Homeಮುಖಪುಟಕಿರಿಯ ಶಾಲೆಯಲ್ಲಿ ‘ಬಿಸಿಎ’ ಪದವಿ! - ಅಮಿತ್ ಷಾ ಸಹಾಯಕ ಸಚಿವನ ಶೈಕ್ಷಣಿಕ ಅರ್ಹತೆ ವಿವಾದ

ಕಿರಿಯ ಶಾಲೆಯಲ್ಲಿ ‘ಬಿಸಿಎ’ ಪದವಿ! – ಅಮಿತ್ ಷಾ ಸಹಾಯಕ ಸಚಿವನ ಶೈಕ್ಷಣಿಕ ಅರ್ಹತೆ ವಿವಾದ

- Advertisement -
- Advertisement -

ಒಕ್ಕೂಟ ಸರ್ಕಾರದ ಸಚಿವ ಸಂಪುಟದಲ್ಲಿ ಹೊಸದಾಗಿ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿರುವ ನಿಸಿತ್ ಪ್ರಮಾಣಿಕ್ ಅವರ ನಿಜವಾದ ಶೈಕ್ಷಣಿಕ ಅರ್ಹತೆಯ ಬಗ್ಗೆ ವಿವಾದಗಳೆದ್ದಿವೆ. ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನ ಲೋಕಸಭಾ ಸಂಸದರಾಗಿರುವ ಅವರು ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ಮತ್ತು ಸಂಸತ್ತಿನ ಮುಂದೆ ವಿರೋಧಾತ್ಮಕ ಮಾಹಿತಿಯನ್ನು ನೀಡಿದ್ದಾರೆ.

ಬುಧವಾರ ನಡೆದ ಸಂಪುಟ ಪುನರ್ರಚನೆಯ ನಂತರ ನಿಸಿತ್ ಪ್ರಮಾಣಿಕ್ ಅವರನ್ನು ಗೃಹ ಸಚಿವ ಅಮಿತ್ ಶಾ ಅವರ ಹೊಸ ಸಹಾಯಕ ಸಚಿವ ಎಂದು ಹೆಸರಿಸಿದ ನಂತರ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ವಿವಾದಗಳು ಭುಗಿಲೆದ್ದಿವೆ.

ಇತ್ತೀಚೆಗೆ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೂ ತಮ್ಮ ಲೋಕಸಭಾ ಸದಸ್ಯತ್ವವನ್ನು ಉಳಿಸಿಕೊಳ್ಳಲು ಬೇಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 35 ವರ್ಷದ ನಿಸಿತ್ ಪ್ರಮಾಣಿಕ್, ತನ್ನ ಶೈಕ್ಷಣಿಕ ಅರ್ಹತೆ “ಮಾಧ್ಯಮಿಕ್ ಪರಿಕ್ಷಾ” ಅಥವಾ ಅಥವಾ “ಸೆಕೆಂಡರಿ ಪರೀಕ್ಷೆ” ಎಂದು ಎರಡೂ ಅಫಿಡೆವಿಟ್‌‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬಾಂಗ್ಲಾ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 12 ಜನರ ಬಂಧನ

ಒಂದು ಅಫಿಡೆವಿಟ್‌ ಅನ್ನು ಮಾರ್ಚ್ 25, 2019 ರ ಲೋಕಸಭಾ ಚುನಾವಣೆಯಲ್ಲಿ ಸಲ್ಲಿಸಲಾಗಿದ್ದು, ಮತ್ತೊಂದು ಅಫಿಡವಿಟ್‌ ಅನ್ನು ಈ ವರ್ಷದ ಮಾರ್ಚ್‌ 18 ರ ವಿಧಾನಸಭಾ ಚುನಾವಣೆಗೆ ಸಲ್ಲಿಸಲಾಗಿದೆ.

ನಿಸಿತ್ ಪ್ರಮಾಣಿಕ್ ಅವರ ಮಾರ್ಚ್ 2021 ರ ಅಫಿಡವಿಟ್.

ಆದಾಗ್ಯೂ, ಲೋಕಸಭಾ ವೆಬ್‌ಸೈಟ್‌ನಲ್ಲಿ ಪ್ರಮಾಣಿಕ್ ಅವರ ಪ್ರೊಫೈಲ್‌ನಲ್ಲಿ ಅವರ ಶೈಕ್ಷಣಿಕ ಅರ್ಹತೆ “ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್‌ (ಬಿ.ಸಿ.ಎ.) ಬಾಲಕುರಾ ಜೂನಿಯರ್ ಬೇಸಿಕ್ ಶಾಲೆಯಲ್ಲಿ  ಶಿಕ್ಷಣ ಪಡೆದಿದ್ದಾರೆ” ಎಂದು ಹೇಳುತ್ತದೆ.

ಲೋಕಸಭಾ ವೆಬ್‌ಸೈಟ್‌ನಲ್ಲಿ ನಿಸಿತ್ ಪ್ರಮಾಣಿಕ್ ಅವರ ಪ್ರೊಫೈಲ್.

ಬಿಸಿಎ ಮೂರು ವರ್ಷಗಳ ಪದವಿ ಕೋರ್ಸ್ ಆಗಿದ್ದು, ಇದಕ್ಕಾಗಿ ಹೈಯರ್ ಸೆಕೆಂಡರಿ ಅಥವಾ 12 ನೇ ತರಗತಿಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.

ಕೂಚ್‌ ಬೆಹಾರ್‌ ಜಿಲ್ಲೆಯ ಹಲವಾರು ಟಿಎಂಸಿ ನಾಯಕರು ಈ ವ್ಯತ್ಯಾಸಗಳನ್ನು ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯುಪಿ: ಚುನಾವಣೆಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ಮಹಿಳೆಯ ಸೀರೆ ಎಳೆದ ದುಷ್ಕರ್ಮಿಗಳು

“ಮಾರ್ಚ್‌ನಲ್ಲಿ, ನಿಸಿತ್ ಪ್ರಮಾಣಿಕ್ ಅವರ ಅತ್ಯುನ್ನತ ಶೈಕ್ಷಣಿಕ ಅರ್ಹತೆ ಸೆಕೆಂಡರಿ ಪರೀಕ್ಷೆ ಎಂದು ಉಲ್ಲೇಖಿಸಿದ್ದಾರೆ. ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಯೆ ಎಂದು ತಮ್ಮ ಅಫಿಡವಿಟ್‌‌ನಲ್ಲಿ ಸ್ಪಷ್ಟಪಡಿಸಲಿಲ್ಲ. ಈಗ, ಜುಲೈನಲ್ಲಿ, ಅವರು ಪದವಿ ಪದವಿ ಪಡೆದಿದ್ದಾರೆ ಎಂದು ಪ್ರೋಫೈಲ್ ಹೇಳಿದೆ. ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಒಬ್ಬರು ಪದವಿ ಹೇಗೆ ಪಡೆಯಲು ಸಾಧ್ಯ?” ಎಂದು ಮಾಜಿ ಟಿಎಂಸಿ ಶಾಸಕ ಉದಯನ್ ಗುಹಾ ಅವರನ್ನು ಕೇಳಿದ್ದಾರೆ.

ಟಿಎಂಸಿಯ ಕೂಚ್ ಬೆಹರ್‌ನ ಮಾಜಿ ಸಂಸದ ಪಾರ್ಥ ಪ್ರತಿಮ್ ರಾಯ್ ಅವರು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಪ್ರಮಾಣಿಕ್ ಅವರ ವಿಭಿನ್ನ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ.

ಇದರ ಜೊತೆಗೆ ನಿಶಿತ್‌ ಪ್ರಮಾಣಿಕ್ ಅವರ ಲೋಕಸಭಾ ಪ್ರೊಫೈಲ್ ಉಲ್ಲೇಖಿಸುವ ಶಾಲೆಯು ಕಿರಿಯ ಶಾಲೆಯಾಗಿದ್ದು, ಅಲ್ಲಿ ಅಂತಹ ಯಾವುದೇ ಕೋರ್ಸ್‌ ಇಲ್ಲ ಉದಯನ್‌ ಎಂದು ಗುಹಾ ಆರೋಪಿಸಿದ್ದಾರೆ. “ಈ ಶಾಲೆಯು 5 ನೇ ತರಗತಿವರೆಗೆ ಮಾತ್ರ ಇರುವ ಕಿರಿಯ ಶಾಲೆಯಾಗಿದೆ. ಇದು ಪದವಿಯನ್ನು ನೀಡಲು ಹೇಗೆ ಸಾಧ್ಯ?” ಎಂದು ಅವರು ಹೇಳಿದ್ದಾರೆ.

ಈ ಶಾಲೆಯು ಸಂಸದರ ನಿವಾಸದಿಂದ ಸುಮಾರು 8 ಕಿ.ಮೀ ದೂರದಲ್ಲಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ ಎಂದು ದಿವೈರ್‌ ಉಲ್ಲೇಖಿಸಿದೆ.

ಇದನ್ನೂ ಓದಿ: ಸಹಕಾರ ಖಾತೆ ರಚನೆ: ಒಕ್ಕೂಟ ಸರ್ಕಾರದಿಂದ ರಾಜ್ಯದ ಹಕ್ಕುಗಳ ಮೇಲೆ ದಾಳಿ

ಆದಾಗ್ಯೂ, ಪ್ರಮಾಣಿಕ್ ಅವರ ಸಂಸತ್‌‌ನ ಪ್ರೊಫೈಲ್, ಶಾಲೆಯು ಅವರಿಗೆ ಪದವಿ ನೀಡಿತು ಎಂದು ಉಲ್ಲೇಖಿಸಿಲ್ಲ. ಬಾಲಕುರ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ ಎಂದು ಎಂದು ಅದು ಹೇಳಿದೆ. ಆದರೆ ಅವರಿಗೆ ಯಾವ ಸಂಸ್ಥೆ ಬಿಸಿಎ ಪದವಿಯನ್ನು ನೀಡಿತು ಎಂಬುದನ್ನು ಸಹ ಪ್ರೊಫೈಲ್ ಉಲ್ಲೇಖಿಸಿಲ್ಲ.

ನಿಸಿತ್‌ ಪ್ರಮಾಣಿಕ್ ಅವರು ಕೂಚ್ ಬೆಹಾರ್ ಜಿಲ್ಲೆಯ ಟಿಎಂಸಿ ಯುವ ವಿಭಾಗದ ನಾಯಕರಾಗಿದ್ದು, 2018 ರಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಯಿತು, ನಂತರ ಅವರು 2019 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸೇರಿದ್ದರು. ಬಿಜೆಪಿಯಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. ಇತ್ತೀಚೆಗೆ ಅವರು ವಿಧಾನಸಭೆಗೂ ಬಿಜೆಪಿಯಿಂದ ಸ್ಪರ್ಧಿಸಿ ಅಲ್ಪ ಅಂತರದಿಂದ ಗೆದ್ದಿದ್ದರು. ಆದರೆ ಅವರು ತಮ್ಮ ಸಂಸದ ಸ್ಥಾನವನ್ನು ಉಳಿಸಲು ಬೇಕಾಗಿ ಅದಕ್ಕೆ ರಾಜೀನಾಮೆ ನೀಡಿದ್ದಾರೆ.

ನಿಸಿತ್‌ ಪ್ರಮಾಣಿಕ್‌‌ 2019 ರ ಅಫಿಡವಿಟ್‌ನಲ್ಲಿ ತನ್ನ ವಿರುದ್ದ 11 ಕ್ರಿಮಿನಲ್ ಪ್ರಕರಣಗಳನ್ನು ಮತ್ತು 2021 ರ ಅಫಿಡವಿಟ್‌ನಲ್ಲಿ 13 ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಕೊಲೆ, ದೌರ್ಜನ್ಯ, ಕಳ್ಳತನ ಮತ್ತು ಸ್ಫೋಟಕಗಳನ್ನು ಹೊಂದಿದ್ದ ಆರೋಪಗಳು ಸೇರಿವೆ.

ಕೃಪೆ: ದಿವೈರ್‌

ಇದನ್ನೂ ಓದಿ: ಕೃಷಿ ಕಾನೂನು ರದ್ದತಿ ಬಿಟ್ಟು ಬೇರೇನಾದರೂ ಕೇಳಿ: ರೈತರೊಂದಿಗೆ ವಿನಂತಿಸಿದ ಒಕ್ಕೂಟ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -