Homeಕರ್ನಾಟಕಬೆಂಗಳೂರಿನ ಜೋಡಿ ಕೊಲೆಗೆ ವ್ಯವಹಾರ ವೈಷಮ್ಯವೇ ಕಾರಣ; ವಿಫಲವಾದ ಬಿಜೆಪಿಯ ಹೆಣರಾಜಕಾರಣ

ಬೆಂಗಳೂರಿನ ಜೋಡಿ ಕೊಲೆಗೆ ವ್ಯವಹಾರ ವೈಷಮ್ಯವೇ ಕಾರಣ; ವಿಫಲವಾದ ಬಿಜೆಪಿಯ ಹೆಣರಾಜಕಾರಣ

- Advertisement -
- Advertisement -

ಜುಲೈ 11ರ ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಅಮೃತಹಳ್ಳಿಯಲ್ಲಿರುವ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ (Aironics Media Pvt Ltd) ಕಂಪನಿಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಆ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಫಣೀಂದ್ರ ಸುಬ್ರಮಣ್ಯ ಹಾಗೂ ಸಿಇಒ ವಿನು ಕುಮಾರ್ ಇಬ್ಬರಿಗೂ ಇರಿದು ಕೊಂದು ಪರಾರಿಯಾಗಿದ್ದಾರೆ. ಈ ಜೋಡಿ ಕೊಲೆಯನ್ನು ಕೋಮುವಾದೀಕರಿಸಿದ ಬಿಜೆಪಿ ಮುಖಂಡರು ಮತ್ತು ಹಿಂದುತ್ವವಾದಿಗಳು, ಹಿಂದೂ ಅರ್ಚಕ, ಹಿಂದೂ ಮುಖಂಡ ಫಣೀಂದ್ರ ಸುಬ್ರಮಣ್ಯರವರ ಕೊಲೆಯಾಗಿದೆ ಎಂದು ಪ್ರಚಾರ ಮಾಡಿದರು. ಇದೇ ಸಂದರ್ಭದಲ್ಲಿ ಬೆಳಗಾವಿಯ ಜೈನ ಮುನಿ ಮತ್ತು ಟಿ.ನರಸೀಪುರದ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಸಂಭವಿಸಿದ್ದರಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಕೊಲೆಯಾಗುತ್ತಿದೆ ಎಂಬ ಕೋಮು ನಿರೂಪಣೆಯನ್ನು ಹರಿಯಬಿಟ್ಟರು.

ಬಿಜೆಪಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಹಿಂದೂ ಮುಖಂಡನನ್ನು ಅನ್ಯಧರ್ಮದವರು ಕೊಂದಿದ್ದಾರೆ ಎಂದು ಆರೋಪಿಸಿದರು. ಆದರೆ ಪೊಲೀಸರು ಶೀಘ್ರವಾಗಿ ಕೊಲೆಗೆ ಸಂಬಂಧಿಸಿದಂತೆ ಸಂತೋಷ್, ಶಬರೀಶ್ (ಫೆಲಿಕ್ಸ್) ಮತ್ತು ವಿನಯ್ ರೆಡ್ಡಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಸಲೀ ಸತ್ಯ ಬಹಿರಂಗವಾಗಿದೆ. ಅದರ ಪ್ರಕಾರ ವೃತ್ತಿ ಮತ್ಸರವೇ ಜೋಡಿ ಕೊಲೆಗೆ ಪ್ರಧಾನ ಕಾರಣ ಹೊರತು ಯಾವುದೇ ಕೋಮು ಸಂಘರ್ಷವಲ್ಲ. ಜೊತೆಗೆ ಕೊಲೆಯಾದವರು ಮತ್ತು ಕೊಲೆ ಆರೋಪಿಗಳೆಲ್ಲರೂ ಒಂದೇ ಧರ್ಮದವರಾಗಿದ್ದಾರೆ.

ಕೊಲೆಯಾದ ಫಣೀಂದ್ರ ಮತ್ತು ವಿನುಕುಮಾರ್ ಜೊತೆಗೆ ಆರೋಪಿಗಳಾದ ಸಂತೋಷ್, ಶಬರೀಶ್ ಈ ಹಿಂದೆ ಜಿ-ನೆಟ್ ಎಂಬ ಇಂಟರ್‌ನೆಟ್ ಸೇವೆ ಒದಗಿಸುವ ಕಂಪನಿಯಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಆ ಕಂಪನಿಯ ಮಾಲೀಕರಾದ ಅರುಣ್ ಕುಮಾರ್‌ರೊಂದಿಗೆ ಮನಸ್ತಾಪ ಬಂದ ಕಾರಣ ಕೆಲಸ ಬಿಟ್ಟ ಫಣೀಂದ್ರ ಮತ್ತು ವಿನುಕುಮಾರ್ 2022ರ ನವೆಂಬರ್‌ನಲ್ಲಿ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಸ್ವಂತ ಕಂಪನಿ ಆರಂಭಿಸಿದ್ದರು. ಆರಂಭದಿಂದಲೇ ಕಂಪನಿಯು ಸಾಕಷ್ಟು ಜನಪ್ರಿಯತೆ ಪಡೆದದ್ದರಿಂದ ಹಲವಾರು ಗ್ರಾಹಕರು ಜಿ-ನೆಟ್ ಕಂಪನಿ ಬಿಟ್ಟು ಏರೋನಿಕ್ಸ್‌ನಿಂದ ಸೇವೆ ಪಡೆದುಕೊಳ್ಳಲು ಆರಂಭಿಸಿದ್ದರು. ಅಷ್ಟು ಮಾತ್ರವಲ್ಲದೇ ಹಲವಾರು ಉದ್ಯೋಗಿಗಳು ಸಹ ಜಿ-ನೆಟ್ ತೊರೆದು ಏರೋನಿಕ್ಸ್ ಸೇರಿದ್ದರು. ಹಾಗಾಗಿ ಎರಡು ಕಂಪನಿಗಳ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿತ್ತು. ಇದರಿಂದ ಹತಾಶಗೊಂಡ ಜಿ-ನೆಟ್ ಮಾಲೀಕ ಅರುಣ್ ಕುಮಾರ್ ಫೆಲಿಕ್ಸ್ ಮತ್ತು ಇತರರಿಗೆ ಸುಪಾರಿ ನೀಡಿ ಫಣೀಂದ್ರ ಮತ್ತು ವಿನುಕುಮಾರ್ ಕೊಲೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಪೊಲೀಸರು ಅರುಣ್ ಕುಮಾರ್‌ರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ), 120ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಫಣೀಂದ್ರ ಸುಬ್ರಹ್ಮಣ್ಯಂ ಅವರು ಹಿಂದುತ್ವ ಸಂಘಟನೆಗಳೊಂದಿಗೆ ಶಾಮೀಲಾಗಿದ್ದರೂ ಕೂಡ ಅನ್ಯ ಧರ್ಮದ ಯಾರೊಂದಿಗೂ ಅವರಿಗೆ ವೈರತ್ವವಿರಲಿಲ್ಲ. ಅಲ್ಲದೆ, ಜಿ-ನೆಟ್ ಕಂಪನಿ ಜೊತೆಗಿನ ವ್ಯವಹಾರ ವೈಷಮ್ಯವೇ ಅವರ ಹತ್ಯೆಗೆ ಕಾರಣ ಎಂದು ದೂರುದಾರರಾದ ಅವರ ಸಹೋದ್ಯೋಗಿ ಶಂಕರ್ ನಾರಾಯಣ್ ತಿಳಿಸಿದ್ದಾರೆ; ಡಿಸಿಪಿ (ಈಶಾನ್ಯ) ಲಕ್ಷ್ಮಿ ಪ್ರಸಾದ್ ಆರಂಭಿಕ ತನಿಖೆಯಲ್ಲಿ ಯಾವುದೇ ಕೋಮು ಆಯಾಮ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಫಣೀಂದ್ರರವರು ಪೂಜೆ ಮಾಡುತ್ತಿರುವ ಫೋಟೊ, ಅವರ ಕಚೇರಿ ಉದ್ಘಾಟನೆ ಸಮಯದಲ್ಲಿ ತೆಗೆಸಿಕೊಂಡಿರುವುದು; ಅದನ್ನು ರೀಲ್ ಒಂದರಲ್ಲಿ ಬಳಸಲಾಗಿದ್ದು ಅದನ್ನೇ ಮುಂದುಮಾಡಿ ಅವರು ಹಿಂದೂ ಅರ್ಚಕ ಎಂದು ತಪ್ಪಾಗಿ ಬಿಂಬಿಸಲಾಗಿದೆ

ಫಣೀಂದ್ರರವರ ವ್ಯವಹಾರ ಪಾಲುದಾರರಾದ ಕನ್ನಡಪರ ಹೋರಾಟಗಾರರಾದ ಬಿ.ಹರೀಶ್ ಕುಮಾರ್‌ರವರು ಮಾತನಾಡಿ, “ಫಣೀಂದ್ರರವರು ಒಳ್ಳೆಯ ಸ್ವಭಾವದವರು. ಅವರು ಹಿಂದುತ್ವವನ್ನು ಒಪ್ಪಿಕೊಂಡರೂ ಸಹ ಅನ್ಯಧರ್ಮದವರನ್ನು ದ್ವೇಷಿಸುವವರಲ್ಲ. ಕೇವಲ 4 ತಿಂಗಳ ಹಿಂದೆ ಹೊಸ ಇಂಟರ್‌ನೆಟ್ ಸೇವೆ ನೀಡುವ ಕಂಪನಿ ಆರಂಭಿಸಿದ್ದೇವೆ. ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿರುವಾಗ ಅವರ ಏಳಿಗೆ ಸಹಿಸದೇ ಕೊಲೆಗೈಯ್ಯಲಾಗಿದೆ” ಎಂದರು.

ಠುಸ್ ಆದ ಬಿಜೆಪಿಯ ಹೆಣದ ರಾಜಕೀಯ

4 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿಯು ಜನಪರ ಆಡಳಿತ ನೀಡಲು, ಅಭಿವೃದ್ದಿ ಮಾಡಲು ವಿಫಲವಾಗಿ ಸೋತು ಸುಣ್ಣವಾಗಿದೆ. ಆದರೂ ತನ್ನ ಹೆಣ ರಾಜಕಾರಣವನ್ನು ಮಾತ್ರ ಕೈಬಿಟ್ಟಿಲ್ಲ. ರಾಜ್ಯದಲ್ಲಿ ಯಾರಾದರೂ ಸಾವನಪ್ಪಿದ್ದರೆ ಹಿಂದೂ ಮುಖಂಡನ ಕೊಲೆ ಎಂದು ಗಲಭೆ ಎಬ್ಬಿಸಲು ಬಿಜೆಪಿ ಯತ್ನಿಸುತ್ತಿದೆ. ಈ ಹಿಂದೆ ಹೊನ್ನಾವರದಲ್ಲಿ ಪರೇಶ್ ಮೇಸ್ತಾ ಎಂಬ ಯುವಕ ಸಾವನಪ್ಪಿದ ಘಟನೆಯನ್ನು ಕೋಮುವಾದೀಕರಿಸಿ, ಗಲಭೆಗಳನ್ನು ಎಬ್ಬಿಸಿ ಮತಗಳ ಬೇಟೆಯಾಡಿದ್ದ ಬಿಜೆಪಿಗೆ ಇನ್ನೂ ರಕ್ತದ ರುಚಿ ಆರಿಲ್ಲ. ಹಾಗಾಗಿ ಹೆಣಗಳು ಬೀಳುವುದನ್ನೇ ಕಾಯ್ದು ಕೋಮು ಆಯಾಮ ನೀಡಲು ಯತ್ನಿಸುತ್ತಿದೆ. ಆ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ. ಈ ಜೋಡಿ ಕೊಲೆ ವಿಚಾರದಲ್ಲಿಯೂ ಹಾಗೆ ಮಾಡಲು ಯತ್ನಿಸಿತು. ಆದರೆ ನೈಜ ಕಾರಣ ಹೊರಬರುತ್ತಲೇ ಮುಖಭಂಗ ಅನುಭವಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...