Homeಮುಖಪುಟಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡೇಟಿಗೆ 3 ಬಿಜೆಪಿ ಕಾರ್ಯಕರ್ತರು ಬಲಿ!

ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡೇಟಿಗೆ 3 ಬಿಜೆಪಿ ಕಾರ್ಯಕರ್ತರು ಬಲಿ!

ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಇಂತಹ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದ ಕುಲ್ಗಂ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸ್ಥಳೀಯ ಯುವ ವಿಭಾಗದ ಮುಖಂಡ ಸೇರಿದಂತೆ ಮೂವರು ಬಿಜೆಪಿ ಕಾರ್ಯಕರ್ತರು ಗುರುವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಕರ್ತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ವೈ.ಕೆ ಪೊರಾ ಪ್ರದೇಶದಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ.

“ಇಂದು, ಕುಲ್ಗಂ ಪೊಲೀಸರಿಗೆ ಗ್ರಾಮದ ವೈ.ಕೆ. ಪೋರಾದಲ್ಲಿ ನಡೆದ ಭಯೋತ್ಪಾದಕ ಅಪರಾಧ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಅಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಅಪರಾಧ ಸ್ಥಳಕ್ಕೆ ತಲುಪಿದ್ದಾರೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: 370 ನೇ ವಿಧಿಯ ಮರುಸ್ಥಾಪನೆಗೆ ’ಪೀಪಲ್ಸ್ ಅಲಯನ್ಸ್’!

ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

“ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗುಲಾಮ್ ಅಹ್ಮದ್ ಯಾತೂ ಅವರ ಪುತ್ರ ಫಿದಾ ಹುಸೇನ್ ಯಾತೂ, ವೈ.ಕೆ.ಪೋರಾ ನಿವಾಸಿ ಸೋಮರ್ ದೇವ್ಸರ್ ನಿವಾಸಿ ಅಬ್ದುಲ್ ರಶೀದ್ ಬೀಗ್ (ಬಿಜೆಪಿ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ) ಅವರ ಪುತ್ರ ಉಮರ್ ರಶೀದ್ ಬೀಗ್ (ಬಿಜೆಪಿ ಕಾರ್ಯಕರ್ತ) ಮತ್ತು ವೈ.ಕೆ.ಪೋರಾ ನಿವಾಸಿ ಮೊಹಮ್ಮದ್ ರಂಜಾನ್ (ಬಿಜೆಪಿ ಕಾರ್ಯಕರ್ತ) ಅವರ ಪುತ್ರ ಉಮರ್ ರಂಜಾನ್ ಹಜಮ್” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ 1,350 ಕೋಟಿ  ರೂ. ಆರ್ಥಿಕ ಪ್ಯಾಕೇಜ್ ಘೋಷಣೆ

ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. “3 ಜನ ಯುವ ಕಾರ್ಯಕರ್ತರನ್ನು ಕೊಂದಿರುವುದನ್ನು ಖಂಡಿಸುತ್ತೇನೆ. ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಉತ್ಸಾಹಿ ಕೆಲಸಗಳನ್ನು ಮಾಡುತ್ತಿದ್ದರು. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 4 ಜಿ ಸೇವೆ ವಿಸ್ತರಣೆ ಇಲ್ಲ: ಗೃಹ ಸಚಿವಾಲಯ

ರಾಷ್ಟ್ರೀಯ ಕಾನ್ಫರೆನ್ಸ್‌ ಮುಖಂಡ ಒಮರ್ ಅಬ್ದುಲ್ಲಾ ಈ ದಾಳಿಯನ್ನು ಖಂಡಿಸಿದ್ದು, “ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ಭಯಾನಕ ಸುದ್ದಿ. ಭಯೋತ್ಪಾದಕ ದಾಳಿಯಲ್ಲಿ 3 ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯ್ಯುವುದನ್ನು ನಾನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ. ಅಲ್ಲಾಹನು ಮೃತರಿಗೆ ಜನ್ನತ್‌ನಲ್ಲಿ ಸ್ಥಾನ ನೀಡಲಿ ಮತ್ತು ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಗಳು ಬಲವನ್ನು ಪಡೆಯಲಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪಿಡಿಪಿ ಮುಖ್ಯಸ್ಥ ಮೆಹಬೂಬಾ ಮುಫ್ತಿ ಕೂಡ ಈ ಘಟನೆ ಕುರಿತು ಟ್ವೀಟ್ ಮಾಡಿದ್ದಾರೆ. “ಕುಲ್ಗಾಂನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯ ಬಗ್ಗೆ ಕೇಳಿ ದುಃಖಿತವಾಗಿದೆ. ಅವರ ಕುಟುಂಬಗಳಿಗೆ ನನ್ನ ಸಂತಾಪ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಹೊಸ ಆಡಳಿತ ನಿಯಮ ಪ್ರಕಟಿಸಿದ ಗೃಹ ಸಚಿವಾಲಯ

ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರದೇಶವನ್ನು ಕಣ್ಗಾವಲಿನಲ್ಲಿಡಲಾಗಿದೆ. ಭಯೋತ್ಪಾದಕರ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

ಜುಲೈನಲ್ಲಿ ಬಿಜೆಪಿ ಮುಖಂಡ ಶೇಖ್ ವಾಸಿಮ್, ಅವರ ತಂದೆ ಮತ್ತು ಸಹೋದರರನ್ನು ಬಂಡಿಪೋರಾದಲ್ಲಿ ಭಯೋತ್ಪಾದಕರು ಕೊಂದರು. ಇದಾದ ಒಂದು ತಿಂಗಳ ನಂತರ ಕುಲಗಂನಲ್ಲಿ ಬಿಜೆಪಿ ಸರ್ಪಂಚ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.


ಇದನ್ನೂ ಓದಿ: ಅರೆಸೈನಿಕ ಪಡೆಗಳ 10 ಸಾವಿರ ಸೈನಿಕರು ಜಮ್ಮು ಕಾಶ್ಮೀರದಿಂದ ವಾಪಾಸ್: ಗೃಹ ಸಚಿವಾಲಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...