ಕಳೆದ ಶನಿವಾರ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರ ನಿಗೂಢ ಸಾವಿನ ಪ್ರಕರಣವನ್ನು ಅಸ್ಸಾಂ ಪೊಲೀಸರು ಮಂಗಳವಾರ ಬಗೆಹರಿಸಿದ್ದಾಗಿ ಹೇಳಿದ್ದಾರೆ. ” ಈ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ನಂತರ ಆತ್ಮಹತ್ಯೆಯಂತೆ ಕಾಣಲಿ ಎಂದು ಮರಕ್ಕೆ ನೇಣು ಹಾಕಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.
ಅಪ್ರಾಪ್ತೆಯರ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
’ನಾವು ಈ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬಂಧಿಸಿದ್ದೇವೆ. ಅವರಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯರನ್ನು ಕೊಲೆ ಮಾಡಿದ ನಂತರ ಅವರನ್ನು ಮರಕ್ಕೆ ನೇಣು ಹಾಕಿದ್ದಾರೆ. ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣ ಸಂಬಂಧ ಭಾನುವಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿತ್ತು, 72 ಗಂಟೆಗಳ ಒಳಗೆ ನಾವು ಪ್ರಕರಣವನ್ನು ಭೇದಿಸಿದ್ದೇವೆ” ಎಂದು ಕೊಕ್ರಜಾರ್ ಎಸ್‌ಪಿ ಪ್ರತೀಕ್ ವಿಜಯ್ ಕುಮಾರ್ ತೂಬೆ ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್ ಮುಖ್ಯಮಂತ್ರಿ ನಿವಾಸದೆದುರು ಸುಖಬೀರ್ ಬಾದಲ್ ಪ್ರತಿಭಟನೆ – ಬಂಧನ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ Aರೋಪಿಗಳ ಬಂಧನದ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
The rape and murder of two minor tribal Girls have been been solved. @lrbishnoiassam , IGP,BTR called me to inform about the outcome of the investigation. I have visited their residence on Sunday. Feeling extremely a sense of satisfaction that the Culprits have been identified
— Himanta Biswa Sarma (@himantabiswa) June 14, 2021
“ಇಬ್ಬರು ಅಪ್ರಾಪ್ತ ಬುಡಕಟ್ಟು ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣವನ್ನು ಬಗೆಹರಿಸಲಾಗಿದೆ. ಐಜಿಪಿ, ಬಿಟಿಆರ್ ತನಿಖೆಯ ಬಗ್ಗೆ ನನಗೆ ಕರೆ ಮಡಿ ತಿಳಿಸಿದ್ದಾರೆ. ನಾನು ಭಾನುವಾರ ಸಂತ್ರಸ್ತ ಬಾಲಕಿಯರ ಕುಟುಂಬವನ್ನು ಭೇಟಿ ಮಾಡಿದ್ದೇನೆ. ಆರೋಪಿಗಳು ಸಿಕ್ಕಿ ಬಿದ್ದದ್ದು ತೃಪ್ತಿಯ ಭಾವನೆ ಮೂಡಿಸಿದೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ 16 ಮತ್ತು 14 ವರ್ಷದ ಒಂದೆ ಕುಟುಂಬದ ಅಪ್ರಾಪ್ತ ಬಾಲಕಿಯರು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದರು. ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅಪ್ರಾಪ್ತ ಬಾಲಕಿಯರ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬಕ್ಕೆ ನ್ಯಾಯ ನೀಡುವ ಭರವಸೆ ನೀಡಿದ್ದರು.
ಇದನ್ನೂ ಓದಿ: ಒರಿಸ್ಸಾದಲ್ಲಿ ಮೊಸಳೆ ದಾಳಿಗೆ ವ್ಯಕ್ತಿ ಬಲಿ: ಸ್ಥಳೀಯರಲ್ಲಿ ಹೆಚ್ಚಿದ ಆಕ್ರೋಶ


