ಬಾಂಗ್ಲಾದೇಶದ 23 ವರ್ಷದ ಯುವತಿ ಮೇಲೆ ನಡೆದಿದ್ದ ಬರ್ಬರ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ಮುಕ್ತಾಯಗೊಂಡಿದ್ದು, ರಾಮಮೂರ್ತಿನಗರ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಬುಧವಾರ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಯುವತಿಯರಿದ್ದಾರೆ. ಬಂಧಿತರಲ್ಲಿ 11 ಮಂದಿ ಬಾಂಗ್ಲಾದೇಶದ ಪ್ರಜೆಗಳಾಗಿದ್ದಾರೆ.
ಐದು ವಾರಗಳ ಅಲ್ಪಾವಧಿಯಲ್ಲಿ ತನಿಖೆ ಪೂರ್ಣಗೊಂಡಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಗುರುವಾರ ಟ್ವೀಟ್ ಮಾಡಿದ್ದಾರೆ. 12 ಆರೋಪಿಗಳ ವಿರುದ್ಧ 1,019 ಪುಟಗಳನ್ನು ಒಳಗೊಂಡಂತೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಪ್ರಾಥಮಿಕ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ’ ಎಂದು ತಿಳಿಸಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಈ ಬರ್ಬರ ಘಟನೆ ನಡೆದಿತ್ತು.
ಇದನ್ನೂ ಓದಿ: ಉಪ್ಪಿನಂಗಡಿ: ಪೊಲೀಸರ ಬೇಜವಾಬ್ದಾರಿಯಿಂದ ಯುವಕ ಸಾವು , ನಿಲ್ಲದ ಪೊಲೀಸ್ ದೌರ್ಜನ್ಯ- ಆರೋಪ
..within a short span of 5 weeks.
The meticulous investigation conducted by N.B. Sakri, ACP sub-division, and his team under the close supervision of @DCPEASTBCP and the overall guidance of @AddlCPEast is highly commendable. (2/3)
— Kamal Pant, IPS (@CPBlr) July 8, 2021
ಐದು ವಾರಗಳಲ್ಲಿ ಪ್ರಕರಣ ಭೇದಿಸಿದ ಕಾರ್ಯಕ್ಕಾಗಿ ಪೊಲೀಸ್ ಆಯುಕ್ತ ಕಮಲ್ ಪಂತ್ ತನಿಖಾ ತಂಡವನ್ನು ಶ್ಲಾಘಿಸಿದ್ದಾರೆ. ತಂಡಕ್ಕೆ 1 ಲಕ್ಷ ರೂಪಾಯಿ ಬಹುಮಾನವನ್ನು ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಾಲ್ಕು ಜನ ಪುರುಷರು ಮತ್ತು ಇಬ್ಬರು ಯುವತಿಯರು, ಒಬ್ಬ ಯುವತಿಯನ್ನು ಹಿಂಸಿಸುತ್ತಿರುವ, ಸಾಮೂಹಿಕವಾಗಿ ಅತ್ಯಾಚಾರ ನಡೆಸುತ್ತಿರುವ, ಗುಪ್ತಾಂಗಕ್ಕೆ ಗಾಜಿನ ಬಾಟಲಿಯನ್ನು ತುರುಕುತ್ತಿರುವ ಹೇಯ ಅಮಾನವೀಯ ದೃಶ್ಯದ ವಿಡಿಯೊ ವೈರಲ್ ಆಗಿತ್ತು. ಜನರಿಂದ ಜನರಿಗೆ ತಲುಪಿದ್ದ ಈ ವಿಡಿಯೊ ದೇಶಾದ್ಯಂತ ಖಂಡನೆಗೆ ಒಳಗಾಗಿತ್ತು. ಬೆಂಗಳೂರು ಪೊಲೀಸರು ಅಸ್ಸಾಂ ಪೊಲೀಸರ ಸಹಕಾರದೊಂದಿಗೆ ನಾಲ್ವರು ಆರೋಪಿಗಳನ್ನು ಮೇ 27, 2021 ಗುರುವಾರ ಅವಲಹಳ್ಳಿಯಲ್ಲಿಯಲ್ಲಿ ಬಂಧಿಸಿದ್ದರು.
ಅತ್ಯಾಚಾರ ಸಂತ್ರಸ್ತೆ, ಮೂರು ವರ್ಷಗಳ ಹಿಂದೆ ಬಾಂಗ್ಲಾದೇಶದ ಮಾನವ ಕಳ್ಳಸಾಗಣೆದಾರರ ಜಾಲದ ಮೂಲಕ ಅಸ್ಸಾಂ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಕರ್ನಾಟಕಕ್ಕೆ ಬಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆಕೆಯನ್ನು ಈ ಕಳ್ಳಸಾಗಣೆದಾರರ ತಂಡ ಬಲವಂತವಾಗಿ ವೇಶ್ಯಾವಾಟಿಕೆಗೆ ಒಳಪಡಿಸಿತ್ತು. ಆರ್ಥಿಕ ವಿವಾದದ ನಂತರ ಆರೋಪಿಗಳು ಆಕೆಯನ್ನು ಹಿಂಸಿಸಿ, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳುಗಳಲ್ಲಿ ತನಿಖೆ ಮತ್ತು ಬಂಧನದ ಸಮಯದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಮೂವರು ಆರೋಪಿಗಳಿಗೆ ಪೊಲೀಸರು ಗುಂಡಿಕ್ಕಿ ಗಾಯಗೊಳಿಸಿದ್ದಾರೆ. ಪ್ರಕರಣದಲ್ಲಿ 10 ಮಂದಿಯ ವಿರುದ್ದ ಅತ್ಯಾಚಾರ ಆರೋಪ ಹಾಗೂ ಇಬ್ಬರು ಯುವತಿಯರ ವಿರುದ್ಧ ಅಕ್ರಮ ವಲಸೆ ಆರೋಪವಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಸಾಕ್ಷಿಗಳನ್ನು ಚಾರ್ಜ್‍ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಬರ್ಬರ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಬಂಧನ