Homeಮುಖಪುಟಅತ್ಮಕ್ಕೆ ಬರ ಬಿದ್ದ ಆಡಳಿತದಲ್ಲಿ ಕೊರೊನಾ ಜೊತೆ ಬದುಕುವುದಾ ಕಲಿಯಬೇಕು.

ಅತ್ಮಕ್ಕೆ ಬರ ಬಿದ್ದ ಆಡಳಿತದಲ್ಲಿ ಕೊರೊನಾ ಜೊತೆ ಬದುಕುವುದಾ ಕಲಿಯಬೇಕು.

ಯಾವ ಪೂರ್ವ ಸಿದ್ದತೆಯೂ ಇಲ್ಲದೆ ದಿಢೀರನೆ ಘೋಷಿಸಿದ ಲಾಕ್ ಡೌನ್ ದೇಶದ ಜನರನ್ನು ಕೊರೊನಾ ಸೋಂಕಿಗಿಂತಲೂ ಭೀಕರವಾಗಿ ಭಾದಿಸಿಬಿಟ್ಟಿದೆ. ರೋಗದ ದ್ವಾರಬಾಗಿಲುಗಳಾದ ವಿಮಾನ ನಿಲ್ದಾಣಗಳನ್ನು ತೆರೆದಿಟ್ಟುಕೊಂಡು ಒಳಮನೆಯ ಕಿಟಕಿಗಳನ್ನು ಮುಚ್ಚಿಸಿ ಉಸಿರುಗಟ್ಟಿಸಿದಂತೆ ಆಗಿ ಹೋಯಿತು.

- Advertisement -
- Advertisement -

ದೃಶ್ಯ -1
ಲಾಕ್ ಡೌನ್ ನಿಂದ ಕಂಗಾಲಾಗಿ ತಲೆ ಮೇಲೆ ಗಂಟು ಮೂಟೆ, ಹೆಗಲಲ್ಲಿ ನಿದ್ದೆಗೆ ಜಾರಿದ ಮಗುವನ್ನು ಕಟ್ಟಿಕೊಂಡು ಹೆದ್ದಾರಿಯಲ್ಲಿ ಸಾಗುತ್ತಿದ್ದ ಕುಟುಂಬಗಳನ್ನು ಸಂದರ್ಶಿಸುವ ಬಿಬಿಸಿಯ ವರದಿಗಾರನೋರ್ವ ವಲಸಿಗನ ಬರಿಗಾಲ ಕಂಡು ತನ್ನ ಷೂ ಗಳನ್ನೆ ಕಳಚಿ ವಲಸಿಗನಿಗೆ ಹಾಕಿ ಕಳುಹಿಸುತ್ತಾನೆ.

ದೃಶ್ಯ-2
ಖ್ಯಾತ ಪತ್ರಕರ್ತೆ ಬರ್ಕಾದತ್ ಮಕ್ಕಳು – ಮರಿಗಳ ಜೊತೆ ವಲಸೆ ಹೊರಟ ತಾಯಿಯೊಬ್ಬಳನ್ನು ಸಂದರ್ಶಿಸುವಾಗ ನೋಡುಗರ ಕಣ್ಣು ನೀರಾಡದೆ ಇರದು.

ದೃಶ್ಯ-3
ಮುಂಬೈ -ನಾಸಿಕ ಹೆದ್ದಾರಿಯಲ್ಲಿ ಲಕ್ನೋಗೆ ಟೆಂಪೋ ದಲ್ಲಿ ಅನ್ನ ನೀರು ಇಲ್ಲದೆ ವಲಸೆ ಹೊರಟಿದ್ದ ಹತ್ತಾರು ಕುಟುಂಬಗಳನ್ನು ಸಂದರ್ಶಿಸುವ ಎನ್.ಡಿಟಿ.ವಿ ವರದಿಗಾರ ತನ್ನ ಬಳಿ ಇದ್ದ ಬಿಸ್ಕೇಟ್ ಪೊಟ್ಟಣಗಳನ್ನು ಕೊಟ್ಟು ಮುಂದೆ ಹೋಗಿ ವಾಪಾಸ್ ಬರುವಾಗ ಅದೇ ಹೆದ್ದಾರಿಯಲ್ಲಿ ಟೆಂಪೋ ಅಪಘಾತಕ್ಕೀಡಾಗಿ ಚಾಲಕ ಸಾವು ಕಂಡು ಹೆಂಡತಿ ಮಕ್ಕಳು, ಕಾರ್ಮಿಕರು ಗಾಯಗೊಂಡದ್ದನ್ನು ಕಾಣುತ್ತಾನೆ. ಯಾವೊಬ್ಬ ಪತ್ರಕರ್ತನಿಗೂ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಸಂದರ್ಭ ಕಾಣುವ ದಿನಗಳು ಬರದಿರಲಿ ಎಂದು ಆದ್ರಃಗೊಳ್ಳುತ್ತಾನೆ.

ಲಾಕ್‌ಡೌನ್ ಕಾಲದಲ್ಲಿ ಇಂತಹ ಅನೇಕ ಘಟನೆಗಳು, ದುಃಖಗಳ ಮಡುವೇ ಹರಿದಿದೆ. ಕಂಡಿದ್ದು ಕೆಲವು ಮಾತ್ರ. ಇದಕ್ಕೆಲ್ಲಾ ಯಾರೂ ಹೊಣೆ ಎಂದು ಯಾರಾದರೂ ಯೋಚಿಸಿದ್ದೀರಾ?

ಕೊರೊನಾ ಸೋಂಕು ವಿರುದ್ದ ಹೋರಾಟದಲ್ಲಿ ಭಾರತ ಎಡವಿದ್ದು, ಕೊರೊನಾ ಸೋಂಕಿನಿಂದ ಬಾಧಿತರಾಗುವುದಕ್ಕಿಂತ ಅದರ ನಿರ್ಬಂಧ , ದಿಗ್ಬಂಧನಗಳಿಂದ ಜನ ನರಳಿದ್ದು, ಸಾವು ಕಂಡಿದ್ದೇ ಹೆಚ್ಚು. ಚೀನಾ, ಅಮೇರಿಕಾ, ಇಟಲಿಯಂತ ದೊಡ್ಡ ದೊಡ್ಡ ರಾಷ್ಟ್ರಗಳನ್ನು ಕೊರೊನಾ ಕಾಡಿದ್ದು ಕಣ್ಣ ಮುಂದೆ ಇರುವಾಗ ಅದನ್ನು ನಿರ್ಲಕ್ಷಿಸುವುದು ಭಾರತಕ್ಕೆ ಸಾಧ್ಯವೇ ಇಲ್ಲ ನಿಜ, ಆದರೆ ಎಚ್ಚೆತ್ತುಕೊಳ್ಳುವ ಕಾಲಕ್ಕೆ ಮೈಮರೆತು ಮೆರೆದಾಡಿದ್ದರಿಂದ ರೋಗಕ್ಕಿಂತ ಅದರ ನೆರಳಲ್ಲಿ ಸೃಷ್ಟಿಸಿದ ಭಯ (ಭಯೋತ್ಪಾದನೆ) ವೇ ಭೀಕರತೆಯಿಂದ ಕೂಡಿದೆ.

ನಲವತ್ತೈದು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕು ಬಾಧಿತರ ಸಂಖ್ಯೆ ಇಂದಿಗೆ ಒಟ್ಟು 90,927 ಆಗಿದ್ದರೆ, 2872 ಜನ ಸಾವು ಕಂಡಿದ್ದಾರೆ. (ಸೋಂಕಿತರ ಸಂಖ್ಯೆ ಲಕ್ಷ ದಾಟುವತ್ತ ಸಾಗಿದೆ.) ಅಂದರೆ ಸುಮಾರು ಶೇ. 3ರಷ್ಟು ಜನ ಸೋಂಕಿನಿಂದ ಸಾವು ಕಂಡಿದ್ದಾರೆ. ಸೋಂಕು ಪೀಡಿತರಲ್ಲಿ ಶೇ. 50 ರಷ್ಟು ಜನ ಗುಣಮುಖರಾಗಿರುವುದನ್ನು ಗಮನಿಸಬೇಕು. ಸಾವು ಕಂಡವರಲ್ಲಿ ವೃದ್ದರೇ ಹೆಚ್ಚಾಗಿರುವುದರಿಂದ ಅದು ವಯೋಸಹಜ ಕಾರಣಗಳನ್ನು ಅವಲಂಬಿಸಿದೆ. ಈ ಪ್ರಮಾಣವನ್ನು ಅಮೇರಿಕಾಕ್ಕೆ ಹೋಲಿಸಿದಾಗ ಭಾರತದ ಸ್ಥಿತಿ ಅಷ್ಟೇನೂ ಭೀಕರವಾಗಿಲ್ಲ ಎಂಬುದು ಕಾಣುತ್ತದೆ. ಭಾರತದ ನೈಸರ್ಗಿಕ ವಾತಾವರಣ, ಇಲ್ಲಿನ ಜನರಲ್ಲಿನ ರೋಗನಿರೋಧಕ ಸಾಮರ್ಥ್ಯ ವೇ ದೊಡ್ಡಮಟ್ಟದ ಜೀವ ನಷ್ಟವನ್ನು ತಂದೊಡ್ಡುವಲ್ಲಿ ತಡೆಯೊಡ್ಡಿದೆ. ಜನವರಿ ತಿಂಗಳಲ್ಲೇ ಕೊರೊನಾ ಜಗತ್ತಿನಾದ್ಯಂತ ವಿಸ್ತರಗೊಳ್ಳುತ್ತಿರುವ ಸೂಚನೆಗಳು ಕಾಣತೊಡಗಿದ್ದರೂ ಭಾರತ ಅಮೇರಿಕಾದ ಅಧ್ಯಕ್ಷರನ್ನು ಕರೆದು ಕಳುಹಿಸುವ ಉತ್ಸಾಹದಲ್ಲಿ ಓಡಾಡತೊಡಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ಕರೆಗಳನ್ನು ಭಾರತ ಕಿರುಗಣ್ಣಿನಿಂದಲೂ ನೋಡಲಿಲ್ಲ. ರಾಹುಲ್‌ಗಾಂಧಿ ಯ ಎಚ್ಚರಿಕೆಯ ಟ್ವೀಟ್‌ನ್ನು ಎಂದಿನಂತೆ ಲೇವಡಿ ಮಾಡಿತು ಸರ್ಕಾರ. ಭಾರತದ ಆರೋಗ್ಯ ಇಲಾಖೆ ಸಂಪೂರ್ಣವಾಗಿ ನಿದ್ದೆಗೆ ಜಾರಿತ್ತು.

ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುವ ಹೊತ್ತಿಗೆ ಕೊರೊನಾ ಸೋಂಕು ದೇಶದ ಮೂಲೆ ಮೂಲೆಗಳನ್ನು ತಲುಪಿ ಕೇಕೆ ಹಾಕುತ್ತಿತ್ತು. ಯಾವ ಪೂರ್ವ ಸಿದ್ದತೆಯೂ ಇಲ್ಲದೆ ದಿಢೀರನೆ ಘೋಷಿಸಿದ ಲಾಕ್ ಡೌನ್ ದೇಶದ ಜನರನ್ನು ಕೊರೊನಾ ಸೋಂಕಿಗಿಂತಲೂ ಭೀಕರವಾಗಿ ಭಾದಿಸಿಬಿಟ್ಟಿದೆ. ರೋಗದ ದ್ವಾರಬಾಗಿಲುಗಳಾದ ವಿಮಾನ ನಿಲ್ದಾಣಗಳನ್ನು ತೆರೆದಿಟ್ಟುಕೊಂಡು ಒಳಮನೆಯ ಕಿಟಕಿಗಳನ್ನು ಮುಚ್ಚಿಸಿ ಉಸಿರುಗಟ್ಟಿಸಿದಂತೆ ಆಗಿ ಹೋಯಿತು. ಜನರನ್ನು ಒಂದು ರೀತಿಯಲ್ಲಿ ಸಮೂಹ ಸನ್ನಿಗೆ ದೂಡುವಲ್ಲಿ ಸರ್ಕಾರವೇ ಯಶಸ್ವಿಯಾಗಿದೆ.

ಕೋಟ್ಯಾಂತರ ವಲಸೆ ಕಾರ್ಮಿಕರ ಬದುಕು ಬರ್ಬರವಾಯಿತು, ಜನಸಾಮಾನ್ಯರು , ಮಧ್ಯಮ ವರ್ಗದವರು ಅನ್ನಕ್ಕಾಗಿ ಪರದಾಡುವಂತಾಯಿತು. ಒಂದು ಸರ್ಕಾರವೇ ಜನರನ್ನು ವ್ಯವಸ್ಥಿತವಾಗಿ ಬೀದಿಗೆ ನೂಕಿ ಹಸಿವಿಗೆ ಈಡು ಮಾಡುವ, ಆರ್ಥಿಕತೆಯನ್ನು ಪಾತಾಳಕ್ಕೆ ತುಳಿಯುವ ಹೊಣೆಗೇಡಿತವನ್ನು ಮಾಡಿ ಕೈಚೆಲ್ಲಿ ಕುಳಿತುಕೊಂಡಿತು. ಆಶ್ಚರ್ಯವೆಂದರೆ ಈ ದೇಶದ ಕಾರ್ಮಿಕ ಸಚಿವಾಲಯಕ್ಕೆ ತನ್ನ ದೇಶದಲ್ಲಿ ಎಷ್ಟು ಪ್ರಮಾಣದ ಕಾರ್ಮಿಕರಿದ್ದಾರೆ. ಅವರ ಹಕ್ಕು, ಸವಲತ್ತುಗಳೇನು? ಅದಕ್ಕಾಗಿ ಖಜಾನೆಯಲ್ಲಿ ಇರಬಹುದಾದ ಮೊತ್ತವೆಷ್ಟು,? ಒಂದು ಪಕ್ಷ ಕಾರ್ಮಿಕರ ಬದುಕಿಗೆ ದಿಢೀರನೆ ನಷ್ಟವೊಂದು ಒದಗಿ ಬಂದರೆ ಅವರಿಗಾಗಿ ಮಾಡಬಹುದಾದ ತಕ್ಷಣದ ಕ್ರಮಗಳೇನು ಎಂಬ ಯಾವ ಡಾಟಾವೂ ಇಲ್ಲದಿರುವುದು ಬೆಳಕಿಗೆ ಬಂತು. ಆರೋಗ್ಯ ಸಚಿವಾಲಯವೂ ಕೂಡ ಇಂತಹುದ್ದೆ ಸ್ಥಿತಿಯಲ್ಲಿರುವುದು ಜಗಜ್ಜಾಹೀರಾಯಿತು. ದಾರಿ ಹಿಡಿದು ಹೊರಟ 16 ಜನ ವಲಸೆ ಕಾರ್ಮಿಕರು ರೈಲಿಗೆ ಸಿಕ್ಕು ಸತ್ತದ್ದು, ಲಕ್ನೋದ ಹೆದ್ದಾರಿಯಲ್ಲಿ 24 ವಲಸೆ ಕಾರ್ಮಿಕರ ದೇಹಗಳು ನುಜ್ಜುಗುಜ್ಜಾಗಿ ಚೆಲ್ಲಾಡಿದ್ದು ಪ್ರಭುತ್ವ ಪ್ರಾಯೋಜಿತ ಕೊಲೆ ಎಂದು ಈ ದೇಶದ ಮಾಧ್ಯಮಗಳಿಗೆ ಅನಿಸಲೇ ಇಲ್ಲ. ಇದಕ್ಕೆ ಯಾರನ್ನೂ ಹೊಣೆ ಗಾರರನ್ನಾಗಿ ಮಾಡಲಿಲ್ಲ. ರಾಜೀನಾಮೆ ಕೇಳಲಿಲ್ಲ.! ಈ ದೇಶದ ಪ್ರಧಾನಿಯ 56 ಇಂಚು ಎದೆ ಕ್ಷಣಕಾಲವೂ ಕದಲಿಲ್ಲ. ಯಾವೊಬ್ಬ ಸಚಿವನೂ ನೈತಿಕ ಹೊಣೆ ಹೊರಲಿಲ್ಲ. ವಿಪಕ್ಷಗಳು ಹರತಾಳ ನಡೆಸಲಿಲ್ಲ. ಎಂತಹ ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬುದನ್ನು ಯೋಚಿಸಿ.

ಲಾಕ್ ಡೌನ್ ನಿಂದ ಕಂಗಾಲಾಗಿ ಬೀದಿಗಿಳಿದ ವಲಸೆ ಕಾರ್ಮಿಕರು, ಬಡಕುಟುಂಬಗಳು ಕೊರೊನಾ ಸೋಂಕು ನಿಂದ ಸಾಯುವ ಭೀತಿಗಿಂತ ಅಭದ್ರತೆ, ಹಸಿವಿನಿಂದ ಸಾಯುವ ಆತಂಕವನ್ನು ಹೊತ್ತು ದೇಶದ ಉದ್ದಗಲಕ್ಕೂ ಹೊರಟು ಬಿಟ್ಟಿದ್ದರು. ಸೋಂಕಿನಿಂದ ಸತ್ತವರಿಗಿಂತ ಇಂತಹ ಅಭದ್ರತೆ, ಹಸಿವಿನಿಂದ ಸತ್ತವರ ಪ್ರಮಾಣವೇ ಹೆಚ್ಚಾಗಿದೆ. ಇದಾವುದನ್ನೂ ಕಂಡೂ ಕಾಣದೆ ಇದ್ದ ಸರ್ಕಾರಗಳು ಸ್ಪೆಷಲ್ ಫ್ಲೈಟ್ ಗಳಲ್ಲಿ ತಮ್ಮ ತಮ್ಮ ಕುಟುಂಬಸ್ಥರುನ್ನು ಬಂಧು ಬಾಂಧವರನ್ನು ವಿದೇಶದಿಂದ ಸುರಕ್ಷಿತವಾಗಿ ಮನಗೆ ಕರೆಯಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರು. ಜನರಿಗೆ ಅನ್ನಕ್ಕಿಂತ ಭಾಷಣಗಳನ್ನು ಉಣಿಸಿದ್ದೇ ಹೆಚ್ಚು. ದೇಶಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳಬೇಕು, ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಹೆಲಿಕಾಪ್ಟರ್ ಗಳಿಂದ ಹೂಮಳೆಗೆರೆಯಿರಿ ಎಂದು ದಿಕ್ಕು ತಪ್ಪಿಸಲಾಯಿತು. ಈ ಸದ್ದು-ಸಂಭ್ರಮಗಳ ಅಬ್ಬರದಲ್ಲಿ ದೇಶದುದ್ದಗಲಕ್ಕೂ ದಾರಿ ಹುಡುಕುತ್ತಾ ಹೊರಟ ಸುಮಾರು ಎರಡು ಕೋಟಿ ವಲಸೆ ಕಾರ್ಮಿಕರ ಹಸಿವಿನ ಆಕ್ರಂದನ, ಬರಿಗಾಲ ಸದ್ದುಗಳು ಜಗತ್ತಿಗೆ ತಿಳಿಯದಾಯಿತು. ಮಾಧ್ಯಮಗಳು ಚಪ್ಪಾಳೆ ತಟ್ಟುವುದನ್ನು, ಹೂಮಳೆಗೆರೆಯುವುದನ್ನು ಕೊಂಡಾಡುವಲ್ಲಿ ಮುಳುಗಿದವೆ ವಿನಃ ವಲಸೆ ಹೊರಟ ಜನರ ದುಃಖ, ದುಮ್ಮಾನಗಳಿಗೆ ಕ್ಯಾಮರಾ ಹಿಡಿಯಲಿಲ್ಲ. ಪೆನ್ನುಗಳು ತಹತಹಿಸಲಿಲ್ಲ.

ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ತಲುಪುತ್ತಿರುವ ಹೊತ್ತಿನಲ್ಲಿ ಇನ್ನೇನು ದೇಶ ನಾಶವಾಗಿಬಿಡುತ್ತದೆ. ಜನರೆಲ್ಲಾ ರೋಗಕ್ಕೆ ತುತ್ತಾಗಿ ಇಲ್ಲವಾಗಿಬಿಡುತ್ತಾರೆ ಎಂಬ ಪೋಬಿಯಾವನ್ನು ಬಿತ್ತಲಾಗುತ್ತಿದೆ. ಸೋಂಕು ಪೀಡಿತರಲ್ಲಿ ಶೇ. 50 ರಷ್ಟು ಜನ ರೋಗವನ್ನು ಎದುರಿಸಿ ಗುಣಮುಖರಾಗುತ್ತಿರುವ ಆಶಾದಾಯಕ ಬೆಳವಣಿಗೆಯನ್ನು ಜನರಿಗೆ ತಿಳಿಸುತ್ತಿಲ್ಲ. ಮದ್ದೇ ಇಲ್ಲದ ಈ ಸೋಂಕನ್ನು ಲಾಕ್ ಡೌನ್ ಎಂಬ ದಿಗ್ಬಂಧನಗಳಿಂದ ಕಟ್ಟಿಹಾಕುವುದಷ್ಟೇ ನಮಗೆ ಉಳಿದಿರುವ ದಾರಿ ಎಂದೇ ಭಾವಿಸಿರುವ ಮಾಧ್ಯಮಗಳು ಲಾಕ್ ಡೌನ್ ಎಂಬ ಅಸ್ತ್ರದಿಂದ ಭಾರತದೊಳಗಿನ ಬಡ ಭಾರತವನ್ನು ದಂಡಿಸಲು ಪ್ರಚೋದಿಸುತ್ತಿವೆ. ಜಾಗತೀಕರಣವನ್ನು ಹಾಸು ಹೊದ್ದು, ಉಣ್ಣುತ್ತಿರುವಾಗ ಈ ದೇಶದ ಪ್ರಧಾನಿ ಆತ್ಮ ನಿರ್ಭರ ಎಂಬ ಕಗ್ಗ ವಾಚನ ಮಾಡುತ್ತಿದ್ದಾರೆ.

ಜನತೆ ಈ ರೋಗದ ಜೊತೆ ಗುದ್ದಾಡುತ್ತಲೆ ಬದುಕಬೇಕೆಂಬ ಪರ‍್ಯಾಯ ಮಾರ್ಗಗಳನ್ನು ತೋರುವ, ಜನರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ದೇಶದ ಆರ್ಥಿಕತೆ ಕೊರೊನಾ ಬರುವುದಕ್ಕಿಂತಲೂ ಮೊದಲೇ ವಿಫಲತೆಯ ಸೋಂಕು ಹಿಡಿದು ಉಸಿರೆಳೆಯುತ್ತಿತ್ತು. ಈಗ ಎಲ್ಲಾ ಅಸಮರ್ಥತೆಯನ್ನು ಕೊರೊನಾ ತಲೆಗೆಕಟ್ಟಿ ತಲೆ ಉಳಿಸಿಕೊಳ್ಳುವ ಕೆಲಸ ನಡೆದಿದೆ. ಇತ್ತ ಜನತೆ ಕೊರೊನಾ ಫೋಬಿಯಾದಿಂದ ಹೊರಬಂದು ಕೊರೊನಾ ಜೊತೆಯೇ ಬದುಕು ಕಟ್ಟಿಕೊಳ್ಳಬೇಕಾಗಿದೆ.

(ಲೇಖಕರು ಪತ್ರಕರ್ತರು ಮತ್ತು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...