Homeಕರ್ನಾಟಕನಟಿ ಸಂಯುಕ್ತ ಹೆಗ್ಡೆ ಬಳಿ ಕ್ಷಮೆಯಾಚಿಸಿದ ಕವಿತಾ ರೆಡ್ಡಿ

ನಟಿ ಸಂಯುಕ್ತ ಹೆಗ್ಡೆ ಬಳಿ ಕ್ಷಮೆಯಾಚಿಸಿದ ಕವಿತಾ ರೆಡ್ಡಿ

ತಮ್ಮ ಮೇಲಿನ ನೈತಿಕ ಪೊಲೀಸ್‌ಗಿರಿ ಆರೋಪಕ್ಕೆ ಉತ್ತರಿಸಿದ ಕವಿತಾ ರೆಡ್ಡಿ, “ಇಂತಾ ಹೇಳಿಕೆ ಸಂಪೂರ್ಣವಾಗಿ ಮೂರ್ಖತನವಾಗಿದ್ದು, ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅಸಭ್ಯವಾಗಿ ನಡೆದುಕೊಂಡಿದ್ದನ್ನು ಪ್ರಶ್ನಿಸಿದ್ದೇನೆ ಹಾಗೂ ಪೋಲಿಸರಿಗೆ ದೂರು ನೀಡಿದ್ದೇನೆ” ಎಂದು ನಿನ್ನೆ ಹೇಳಿದ್ದರು.

- Advertisement -
- Advertisement -

ಶುಕ್ರವಾರ ಸಂಜೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಆಗರ ಕೆರೆಯ ಪಕ್ಕದ ಉದ್ಯಾನವನದಲ್ಲಿ ಇಬ್ಬರು ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಕವಿತಾ ರೆಡ್ಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಯುಕ್ತ ಹೆಗ್ಡೆ ಆರೋಪಿಸಿದ ಹಿನ್ನೆಲೆಯಲ್ಲಿ, ಈ ಘಟನೆಯ ಕುರಿತು ಕವಿತಾ ರೆಡ್ಡಿ ಇಂದು ಕ್ಷಮೆಯಾಚಿಸಿದ್ದಾರೆ.

“ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಮಾಡಿದ್ದಾಗಿ ಆರೋಪಿಸಿ ಎಐಸಿಸಿ ಸದಸ್ಯೆ ಕವಿತಾ ರೆಡ್ಡಿ ನೇತೃತ್ವದ ಜನರ ಗುಂಪು ತಮ್ಮ ಹಲ್ಲೆ ಮಾಡಿದ್ದಾರೆ” ಎಂದು ನಟಿ ಸಂಯುಕ್ತ ಹೆಗ್ಡೆ ಆರೋಪಿಸಿದ್ದರು.

ಇದರ ಬಗ್ಗೆ ಇಂದು ಟ್ವೀಟ್ ಮಾಡಿರುವ ಕವಿತಾ ರೆಡ್ಡಿ, “ನಾನು ಮೊದಲಿನಿಂದಲೂ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದರ ಭಾಗವಾಗಿಯೆ ನನ್ನ ಕ್ರಿಯೆಗಳು ರೂಪುಗೊಂಡಿದ್ದವು. ನಿನ್ನೆಯ ವಾದವು ನನ್ನ ಉದ್ವೇಗಗೊಂಡ ವರ್ತನೆಯಿಂದ ಕೊನೆಯಾಯಿತು. ಇದು ನನ್ನ ಸಮಸ್ಯೆ. ಒಬ್ಬ ನಾಗರೀಕ ಪ್ರಜೆಯಾಗಿ ಮತ್ತು ಪ್ರಗತಿಪರ ಮಹಿಳೆಯಾಗಿ, ಸಂಯಕ್ತ ಹೆಗ್ಡೆ ಮತ್ತು ಅವರ ಗೆಳತಿಯರಲ್ಲಿ ನಾನು ಪ್ರಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ನಟಿ ಸಂಯುಕ್ತ ಹೆಗ್ಡೆ- ಕವಿತಾ ರೆಡ್ಡಿ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಘಟನೆಯ ವಿಡಿಯೋ ದೃಶ್ಯಾವಳಿಯನ್ನು ಸಂಯುಕ್ತ ಹೆಗ್ಡೆ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಲೈವ್‌ ನಲ್ಲಿ ಹಂಚಿಕೊಂಡಿದ್ದರು. ಅಲ್ಲಿ ನೆರೆದಿದ್ದ ಜನರು ಅವರು ಡ್ರಗ್ಸ್ ಸೇವಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲದೆ ವ್ಯಕ್ತಿಯೊಬ್ಬ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸುವುದಾಗಿ ಅವರನ್ನು ಬೆದರಿಸಿರುವುದು ಅವರ ಮತ್ತೊಂದು ವಿಡಿಯೋದಲ್ಲಿ ದಾಖಲಾಗಿತ್ತು.

ಅಷ್ಟೇ ಅಲ್ಲದೆ ತನ್ನ ಗೆಳತಿ ಮೇಲೆ ಕವಿತಾ ಹಲ್ಲೆ ನಡೆಸಲು ಹೋಗಿದ್ದಾರೆ ಎಂದು ನಟಿ ಆರೋಪಿಸಿದ್ದು, ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ವಿಡಿಯೋದಲ್ಲಿ ಕವಿತಾ ರೆಡ್ಡಿ ಯುವತಿಯನ್ನು ದೂಡುತ್ತಿರುವುದು ದಾಖಲಾಗಿತ್ತು.

ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು, ಕವಿತಾ ರೆಡ್ಡಿಯವರನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದರು.


ಇದನ್ನೂ ಓದಿ: ಡ್ರಗ್ಸ್ ಮಾಫಿಯಾ ಪ್ರಕರಣ: ನಟಿ ರಾಗಿಣಿ ದ್ವಿವೇದಿ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...