Homeಅಂಕಣಗಳುಕಳೆದುಹೋದ ದಿನಗಳುಭಿನ್ನಾಭಿಪ್ರಾಯಗಳ ನಡುವೆಯೂ ಅಮರ ಸ್ನೇಹ: ಸಿ.ಎಂ ಪೂಣಚ್ಚ ಮತ್ತು ಗಣಪಯ್ಯ ಹೀಗಿದ್ದರು

ಭಿನ್ನಾಭಿಪ್ರಾಯಗಳ ನಡುವೆಯೂ ಅಮರ ಸ್ನೇಹ: ಸಿ.ಎಂ ಪೂಣಚ್ಚ ಮತ್ತು ಗಣಪಯ್ಯ ಹೀಗಿದ್ದರು

ಪೂಣಚ್ಚನವರು ತೀರಿಕೊಂಡಾಗ "ಸದಾ ಬಿಳಿ ಉಡುಪನ್ನು ಧರಿಸುತ್ತಿದ್ದ ಪೂಣಚ್ಚ ಕೊಳೆ ಮಾಡಿಕೊಳ್ಳದೆ, ಶುಭ್ರವಾಗಿಯೇ ನಿರ್ಗಮಿಸಿದರು" ಎಂದು ಲಂಕೇಶ್ ಬರೆದಿದ್ದರು...

- Advertisement -
- Advertisement -

ಕಳೆದುಹೋದ ದಿನಗಳು – 28

ಸಕಲೇಶಪುರಕ್ಕೆ ಬಂದ ನಂತರ ಗಣಪಯ್ಯನವರ ಕೊನೆಯ ದಿನಗಳವರೆಗೂ ಆಪ್ತ ಬಳಗದವರೆಂದು ಪರಿಗಣಿತವಾಗಿ ಇದ್ದವರು ಇಬ್ಬರು. ಒಬ್ಬರು ಸಿ.ಎಂ.ಪೂಣಚ್ಚ ಇನ್ನೊಬ್ಬರು  ಗ್ರೆಗೊರಿ ಮಥಾಯಿಸ್, ಪೂಣಚ್ಚನವರ ಪೂರ್ಣಿಮಾ ಎಸ್ಟೇಟ್ ಮತ್ತು ಗ್ರೆಗೊರಿ ಮಥಾಯಿಸ್ ಅವರ ಶ್ರೀನಿವಾಸ ಎಸ್ಟೇಟ್ ಇವೆರಡೂ ತೋಟಗಳು ಐವತ್ತರ ದಶಕದಿಂದಲೇ ಹಾರ್ಲೆ ಮ್ಯಾನೇಜ್ಮೆಂಟ್ ಸರ್ವಿಸಸ್ ಅಡಿಯಲ್ಲೇ ಇದ್ದವು. ಮಥಾಯಿಸ್ ಅವರು ಕೆಲಕಾಲ ಅಮೆರಿಕಾದಲ್ಲಿಯೂ ನಂತರ ಕರ್ನಾಟಕ ಮತ್ತು ಭಾರತ ಸರ್ಕಾರಗಳ ಹಿರಿಯ ಅಧಿಕಾರಿಯೂ ಆಗಿ ಇದ್ದುದರಿಂದ ತೋಟಕ್ಕೆ ಬರುತ್ತಿದ್ದುದು ಕಡಿಮೆಯೇ. ಅವರ ನಿವೃತ್ತಿಯ ನಂತರ ಕೆಲವು ಸಲ ತೋಟಕ್ಕೆ ಬಂದು ಇರುತ್ತಿದ್ದರು. ಅವರ ಮಗ ಜೆರೋಮ್ ಪೀಟರ್ ಮಥಾಯಿಸ್ ಹೃದ್ರೋಗ ತಜ್ಞ ವೈದ್ಯರಾಗಿ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಶ್ರೀನಿವಾಸ ಎಸ್ಟೇಟ್‌ನ ಒಡೆತನವನ್ನು ಇನ್ನೂ ಉಳಿಸಿಕೊಂಡಿದ್ದಾರೆ.

ಪೂಣಚ್ಚನವರು ರಾಜಕೀಯದಿಂದ ನಿವೃತ್ತರಾದನಂತರ ಒಮ್ಮೊಮ್ಮೆ ತೋಟಕ್ಕೆ ಬರುತ್ತಿದ್ದರು.

ಸಾಹಿತ್ಯದ ಅಭ್ಯಾಸಿಯಾಗಿದ್ದ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ಮಡಿಕೇರಿಯ “ಕೊಡಗು” ಪತ್ರಿಕೆಯ ಸಂಪಾದಕರಾಗಿ. ನಂತರ ಅವರು ರಾಜಕಾರಣದಲ್ಲಿ ತೊಡಗಿದರು. ಆದ್ದರಿಂದ ಅವರಿಗೆ ಸಾಂಸ್ಕೃತಿಕ ಚುಟುವಟಿಕೆಗಳಲ್ಲಿಯೂ ಒಲವಿತ್ತು.

ಪೂಣಚ್ಚನವರು ಕೇಂದ್ರ ಸಚಿವರಾಗಿದ್ದಾಗ ಮತ್ತು ನಂತರ ರಾಜ್ಯಪಾಲರಾಗಿದ್ದ ಅವಧಿಯಲ್ಲಿಯೂ ನಮ್ಮ ನಾಟಕ ಪ್ರದರ್ಶನವಿದ್ದಾಗ ಅದರ ಆಹ್ವಾನ ಪತ್ರವನ್ನಿಟ್ಟು ಅವರಿಗೆ ಕಾಗದ ಬರೆಯುತ್ತಿದೆ. ಅವರ ಅಷ್ಟೆಲ್ಲ ಕೆಲಸಕಾರ್ಯಗಳ ನಡುವೆಯೂ ನಮ್ಮ ನಮ್ಮ ನಾಟಕಕ್ಕೆ ಶುಭಹಾರೈಸಿ ಪತ್ರ ಬರೆಯುತ್ತಿದ್ದರು.

ಒಮ್ಮೆ ಪೂಣಚ್ಚನವರು ತೋಟಕ್ಕೆ ಬಂದಾಗ ನಾನು ಇದುವರೆಗೆ ನಿಮ್ಮ ನಾಟಕಗಳನ್ನು ನೋಡಲಾಗಲಿಲ್ಲ. ಇನ್ನೊಮ್ಮೆ ಬಂದಾಗ ಸಾಧ್ಯವಾದರೆ ನೋಡುತ್ತೇನೆ ಎಂದಿದ್ದರು. ನೀವು ಬರುವ ಕಾರ್ಯಕ್ರಮವನ್ನು ಒಂದು ತಿಂಗಳಿಗೆ ಮೊದಲು ತಿಳಿಸಿದರೆ ನಾನು ಏನಾದರೂ ಮಾಡಬಹುದು ಎಂದಿದ್ದೆ.

ಆ ವರ್ಷ ನಾವು ಮಹದೇವ ಬಣಕಾರ ಅವರ “ಮಕ್ಕಳಿರಲವ್ವ ಮನೆತುಂಬ” ಎಂಬ ನಾಟಕವನ್ನು ತೆಗೆದುಕೊಂಡಿದ್ದೆವು. ಮೊದಲ ಪ್ರದರ್ಶನವಾದಾಗ ಎಂದಿನಂತೆ ಪೂಣಚ್ಚನವರಿಗೆ ಪತ್ರ ಬರೆದಿದ್ದೆ. ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ಕೆಲವೇ ದಿನಗಳಲ್ಲಿ “ಮುಂದಿನ ತಿಂಗಳ ಮೊದಲವಾರದಲ್ಲಿ ಬರುತ್ತೇನೆ, ನಾಟಕ ಪ್ರದರ್ಶನ ಮಾಡಲು ಸಾಧ್ಯವೇ?” ಎಂದು ಪತ್ರಬರೆದಿದ್ದರು.

ನಾವು ಮತ್ತೆ ಉತ್ಸಾಹದಿಂದ ತಾಲೀಮು ಪ್ರಾರಂಭಿಸಿದೆವು. ಅವರಿಗಾಗಿ ಒಂದು ಪ್ರದರ್ಶನ ಮಾಡಲು ಸಿದ್ಧರಾದೆವು.

ಪೂಣಚ್ಚ ದಂಪತಿ (ಶ್ರೀಮತಿ ಗಂಗವ್ವ ಪೂಣಚ್ಚ) ತೋಟದಲ್ಲೇ ಬಂದು ಉಳಿದಿದ್ದರು. ತೋಟದ ಕಾಫಿ ಕಣದ ಪಕ್ಕದಲ್ಲೇ ನಾವು ರಂಗವೇದಿಕೆಯನ್ನು ಸಿದ್ಧಮಾಡಿಕೊಂಡು, ಸಾರ್ವಜನಿಕರಿಗೂ ಮುಕ್ತ ಪ್ರವೇಶ ಇಟ್ಟೆವು. ಈ ಪದ್ಧತಿ ಹಾರ್ಲೆ ಗುಂಪಿನ ಎಲ್ಲ ಸಂಸ್ಥೆಗಳಲ್ಲೂ ನಡೆದು ಬಂದ ರೀತಿ. ಹಾರ್ಲೆ ಎಸ್ಟೇಟಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿ ಅಲ್ಲಿ ಸುತ್ತಲಿನ ಗ್ರಾಮಸ್ಥರಿಗೂ ಮುಕ್ತ ಪ್ರವೇಶ.

ನಮ್ಮ ನಾಟಕ ಪ್ರದರ್ಶನಕ್ಕೆ ಅಂದು ಗಣಪಯ್ಯನವರೂ ಬಂದರು. ಅವರಿಗೆ ಬೆಂಗಳೂರಿನಲ್ಲಿ ಆದ ರಸ್ತೆ ಅಪಘಾತದಿಂದ ಕಾಲಿಗೆ ಪೆಟ್ಟಾದದ್ದು ಇನ್ನೂ ವಾಸಿಯಾಗಿರಲಿಲ್ಲ. ಕಾಲಿಗೆ ಕಟ್ಟಿದ ಪಟ್ಟಿಗಳು ಹಾಗೇ ಇದ್ದವು. ಆದರೂ ಸಂಜೆ ಬಂದು ಗೆಳೆಯನ ಜೊತೆ ಕುಳಿತು ಇಡೀ ನಾಟಕ ನೋಡಿದರು.

ನಾವು ಆಡಿದ ನಾಟಕ ಮಕ್ಕಳಿರಲವ್ವ ಮನೆತುಂಬ ಜನಸಂಖ್ಯಾ ನಿಯಂತ್ರಣದ ಅಗತ್ಯದ ಬಗ್ಗೆ ಇತ್ತು. ನಾಟಕದ ನಂತರ ಮಾತಾಡಿದ ಪೂಣಚ್ಚ ಸಂಜಯ ಗಾಂಧಿಯ ಪ್ರಸ್ತಾಪ ಮಾಡಿ, “ನಾವು ಸಂಜಯಗಾಂಧಿಯವರ ರಾಜಕೀಯವನ್ನು ಮತ್ತು ಅನೇಕ ಕ್ರಮಗಳನ್ನು ವಿರೋಧಿಸಬಹುದು, ಆದರೆ ಅವರ ಕಾರ್ಯಕ್ರಮಗಳಲ್ಲಿ ಎರಡು ವಿಚಾರಗಳಿಗೆ ನಮ್ಮ ವಿರೋಧ ಇರಬಾರದು. ಆ ಕಾರ್ಯಕ್ರಮಗಳನ್ನು ಜಾರಿಗೊಳಿಸುವಾಗ ಆದ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಆದರೆ ಜನಸಂಖ್ಯಾ ನಿಯಂತ್ರಣ ಮತ್ತು ವ್ಯಾಪಕವಾದ ಅರಣ್ಯೀಕರಣ ಇವೆರಡು ವಿಷಯಗಳನ್ನು ನಾವು ಎಲ್ಲ ರಾಜಕಾರಣವನ್ನು ಬದಿಗಿಟ್ಟು ಮುಕ್ತವಾಗಿ ಮುನ್ನಡೆಸಬೇಕು. ಇಲ್ಲದಿದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ. ಇದು ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೇ ಅನ್ವಯಿಸುವ ವಿಷಯ” ಎಂದರು.

ನಾಟಕ ಮಕ್ಕಳಿರಲವ್ವ ಮನೆತುಂಬ 1986 ರಲ್ಲಿ

ಅದು ಈ ಗೆಳೆಯರಿಬ್ಬರು ಒಟ್ಟಿಗೆ ಕುಳಿತು ಮಾತಾಡಿದ ಕೊನೆಯ ಸಂದರ್ಭವಾಗಿತ್ತು. ನಂತರ ಮೊದಲು ಅಗಲಿದವರು ಗಣಪಯ್ಯನವರೇ.

ಇಬ್ಬರೂ ಗಾಂಧಿ ಅನುಯಾಯಿಗಳು, ಆದರೆ ರಾಜಕೀಯವಾಗಿ ವಿಭಿನ್ನ ಹಾದಿ ಹಿಡಿದವರು. ಪೂಣಚ್ಚ ಕೊನೆಯವರೆಗೂ ಗಣಪಯ್ಯನವರನ್ನು ತನ್ನ ಗುರುಗಳೆಂದೇ ಹೇಳುತ್ತಿದ್ದರು.

ಅಂದಿನ ದಿನಗಳ ಸೊಬಗಿದು.

ಗಾಂಧಿಯಿಂದ ಪ್ರಭಾವಿತರಾಗಿ ಸರಳ ಜೀವನ ನಡೆಸುತ್ತಾ ರಾಜಾಜಿ ಅನುಯಾಯಿಯೂ ಆಗಿ ನಿಜವಾದ ಅರ್ಥದ ಬಲಪಂಥೀಯ ಆರ್ಥಿಕ ಚಿಂತನೆಯ ಸ್ವತಂತ್ರ ಪಾರ್ಟಿಯಲ್ಲಿ ಇದ್ದು ಕಾಂಗ್ರೆಸ್‌ನ ಕಡು ವಿರೋಧಿಯೂ ವೈಯಕ್ತಿಕವಾಗಿ ಸಮಾಜ ಸೇವಕರೂ ಆಗಿದ್ದ ಗಣಪಯ್ಯ.

ಕಾಂಗ್ರೆಸ್‌ನ ಅನುಯಾಯಿಯಾಗಿ ಇಂದಿರಾ ಸರ್ಕಾರದಲ್ಲಿ ಮಂತ್ರಿಯಾಗಿ ನಂತರ ತುರ್ತುಸ್ಥಿತಿ ಯನ್ನು ವಿರೋಧಿಸಿದರೂ ನಂತರ ಮತ್ತೆ ಇಂದಿರಾ ಸರ್ಕಾರ ಬಂದಾಗಲೂ ಮತ್ತೆ ರಾಜ್ಯಪಾಲರಾಗಿ ಮುಂದುವರಿದ ಪೂಣಚ್ಚ ಇವರಿಬ್ಬರಲ್ಲಿ ರಾಜಕೀಯವನ್ನು ಮೀರಿದ ಸ್ನೇಹ ಸಾಧ್ಯವಾಗಿತ್ತು.

ತನ್ನನ್ನು ವಿರೋಧಿಸಿ ಜನತಾ ಪಾಳೆಯ ಸೇರಿದ ಪೂಣಚ್ಚ ಜನತಾ ಸರ್ಕಾರದಿಂದ ರಾಜ್ಯಪಾಲರಾಗಿ ನಿಯುಕ್ತರಾಗಿದ್ದರೂ ಇಂದಿರಾಗಾಂಧಿ ಮತ್ತೆ ತನಗೆ ಅಧಿಕಾರ ಬಂದಾಗ ಅವರನ್ನು ರಾಜ್ಯಪಾಲರಾಗಿ ಮುಂದುವರೆಸಿದ್ದು…..

ಇದು ಕೃಪೆಯಲ್ಲ ಯಾಕೆಂದರೆ ಪೂಣಚ್ಚನವರ ಪ್ರಾಮಾಣಿಕತೆಯ ಬಗ್ಗೆ ಇಂದಿರಾಗಾಂಧಿಗೂ ಅರಿವಿತ್ತು.

ಪೂಣಚ್ಚನವರು ತೀರಿಕೊಂಡಾಗ ಸಾಮಾನ್ಯವಾಗಿ ಮತ್ತು ಸುಲಭವಾಗಿ ಯಾವ ರಾಜಕಾರಣಿಗಳನ್ನು ಹೊಗಳದ ಲಂಕೇಶ್ “ಸದಾ ಬಿಳಿ ಉಡುಪನ್ನು ಧರಿಸುತ್ತಿದ್ದ ಪೂಣಚ್ಚ ಕೊಳೆ ಮಾಡಿಕೊಳ್ಳದೆ, ಶುಭ್ರವಾಗಿಯೇ ನಿರ್ಗಮಿಸಿದರು” ಎಂದು ಬರೆದರು.

ಇಂತಹ ಸಂಬಂಧಗಳೇ ಮರೆಯಾಗುತ್ತ ಭಿನ್ನಾಭಿಪ್ರಾಯ ಹೊಂದಿದವರೆಲ್ಲ ನಮ್ಮ ಶತ್ರುಗಳು ಎಂದುಕೊಳ್ಳುವ ಕಾಲದಲ್ಲಿ ನಾವೀಗ ಬದುಕುತ್ತಿದ್ದೇವೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ‘ನಮ್ಮ ಎಲುಬುಗಳ ಮೇಲೆ’ – ನಾವು ಪ್ರದರ್ಶಿಸಿದ ಮೊದಲ ನಾಟಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...