Homeಎಲೆಮರೆಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

- Advertisement -
- Advertisement -

ತೆಲಂಗಾಣದಿಂದ 27 ಕಿಮೀ ದೂರದ ಸೇಡಂ ತಾಲೂಕಿನ ತೆಲುಗು ಭಾಷಿಕರೇ ಹೆಚ್ಚಿರುವ ಜಾಕನಪಲ್ಲಿ ಎಂಬ ಹಳ್ಳಿಯ ಹೈಸ್ಕೂಲ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತನ್ನೂರ ದೊಡ್ಡಾಟ ಶೈಲಿಯ `ಬಲಲಲ ಬಲಿಯೇ’ ನಾಟಕ ಪ್ರದರ್ಶಿಸಿ ತೃತೀಯ ಬಹುಮಾನ ಪಡೆಯುತ್ತಾರೆ. `ಮಣ್ಣು ರೈತನ ಕಣ್ಣು’ ಎನ್ನುವ ನಾಟಕವನ್ನು ಮೈಸೂರು ಜಿಲ್ಲೆ ಹೆಗ್ಗಡದೇವನ ಕೋಟೆ ತಾಲೂಕಿನ ಹೊಸಳ್ಳಿ ಗ್ರಾಮವನ್ನು ಒಳಗೊಂಡಂತೆ, ಹೆಗ್ಗೋಡು, ಬೆಂಗಳೂರು, ಬಿಜಾಪುರ, ಚಿತ್ರದುರ್ಗದಲ್ಲಿ ಅಭಿನಯಿಸಿ ಬೆರಗು ಮೂಡಿಸುತ್ತಾರೆ. ಹೀಗೆ ಕರ್ನಾಟಕದ ಅಂಚಿನ ಹಳ್ಳಿಯೊಂದರ ಮಕ್ಕಳು ರಾಜ್ಯದ ಇನ್ನೊಂದು ಅಂಚನ್ನು ತಲುಪಿ ನಾಟಕ ಪ್ರದರ್ಶನ ಮಾಡುವಂತೆ ಮಕ್ಕಳನ್ನು ರೂಪಿಸಿದವರು ರಂಗ ಶಿಕ್ಷಕ ಅಶೋಕ ತೋಟ್ನಳ್ಳಿ.

ಚಿತ್ತಾಪುರ ತಾಲೂಕಿನ ಗದ್ದಿಗೆ ಅಳ್ಳೊಳ್ಳಿ ಎನ್ನುವ ಗ್ರಾಮದ ಅಶೋಕ್ ಅವರು ಪದವಿ ನಂತರ ಶರಣಬಸವೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಎಂ.ಎ ಫೈನ್ ಆರ್ಟ್ಸ ಮುಗಿಸಿ,2006-07ರಲ್ಲಿ ನೀನಾಸಂನಲ್ಲಿ ನಾಟಕ ಡಿಪ್ಲೊಮಾ ಮಾಡುತ್ತಾರೆ. 2008ಅಕ್ಟೋಬರ್ 30ಕ್ಕೆ ನಾಟಕ ಶಿಕ್ಷಕರಾಗಿ ಜಾಕನಪಲ್ಲಿಯ ಪ್ರೌಢಶಾಲೆಗೆ ಬರುತ್ತಾರೆ.

ಜಡಗೊಂಡಿದ್ದ ಶಾಲೆಯನ್ನು ತನ್ನೊಳಗಿನ ಕ್ರಿಯಾಶೀಲ ‘ಕಲಾವಿದ’ನ ನೆರವಿಂದ ನಿಧಾನಕ್ಕೆ ಜೀವಂತಗೊಳಿಸಲು ಶುರುಮಾಡುತ್ತಾರೆ. ಶಾಲೆಯ ಕಡೆಗೆ ಊರಿನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. 2009 ರಲ್ಲಿ ‘ಹಮದ ಮೊಚಿ’ ನಾಟಕವನ್ನು ಒಳಗೊಂಡಂತೆ ಗಡಿನಾಡ ಸಮ್ಮೇಳನದಲ್ಲಿ ಮಕ್ಕಳಿಂದ ಮೂರು ನಾಟಕಗಳನ್ನು ಮಾಡಿಸಿ ಗಮನ ಸೆಳೆಯುತ್ತಾರೆ. ಆಗ ಶಾಲೆಯ ಚಟುವಟಿಕೆಯ ಜೊತೆ ಊರನ್ನು ಬೆಸೆಯಲು ೨೦೧೦ ರಲ್ಲಿ `ತಿಂಗಳ ಸಂಜೆ’ ಎನ್ನುವ ವೇದಿಕೆಯೊಂದನ್ನು ಹುಟ್ಟುಹಾಕುತ್ತಾರೆ. ಇದರ ಚಟುವಟಿಕೆಗಳಿಗೆ ಪೂರಕವಾಗಿ ಶಾಲೆಯಲ್ಲಿ `ನಾನು-ನನ್ನೂರು’ ಎನ್ನುವ ಮಕ್ಕಳ ವೇದಿಕೆಯನ್ನು ಶುರುಮಾಡುತ್ತಾರೆ. ತಿಂಗಳು ಪೂರ್ತಿ ಕಲಿತ ಮಕ್ಕಳ ನಾಟಕ, ಅಭಿನಯಗಳು ಈ ತಿಂಗಳ ಸಂಜೆಯಲ್ಲಿ ಪ್ರದರ್ಶನವಾಗುವಂತೆಯೂ, ಹಳ್ಳಿಯ ಜನರೆಲ್ಲರೂ ಈ ಸಂಜೆಯಲ್ಲಿ ತಮ್ಮದೇ ಮಕ್ಕಳ ಅಭಿನಯವನ್ನು ಸವಿಯುವಂತೆ ಮಾಡಲಾಗುತ್ತದೆ.

ನಂತರ ಊರಿನ ಹಿರಿಯರಲ್ಲಿರುವ ಜನಪದ ಕಲೆಯನ್ನು ಶಾಲೆಯ ಮಕ್ಕಳಲ್ಲಿ ಕಸಿ ಮಾಡುವ ಪ್ರಯತ್ನ ಶುರುಮಾಡುತ್ತಾರೆ. ಜಾಕನಪಲ್ಲಿಯಲ್ಲಿ ಮರೆವಿಗೆ ಸರಿದಿದ್ದ ದೊಡ್ಡಾಟಕ್ಕೆ ಜೀವ ತುಂಬುತ್ತಾರೆ. ಊರಲ್ಲಿನ ದೊಡ್ಡಾಟದ ಕಲಾವಿದರನ್ನು ಶಾಲೆಗೆ ಕರೆಸಿ ಮಕ್ಕಳಿಗೆ ತರಬೇತಿ ಕೊಡಿಸುತ್ತಾರೆ. ಅಜ್ಜ ಅಜ್ಜಿಯರ ಕರೆಸಿ ಜನಪದ ಕಥೆಗಳನ್ನು ಹೇಳಿಸುತ್ತಾರೆ. ಇದಕ್ಕೆ ಬೆಂಗಳೂರಿನ ಫೋಕ್ ಆರ್ಟ್ ಫೌಂಡೇಷನ್ ಕಲಿ-ಕಲಿಸು ಯೋಜನೆಯಡಿಯಲ್ಲಿ ಸಹಾಯ ಮಾಡುತ್ತದೆ. ಹೀಗೆ ನಿಧಾನಕ್ಕೆ ಶಾಲೆಗೆ ಸರಕಾರ ನೇಮಿಸಿದ ಶಿಕ್ಷಕರಲ್ಲದೆ ಊರಿನ ಹಿರಿಯ ಕಲಾವಿದರೂ ಶಿಕ್ಷಕರಾಗಿ ರೂಪಾಂತರ ಹೊಂದುತ್ತಾರೆ.

ಈಚಿನ `ಒಂದು ರಾತ್ರಿ’ ನಾಟಕವನ್ನು ಒಳಗೊಂಡಂತೆ ಮಕ್ಕಳಿಗಾಗಿ ಅಶೋಕ್ ಈ ತನಕ 28 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಶಾಲಾ ಪಠ್ಯಗಳಲ್ಲಿ ಕೆಲವನ್ನು ಆಶು ಅಭಿನಯವಾಗಿ ರೂಪಾಂತರಗೊಳಿಸುತ್ತಾರೆ. ಶಿಲ್ಪ ಮತ್ತು ಚಿತ್ರ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿ, ಸಾಂಜಿ ಕಲೆಯ ಕಾರ್ಯಾಗಾರ ನಡೆಸಿ ಮಕ್ಕಳಿಗೆ ಶಿಲ್ಪ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸುತ್ತಾರೆ. ಮಕ್ಕಳಿಂದ ಪತ್ರಿಕೆಗಳಲ್ಲಿ ಬಂದ ವ್ಯಂಗ್ಯಚಿತ್ರಗಳನ್ನು ಆಧರಿಸಿ ಕಥೆ ಬರೆಸುವ ಸ್ಪರ್ಧೆ ಏರ್ಪಡಿಸಿ, ವ್ಯಂಗ್ಯಚಿತ್ರ ಪ್ರದರ್ಶನ ಮಾಡಿಸಿದ್ದಾರೆ. ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶಾಲಾ ಮಕ್ಕಳಿಂದ ಮಣ್ಣೆತ್ತು ಮಾಡಿಸಿ, ಮಣ್ಣಿನ ಗಣೇಶನ ಮಾಡಿಸುವ ಸ್ಪರ್ಧೆಗಳಲ್ಲಿ ಮಕ್ಕಳನ್ನು ಕಲೆಯತ್ತ ಸೆಳೆದಿದ್ದಾರೆ.

‘ಗ್ರಾಮೀಣ ನಾಟಕೋತ್ಸವ’ ಏರ್ಪಡಿಸಿ ಹಳ್ಳಿಗಳಲ್ಲಿ ಮಕ್ಕಳ ನಾಟಕದ ಅಭಿರುಚಿ ಹೆಚ್ಚಿಸಿ, ಸ್ಥಳೀಯ ಸಾಹಿತಿಗಳಿಂದ ಕಥೆ, ಕವಿತಾ ವಾಚನ ಮಾಡಿಸಿ ಸಾಹಿತ್ಯದ ಅಭಿರುಚಿ ಮೂಡಿಸಿದ್ದಾರೆ. ಗಾಂಧಿ ಜಯಂತಿಯಲ್ಲಿ `ಕುಡಿಯೋದ ಬಿಡ್ರಿ, ಒಳ್ಳೇದಲ್ಲ’ ಎಂದು ಜಾಗೃತಿ ಮೂಡಿಸುತ್ತಲೇ, ವಿಶ್ವರಂಗಭೂಮಿ ದಿನ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ ಮಕ್ಕಳಿಂದ ನಾಟಕ ಆಡಿಸುತ್ತಾರೆ. `ಸರಕಾರಿ ಶಾಲೆಗಳೆ ನಮ್ಮ ಜೀವಾಳ’ ಎನ್ನುವ ಅಭಿಯಾನವನ್ನು ದೊಡ್ಡಾಟದ ವೇಷ ಧರಿಸಿ ಮಕ್ಕಳು ಸರಕಾರಿ ಶಾಲೆಯ ಮಹತ್ವವನ್ನು ಸಾರುತ್ತಾರೆ.

‘ಪ್ರತಿಭಾ ಕಾರಂಜಿಗೆಂದು ತಯಾರು ಮಾಡಿದ ನಾಟಕಗಳನ್ನು ಮಕ್ಕಳು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಭಿನಯಿಸುತ್ತಾರೆ. ಹೀಗೆ ಹಳ್ಳಿಗಳಲ್ಲಿ ಮಕ್ಕಳು ನಾಟಕ ಆಡಿದಾಗ, ನಾಟಕ ಮೆಚ್ಚಿ ಊರಿನವರು ಆಯರ್ ಮಾಡುತ್ತಾರೆ. ಹೀಗೆ ಆಯರ್ ಮಾಡಿದ ಹಣವನ್ನು ಸಂಗ್ರಹಿಸಿ, ಅದಕ್ಕೆ ನಾವು ಒಂದಷ್ಟು ಹಣ ಹಾಕಿ ಟ್ರಾವೆಲ್ ಖರ್ಚು ತೆಗೆದು, ಉಳಿದ ಹಣದಲ್ಲಿ ಮಕ್ಕಳಿಗೆ ಟ್ರಾವೆಲಿಂಗ್ ಬ್ಯಾಗ್ ತಂದು ಕೊಟ್ಟಿದೀವಿ. ಮೈಸೂರು ಬೆಂಗಳೂರಿಗೆ ಪ್ರತಿಭಾ ಕಾರಂಜಿಗೆ ಹೋದಾಗ ಅದರ ಖೂನ ಇರಲಿ ಅಂತ ಮಕ್ಕಳಿಗೆ ಸ್ಟಡಿ ಚೇರು, ಸ್ಟಡಿ ಲ್ಯಾಂಪು ತಂದಿದ್ದೀವಿ’ ಎನ್ನುತ್ತಾರೆ.

ಮುಂದುವರಿದು `ಮೇಕಪ್, ಲೈಟಿಂಗ್, ಸೌಂಡ್ ಸಿಸ್ಟಮ್ ಎಲ್ಲವನ್ನು ಮಕ್ಕಳೆ ಮಾಡುತ್ತಾರೆ. ನನ್ನ ಸಂಬಳದಲ್ಲಿ ಕೊಂಡ ಎರಡುವರೆ ಲಕ್ಷದ ಪ್ರಾಪರ್ಟಿ ಇದೆ. ತುಂಬಾ ಅಗತ್ಯವಾದ ರಂಗಪರಿಕರಗಳು ನಮ್ಮಲ್ಲಿವೆ. ನಮ್ಮ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ನಮ್ಮ ಹೈಸ್ಕೂಲ್ ಕಾರ್ಯಕ್ರಮಗಳಿಗೆ ಜೊತೆಯಾಗುತ್ತಾರೆ. ನಮ್ಮ ಕೈಲಿ ದುಡ್ಡು ಹಾಕಿ ಮಕ್ಕಳನ್ನು ಪ್ರತಿಭಾ ಕಾರಂಜಿಗೆ ದೂರ ದೂರ ಕರಕೊಂಡು ಹೋಗಿ ಎರಡು ವರ್ಷ ಆದ್ರೂನು ಟ್ರಾವೆಲ್ ಬಿಲ್ ಬರೋದಿಲ್ಲ, ಆದ್ರೂ ಉತ್ಸಾಹ ಕಳಕೊಳ್ಳಂಗಿಲ್ಲ’ ಎಂದು ಅಶೋಕ್ ತಮ್ಮ ಬಿಕ್ಕಟ್ಟನ್ನೂ ಹೇಳುತ್ತಾರೆ.

ಮಕ್ಕಳೊಂದಿಗೆ ಅಶೋಕ ತೋಟ್ನಳ್ಳಿಯವರು

ಅಶೋಕ ತೋಟ್ನಳ್ಳಿಯವರು ಕಲಾವಿದರೂ, ನಾಟಕಕಾರರೂ ಆದ ಕಾರಣ ತಮಗೆ ಲಭ್ಯವಿರುವ ವಸ್ತುಗಳನ್ನೆ ನಾಟಕದ ಪರಿಕರಗಳನ್ನಾಗಿ ಪರಿವರ್ತಿಸುತ್ತಾರೆ. ಊರಿನ ಜನಪದ ವಸ್ತುಗಳನ್ನು ಸೇರಿಸಿ, ಅವುಗಳನ್ನು ಬಣ್ಣದಿಂದ ಸಿಂಗರಿಸಿದ್ದಾರೆ. ಹಾಗಾಗಿ ಶಾಲೆಯೆ ಒಂದು ಆರ್ಟ್ಗ್ಯಾಲರಿಯಂತಿದೆ. ಹೀಗೆ ಒಬ್ಬ ರಂಗಭೂಮಿ ಶಿಕ್ಷಕ ತನ್ನೊಳಗಿನ ಕಲಾವಿದನನ್ನು ಕ್ರಿಯಾಶೀಲಗೊಳಿಸಿ ಇಡೀ ಊರನ್ನೇ ರಂಗಭೂಮಿಯನ್ನಾಗಿ ರೂಪಾಂತರಿಸಿದ ಶ್ರಮ ಮತ್ತು ಬದ್ಧತೆ ನಿಜಕ್ಕೂ ಮೆಚ್ಚುವಂಥದ್ದು. ಊರಿನ ಜನರು, ಮಕ್ಕಳ ಸಹಕಾರ ಮರೆಯುವಂತಿಲ್ಲ ಎನ್ನುವ ಅಶೋಕ ಅವರು ಮತ್ತಷ್ಟು ಮಾದರಿ ಕೆಲಸಗಳಲ್ಲಿ ತೊಡಗಿಕೊಳ್ಳಲೆಂದು ಪತ್ರಿಕೆ ಶುಭಕೋರುತ್ತದೆ.

ಅಶೋಕ ತೋಟ್ನಳ್ಳಿಯವರ ಯೂಟೂಬ್ ಚಾನಲ್‌ಗೆ ಇಲ್ಲಿ ಕ್ಲಿಕ್ ಮಾಡಿ

ಅವರ ಫೇಸ್‌ಬುಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ ‘ಸಂತೋಷ ಗುಡ್ಡಿಯಂಗಡಿ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...