ಬಹು ನಿರೀಕ್ಷಿತ ಟಿ20 ಏಷ್ಯಾ ಕಪ್ ಟೂರ್ನಿ ಇದೇ ಆಗಸ್ಟ್ 27 ರಿಂದ ಆರಂಭವಾಗುತ್ತಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿದ್ದು ಆಗಸ್ಟ್ 28 ರಂದು ಪರಸ್ಪರ ಸೆಣಸುತ್ತಿವೆ. ಅಷ್ಟು ಮಾತ್ರವಲ್ಲದೇ 15 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಈ ಎರಡು ತಂಡಗಳು ಪರಸ್ಪರ ಮೂರು ಬಾರಿ ಮುಖಾಮುಖಿಯಾಗುವ ಅವಕಾಶವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕ್ರಿಕೆಟ್ ಅಭಿಮಾನಿಗಳು ಭರಪೂರ ಮನರಂಜನೆ ಪಡೆಯಬಹುದಾಗಿದೆ. ಆ ಕುರಿತು ಸಂಕ್ಷಿಪ್ತ ವರದಿ ಇಲ್ಲಿದೆ.
ಭಾಗವಹಿಸುವ ತಂಡಗಳು
ಏಷ್ಯಾ ಕಪ್ ಟೂರ್ನಿಯಲ್ಲಿ 6 ತಂಡಗಳಿಗೆ ಭಾಗವಹಿಸುವ ಅವಕಾಶವಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ತಂಡಗಳು ನೇರವಾಗಿ ಆಯ್ಕೆಯಾಗಿವೆ. ಇನ್ನೊಂದು ತಂಡಕ್ಕೆ ಮಾತ್ರ ಅವಕಾಶವಿದ್ದು ಅದಕ್ಕಾಗಿ ಯುಎಇ, ಹಾಂಗ್‌ಕಾಂಗ್, ಕುವೈತ್ ಮತ್ತು ಸಿಂಗಾಪುರ್ ತಂಡಗಳು ಅರ್ಹತಾ ಪಂದ್ಯಗಳನ್ನು ಆಡಲಿವೆ. ಆಗಸ್ಟ್ 20 ರಿಂದ ಅರ್ಹತಾ ಪಂದ್ಯಗಳು ನಡೆಯಲಿದ್ದು ಒಂದು ತಂಡ ಆಯ್ಕೆಯಾಗಲಿದೆ.
ಗುಂಪುಗಳು
ಎ ಮತ್ತು ಬಿ ಎಂದು ವಿಂಗಡಿಸಿದ್ದು ಪ್ರತಿ ಗುಂಪಿನಲ್ಲಿ ತಲಾ ಮೂರು ತಂಡಗಳು ಇರುತ್ತವೆ. ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ಇದ್ದು ಅರ್ಹತಾ ಗುಂಪಿನಲ್ಲಿ ಆಯ್ಕೆಯಾದ ತಂಡ ಈ ಗುಂಪು ಸೇರಿಕೊಳ್ಳಲಿದೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ತಂಡಗಳು ಇವೆ.
The wait is finally over as the battle for Asian supremacy commences on 27th August with the all-important final on 11th September.
The 15th edition of the Asia Cup will serve as ideal preparation ahead of the ICC T20 World Cup. pic.twitter.com/QfTskWX6RD
— Jay Shah (@JayShah) August 2, 2022
ಟೂರ್ನಿಯ ವಿಧಾನ
ಗ್ರೂಪ್ ಹಂತದಲ್ಲಿ ತಂಡವೊಂದಕ್ಕೆ ಎರಡು ಪಂದ್ಯಗಳು ಇರುತ್ತದೆ. ಉದಾಹರಣೆಗೆ ಭಾರತವನ್ನು ತೆಗೆದುಕೊಂಡರೆ ಅದು ಪಾಕಿಸ್ತಾನದ ವಿರುದ್ಧ ಮತ್ತು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ತಂಡದ ವಿರುದ್ಧ ಸೆಣಸುತ್ತದೆ. ಇಲ್ಲಿಂದ ಅಂಕಪಟ್ಟಿಯಲ್ಲಿ ಮೇಲಿನ ಅಂದರೆ ಟಾಪ್ 2 ಎರಡು ಸೂಪರ್ 4 ಹಂತಕ್ಕೆ ತಲುಪುತ್ತವೆ. ಎರಡು ಗುಂಪಿನಿಂದ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದ ತಲಾ ಒಂದೊಂದು ತಂಡ ಟೂರ್ನಿಯಿಂದ ಹೊರಬೀಳುತ್ತವೆ.
ಸೂಪರ್ 4 ಹಂತ
ಎ ಮತ್ತು ಬಿ ಗುಂಪಿನಿಂದ ತಲಾ ಟಾಪ್ ಎರಡರಂತೆ ಒಟ್ಟು ನಾಲ್ಕು ತಂಡಗಳು ಸೂಪರ್ 4 ಹಂತ ತಲುಪುತ್ತವೆ. ಇಲ್ಲಿ ಸೆಮಿಫೈನಲ್ ಇರುವುದಿಲ್ಲ. ಬದಲಿಗೆ ಇಲ್ಲಿ ತಂಡವೊಂದು ಎದುರಾಳಿಗಳ ವಿರುದ್ಧ ಮೂರು ಪಂದ್ಯಗಳನ್ನು ಆಡುತ್ತದೆ. ಇಲ್ಲಿಯೂ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ನೇರವಾಗಿ ಫೈನಲ್ ತಲುಪುತ್ತವೆ ಮತ್ತು ಉಳಿದ ಎರಡು ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.
ಫೈನಲ್
ಸೂಪರ್ 4 ಹಂತದಲ್ಲಿನ ಟಾಪ್ 2 ತಂಡಗಳು ಸೆಪ್ಟಂಬರ್ 13 ರಂದು ಫೈನಲ್‌ನಲ್ಲಿ ಕಣಕ್ಕಿಳಿಯಲಿವೆ.
ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ
ಗ್ರೂಪ್ ಹಂತದಲ್ಲಿ ಆಗಸ್ಟ್ 28 ರಂದು ಮೊದಲ ಪಂದ್ಯ ಸೆಣೆಸುವ ಈ ಎರಡು ತಂಡಗಳು ಗ್ರೂಪ್ ಎ ನಲ್ಲಿರುವುದರಿಂದ ಉಳಿದ ದುರ್ಬಲ ತಂಡವನ್ನು ಮಣಿಸಿ ಸುಲಭವಾಗಿ ಸೂಪರ್ 4 ಹಂತಕ್ಕೆ ತಲುಪುಲಿವೆ. ಹಾಗಾದಲ್ಲಿ ಸೆಪ್ಟಂಬರ್ 04 ರಂದು ಮತ್ತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್ 4 ಹಂತ ಪಂದ್ಯದಲ್ಲಿ ಮುಖಾಮುಖಿಯಾಗಬಹುದು. ಅಲ್ಲಿ ಗೆದ್ದ ತಂಡ ಉಳಿದ ಪಂದ್ಯಗಳನ್ನು ಗೆದ್ದಲ್ಲಿ ಮತ್ತು ಅಲ್ಲಿ ಸೋತ ತಂಡ ತನ್ನ ಉಳಿದ ಎರಡು ಪಂದ್ಯಗಳಲ್ಲಿ ಇತರ ಸೂಪರ್ 4 ಗೆ ಅರ್ಹತೆ ಪಡೆದ ತಂಡಗಳ ಎದುರು ದೊಡ್ಡ ಅಂತರದಲ್ಲಿ ಜಯಿಸಿದರೆ ಮತ್ತೆ ಸೆಪ್ಟಂಬರ್ 13 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನೆ ನಾವು ಎದುರು ನೋಡುವ ಅವಕಾಶವಿದೆ. ಆದರೆ ಈ ಎರಡೂ ತಂಡಗಳು ಒಂದಕ್ಕಿಂತ ಹೆಚ್ಚು ಅನಿರೀಕ್ಷಿತ ಸೋಲು ಕಂಡಲ್ಲಿ ಮೂರನೇ ಪಂದ್ಯ ನೋಡುವ ಅವಕಾಶ ತಪ್ಪಲಿದೆ. ಆಗ ಎರಡು ಪಂದ್ಯಗಳು ಮಾತ್ರ ನಮಗೆ ಸಿಗಲಿವೆ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಪಾಕಿಸ್ತಾನ 10 ವಿಕೆಟ್‌ಗಳ ಗೆಲುವು ಸಾಧಿಸಿತ್ತು.
ಇದನ್ನೂ ಓದಿ: ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ನಗರಗಳು | ಸಂಕ್ಷಿಪ್ತ ವಿವರ
ದೇಶದಲ್ಲಿ ಎಲ್ಲಾ ಒಗ್ಗಟ್ಟು ಇರಬೇಕಾದರೆ ದೇಶದಲ್ಲಿ ಇರುವರು ಯಾವ ಸಂಘಟನೆಗಳೆ ಆಗಲಿ ಸಂವಿಧಾನಕ್ಕೆ ಗೌರವ ಕೋಡಬೇಕು ತ್ರೀವರ್ಣ ಧ್ವಜ ಧರಿಸಬೇಕು ಆಚರಿಸಬೇಕು. ಸ್ವಾತಂತ್ರ್ಯ ಬಂದ್ದೀರುವುದು ಸಂಕೇತವಾಗಿದೆ ಅದಕಾರಣ ಪ್ರಥಮಾ ಪ್ರದಾನ ಮಾಂತ್ರಿ ಜವಹಾರಲಾಲ್ ನೇಹರು ತ್ರೀವರ್ಣ ಧ್ವಜ ಹಾರಿಸಿದರು ಅದ ಕಾರಣ ಎಲ್ಲಾರು ಒಪ್ಪಿಕೋಳ್ಳಾಬೇಕು.