Homeಮುಖಪುಟಜಮ್ಮು ಕಾಶ್ಮೀರಕ್ಕೆ ಹೊಸ ಆಡಳಿತ ನಿಯಮ ಪ್ರಕಟಿಸಿದ ಗೃಹ ಸಚಿವಾಲಯ

ಜಮ್ಮು ಕಾಶ್ಮೀರಕ್ಕೆ ಹೊಸ ಆಡಳಿತ ನಿಯಮ ಪ್ರಕಟಿಸಿದ ಗೃಹ ಸಚಿವಾಲಯ

ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ, ಅಖಿಲ ಭಾರತೀಯ ಸೇವೆ ಮತ್ತು ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆಗಳಲ್ಲಿ ಮುಖ್ಯಮಂತ್ರಿಗೆ ಅಧಿಕಾರ ಇಲ್ಲ

- Advertisement -
- Advertisement -

ವರ್ಷಗಳ ಹಿಂದೆ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲ್ಪಟ್ಟ ಜಮ್ಮು ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಸಚಿವರ ಸಮಿತಿಯ ಕಾರ್ಯಗಳನ್ನು ನಿಖರಗೊಳಿಸುವ ಹೊಸ ನಿಯಮಗಳನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.

ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ, ಅಖಿಲ ಭಾರತೀಯ ಸೇವೆ ಮತ್ತು ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆಗಳು ಲೆಫ್ಟಿನೆಂಟ್ ಗವರ್ನರ್ ಕಾರ್ಯನಿರ್ವಹಣೆಯಡಿ ಬರುತ್ತವೆ ಎಂದು ಹೊಸ ವ್ಯವಹಾರ ನಿಯಮ ಹೇಳುತ್ತದೆ. ಸಚಿವರ ಸಮಿತಿ ಅಥವಾ ಮುಖ್ಯಮಂತ್ರಿಗೆ ಈ ಕಾರ್ಯ ವ್ಯವಸ್ಥೆಯಲ್ಲಿ ಯಾವುದೇ ಅಧಿಕಾರ ಇಲ್ಲ.

ಇದನ್ನೂ ಓದಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಒಂದುಗೂಡಿದ ಆರು ಪಕ್ಷಗಳು

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಹೊರಡಿಸಿದ ಅಧಿಸೂಚನೆ, ಕೇಂದ್ರಾಡಳಿತ ಪ್ರದೇಶದ ಶಾಂತಿ ಮತ್ತು ನೆಮ್ಮದಿಯ ಮೇಲೆ ಅಥವಾ ಅಲ್ಪಸಂಖ್ಯಾತ ಸಮುದಾಯ, ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಮೇಲೆ ಪರಿಣಾಮ ಬೀರುವ ಅಥವಾ ಬೀಳಬಹುದಾದ ಯಾವುದೇ ವಿಷಯ ಅಥವಾ ಪ್ರಸ್ತಾವನೆಗೆ ಸಂಬಂಧಿಸಿ ಆದೇಶ ಹೊರಡಿಸುವ ಮುನ್ನ ಮುಖ್ಯ ಕಾರ್ಯದರ್ಶಿಗಳ ಮೂಲಕ ಮುಖ್ಯಮಂತ್ರಿಗೆ ತಿಳಿಸಿ ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಬೇಕು ಎಂದು ಹೇಳಿದೆ.

ಹೊಸ ತೆರಿಗೆ ವಿಧಿಸುವ ಪ್ರಸ್ತಾವನೆ, ಭೂಕಂದಾಯ, ಸರಕಾರಿ ಆಸ್ತಿಯ ಮಾರಾಟ ಅಥವಾ ಲೀಸ್ ಒಪ್ಪಂದ, ಇಲಾಖೆ ಅಥವಾ ಅಧಿಕಾರಿಗಳ ಮರು ಸಂಯೋಜನೆ, ಮಸೂದೆ ರೂಪಿಸುವುದು ಮುಂತಾದ ಅಖಿಲ ಭಾರತೀಯ ಸೇವೆಯ ಅಧಿಕಾರಿಗಳಿಗೆ ಸಂಬಂಧಿಸದ ಕೆಲಸಗಳನ್ನು ಮುಖ್ಯಮಂತ್ರಿ ನೇತೃತ್ವದ ಸಚಿವರ ಸಮಿತಿ ನಿರ್ಧರಿಸುತ್ತದೆ.

ಇದನ್ನೂ ಓದಿ: ಕಾಶ್ಮೀರದ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಪ್ರೇರೇಪಣೆಯ ಗೌತಮ್ ನೌಲಾಖ

ಲೆಫ್ಟಿನೆಂಟ್ ಗವರ್ನರ್ ಮತ್ತು ಸಚಿವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿ, ಆರು ತಿಂಗಳ ಬಳಿಕವೂ ಒಮ್ಮತಾಭಿಪ್ರಾಯ ಮೂಡದಿದ್ದರೆ ಆಗ ಲೆಫ್ಟಿನೆಂಟ್ ಗವರ್ನರ್ ಅವರ ನಿರ್ಧಾರವನ್ನು ಸಚಿವ ಸಮಿತಿ ಒಪ್ಪಬೇಕಾಗುತ್ತದೆ. ಕೇಂದ್ರಾಡಳಿತ ಪ್ರದೇಶದ ಸರಕಾರ ಮತ್ತು ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಮಧ್ಯೆ ವಿವಾದಕ್ಕೆ ಕಾರಣವಾಗಬಲ್ಲ ಯಾವುದೇ ವಿಷಯವನ್ನು ಸಂಬಂಧಿತ ಇಲಾಖೆಯ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿಯ ಮೂಲಕ ಲೆಫ್ಟಿನೆಂಟ್ ಗವರ್ನರ್ ಮತ್ತು ಮುಖ್ಯಮಂತ್ರಿಯ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ.

ಪ್ರಧಾನಿ ಹಾಗೂ ಇತರ ಕೇಂದ್ರ ಸಚಿವರ ಸಹಿತ ದೈನಂದಿನ ವಿಷಯ ಮತ್ತು ಪ್ರಾಮುಖ್ಯವಿಲ್ಲದ ವಿಷಯ ಹೊರತುಪಡಿಸಿ ಕೇಂದ್ರ ಸರಕಾರದಿಂದ ಬರುವ ಎಲ್ಲಾ ಮಾಹಿತಿಗಳನ್ನುತಕ್ಷಣ ಮುಖ್ಯ ಕಾರ್ಯದರ್ಶಿ, ಆಯಾ ಖಾತೆಯ ಸಚಿವ, ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ಗಮನಕ್ಕೆ ತರಬೇಕು ಎಂದು ನಿಯಮಾವಳಿಯಲ್ಲಿ ಸೂಚಿಸಲಾಗಿದೆ.

ಶಾಲಾ ಶಿಕ್ಷಣ, ಕೃಷಿ, ಉನ್ನತ ಶಿಕ್ಷಣ, ತೋಟಗಾರಿಕೆ, ಚುನಾವಣೆ, ಸಾಮಾನ್ಯ ಆಡಳಿತ, ಗೃಹ, ಗಣಿಗಾರಿಕೆ, ಇಂಧನ, ಲೋಕೋಪಯೋಗಿ ಇಲಾಖೆ, ಬುಡಕಟ್ಟು ವ್ಯವಹಾರ, ಸಾರಿಗೆ ಸೇರಿದಂತೆ ಕೇಂದ್ರಾಡಳಿತ ಪ್ರದೇಶದಲ್ಲಿ 39 ಇಲಾಖೆಗಳಿರುತ್ತವೆ.


ಓದಿ: ನೀನೂ ಅಲ್ಲಿರಲಿಲ್ಲ: ಕಾಶ್ಮೀರದ ಜನರ ಸಂಕಟ, ತಲ್ಲಣ, ಅತಂತ್ರ-ಅನಿಶ್ಚಿತತೆಯನ್ನು ಕಟ್ಟಿಕೊಡುವ ಕವಿತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...