ ಸಂಘಟನೆಗಳು ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಸಭೆ ಸೇರುತ್ತವೆ, ಚರ್ಚೆ ನಡೆಸುತ್ತವೆ ಅಂದರೆ ಇದರ ಹಿಂದಿರುವ ಹುನ್ನಾರ?

- Advertisement -
- Advertisement -

ಸುಪ್ರೀಂ ಕೋರ್ಟಿನ ಈಚಿನ ತೀರ್ಪಿನ ನಂತರ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟಜಾತಿಗಳೊಳಗಿನ ಒಳಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ರಚನೆಯಾಗಿದ್ದ ಸದಾಶಿವ ಆಯೋಗ ಪರಿಶಿಷ್ಟರಲ್ಲಿ ಬರುವ ಮಾದಿಗ ಮತ್ತು ಸಮಾನಾಂತರ ಜಾತಿಗಳಿಗೆ ಶೇ.6, ಹೊಲೆಯ ಮತ್ತು ಅದರ ತತ್ಸಮಾನ ಜಾತಿಗಳಿಗೆ ಶೇ.5, ಸ್ಪೃಶ್ಯ ಗುಂಪಿಗೆ ಶೇ.3 ಮತ್ತು ಇತರೆ ಪರಿಶಿಷ್ಟ ಸಮುದಾಯಗಳಿಗೆ ಶೇ.1 ಎಂದು ಮೀಸಲಾತಿಯನ್ನು ಹಂಚಿ 2012ರಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಪ್ರಸ್ತಾಪಿಸಿತ್ತು. ಖಂಡಿತ, ಸಾಮಾಜಿಕ ನ್ಯಾಯದ ಪರ ನಿಲ್ಲುವ ಯಾರೂ ಕೂಡ ಈ ವರದಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ವರದಿ ಅಕ್ಷರಶಃ ಒಪ್ಪತಕ್ಕದ್ದಾಗಿದೆ. ಆದರೆ ಯಾವುದೇ ಒಂದು ವರದಿ ಅದು ಅದೆಷ್ಟು ಪರಿಪೂರ್ಣ, ಅದೆಷ್ಟು ನ್ಯಾಯಬದ್ಧ, ಹಾಗೆಯೇ ಅದರ ಸುತ್ತ ಹುಟ್ಟಿಕೊಳ್ಳುವ ಅನೇಕ ಪ್ರಶ್ನೆಗಳು… ಖಂಡಿತ, ಸದಾಶಿವ ಆಯೋಗದ ಈ ವರದಿಯ ಸುತ್ತಲೂ ಅಂತಹದ್ದೇ ಒಂದಷ್ಟು ಪ್ರಶ್ನೆಗಳು, ವಿಚಾರಗಳು ಹುಟ್ಟಿಕೊಂಡೇ ತೀರುತ್ತವೆ.

ಉದಾಹರಣೆಗೆ ಮಾದಿಗ ಮತ್ತು ಸಂಬಂಧಿತ ಜಾತಿಗಳ ಗುಂಪಿನ ಜನಸಂಖ್ಯೆ ಶೇ.33.4 ಮತ್ತು ಹೊಲೆಯ ಮತ್ತು ಸಂಬಂಧಿತ ಜಾತಿಗಳ ಗುಂಪಿನ ಸಂಖ್ಯೆ ಶೇ.32 ಎಂದು ಆಯೋಗ ಹೇಳಿದೆ. ಅಂದರೆ ಇವೆರಡು ಸಮುದಾಯಗಳ ಜನಸಂಖ್ಯೆ ವ್ಯತ್ಯಾಸ ಶೇಕಡ 1 ಅಷ್ಟೇ. ವಿಚಾರವೆಂದರೆ ಹೆಚ್ಚುಕಮ್ಮಿ ಸಮ ಸಂಖ್ಯೆಯ ಜನಸಂಖ್ಯೆ ಹೊಂದಿರುವ ಈ ಸಮುದಾಯಗಳಿಗೆ ಶೇ.15ರ ಮೀಸಲಾತಿಯನ್ನು ಆಯೋಗ ಜನಸಂಖ್ಯೆಯನುಸಾರ ಸಮನಾಗಿ ಹಂಚಬೇಕಿತ್ತು. ಆದರೆ ಈ ನೀತಿಯಿಂದ ದೂರ ಸರಿದಿರುವ ಆಯೋಗ ಒಂದು ಗುಂಪಿಗೆ ಶೇ.6 ಮತ್ತು ಮತ್ತೊಂದು ಗುಂಪಿಗೆ ಶೇ.5 ಎಂದು ಮೀಸಲಾತಿ ಹಂಚಿ ಕೈತೊಳೆದುಕೊಂಡಿದೆ. ಹಾಗೆಯೇ 96 ಲಕ್ಷ ಜನರ ಸಮೀಕ್ಷೆ ನಡೆಸಿರುವ ಆಯೋಗ ಒಂದೆಡೆ ಯಾವ ಗುಂಪಿನಲ್ಲೂ ಗುರುತಿಸಿಕೊಳ್ಳದ 6 ಲಕ್ಷ ಪರಿಶಿಷ್ಟಜಾತಿ ಜನರಿದ್ದಾರೆ ಎಂದು ಹೇಳಿದೆ. ಆಶ್ಚರ್ಯವೆಂದರೆ ಈ ಆರು ಲಕ್ಷ ಜನರಿಗೆ ಯಾವುದೇ ಪ್ರಮಾಣದ ಮೀಸಲಾತಿ ನಿಗದಿಪಡಿಸಲು ಆಯೋಗ ಹೋಗಿಲ್ಲ! ಹಾಗಿದ್ದರೆ ಈ ಜನ ಪರಿಶಿಷ್ಟ ಜಾತಿಯ ಮೀಸಲಾತಿಯ ಅಡಿಯ ವ್ಯಾಪ್ತಿಯಲ್ಲಿ ಬರುವುದಿಲ್ಲವೇ? ಆಯೋಗ ಉತ್ತರಿಸದೆ ಬಿಟ್ಟಿರುವ ಪ್ರಶ್ನೆ ಇದು. ಇನ್ನು ಆಯೋಗ ತನ್ನ ವರದಿಯಲ್ಲಿ ತಲೆಮಾರುಗಳಿಗೆ ಮೀಸಲಾತಿ ಕೊನೆಗೊಳ್ಳಬೇಕಾದ ವಿಚಾರ ಪ್ರಸ್ತಾಪಿಸಿದೆ. ಕೆನೆ ಪದರದ ಅಂಶವನ್ನು ಕೂಡ ಆಯೋಗ ಪ್ರಸ್ತಾಪಿಸಿದೆ. ಖಂಡಿತ ಇವೆರಡು ಅಂಶಗಳನ್ನು ಪರಿಶಿಷ್ಟರು ಒಪ್ಪಲಿಕ್ಕೆ ಸಾಧ್ಯವೇ ಇಲ್ಲ.

ಅಂದಹಾಗೆ ಒಳಮೀಸಲಾತಿಯ ಹೋರಾಟದ ಹಿನ್ನೆಲೆಯಲ್ಲಿ ಇನ್ನೊಂದು
ಸೈದ್ದಾಂತಿಕ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದೆಂದರೆ ಈಚೆಗೆ ಕೆಲವರು ಅದರಲ್ಲೂ ಒಳಮೀಸಲಾತಿಯ ಪ್ರಬಲ ಪ್ರತಿಪಾದಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಒಂದು ಮಾತೆಂದರೆ “ಒಳಮೀಸಲಾತಿ ವಿರೋಧಿಗಳು ಅಂಬೇಡ್ಕರ್ ವಿರೋಧಿಗಳಾಗುತ್ತಾರೆ” ಎಂದು‌. ಆದರೆ ವಾಸ್ತವದ ವಿಚಾರವೆಂದರೆ ಒಳಮೀಸಲಾತಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವವರು, ಈ ಸಂಬಂಧ ಹೋರಾಡುತ್ತಿರುವವರು ಬಹುತೇಕರು ತಮ್ಮ ಮನೆ, ಬೀದಿ, ಆಚರಣೆಗಳಲ್ಲಿ ಅಂಬೇಡ್ಕರ್ ಫೋಟೋ ಇಟ್ಟುಕೊಳ್ಳಲು ಹೋಗುವುದಿಲ್ಲ ಅಥವಾ ಇಟ್ಟುಕೊಳ್ಳುವುದಿಲ್ಲ. ಪ್ರಶ್ನೆಯೇನೆಂದರೆ ಇಂತಹವರಿಗೆ ಸಾಮಾಜಿಕ ನ್ಯಾಯದ ಸಮರ್ಥ ಪ್ರತಿಪಾದನೆಯಾದ ಒಳಮೀಸಲಾತಿಯನ್ನು ಕೇಳುವ ನೈತಿಕತೆಯಾದರೂ ಏನಿದೆ? ಎಂಬುದು.

ವಾಸ್ತವವಾಗಿ ಬಾಬಾಸಾಹೇಬ್ ಅಂಬೇಡ್ಕರರ ಜೊತೆ ಅವರ ಆಪ್ತ ಸಹಾಯಕರಾಗಿ ಇದ್ದವರು ಚಮ್ಮಾರ ಸಮುದಾಯದ ನಾನಕ್ ಚಂದ್ ರತ್ತುರವರು. ಅವರ ಇಂಗ್ಲೀಷ್ ಬರಹಗಳನ್ನು ಸಂಪುಟ ರೂಪದಲ್ಲಿ ತಂದವರು ಅವರ ಜೊತೆ ಸದಾ ಇರುತ್ತಿದ್ದ ಭಂಗಿ ಅಥವಾ ಪೌರಕಾರ್ಮಿಕ ಸಮುದಾಯದ ಭಗವಾನ್ ದಾಸ್ ರವರು. ಇನ್ನು ಅಂಬೇಡ್ಕರರಿಗೆ ಒಂದು ರೀತಿಯಲ್ಲಿ ರಕ್ಷಣೆಯ ರೀತಿ ಇದ್ದದ್ದು ಕರ್ನಾಟಕದ ಮೂಲದವರಾದ ಸಮಗಾರ ಸಮುದಾಯದ ಶ್ರೀ ಶಂಕರಾನಂದ ಶಾಸ್ತ್ರಿಯವರು. ಅಂದರೆ ದೇಶದ ಸಮಸ್ತ ಅಸ್ಪೃಶ್ಯ ಸಮುದಾಯಗಳು ಉಪಜಾತಿ ಭೇದವಿಲ್ಲದೆ ಅಂಬೇಡ್ಕರರ ಜೊತೆ ಇದ್ದರು. ಸ್ವತಃ ಅಂಬೇಡ್ಕರ್ ಅವರು ಕೂಡ ಈ ಬಗ್ಗೆ 1939 ಜುಲೈ 2ರಂದು ಮುಂಬೈನಲ್ಲಿ ಮಾತನಾಡುತ್ತಾ “ನಾನು ಪರಿಶಿಷ್ಟಜಾತಿಯ ಇಡೀ ಸಮುದಾಯದ ಪರ ಕೆಲಸ ಮಾಡಿದ್ದೇನೆಯೇ ಹೊರತು ಯಾವುದೇ ಒಂದು ಪಂಗಡ ಅಥವಾ ಉಪಜಾತಿ ಪರ ಅಲ್ಲ” ಎಂದಿದ್ದಾರೆ. ಹೀಗಿರುವಾಗ ವಿಶೇಷವಾಗಿ ಕರ್ನಾಟಕದಲ್ಲಿ ಅಂಬೇಡ್ಕರ್ ಜಯಂತಿ ಬಂದರೆ ಯಾವುದೋ ಒಂದು ಜಾತಿ ಅಥವಾ ಜಾತಿಯ ಸಂಘಟನೆಗಳು ಅಂಬೇಡ್ಕರ್ ಜಯಂತಿ ಆಚರಿಸುತ್ತವೆ! ಉಳಿದ ಜಾತಿಗಳು ಮೀಸಲಾತಿಯ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬರುತ್ತಿದ್ದರೂ, ತಕ್ಕಮಟ್ಟಿಗಾದರು ಉಪಯೋಗ ಪಡೆಯುತ್ತಿದ್ದರೂ ಕೃತಜ್ಞತೆಗೂ ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲ ಅಥವಾ ಅವರು ಫೋಟೋ ಮತ್ತೊಂದು ಮಗದೊಂದು ಇಡುವುದಿಲ್ಲ. ದುರಂತವೆಂದರೆ ಅದೇ ಅಂಬೇಡ್ಕರ್ ಗಳಿಸಿಕೊಟ್ಟ ಮೀಸಲಾತಿಯ ಹಂಚಿಕೆಯ ವಿಚಾರ ಬಂದಾಗ ನಾಮುಂದು ತಾಮುಂದು! ಖಂಡಿತ, ಒಳಮೀಸಲಾತಿ ಹಂಚಿಕೆಯ ಚರ್ಚೆಯ ಈ ಸಂದರ್ಭದಲ್ಲಿ ಪ್ರಸ್ತಾಪಿಸಲೇಬೇಕಾದ ನೋವಿನ ವಿಷಯವಿದು.

ಮತ್ತೊಂದು ಆಶ್ಚರ್ಯದ ಹಾಗೂ ಆತಂಕದ ವಿಚಾರವೆಂದರೆ ಒಳಮೀಸಲಾತಿಯ ಈ ವಿಚಾರದಲ್ಲಿ ಬಲಪಂಥೀಯ ಸಂಘಟನೆಗಳು ಸಕ್ರಿಯವಾಗಿರುವುದು. ಅಂದರೆ ಯಾವ ದಲಿತರ ಮೇಲೆ ದೌರ್ಜನ್ಯ ನಡೆದಾಗ, ದಬ್ಬಾಳಿಕೆ ನಡೆದಾಗ ದೀರ್ಘ ಮೌನಕ್ಕೆ ಶರಣಾಗುತ್ತವೆಯೋ ಅಂತಹ ಬಲಪಂಥೀಯ ಸಂಘಟನೆಗಳು ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಸಭೆ ಸೇರುತ್ತವೆ, ಚರ್ಚೆ ನಡೆಸುತ್ತವೆ. ಪ್ರಶ್ನೆಯೆಂದರೆ ಇದರ ಹಿಂದಿರುವ ಹುನ್ನಾರ? ದಲಿತರನ್ನು ಪರಸ್ಪರ ಎತ್ತಿಕಟ್ಟುವ ತಂತ್ರವೇ?

ಒಳಮೀಸಲಾತಿ ಜಾರಿಯಾಗಲೇಬೇಕು. ಆದರೆ ಅದರ ಸುತ್ತ ಹುಟ್ಟಿಕೊಳ್ಳುವ ಅಥವಾ ಅವಿತಿರುವ ಒಂದಷ್ಟು ಇಂತಹ ವಿಚಾರಗಳು ಚರ್ಚೆಗೆ ಬರಬೇಕು. ಆ ಮೂಲಕ ನೊಂದ ಎಲ್ಲಾ ಜನಗಳು ಈಗಲಾದರೂ ತಮ್ಮ ಒಳಮರ್ಮವನ್ನು ಹೊರಜಗತ್ತಿಗೆ ಎಸೆದು ಬಾಬಾಸಾಹೇಬ್ ಅಂಬೇಡ್ಕರ್ ರನ್ನು ತಮ್ಮ ಒಳ ಮನೆಗೆ ಬರಮಾಡಿಕೊಂಡು ಒಳಮೀಸಲಾತಿಯನ್ನು ನಗುನಗುತ್ತಾ ಹಂಚಿಕೊಳ್ಳಬೇಕು. ಸಮಸಮಾಜದ ಹಾದಿಯಲ್ಲಿ ಪರಸ್ಪರ ಒಂದಾಗಿ ಹೆಜ್ಜೆ ಇಡಬೇಕು ಎಂಬುದೇ ಕಳಕಳಿ.

ರಘೋತ್ತಮ ಹೊ.ಬ

(ಹೊಸ ತಲೆಮಾರಿನ ಪ್ರಖರ ಚಿಂತಕರಲ್ಲಿ ರಘೋತ್ತಮ ಸಹಾ ಒಬ್ಬರು. ಬಹುಜನ ಚಳವಳಿಯ ಭಾಗವಾಗಿ ಗಟ್ಟಿದನಿಯಲ್ಲಿ ವಿಚಾರ ಮಂಡಿಸುತ್ತಾ ಗಮನ ಸೆಳೆದ ಅವರು, ಅಂಬೇಡ್ಕರ್‍ರನ್ನು ಆಳವಾಗಿ ಓದಿಕೊಂಡಿದ್ದು ತಮ್ಮ ನಿಷ್ಠುರ ಅನಿಸಿಕೆಗಳನ್ನು ಹೇಳಲು ಹಿಂಜರಿಯದ ವ್ಯಕ್ತಿತ್ವವುಳ್ಳವರು.)


ಇದನ್ನೂ ಓದಿ: ಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಇಂತಹ ಅರ್ದಸತ್ಯದ ಲೇಖನಗಳನ್ನು ನಾನು ನಾನುಗೌರಿ ಹೆಸರಿನ ಪತ್ರಿಕೆಯಲ್ಲಿ ನಿರೀಕ್ಷಿಸಿರಲಿಲ್ಲ
    ಗೌರಿ ಯಾವತ್ತೂ ಅರ್ಧ ಸತ್ಯಗಳ ಪರವಾಗಿರಲಿಲ್ಲ

    • ಒಳಮೀಸಲಾತಿ ಕುರಿತು ಇದುವರೆಗೂ 20 ಕ್ಕೂ ಹೆಚ್ಚು ಲೇಖಕರು ಬರೆದಿದ್ದಾರೆ. ಇದು ಅವರ ವಯಕ್ತಿಕ ಅಭಿಪ್ರಾಯ.. ಚರ್ಚೆ, ವಾದ, ಸಂವಾದಕ್ಕೆ ಮುಕ್ತ ಅವಕಾಶವಿದೆ. ನೀವು ಬರೆಯಿರಿ

  2. ಲೇಖನದ ಒಳಮರ್ಮ ಮೇಲ್ನೋಟಕ್ಕೆ ಅಷ್ಟುಸುಲಭಕ್ಕೆ ಸಾಮಾನ್ಯರಿಗೆ ಅರ್ಥವಾಗಲ್ಲ….
    ಆದರೆ ನಾನೂಗೌರಿ ಪತ್ರಿಕೆಯ ಬುದ್ವಂತರಿಗೆ ಅರ್ಥವಾಗಲಿಲ್ಲವೇ…. ಅಥವಾ ….!!?

  3. ಸಾರ್ ನೀವು ಪೂರ್ವಗ್ರಹ ಪೀಡಿತರಾಗಿ ಮಾತಡಿದ್ದಿರಿ ಅನ್ಸುತ್ತೆ ಯಾಕಂದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲೂ ಮಾದಿಗರು ಮೊದಲು ನೆನೆಸುವುದು ಅಂಬೇಡ್ಕರ್ ಅವರನ್ನೇ ನಿಮಗೆ ಸಂದೆಹಗಳಿದ್ದರೆ ನಮ್ಮ ಜಿಲ್ಲೆಯಲ್ಲಿ ಬಂದು ನೋಡಿ ಅಂಬೇಡ್ಕರ್ ಅಭಿಮಾನಿಗಳು ಅಲ್ಲದವರು ಯಾರಾದ್ರು ಇದ್ದರೆ ಅದು ಸ್ಪೃಶ್ಯ ಪರಿಶಿಷ್ಟರು ವಿನಃ ಹೊಲೇಮಾದಿಗರಲ್ಲ.. ನಮ್ಮ ಜಿಲ್ಲೆಯ ಪ್ರತಿ ಊರೂ ಪ್ರತಿ ತಾಲೂಕಿನಲ್ಲೂ ಅಂಬೇಡ್ಕರ್ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ ಸಮುದಾಯ ಒಂದಿದ್ದರೆ ಅದು ಮಾದಿಗರು ಎಂದು ಹೇಳಬಲ್ಲೆ, ಅಷ್ಟಕ್ಕೂ ಹೊಲೆ ಮಾದಿಗರು ಒಂದಾಗಿ ಒಳಮೀಸಲಾತಿ ಪ್ರಯೋಜನ ಪಡೆಯಬೇಕೆ ವಿನಃ ನಮ್ಮ ಕಿತ್ತಾಟ ದಿಂದ ಮೂರನೇಯವರು ಹಾಗೂ ಕೆಲವು ರಾಜಕೀಯ ಪಕ್ಷಗಳಿಗೆ ಲಾಭವಾಗಬಾರದು
    ಜೈ ಭೀಮ್..

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...