Homeಮುಖಪುಟಹ್ಯಾಕರ್ಸ್‍ಗಳ ಕಾಟ : ನಟಿಯರ ಗೋಳಾಟ

ಹ್ಯಾಕರ್ಸ್‍ಗಳ ಕಾಟ : ನಟಿಯರ ಗೋಳಾಟ

- Advertisement -
- Advertisement -

ಟೆಕ್ನಾಲಜಿ ಬೆಳೆದಂತೆಲ್ಲಾ, ಅದರ ಉಪಯೋಗ ಎಷ್ಟಿದೆಯೋ ಅಷ್ಟೇ ದುರುಪಯೋಗಗಳೂ ಆಗುತ್ತಿವೆ. ಇದರಲ್ಲಿ ಹ್ಯಾಕರ್ಸ್‍ಗಳ ಹುಚ್ಚಾಟ ಹೆಚ್ಚಾಗಿದೆ. ಯಾವುದೇ ರಾಜ್ಯದಲ್ಲೋ, ದೇಶದಲ್ಲೂ ಕುಳಿತು ಗುರುತು ಪರಿಚಯವೇ ಇಲ್ಲದವರ ಮಾಹಿತಿಗಳನ್ನು ಹ್ಯಾಕ್ ಮಾಡುವುದು ಸಾಮಾನ್ಯವೆಂಬಂತೆ ದಿನಂಪ್ರತಿ ಸುದ್ದಿಯಾಗುತ್ತಲೇ ಇವೆ. ಇತ್ತೀಚೆಗೆ ಭಾರತದ ಸಂಸತ್ತಿನಲ್ಲಿರುವ ಕೊರೊನಾ ಮಾಹಿತಿಯನ್ನೇ ಹ್ಯಾಕಿಂಗ್ ಪರಿಣಿತನೊಬ್ಬ ಹ್ಯಾಕ್ ಮಾಡಿದ್ದ. ಅದರಲ್ಲೂ ಸೆಲೆಬ್ರೆಟಿಗಳ ಸಾಮಾಜಿಕ ಜಾಲತಾಣಗಳ ಅಕೌಂಟ್‍ಗಳನ್ನು ಹ್ಯಾಕ್ ಮಾಡಿ ಕಾಟ ಕೊಡುವುದು ಹ್ಯಾಕರ್ಸ್‍ಗಳಿಗೆ ತಮಾಷೆಯ ಮಜಾ ಕೊಡಲಾರಂಭಿಸಿದೆ. ಸ್ಟಾರ್ ನಟ-ನಟಿಯರ ಖಾತೆಗಳನ್ನು ಹ್ಯಾಕ್ ಮಾಡಿ ಮತ್ತೊಬ್ಬರಿಗೆ ಮೆಸೇಜ್ ಕಳಿಸುವುದು, ಯಾವಾವುದೋ ಲಿಂಕ್ ಅಪ್‍ಲೊಡ್ ಮಾಡುವುದು ಎಲ್ಲವೂ ನಡೆಯುತ್ತಲೇ ಇವೆ.

ಮೊನ್ನೆಯಷ್ಟೇ ಕನ್ನಡದ ಇಬ್ಬರು ನಟಿಯರ ಇನ್‍ಸ್ಟಾಗ್ರಾಂ ಖಾತೆಯನ್ನು ಹ್ಯಾಕರ್ಸ್‍ಗಳು ಹ್ಯಾಕ್ ಮಾಡಿದ್ದಾರೆ. ಟಗರು ಪುಟ್ಟಿ ಎಂಥಲೇ ಕರೆಸಿಕೊಳ್ಳುವ ಮನ್ವಿತಾ ಅವರ ಇನ್‍ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿದ್ದ ಹ್ಯಾಕಿಂಗ್ ಸರದಾರರು ಅವರ ಖಾತೆಯಿಂದ ಬೇರೆ ಸ್ಟಾರ್ ಕಲಾವಿದರಿಗೆ ಮೆಸೇಜ್ ಕಳಿಸಿದ್ದಾರೆ. ಅಲ್ಲದೆ, ಅಕೌಂಟ್‍ನಲ್ಲಿ ಅವರ ಹೆಸರನ್ನೇ ಬೇರೆಂದು ಭಾಷೆಗೆ ಬದಲಿಸಿದ್ದಾರೆ. ಇದರಿಂದಾಗಿ ಈ ಖಾತೆ ನನ್ನದೇನಾ ಎಂದು ಗಾಭರಿಯಾಗಿದ್ದ ಮನ್ವಿತಾ ಅಂತೂ ಕಷ್ಟಪಟ್ಟು ತಮ್ಮ ಖಾತೆಯನ್ನು ಸರಿಪಡಿಸಿಕೊಂಡಿದ್ದಾರೆ. ಯಾವಾವುದೋ ಲಿಂಕ್‍ಗಳನ್ನೆಲ್ಲಾ ಅಪ್ ಲೋಡ್ ಮಾಡಲಾಗಿದ್ದು, ಯಾರೂ ನನ್ನ ಅಕೌಂಟ್‍ನಿಂದ ಬಂದಿರುವ ಲಿಂಕ್‍ಗಳನ್ನು ಓಪನ್ ಮಾಡಬೇಡಿ ಎಂದೂ ಹೇಳಿದ್ದಾರೆ.

ಇನ್ನು ಆಶಿಕಾ ರಂಗನಾಥ್ ಅವರದ್ದು ಇಂಥದ್ದೇ ಕತೆ, ಅನಗತ್ಯ ಲಿಂಕ್‍ಗಳು, ಚಾಟ್‍ಗಳು ಎಲ್ಲವನ್ನೂ ಅವರ ಖಾತೆಯಲ್ಲಿ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‍ಪರ್ಟ್ ಆಗಿರುವವರನ್ನು ಹುಡುಕಿ ತಮ್ಮ ಖಾತೆಯನ್ನು ಸರಿಪಡಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಖಾತೆಯಲ್ಲಿ ಕಾಪಿ ರೈಟ್ ಉಲ್ಲಂಘನೆಯಾಗಿದೆ ಎಂದೂ ಹೇಳಿದ್ದಾರೆ.


ಇದನ್ನು ಓದಿ: ಮೋಸದ ಪ್ರೇಮಕ್ಕೆ ಬಲಿಯಾದ ಕನ್ನಡ ಕಿರುತೆರೆ ಮತ್ತು ಸ್ಯಾಂಡಲ್‍ವುಡ್ ನಟಿ ಚಂದನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರಿಗೆ ಗುಂಡಿಕ್ಕುವಂತೆ ವಿಡಿಯೋ ಹಂಚಿಕೆ: ಅಸ್ಸಾಂ ಸಿಎಂ ವಿರುದ್ಧ ಓವೈಸಿ ದೂರು: ದ್ವೇಷ ಭಾಷಣ ಆದೇಶ ಉಲ್ಲೇಖ 

ಅಸ್ಸಾಂ ಬಿಜೆಪಿ ಘಟಕದ ಅಧಿಕೃತ 'ಎಕ್ಸ್' ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಮತ್ತು ಈಗ ಅಳಿಸಲಾದ ವೀಡಿಯೊದಲ್ಲಿ, ಮುಸ್ಲಿಮರ ಮೇಲೆ ಸಾಂಕೇತಿಕವಾಗಿ ಗುಂಡು ಹಾರಿಸುತ್ತಿರುವುದನ್ನು ತೋರಿಸಲಾಗಿದೆ ಎಂದು ಆರೋಪಿಸಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ...

ನರವಾಣೆ ಪುಸ್ತಕಕ್ಕೆ ಹೆದರಿ ಪ್ರಧಾನಿ ಲೋಕಸಭೆಗೆ ಬರುತ್ತಿಲ್ಲ : ರಾಹುಲ್ ಗಾಂಧಿ

ಪ್ರತಿಪಕ್ಷಗಳು ಎತ್ತಿರುವ ವಿಷಯಗಳಿಂದ, ವಿಶೇಷವಾಗಿ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಪುಸ್ತಕದ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಯಗೊಂಡಿದ್ದಾರೆ. ಹಾಗಾಗಿ, ಅವರು ರಾಷ್ಟ್ರಪತಿಯ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ...

ಡಿಜಿಟಲ್ ‘ಡಕಾಯಿತಿ’: 54,000 ಕೋಟಿಗೂ ಹೆಚ್ಚಿನ ಹಣ ವಂಚನೆ: ಎಸ್‌ಒಪಿ ರಚಿಸಲು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ

ನವದೆಹಲಿ: ಡಿಜಿಟಲ್ ವಂಚನೆಯಿಂದ 54,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸುವುದು ಸಂಪೂರ್ಣ "ದರೋಡೆ ಅಥವಾ ಡಕಾಯಿತಿ" ಎಂದು ಸುಪ್ರೀಂ ಕೋರ್ಟ್ ಸೋಮವಾರ ಬಣ್ಣಿಸಿದೆ ಮತ್ತು ಅಂತಹ ಪ್ರಕರಣಗಳನ್ನು ನಿಭಾಯಿಸಲು ಆರ್‌ಬಿಐ, ಬ್ಯಾಂಕುಗಳು...

ಪಾಕಿಸ್ತಾನ ನಂಟು : ಸಿಎಂ ಶರ್ಮಾ ಆರೋಪ ನಿರಾಧಾರ, ಸಿ-ಗ್ರೇಡ್ ಸಿನಿಮಾ ಎಂದ ಗೌರವ್ ಗೊಗೊಯ್

ತಮಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಆರೋಪಗಳನ್ನು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ತಳ್ಳಿಹಾಕಿದ್ದು, ಎಸ್‌ಐಟಿ ವರದಿಯು ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿ ಬಳಿಯೇ ಇದೆ....

ಪಂಜಾಬ್: ತರಗತಿಯೊಳಗೆ ವಿದ್ಯಾರ್ಥಿನಿಯನ್ನು ಕೊಂದು, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಕಾನೂನು ವಿದ್ಯಾರ್ಥಿ

ಚಂಡೀಗಢ: ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ಶಾಲಾ ಕೋಣೆಯೊಳಗೆ ವಿದ್ಯಾರ್ಥಿನಿಯ ತಲೆಗೆ ಗುಂಡು ಹಾರಿಸಿ ಕೊಂದ ಘಟನೆ ಸೋಮವಾರ ನಡೆದಿದೆ. ಸಹಪಾಠಿಗಳು ಭಯಭೀತರಾಗಿ ನೋಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು...

ಅಸ್ಸಾಂ ಸಿಎಂ ಮುಸ್ಲಿಮರ ವಿರುದ್ಧ ನರಮೇಧವನ್ನು ಪ್ರಚೋದಿಸುತ್ತಿದ್ದಾರೆ : ಗೌರವ್ ಗೊಗೊಯ್

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮುಸ್ಲಿಮರ ವಿರುದ್ದ ದ್ವೇಷ ಹರಡುತ್ತಿದ್ದಾರೆ, ಅವರ ಜನಾಂಗೀಯ ಹತ್ಯೆಗೆ ಪ್ರಚೋದಿಸುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹಾಗೂ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ. ಅಸ್ಸಾಂ...

‘ಎಂಡಿಎಂಎ ಡ್ರಗ್ಸ್ ಕೇಂದ್ರವಾಗಿ ಮಾರ್ಪಟ್ಟ ಮಧ್ಯಪ್ರದೇಶ-ರಾಜಸ್ಥಾನ ಗಡಿ’: 13ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು. 

ಭೋಪಾಲ್: ದೇಶದ ಅಫೀಮು ಕೃಷಿ ಮತ್ತು ಕಳ್ಳಸಾಗಣೆ ಮಾರ್ಗವಾಗಿ ದೀರ್ಘಕಾಲದಿಂದ ಕುಖ್ಯಾತಿ ಗಳಿಸಿರುವ ಪಶ್ಚಿಮ ಮಧ್ಯಪ್ರದೇಶ ಮತ್ತು ಪಕ್ಕದ ಆಗ್ನೇಯ ರಾಜಸ್ಥಾನದ ಜಿಲ್ಲೆಗಳು ಈಗ MDMA ಸಂಶ್ಲೇಷಿತ ಡ್ರಗ್ಸ್ ಅಕ್ರಮ ಉತ್ಪಾದನೆ ಮತ್ತು...

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ವಿರೋಧ ಪಕ್ಷಗಳು: ವರದಿ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವಿಪಕ್ಷ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 'ಅನಿರೀಕ್ಷಿತ ಕೃತ್ಯ' ಎಸಗಲು ಸಂಚು...

ಮೆಟಾ-ವಾಟ್ಸಾಪ್ ಗೌಪ್ಯತೆ ನೀತಿ ಪ್ರಕರಣ: ಸುಪ್ರೀಂ ಕೋರ್ಟ್ ವಿಚಾರಣೆ ಫೆಬ್ರವರಿ 23ಕ್ಕೆ ಮುಂದೂಡಿಕೆ 

ನವದೆಹಲಿ: ಗೌಪ್ಯತೆ ನೀತಿಯ ಮೇಲೆ 213.14 ಕೋಟಿ ರೂ. ದಂಡ ವಿಧಿಸಿದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶದ ವಿರುದ್ಧ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಮತ್ತು ವಾಟ್ಸಾಪ್ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್...

ಪ್ರಬಲಜಾತಿ ಯುವತಿಯೊಂದಿಗೆ ಗ್ರಾಮ ತೊರೆದ ದಲಿತ ಯುವಕ; ಕುಟುಂಬದ ಮೇಲೆ ದಾಳಿ ಮಾಡಿದ ಹದಿಮೂರು ಜನರ ಬಂಧನ

ಸೂರತ್ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಮತ್ತು ಆಕೆಯ ಇಬ್ಬರು ವಯಸ್ಕ ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಶನಿವಾರ ಒಂದೇ ಕುಟುಂಬದ 13 ಸದಸ್ಯರನ್ನು ಬಂಧಿಸಿದ್ದಾರೆ. ಆಕೆಯ...