Homeಅಂತರಾಷ್ಟ್ರೀಯಬಾಂಗ್ಲಾದೇಶ: ಹಿಂದೂಗಳಿಗೆ ಸೇರಿದ 29 ಮನೆಗಳಿಗೆ ಬೆಂಕಿ, 66 ಮನೆಗಳು ಧ್ವಂಸ

ಬಾಂಗ್ಲಾದೇಶ: ಹಿಂದೂಗಳಿಗೆ ಸೇರಿದ 29 ಮನೆಗಳಿಗೆ ಬೆಂಕಿ, 66 ಮನೆಗಳು ಧ್ವಂಸ

- Advertisement -
- Advertisement -

ಬಾಂಗ್ಲಾದೇಶದಲ್ಲಿ ಕಳೆದ ವಾರ ದುರ್ಗಾ ಪೂಜೆಯ ಸಂದರ್ಭದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆ ವಿಧ್ವಂಸಕ ಘಟನೆಗಳ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಪ್ರತಿಭಟನೆ ನಡೆಸಿತ್ತು. ಇದರ ಬೆನ್ನಲ್ಲೇ ಹಿಂದೂಗಳಿಗೆ ಸೇರಿದ ಅರವತ್ತಾರು ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಜೊತೆಗೆ 29ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಾಂಗ್ಲಾ ರಾಜಧಾನಿ ಢಾಕಾದಿಂದ ಸುಮಾರು 255 ಕಿಮೀ ದೂರದಲ್ಲಿರುವ ಹಳ್ಳಿಯಲ್ಲಿ ಭಾನುವಾರ ತಡರಾತ್ರಿ ಬೆಂಕಿ ಹಚ್ಚಲಾಗಿದೆ ಎಂದು bdnews24.com ವರದಿ ಮಾಡಿದೆ.

ಉತ್ತರ ಜಿಲ್ಲೆಯ ಪಿರ್ಗಂಜ್ ಉಪಜಿಲಾದ ಮಾಝೀಪಾರ-ಬೊತ್ತಲ ಮತ್ತು ಹತಿಬಂಧ ಗ್ರಾಮದಲ್ಲಿ ಕನಿಷ್ಠ 20 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ದಾಳಿಕೋರರು ಸ್ಥಳೀಯ ಹಿಂದೂ ದೇವಸ್ಥಾನವನ್ನು ಧ್ವಂಸಗೊಳಿಸಿದ್ದಾರೆ.

ಹಳ್ಳಿಯ ಹಿಂದೂ ಯುವಕನೊಬ್ಬ ಫೇಸ್‌ಬುಕ್ ಪೋಸ್ಟ್‌ನಲ್ಲಿ “ಧರ್ಮವನ್ನು ಅವಹೇಳನ ಮಾಡಿದ್ದಾರೆ” ಎಂಬ ವದಂತಿಯಿಂದಾಗಿ ಈ ದಾಳಿ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಕಮರುಝಮಾನ್ (Mohammad Qamruzzaman) ಹೇಳಿದ್ದಾರೆ.

ಇದನ್ನೂ ಓದಿ: ಜಾಗತಿಕ ಹಸಿವು ಸೂಚ್ಯಂಕ: ಪಾಕ್, ಬಾಂಗ್ಲಾ, ನೇಪಾಳಕ್ಕಿಂತ ಹಿಂದೆಯಿರುವ ಭಾರತ

ಆ ಯುವಕನ ಮನೆಯ ಸುತ್ತಲೂ ಪೊಲೀಸರು ಕಾವಲು ಕಾಯುತ್ತಿದ್ದಂತೆಯೇ ದಾಳಿಕೋರರು ಹತ್ತಿರದ ಇತರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿ ಹೇಳಿದೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ದಾಳಿ ನಡೆದಿದ್ದು, ದಾಳಿಕೋರರು ಸ್ಥಳದಿಂದ ಹಣ ಮತ್ತು ಜಾನುವಾರುಗಳನ್ನು ಲೂಟಿ ಮಾಡಿದ್ದಾರೆ. ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಚಾಂದ್‌ಪುರ್ ಮತ್ತು ನೋಖಾಲಿಯಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಹಿಂದೂ ಭಕ್ತರು ಸಾವನ್ನಪ್ಪಿದ್ದಾರೆ ಎಂದು ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಆರೋಪಿಸಿದೆ.

ಇತ್ತಿಚೀನ ದಾಳಿಗಳಲ್ಲಿ ಹಿಂದೂ ಸಮುದಾಯದ 559 ಮನೆಗಳು ಬೆಂಕಿಗೆ ಆಹುತಿಯಾಗಿವೆ. ಹಿಂದೂಗಳಿಗೆ ಸೇರಿದ 442 ಅಂಗಡಿ ಮುಂಗಟ್ಟುಗಳು ಲೂಟಿಯಾಗಿ ಧ್ವಂಸವಾಗಿವೆ ಎಂದು ವರದಿ ಹೇಳಿದೆ. ಇದೇ ಅವಧಿಯಲ್ಲಿ ಕನಿಷ್ಠ 1,678  ಹಿಂದೂ ದೇವಾಲಯಗಳು, ವಿಗ್ರಹಗಳು ಮತ್ತು ಪೂಜಾ ಸ್ಥಳಗಳ ಮೇಲೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ ಎಂದು ಅದು ಹೇಳಿದೆ. ಈ ಘಟನೆಗಳಲ್ಲಿ ಹಿಂದೂ ಸಮುದಾಯದ 11 ನಾಗರಿಕರು ಸಾವನ್ನಪ್ಪಿದ್ದರೆ, 862 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.

ಕಳೆದ ಗುರುವಾರ ದ್ವಾರಕೇಶ್ವರಿ ರಾಷ್ಟ್ರೀಯ ದೇವಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪ್ರಧಾನಿ ಶೇಖ್ ಹಸೀನಾ, “ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದವರನ್ನು, ದಾಳಿಗೆ ಸಂಬಂಧಿಸಿದ ಘಟನೆಗಳನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ. ಯಾರನ್ನೂ ಬಿಡುವುದಿಲ್ಲ. ಅವರು ಯಾವ ಧರ್ಮಕ್ಕೆ ಸೇರಿದವರು ಎಂಬುದು ಮುಖ್ಯವಲ್ಲ. ಅವರನ್ನು ಹುಡುಕಿ  ಶಿಕ್ಷಿಸಲಾಗುವುದು” ಎಂದು ಹೇಳಿದ್ದರು.


ಇದನ್ನೂ ಓದಿ: ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ: ಬಾಂಗ್ಲಾ ಪ್ರಧಾನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹಿಂದೂಗಳಿಗೆ ಇದು ಎಚ್ಚರಿಕೆಯ ಘಂಟೆ. ಇಂದು ಬಂಗ್ಲಾದೇಶದಲ್ಲಿ ಮುಂದೊಂದು ದಿನ ಭಾರತದಲ್ಲಿ ಇದನ್ನು ತಪ್ಪಿಸಬೇಕಾದರೆ ಮೋದಿಜಿಯವರಂತಹ ನಾಯಕತ್ವ ಮುಂದುವರೆಯಲೇಬೇಕು.ಹಿಂದೂಗಳು ಒಗ್ಗಟ್ಟಾಗುವದು ಅವಶ್ಯವಾಗಿದೆ. ಇನ್ನಾದರೂ ಜಾತಿ,ಪಂಗಡ ಬಿಟ್ಟು ದೇಶದ ಭದ್ರತೆ ಹಾಗೂ ಮುಂದಿನ ನಮ್ಮ ಪೀಳಿಗೆಗಳ ಒಳಿತಿಗಾಗಿ ಮೋದಿಜಿಯವರ ಆಡಳಿತವನ್ನು ಮುಂದುವರೆಸಲು ಶ್ರಮಿಸುವ.
    . ಎಚ್ಚರ ಹಿಂದೂಗಳೇ ಎಚ್ಚರ !

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...