Homeಮುಖಪುಟಹೆಸರೂ ಸೇರಿ ಎಲ್ಲವೂ ಸಂಶಯಾಸ್ಪದವಾಗಿದ್ದ ಸತ್ಯಶೋಧನಾ ಸಮಿತಿ: ಆರೆಸ್ಸೆಸ್ ಹೀಗೇಕೆ ಮಾಡಿತು?

ಹೆಸರೂ ಸೇರಿ ಎಲ್ಲವೂ ಸಂಶಯಾಸ್ಪದವಾಗಿದ್ದ ಸತ್ಯಶೋಧನಾ ಸಮಿತಿ: ಆರೆಸ್ಸೆಸ್ ಹೀಗೇಕೆ ಮಾಡಿತು?

ಪ್ರವಾದಿ ನಿಂದನೆ ಪೋಸ್ಟ್‌ನಿಂದಾಗಿ ಉಂಟಾದ ಗಲಭೆಯ ಸತ್ಯಶೋಧನೆಯಲ್ಲಿ ಪ್ರವಾದಿ ನಿಂದನೆ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ವ್ಯಕ್ತಿಗಳು ಇರಬೇಕೆಂಬುದು ಕಡ್ಡಾಯವೇ?

- Advertisement -
- Advertisement -

ಕಳೆದ ತಿಂಗಳು ಸಂಭವಿಸಿದ ಬೆಂಗಳೂರಿನ ಕೆ.ಜೆ.ಹಳ್ಳಿ ಡಿಜೆಹಳ್ಳಿ ಗಲಭೆ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್ ಡಿ ಬಬಲಾಡಿ ನೇತೃತ್ವದಲ್ಲಿ ಒಂದು ತಂಡವು ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆ ಹೆಸರಿನಲ್ಲಿ ಸತ್ಯಶೋಧನೆ ನಡೆಸಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದೆ. ವರದಿಯಲ್ಲಿ ಗಲಭೆ ಪೂರ್ವನಿಯೋಜಿತವಾಗಿದ್ದು, ಇದಕ್ಕೆ ಪಿಎಫ್‌ಐ ಮತ್ತು ಎಸ್‌ಡಿಪಿಐ ನೇರ ಕಾರಣ ಎಂದು ತಿಳಿಸಲಾಗಿದೆ. ಆದರೆ ಸತ್ಯಶೋಧನೆಗೆ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಹೆಸರು ಬಳಸಿದ್ದಕ್ಕೆ ಅದರ ಅಧ್ಯಕ್ಷರಾದ ಖ್ಯಾತ ಹೋರಾಟಗಾರ ಎಸ್‌.ಆರ್ ಹಿರೇಮಠ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಮಿತಿಯಲ್ಲಿದ್ದ ಬಹುತೇಕರು ಬಿಜೆಪಿ – ಸಂಘಪರಿವಾರದ ಒಡನಾಟ ಹೊಂದಿರುವವರಾಗಿರುವುದರಿಂದ ಕೆ.ಜೆ.ಹಳ್ಳಿಯಲ್ಲಿ ಸತ್ಯಶೋಧನೆ ಹೆಸರಿನಲ್ಲಿ ಸುಳ್ಳನ್ನು ಬಿತ್ತಿದರೇ ಎಂಬ ಅನುಮಾನ ಹುಟ್ಟುವಂತಾಗಿದೆ ಮತ್ತು ಅದನ್ನು ಬಲಗೊಳಿಸುವ ಇನ್ನೂ ಹಲವು ಸಂಗತಿಗಳು ಹೊರಬಂದಿವೆ.

ಮುಖ್ಯವಾಗಿ ಸತ್ಯಶೋಧನಾ ಸಮಿತಿಯಲ್ಲಿ ಯಾರು ಯಾರು ಇದ್ದರು ಎಂಬುದು ವರದಿಯ ಉದ್ದೇಶವನ್ನು ತಿಳಿಸುತ್ತದೆ. ಆದರೆ ಇದರಲ್ಲಿ ಯಾರು ಯಾರಿದ್ದರು ನೋಡೋಣ ಬನ್ನಿ.

ಯಡಿಯೂರಪ್ಪನವರಿಗೆ ವರದಿ ಸಲ್ಲಿಸಿದ ನಂತರ ನಿವೃತ್ತ ಐಎಸ್‌ಎಸ್‌ ಅಧಿಕಾರಿ ಮದನ್ ಗೋಪಾಲ್ “ಇದು ನಿರ್ದಿಷ್ಠ ಸಮುದಾಯವೊಂದನ್ನು ಗುರಿಯಾಗಿಸಿಕೊಂಡು, ಭೀತಿ ಸೃಷ್ಟಿಸಲು, ಆ ಮೂಲಕ ದೇಶದ ಆರ್ಥಿಕತೆ ಕೆಡವಲು ನಡೆಸಿದ ಪೂರ್ವಯೋಜಿತ ಗಲಭೆ” ಎಂದು ಹೇಳಿದ್ದಾರೆ. ಇದೇ ಮದನ್ ಗೋಪಾಲ್‌ರವರು 2018ರ ರಾಜ್ಯ ವಿಧಾನಸಭಾ ಚುನಾವಣೆಗೂ ಮುಂಚೆ 2017ರಲ್ಲಿ ಬಿಜೆಪಿ ರಚಿಸಿದ ಪ್ರಣಾಳಿಕೆ ಸಮಿತಿಯ ಸಕ್ರಿಯ ಸದಸ್ಯರಾಗಿದ್ದವರು. ಅಂದರೆ ಬಿಜೆಪಿಯ ಪ್ರಬಲ ಬೆಂಬಲಿಗರು ಸತ್ಯಶೋಧನಾ ಸಮಿತಿಯ ಭಾಗವಾಗಿದ್ದರು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.

ಇನ್ನು ಸತ್ಯಶೋಧನ ಸಮಿತಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ಡಾ.ಆರ್‌ರಾಜು. ಇವರು ನಿವೃತ್ತ ಐಎಫ್‌ಎಸ್‌ ಅಧಿಕಾರಿಗಳಾಗಿದ್ದು 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾಗಿದ್ದರು. ಕಾಂಗ್ರೆಸ್‌ನ ಆರ್‌ ಧೃವನಾರಾಯಣ್‌ರವರನ್ನು ಎದುರಿಸುವುದಕ್ಕಾಗಿ ಟಿಕೆಟ್‌ಗಾಗಿ ಇವರು ಭಾರೀ ಪೈಪೋಟಿ ನಡೆಸಿದ್ದರು.

ಈ ಮೇಲಿನ ಎರಡು ಹೆಸರುಗಳು ಮಾಜಿ‌ ಅಧಿಕಾರಿಗಳದ್ದಾದರೆ ಸತ್ಯಶೋಧನಾ ಸಮಿತಿಯಲ್ಲಿದ್ದ ಮತ್ತೊಂದು ಹೆಸರು ಪತ್ರಕರ್ತರ ಕೋಟಾದ ಸಂತೋಷ್ ತಮ್ಮಯ್ಯ. ಇವರು ಮಡಿಕೇರಿಯವರಾಗಿದ್ದು ಪ್ರವಾದಿ ನಿಂದನೆ ಪೋಸ್ಟ್ ಮಾಡಿದ ಆರೋಪದಲ್ಲಿ ಇವರ ವಿರುದ್ಧ ದೂರು ದಾಖಲಾಗಿ 2018ರ ನವೆಂಬರ್ 13 ರಂದು ಗೋಣಿಕೊಪ್ಪದಲ್ಲಿ ಆತನನ್ನು ಬಂಧಿಸಲಾಗಿತ್ತು. ಅಂದರೆ ಪ್ರವಾದಿ ನಿಂದನೆ ಪೋಸ್ಟ್‌ನಿಂದಾಗಿ ಆರಂಭವಾದ ಗಲಭೆಯ ಸತ್ಯಶೋಧನೆಯಲ್ಲಿ ಪ್ರವಾದಿ ನಿಂದನೆ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ವ್ಯಕ್ತಿಗಳು ಇದ್ದಾರೆ. ಸತ್ಯಶೋಧನೆಯ ಮೂಲ ಉದ್ದೇಶದ ಬಗ್ಗೆಯೇ ಸಂಶಯ ಏಳುವುದು ಇಲ್ಲಿ.

ಈ ಸಂತೋಷ್ ತಮ್ಮಯ್ಯ ಎನ್ನುವ ಪತ್ರಕರ್ತ, ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿ ವಿರೋಧಿಸಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದವರು. ಅಲ್ಲದೇ ತಮ್ಮ ಹಲವು ಲೇಖನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ಬಿಜೆಪಿ ಪಕ್ಷವನ್ನು ಹೊಗಳಿರುವವರು. ಇಂತವರು ಸತ್ಯಶೋಧನಾ ಸಮಿತಿಯ ಭಾಗವಾದರೆ ವರದಿ ಹೇಗಿರುತ್ತದೆ?

ಇನ್ನು ಬಹಳ ಮುಖ್ಯವಾದ ವಿಚಾರ ಎಂದರೆ ಸಮಿತಿಯು ತನ್ನ ವರದಿಯನ್ನು ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆಯ ಹೆಸರಿನಲ್ಲಿ ಹೊರತಂದಿದೆ. ಅದರ ಹಾಲಿ ಅಧ್ಯಕ್ಷ ಎಸ್‌.ಆರ್‌ ಹಿರೇಮಠ್‌ರವರು ‘ಸಿಟಿಜನ್ ಫಾರ್ ಡೆಮಾಕ್ರಸಿ’ಗೂ ಸತ್ಯಶೋಧನಾ ವರದಿಗೂ ಯಾವುದೇ ಸಂಬಂಧವಿಲ್ಲ. ಕೂಡಲೇ ವರದಿಯನ್ನು ಹಿಂಪಡೆದು ನಮ್ಮ ಸಂಘಟನೆಯ ಹೆಸರು ಕೈಬಿಟ್ಟು ಬೇರೆ ಸಂಘಟನೆಗಳ ಹೆಸರಿನಲ್ಲಿ ಪ್ರಕಟಿಸಬೇಕು ಎಂದು ತಾಕೀತು ಮಾಡಿದ್ದಾರೆ.

1974ರಲ್ಲಿ ಜಯಪ್ರಕಾಶ್ ನಾರಾಯಣ್‌ರವರ ಮೊದಲ ಅಧ್ಯಕ್ಷರಾಗಿ ಸ್ಥಾಪನೆಯಾಗಿದ್ದ ‘ಸಿಟಿಜನ್ ಫಾರ್ ಡೆಮಾಕ್ರಸಿ’ ತುರ್ತುಪರಿಸ್ಥಿತಿಯ ವಿರುದ್ಧ ದಿಟ್ಟ ಹೋರಾಟ ನಡೆಸಿತ್ತು. ಆನಂತರವೂ ಸಹ ಹಲವು ಜನಪರ ಖ್ಯಾತನಾಮರು ಅದರ ಅಧ್ಯಕ್ಷರಾಗಿ ತುಳಿತಕ್ಕೊಳಗಾದವರ ಪರ ದನಿ ಎತ್ತಿದ್ದಾರೆ. ಅಂತಹ ಸಂಘಟನೆಯ ಹೆಸರನ್ನು ಬಿಜೆಪಿಯು ಬಳಸಿಕೊಂಡು ವರದಿ ತಯಾರಿಸಿದೆ ಎಂದರೆ ಏನರ್ಥ ಬರಬಹುದು ಎಂದು ಸಮಿತಿಯಲ್ಲಿದ್ದ ಘಟಾನುಘಟಿಗಳು ಯೋಚಿಸಿಲ್ಲವೇ? ಬಿಜೆಪಿ ಹೆಸರಿನಲ್ಲಿ ಪ್ರಕಟಿಸಿದರೆ ಜನ ಒಪ್ಪುವುದಿಲ್ಲ ಎಂದು ತಿಳಿದು ಜನಪರ ಸಂಘಟನೆಗಳ ಹೆಸರಿನಲ್ಲಿ ಬಿಜೆಪಿಯವರೆ ತಯಾರಿಸಿದ ವರದಿ ಪ್ರಕಟಿಸಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ….. ಹೇಳುತ್ತಾರೆ.


ಇದನ್ನೂ ಓದಿ: ಎಸ್‌ಡಿಪಿಐಗೆ ನೇರ ಪ್ರಶ್ನೆಗಳು: ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆಯವರ ಸಂದರ್ಶನ


ಇನ್ನು ಸತ್ಯಶೋಧನಾ ತಂಡವು ವರದಿಯಲ್ಲಿ ತನ್ನ ಕಚೇರಿ ವಿಳಾಸವನ್ನು ನಮೂದಿಸಿದೆ. ಅದರ ಜಾಡು ಹಿಡಿದು ಹೊರಟರೆ ಅದು ನಿಮ್ಮನ್ನು ಬೆಂಗಳೂರಿನ ಚಾಮರಾಜಪೇಟೆಯ ‘ವಿಕ್ರಮ’ ಪತ್ರಿಕಾ ಕಚೇರಿಗೆ ಕರೆದುಕೊಂಡು ಹೋಗುತ್ತದೆ. ತನ್ನನ್ನು ತಾನು ಹಿಂದೂತ್ವ ಪತ್ರಿಕೆ ಎಂದು ಕರೆದುಕೊಳ್ಳುತ್ತದೆ. “ಹಿಂದು ಸಂಘಟನೆ ಮತ್ತು ವ್ಯಕ್ತಿತ್ವ ನಿರ್ಮಾಣದ ಕೆಲಸವನ್ನು ವಿವಿಧ ಸಂಘಟನೆಗಳು ಮಾಡುತ್ತಿವೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ. ಆದರೆ ವೈಚಾರಿಕ ಜಾಗೃತಿಯ ಜವಾಬ್ದಾರಿ ಇರುವುದು ಪತ್ರಿಕೆಗಳು ಮತ್ತು ಕೃತಿಗಳ ಹೆಗಲ ಮೇಲೆ. ಈ ಉದ್ದೇಶದಿಂದಲೇ 1948ರ ವಿಜಯದಶಮಿಯಂದು ವಿಕ್ರಮ ವಾರಪತ್ರಿಕೆ ಸ್ಥಾಪನೆಯಾಯಿತು” ಎಂದು ಘೋಷಿಸಿಕೊಂಡ ಪತ್ರಿಕೆಯ ವಿಳಾಸವನ್ನು ಸತ್ಯಶೋಧನೆಯ ವರದಿಗೆ ಏಕೆ ನೀಡಲಾಯಿತು? ಆರೆಸ್ಸಸ್ ಮುಖಂಡರು ಹೇಳಲು ಅಂಜುವಂತಹ ಸಂಗತಿಗಳನ್ನೂ ವಿಕ್ರಮ ಪ್ರಕಟಿಸುತ್ತದೆ.

ಇನ್ನು ಈ ಸತ್ಯಶೋಧನಾ ತಂಡದ ಮುಖ್ಯ ಸಮನ್ವಯಕಾರರು ಕ್ಷಮಾ ನರಗುಂದ್. ಅವರು ಆರ್‌ಎಸ್‌ಎಸ್‌ನ ಮಹಿಳಾ ವಿಭಾಗ ದುರ್ಗಾವಾಹಿನಿಯ ಸದಸ್ಯೆ ಎನ್ನಲಾಗುತ್ತಿದೆ. ಅವರು ತಮ್ಮ ಟ್ವಿಟ್ಟರ್ ಬಯೋದಲ್ಲಿ ತಾವೊಬ್ಬ ಆರ್‌ಎಸ್‌ಎಸ್‌ ಸೇವಿಕ ಎಂದು ಘೋಷಿಸಿಕೊಂಡಿದ್ದಾರೆ.

ಸಮಿತಿಯಲ್ಲಿರುವ ಆರ್‌.ಕೆ.ಮಟ್ಟೂ ಎಂಬ ಪತ್ರಕರ್ತರು ಸಹ ಆರೆಸ್ಸೆಸ್ ಪರವಾದ ನಿಲುವಿಗೆ ಪ್ರಖ್ಯಾತರು.

ಇಷ್ಟೆಲ್ಲಾ ಸಂಘಪರಿವಾರದ ಮತ್ತು ಬಿಜೆಪಿಯ ವ್ಯಕ್ತಿಗಳು ಕೂತು ಬರೆದಿರುವ ವರದಿಯನ್ನು ‘ಸತ್ಯಶೋಧನೆ’ ಎಂದು ಕರೆಯಲಾಗುವುದೇ? ಆರೆಸ್ಸೆಸ್ ಪರಿವಾರವೇ ಹೋಗಿ ತಮ್ಮ ಪರವಾಗಿ ವರದಿ ಬರೆದುಕೊಂಡರೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ಜೊತೆಗೆ ಇನ್ನೂ ಒಂದು ಗಮನಿಸಬೇಕಾದ ವಿಚಾರವಿದೆ: ಸಾಮಾನ್ಯವಾಗಿ ಆಡಳಿತ ನಡೆಸುವವರು ತಮ್ಮ ಅಡಿಯಲ್ಲೇ ಕೆಲಸ ಮಾಡುವ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸವನ್ನಿಟ್ಟುಕೊಂಡಿರುತ್ತಾರೆ. ಹಾಗಾಗಿ ಆಡಳಿತ ವಿರೋಧಿಗಳು ಅಥವಾ ಆಡಳಿತದ ಬಗ್ಗೆ ಸಂಶಯ ಹೊಂದಿರುವವರು ‘ಸತ್ಯ ಶೋಧನೆ’ ನಡೆಸುತ್ತಾರೆ.‌ ಆದರೆ ಇಲ್ಲಿ ಆಡಳಿತ ಕೂಟವೇ ‘ಸತ್ಯ ಶೋಧನಾ ತಂಡ’ ರಚಿಸಿರುವುದನ್ನು ನೋಡಿದರೆ ಪೊಲೀಸರು ಹೇಳಬಹುದಾದ ಸತ್ಯಕ್ಕಿಂತ‌ ಹೆಚ್ಚಿನದ್ದನ್ನು ಬಿಜೆಪಿ ಪರಿವಾರ ಬಯಸಿದೆ.


ಇದನ್ನೂ ಓದಿ: PFI, SDPI ವಿರುದ್ಧದ 175 ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತೇ?: ಇಲ್ಲಿದೆ ವಿವರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪುಸ್ತಕ ಮನೆʼಯ ಅಂಕೇಗೌಡ ಸೇರಿ ರಾಜ್ಯದ ಮೂವರಿಗೆ ಪದ್ಮಶ್ರೀ ಪ್ರಶಸ್ತಿ

ಕರ್ನಾಟಕದ ಮೂವರು ಸೇರಿದಂತೆ ದೇಶದ ಒಟ್ಟು 45 ಸಾಧಕರನ್ನು 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಮಂಡ್ಯ ಮೂಲದ ಪುಸ್ತಕ ಪ್ರೇಮಿ ಅಂಕೇಗೌಡ, ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಯ ವೈದ್ಯ...

ದೆಹಲಿ ಲೆಫ್ಟಿನೆಂಟ್ ಗವರ್ನರ್ ಮಾನನಷ್ಟ ಪ್ರಕರಣ : ಹೋರಾಟಗಾರ್ತಿ ಮೇಧಾ ಪಾಟ್ಕರ್ ಖುಲಾಸೆ

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು 20 ವರ್ಷಗಳ ಹಿಂದಿನ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ದೆಹಲಿ ನ್ಯಾಯಾಲಯ ಶನಿವಾರ (ಜ.24) ಖುಲಾಸೆಗೊಳಿಸಿದೆ ಎಂದು ಬಾರ್...

ಆರ್‌ಜೆಡಿ ರಾಷ್ಟ್ರೀಯ ಕಾರ್ಯಕಾರಿ ಸಭೆ; ಕಾರ್ಯಕಾರಿ ಅಧ್ಯಕ್ಷರಾಗಿ ತೇಜಸ್ವಿ ನೇಮಕ

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಅವರನ್ನು, ಇಂದು (ಜ.25) ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 'ಮಹಾಘಟಬಂಧನ್' 36...

ಹಿಂದುತ್ವ ಗುಂಪಿನಿಂದ ಕಿರುಕುಳ : ಪಿಜ್ಜಾ ಔಟ್‌ಲೆಟ್‌ನ ಎರಡನೇ ಮಹಡಿಯಿಂದ ಜಿಗಿದ ಜೋಡಿ

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಹಿಂದುತ್ವ ಗುಂಪು ಕಿರುಕುಳ ನೀಡಿದ್ದರಿಂದ ಜೋಡಿಯೊಂದು ಪಿಜ್ಜಾ ಔಟ್‌ಲೆಟ್‌ನ ಎರಡನೇ ಮಹಡಿಯಿಂದ ಜಿಗಿದಿದ್ದು, ಈ ಸಂಬಂಧ ಎಂಟು ಮಂದಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ದಿ ನ್ಯೂ...

ಹಿಂದಿ ಚಿತ್ರಗಳು ತಮ್ಮ ಬೇರುಗಳನ್ನು ಕಳೆದುಕೊಂಡಿವೆ, ಹಣ ಆಧಾರಿತವಾಗಿವೆ: ಪ್ರಕಾಶ್ ರಾಜ್

ದೃಢ, ವಿಷಯಾಧಾರಿತ ಕಥೆ ನಿರೂಪಣೆಯಿಂದ ಪ್ರಶಂಸಿಸಲಾದ ಮಲಯಾಳಂ ಮತ್ತು ತಮಿಳು ಸಿನಿಮಾಗಳಿಗಿಂತ ಭಿನ್ನವಾಗಿ, ಹಿಂದಿ ಸಿನಿಮಾ ತನ್ನ ಬೇರುಗಳನ್ನು ಕಳೆದುಕೊಂಡಿದೆ. ಹೆಚ್ಚು ಹೆಚ್ಚು ನಕಲಿ ಮತ್ತು ಹಣ-ಆಧಾರಿತವಾಗುತ್ತಿದೆ ಎಂದು ನಟ ಪ್ರಕಾಶ್ ರಾಜ್...

ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ದರೋಡೆ: ಏನಿದು ಪ್ರಕರಣ..ಬೆಳಗಾವಿ ಎಸ್ಪಿ ಹೇಳಿದ್ದೇನು?

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಚೋರ್ಲಾ ಘಾಟ್‌ನಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಹಣ ಸಾಗಿಸುತ್ತಿದ್ದ ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ...

‘ಅಲೈಡ್ ಹೆಲ್ತ್ ಕೋರ್ಸ್‌ಗಳ ನೀಟ್ ಪರೀಕ್ಷೆಯಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ..’; ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ಅಲೈಡ್ ಹೆಲ್ತ್ ಕೋರ್ಸ್‌ಗಳ ಪ್ರವೇಶದಿಂದ ಹೊರಗಿಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು...

ಬಾಂಗ್ಲಾದೇಶ| ಗ್ಯಾರೇಜ್ ಒಳಗೆ ಮಲಗಿದ್ದ ಹಿಂದೂ ಯುವಕ ಜೀವಂತ ದಹನ

ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ನರಸಿಂಗ್ಡಿಯಲ್ಲಿ ಗ್ಯಾರೇಜ್ ಒಳಗೆ ಮಲಗಿದ್ದ 23 ವರ್ಷದ ಹಿಂದೂ ವ್ಯಕ್ತಿ ಜೀವಂತವಾಗಿ ದಹನಗೊಂಡ ಘಟನೆ ನಡೆದಿದ್ದು, ಈ ಘಟನೆಯು ರಾಷ್ಟ್ರೀಯ ಚುನಾವಣೆಗೂ ಮುನ್ನ...

ಚುನಾವಣಾ ಆಯೋಗ ನಿರಂತರ ಒತ್ತಡ ಎದುರಿಸುತ್ತಿದೆ, ಅದರ ಸ್ವಾತಂತ್ರ್ಯ ರಕ್ಷಿಸಬೇಕಿದೆ : ಮಲ್ಲಿಕಾರ್ಜುನ ಖರ್ಗೆ

ಇತ್ತೀಚಿನ ದಿನಗಳಲ್ಲಿ, ಚುನಾವಣಾ ಆಯೋಗದಂತಹ ಸಂಸ್ಥೆಗಳು ನಿರಂತರ ಒತ್ತಡವನ್ನು ಎದುರಿಸುತ್ತಿವೆ. ಆದ್ದರಿಂದ ಪ್ರಜಾಪ್ರಭುತ್ವವು ಕೇವಲ ಉಳಿಯುವುದಲ್ಲದೆ, ನಿಜವಾಗಿಯೂ ಅಭಿವೃದ್ಧಿ ಹೊಂದುವಂತೆ ಅವುಗಳ ಸ್ವಾತಂತ್ರ್ಯವನ್ನು ರಕ್ಷಿಸುವುದು 'ನಮ್ಮ ಜವಾಬ್ದಾರಿ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಗುಜರಾತ್ ಸೇರಿದಂತೆ ಇತರ ರಾಜ್ಯಗಳಲ್ಲಿ ‘ಮತ ಕಳ್ಳತನ’ಕ್ಕೆ ಎಸ್‌ಐಆರ್‌ ಬಳಕೆ: ರಾಹುಲ್ ಗಾಂಧಿ

ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಕುರಿತ ತಮ್ಮ ವಾಗ್ದಾಳಿಯನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರಗೊಳಿಸಿದ್ದಾರೆ. ಗುಜರಾತ್ ಸೇರಿದಂತೆ ಇತರ ರಾಜ್ಯಗಳಲ್ಲಿ...