Homeಕರ್ನಾಟಕಬೆಂಗಳೂರಿಗರಿಗೆ ಆಘಾತ: ಆಸ್ತಿ ತೆರಿಗೆ ಎರಡು ಪಟ್ಟು ಏರಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ!

ಬೆಂಗಳೂರಿಗರಿಗೆ ಆಘಾತ: ಆಸ್ತಿ ತೆರಿಗೆ ಎರಡು ಪಟ್ಟು ಏರಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ!

- Advertisement -
- Advertisement -

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವವರಿಗೆ ದಿಢೀರ್ ಆಘಾತ ನೀಡಿದ್ದು, ಆಸ್ತಿ ತೆರಿಗೆ ಹಣವನ್ನು ಎರಡು ಪಟ್ಟು ಏರಿಸಿದೆ. ಈ ನಿಯಮದಿಂದ ನಗರದಲ್ಲಿ ವಾಸಿಸುವ ಕನಿಷ್ಟ 1 ಲಕ್ಷ ಜನರಿಗೆ ಭಾರೀ ಹೊರೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಭಿವೃದ್ಧಿ ಪ್ರಾಧಿಕಾರದ ಈ ನಿಯಮ ಈಗಷ್ಟೇ ಕೊರೊನಾ ಲಾಕ್​ಡೌನ್ ಪರಿಸ್ಥಿತಿಯಿಂದ ಸುಧಾರಿಸಿಕೊಳ್ಳುತ್ತಿದ್ದ ಬೆಂಗಳೂರಿಗರಿಗೆ ದೊಡ್ಡ ಆಘಾತ ನೀಡಿದೆ ಎನ್ನಲಾಗುತ್ತಿದೆ. ಹೆಚ್ಚುವರಿ ನಿರ್ವಹಣಾ ಶುಲ್ಕಗಳು ಏಕರೂಪದ್ದಾಗಿದ್ದರೂ, ಬಿಡಿಎ ನಿಯಮದಂತೆ ಸೈಟ್​ಗಳ ವಿನ್ಯಾಸಗಳು ಬದಲಾದಂತೆ ಆಸ್ತಿ ತೆರಿಗೆಯೂ ಬದಲಾಗುತ್ತದೆ. ಇದು ನಿವೇಶನ ಹೊಂದಿರುವ ಮಾಲೀಕರ ಮೇಲೆ ಆರ್ಥಿಕವಾಗಿ ಪರಿಣಾಮ ಬೀರಲಿದೆ.

ಉದಾಹರಣೆಗೆ, ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲಿ ಆಸ್ತಿ ಹೊಂದಿದ್ದವರು 2020ರಲ್ಲಿ 838 ರೂ. ಹಣವನ್ನು ಆಸ್ತಿ ತೆರಿಗೆ ರೂಪದಲ್ಲಿ ಪಾವತಿ ಮಾಡುತ್ತಿದ್ದರು. ಈಗ ಅದೇ ಆಸ್ತಿಗೆ ಈಗ 3233 ರೂ.ಗಳನ್ನು ಆಸ್ತಿ ತೆರಿಗೆ  ಪಾವತಿ ಮಾಡಬೇಕಿದೆ. ಇದು ಕನಿಷ್ಟ ಶೇ.286ರಷ್ಟು ಅಧಿಕ ಎಂದು ಅಂದಾಜಿಸಲಾಗಿದೆ. ಅಂಜನಾಪುರ ಲೇಔಟ್​ನಲ್ಲಿ 40 ಅಡಿ x 60 ಅಡಿ ಸೈಟ್ ಮಾಲೀಕರು ಕಳೆದ ವರ್ಷದವರೆಗೆ 3,616 ರೂ. ತೆರಿಗೆ ಪಾವತಿ ಮಾಡುತ್ತಿದ್ದರು, ಅದರ ಪ್ರಮಾಣ ಈಗ 6,016 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ಹೂಡಿದ ನಟ ಚೇತನ್

ಬೆಂಗಳೂರಿನ ಅನೇಕ ಲೇಔಟ್​ಗಳಲ್ಲಿ ಬಿಬಿಎಂಪಿ ಮತ್ತು ಬಿಡಿಎ ಇಲಾಳೆಗಳು ಸರಿಯಾದ ರಸ್ತೆ, ಫುಟ್​ಪಾತ್, ಪೈಪ್​ಲೈನ್​ಗಳು, ನೈಮರ್ಲ್ಯ ಸುಧಾರಣೆ ಮತ್ತು ಪಾರ್ಕ್​ಗಳನ್ನೇ ನಿರ್ಮಿಸಿಲ್ಲ. ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಇಂತಹ ಸಮಯದಲ್ಲಿ ತೆರಿಗೆಯನ್ನು ಈ ಪ್ರಮಾಣದಲ್ಲಿ ಏರಿಸಿರುವುದು, ನಿರ್ವಹಣಾ ಶುಲ್ಕವನ್ನು ಹೆಚ್ಚಿಸಿರುವುದು ಅನೇಕ ಸೈಟ್ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಡಿಎ, ಬಿಬಿಎಂಪಿ ಸೇರಿದಂತೆ ಇತರೆ ಸಾರ್ವಜನಿಕ ಸಂಸ್ಥೆಗಳ ನಿಯಮದಂತೆ ಶೇ.15ರ ವರೆಗೆ ಮಾತ್ರ ಶುಲ್ಕವನ್ನು ಏರಿಸುವ ಹಕ್ಕನ್ನು ಹೊಂದಿವೆ. ಹೀಗಾಗಿ ಸೈಟ್ ಮಾಲೀಕರು ಬಿಡಿಎ ರೇರಾ ಮತ್ತು ರಾಜ್ಯ ಸರ್ಕಾರಕ್ಕೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಕೊರೊನಾ ಲಾಕ್​ಡೌನ್‌ನ ನಿರ್ಬಂಧಗಳನ್ನು​ ತೆಗೆಯಲಾಗುತ್ತಿದ್ದು, ಜನ ಜೀವನ, ವ್ಯಾಪಾರ-ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿದೆ.

ಈಗಷ್ಟೇ ಎಚ್ಚೆತ್ತುಕೊಳ್ಳುತ್ತಿರುವ ಜನ ಜೀವನದ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಸ್ತಿ ತೆರಿಗೆಯನ್ನು ದ್ವಿಪಟ್ಟು ಹೆಚ್ಚು ಮಾಡಿರುವುದು ಆಸ್ತಿ ಮಾಲೀಕರ ಪಾಲಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ. ಈ ಕುರಿತು ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಮುಂದಿನ ದಿನಗಳಲ್ಲಿ ತಿಳಿಯಲಿದೆ.


ಇದನ್ನೂ ಓದಿ: ಸಿಂಧನೂರು: ಒಕ್ಕೂಟ ಸರ್ಕಾರದ ವಿರುದ್ದ ‘ರೈತಪರ ಹೋರಾಟ ಸಮಿತಿ’ಯಿಂದ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪುಸ್ತಕ ಮನೆʼಯ ಅಂಕೇಗೌಡ ಸೇರಿ ರಾಜ್ಯದ ಮೂವರಿಗೆ ಪದ್ಮಶ್ರೀ ಪ್ರಶಸ್ತಿ

ಕರ್ನಾಟಕದ ಮೂವರು ಸೇರಿದಂತೆ ದೇಶದ ಒಟ್ಟು 45 ಸಾಧಕರನ್ನು 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಮಂಡ್ಯ ಮೂಲದ ಪುಸ್ತಕ ಪ್ರೇಮಿ ಅಂಕೇಗೌಡ, ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಯ ವೈದ್ಯ...

ದೆಹಲಿ ಲೆಫ್ಟಿನೆಂಟ್ ಗವರ್ನರ್ ಮಾನನಷ್ಟ ಪ್ರಕರಣ : ಹೋರಾಟಗಾರ್ತಿ ಮೇಧಾ ಪಾಟ್ಕರ್ ಖುಲಾಸೆ

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು 20 ವರ್ಷಗಳ ಹಿಂದಿನ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ದೆಹಲಿ ನ್ಯಾಯಾಲಯ ಶನಿವಾರ (ಜ.24) ಖುಲಾಸೆಗೊಳಿಸಿದೆ ಎಂದು ಬಾರ್...

ಆರ್‌ಜೆಡಿ ರಾಷ್ಟ್ರೀಯ ಕಾರ್ಯಕಾರಿ ಸಭೆ; ಕಾರ್ಯಕಾರಿ ಅಧ್ಯಕ್ಷರಾಗಿ ತೇಜಸ್ವಿ ನೇಮಕ

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಅವರನ್ನು, ಇಂದು (ಜ.25) ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 'ಮಹಾಘಟಬಂಧನ್' 36...

ಹಿಂದುತ್ವ ಗುಂಪಿನಿಂದ ಕಿರುಕುಳ : ಪಿಜ್ಜಾ ಔಟ್‌ಲೆಟ್‌ನ ಎರಡನೇ ಮಹಡಿಯಿಂದ ಜಿಗಿದ ಜೋಡಿ

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಹಿಂದುತ್ವ ಗುಂಪು ಕಿರುಕುಳ ನೀಡಿದ್ದರಿಂದ ಜೋಡಿಯೊಂದು ಪಿಜ್ಜಾ ಔಟ್‌ಲೆಟ್‌ನ ಎರಡನೇ ಮಹಡಿಯಿಂದ ಜಿಗಿದಿದ್ದು, ಈ ಸಂಬಂಧ ಎಂಟು ಮಂದಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ದಿ ನ್ಯೂ...

ಹಿಂದಿ ಚಿತ್ರಗಳು ತಮ್ಮ ಬೇರುಗಳನ್ನು ಕಳೆದುಕೊಂಡಿವೆ, ಹಣ ಆಧಾರಿತವಾಗಿವೆ: ಪ್ರಕಾಶ್ ರಾಜ್

ದೃಢ, ವಿಷಯಾಧಾರಿತ ಕಥೆ ನಿರೂಪಣೆಯಿಂದ ಪ್ರಶಂಸಿಸಲಾದ ಮಲಯಾಳಂ ಮತ್ತು ತಮಿಳು ಸಿನಿಮಾಗಳಿಗಿಂತ ಭಿನ್ನವಾಗಿ, ಹಿಂದಿ ಸಿನಿಮಾ ತನ್ನ ಬೇರುಗಳನ್ನು ಕಳೆದುಕೊಂಡಿದೆ. ಹೆಚ್ಚು ಹೆಚ್ಚು ನಕಲಿ ಮತ್ತು ಹಣ-ಆಧಾರಿತವಾಗುತ್ತಿದೆ ಎಂದು ನಟ ಪ್ರಕಾಶ್ ರಾಜ್...

ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ದರೋಡೆ: ಏನಿದು ಪ್ರಕರಣ..ಬೆಳಗಾವಿ ಎಸ್ಪಿ ಹೇಳಿದ್ದೇನು?

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಚೋರ್ಲಾ ಘಾಟ್‌ನಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಹಣ ಸಾಗಿಸುತ್ತಿದ್ದ ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ...

‘ಅಲೈಡ್ ಹೆಲ್ತ್ ಕೋರ್ಸ್‌ಗಳ ನೀಟ್ ಪರೀಕ್ಷೆಯಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ..’; ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ಅಲೈಡ್ ಹೆಲ್ತ್ ಕೋರ್ಸ್‌ಗಳ ಪ್ರವೇಶದಿಂದ ಹೊರಗಿಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು...

ಬಾಂಗ್ಲಾದೇಶ| ಗ್ಯಾರೇಜ್ ಒಳಗೆ ಮಲಗಿದ್ದ ಹಿಂದೂ ಯುವಕ ಜೀವಂತ ದಹನ

ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ನರಸಿಂಗ್ಡಿಯಲ್ಲಿ ಗ್ಯಾರೇಜ್ ಒಳಗೆ ಮಲಗಿದ್ದ 23 ವರ್ಷದ ಹಿಂದೂ ವ್ಯಕ್ತಿ ಜೀವಂತವಾಗಿ ದಹನಗೊಂಡ ಘಟನೆ ನಡೆದಿದ್ದು, ಈ ಘಟನೆಯು ರಾಷ್ಟ್ರೀಯ ಚುನಾವಣೆಗೂ ಮುನ್ನ...

ಚುನಾವಣಾ ಆಯೋಗ ನಿರಂತರ ಒತ್ತಡ ಎದುರಿಸುತ್ತಿದೆ, ಅದರ ಸ್ವಾತಂತ್ರ್ಯ ರಕ್ಷಿಸಬೇಕಿದೆ : ಮಲ್ಲಿಕಾರ್ಜುನ ಖರ್ಗೆ

ಇತ್ತೀಚಿನ ದಿನಗಳಲ್ಲಿ, ಚುನಾವಣಾ ಆಯೋಗದಂತಹ ಸಂಸ್ಥೆಗಳು ನಿರಂತರ ಒತ್ತಡವನ್ನು ಎದುರಿಸುತ್ತಿವೆ. ಆದ್ದರಿಂದ ಪ್ರಜಾಪ್ರಭುತ್ವವು ಕೇವಲ ಉಳಿಯುವುದಲ್ಲದೆ, ನಿಜವಾಗಿಯೂ ಅಭಿವೃದ್ಧಿ ಹೊಂದುವಂತೆ ಅವುಗಳ ಸ್ವಾತಂತ್ರ್ಯವನ್ನು ರಕ್ಷಿಸುವುದು 'ನಮ್ಮ ಜವಾಬ್ದಾರಿ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಗುಜರಾತ್ ಸೇರಿದಂತೆ ಇತರ ರಾಜ್ಯಗಳಲ್ಲಿ ‘ಮತ ಕಳ್ಳತನ’ಕ್ಕೆ ಎಸ್‌ಐಆರ್‌ ಬಳಕೆ: ರಾಹುಲ್ ಗಾಂಧಿ

ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಕುರಿತ ತಮ್ಮ ವಾಗ್ದಾಳಿಯನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರಗೊಳಿಸಿದ್ದಾರೆ. ಗುಜರಾತ್ ಸೇರಿದಂತೆ ಇತರ ರಾಜ್ಯಗಳಲ್ಲಿ...