Homeಸಿನಿಮಾಕ್ರೀಡೆಏಷ್ಯಾ ಕಪ್ 2022ರಲ್ಲಿ ಭಾರತ - ಪಾಕ್ ತಂಡಗಳು ಮೂರು ಬಾರಿ ಮುಖಾಮುಖಿಯಾಗಬಹುದು!: ಇಲ್ಲಿದೆ ವಿವರ

ಏಷ್ಯಾ ಕಪ್ 2022ರಲ್ಲಿ ಭಾರತ – ಪಾಕ್ ತಂಡಗಳು ಮೂರು ಬಾರಿ ಮುಖಾಮುಖಿಯಾಗಬಹುದು!: ಇಲ್ಲಿದೆ ವಿವರ

- Advertisement -
- Advertisement -

ಬಹು ನಿರೀಕ್ಷಿತ ಟಿ20 ಏಷ್ಯಾ ಕಪ್ ಟೂರ್ನಿ ಇದೇ ಆಗಸ್ಟ್ 27 ರಿಂದ ಆರಂಭವಾಗುತ್ತಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿದ್ದು ಆಗಸ್ಟ್ 28 ರಂದು ಪರಸ್ಪರ ಸೆಣಸುತ್ತಿವೆ. ಅಷ್ಟು ಮಾತ್ರವಲ್ಲದೇ 15 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಈ ಎರಡು ತಂಡಗಳು ಪರಸ್ಪರ ಮೂರು ಬಾರಿ ಮುಖಾಮುಖಿಯಾಗುವ ಅವಕಾಶವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕ್ರಿಕೆಟ್ ಅಭಿಮಾನಿಗಳು ಭರಪೂರ ಮನರಂಜನೆ ಪಡೆಯಬಹುದಾಗಿದೆ. ಆ ಕುರಿತು ಸಂಕ್ಷಿಪ್ತ ವರದಿ ಇಲ್ಲಿದೆ.

ಭಾಗವಹಿಸುವ ತಂಡಗಳು

ಏಷ್ಯಾ ಕಪ್‌ ಟೂರ್ನಿಯಲ್ಲಿ 6 ತಂಡಗಳಿಗೆ ಭಾಗವಹಿಸುವ ಅವಕಾಶವಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ತಂಡಗಳು ನೇರವಾಗಿ ಆಯ್ಕೆಯಾಗಿವೆ. ಇನ್ನೊಂದು ತಂಡಕ್ಕೆ ಮಾತ್ರ ಅವಕಾಶವಿದ್ದು ಅದಕ್ಕಾಗಿ ಯುಎಇ, ಹಾಂಗ್‌ಕಾಂಗ್, ಕುವೈತ್ ಮತ್ತು ಸಿಂಗಾಪುರ್ ತಂಡಗಳು ಅರ್ಹತಾ ಪಂದ್ಯಗಳನ್ನು ಆಡಲಿವೆ. ಆಗಸ್ಟ್ 20 ರಿಂದ ಅರ್ಹತಾ ಪಂದ್ಯಗಳು ನಡೆಯಲಿದ್ದು ಒಂದು ತಂಡ ಆಯ್ಕೆಯಾಗಲಿದೆ.

ಗುಂಪುಗಳು

ಎ ಮತ್ತು ಬಿ ಎಂದು ವಿಂಗಡಿಸಿದ್ದು ಪ್ರತಿ ಗುಂಪಿನಲ್ಲಿ ತಲಾ ಮೂರು ತಂಡಗಳು ಇರುತ್ತವೆ. ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ಇದ್ದು ಅರ್ಹತಾ ಗುಂಪಿನಲ್ಲಿ ಆಯ್ಕೆಯಾದ ತಂಡ ಈ ಗುಂಪು ಸೇರಿಕೊಳ್ಳಲಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ತಂಡಗಳು ಇವೆ.

ಟೂರ್ನಿಯ ವಿಧಾನ

ಗ್ರೂಪ್ ಹಂತದಲ್ಲಿ ತಂಡವೊಂದಕ್ಕೆ ಎರಡು ಪಂದ್ಯಗಳು ಇರುತ್ತದೆ. ಉದಾಹರಣೆಗೆ ಭಾರತವನ್ನು ತೆಗೆದುಕೊಂಡರೆ ಅದು ಪಾಕಿಸ್ತಾನದ ವಿರುದ್ಧ ಮತ್ತು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ತಂಡದ ವಿರುದ್ಧ ಸೆಣಸುತ್ತದೆ. ಇಲ್ಲಿಂದ ಅಂಕಪಟ್ಟಿಯಲ್ಲಿ ಮೇಲಿನ ಅಂದರೆ ಟಾಪ್ 2 ಎರಡು ಸೂಪರ್ 4 ಹಂತಕ್ಕೆ ತಲುಪುತ್ತವೆ. ಎರಡು ಗುಂಪಿನಿಂದ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದ ತಲಾ ಒಂದೊಂದು ತಂಡ ಟೂರ್ನಿಯಿಂದ ಹೊರಬೀಳುತ್ತವೆ.

ಸೂಪರ್ 4 ಹಂತ

ಎ ಮತ್ತು ಬಿ ಗುಂಪಿನಿಂದ ತಲಾ ಟಾಪ್ ಎರಡರಂತೆ ಒಟ್ಟು ನಾಲ್ಕು ತಂಡಗಳು ಸೂಪರ್ 4 ಹಂತ ತಲುಪುತ್ತವೆ. ಇಲ್ಲಿ ಸೆಮಿಫೈನಲ್ ಇರುವುದಿಲ್ಲ. ಬದಲಿಗೆ ಇಲ್ಲಿ ತಂಡವೊಂದು ಎದುರಾಳಿಗಳ ವಿರುದ್ಧ ಮೂರು ಪಂದ್ಯಗಳನ್ನು ಆಡುತ್ತದೆ. ಇಲ್ಲಿಯೂ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ನೇರವಾಗಿ ಫೈನಲ್‌ ತಲುಪುತ್ತವೆ ಮತ್ತು ಉಳಿದ ಎರಡು ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.

ಫೈನಲ್

ಸೂಪರ್ 4 ಹಂತದಲ್ಲಿನ ಟಾಪ್ 2 ತಂಡಗಳು ಸೆಪ್ಟಂಬರ್ 13 ರಂದು ಫೈನಲ್‌ನಲ್ಲಿ ಕಣಕ್ಕಿಳಿಯಲಿವೆ.

ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ

ಗ್ರೂಪ್ ಹಂತದಲ್ಲಿ ಆಗಸ್ಟ್ 28 ರಂದು ಮೊದಲ ಪಂದ್ಯ ಸೆಣೆಸುವ ಈ ಎರಡು ತಂಡಗಳು ಗ್ರೂಪ್ ಎ ನಲ್ಲಿರುವುದರಿಂದ ಉಳಿದ ದುರ್ಬಲ ತಂಡವನ್ನು ಮಣಿಸಿ ಸುಲಭವಾಗಿ ಸೂಪರ್ 4 ಹಂತಕ್ಕೆ ತಲುಪುಲಿವೆ. ಹಾಗಾದಲ್ಲಿ ಸೆಪ್ಟಂಬರ್ 04 ರಂದು ಮತ್ತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್ 4 ಹಂತ ಪಂದ್ಯದಲ್ಲಿ ಮುಖಾಮುಖಿಯಾಗಬಹುದು. ಅಲ್ಲಿ ಗೆದ್ದ ತಂಡ ಉಳಿದ ಪಂದ್ಯಗಳನ್ನು ಗೆದ್ದಲ್ಲಿ ಮತ್ತು ಅಲ್ಲಿ ಸೋತ ತಂಡ ತನ್ನ ಉಳಿದ ಎರಡು ಪಂದ್ಯಗಳಲ್ಲಿ ಇತರ ಸೂಪರ್ 4 ಗೆ ಅರ್ಹತೆ ಪಡೆದ ತಂಡಗಳ ಎದುರು ದೊಡ್ಡ ಅಂತರದಲ್ಲಿ ಜಯಿಸಿದರೆ ಮತ್ತೆ ಸೆಪ್ಟಂಬರ್ 13 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನೆ ನಾವು ಎದುರು ನೋಡುವ ಅವಕಾಶವಿದೆ. ಆದರೆ ಈ ಎರಡೂ ತಂಡಗಳು ಒಂದಕ್ಕಿಂತ ಹೆಚ್ಚು ಅನಿರೀಕ್ಷಿತ ಸೋಲು ಕಂಡಲ್ಲಿ ಮೂರನೇ ಪಂದ್ಯ ನೋಡುವ ಅವಕಾಶ ತಪ್ಪಲಿದೆ. ಆಗ ಎರಡು ಪಂದ್ಯಗಳು ಮಾತ್ರ ನಮಗೆ ಸಿಗಲಿವೆ.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಪಾಕಿಸ್ತಾನ 10 ವಿಕೆಟ್‌ಗಳ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ನಗರಗಳು | ಸಂಕ್ಷಿಪ್ತ ವಿವರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದೇಶದಲ್ಲಿ ಎಲ್ಲಾ ಒಗ್ಗಟ್ಟು ಇರಬೇಕಾದರೆ ದೇಶದಲ್ಲಿ ಇರುವರು ಯಾವ ಸಂಘಟನೆಗಳೆ ಆಗಲಿ ಸಂವಿಧಾನಕ್ಕೆ ಗೌರವ ಕೋಡಬೇಕು ತ್ರೀವರ್ಣ ಧ್ವಜ ಧರಿಸಬೇಕು ಆಚರಿಸಬೇಕು. ಸ್ವಾತಂತ್ರ್ಯ ಬಂದ್ದೀರುವುದು ಸಂಕೇತವಾಗಿದೆ ಅದಕಾರಣ ಪ್ರಥಮಾ ಪ್ರದಾನ ಮಾಂತ್ರಿ ಜವಹಾರಲಾಲ್ ನೇಹರು ತ್ರೀವರ್ಣ ಧ್ವಜ ಹಾರಿಸಿದರು ಅದ ಕಾರಣ ಎಲ್ಲಾರು ಒಪ್ಪಿಕೋಳ್ಳಾಬೇಕು.

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...